Davanagere: ಹಿರಿಯ ನಾಗರಿಕರಿಗೆ ಎಟಿಮ್ ನಲ್ಲಿ ವಂಚಿಸುತ್ತಿದ್ದ ಕಳ್ಳ ಅಂದರ್!

By Suvarna News  |  First Published Oct 9, 2022, 9:41 PM IST

ಹಿರಿಯ ನಾಗರಿಕರು ರೈತರು ಅಮಾಯಕರಿಗೆ  ಹಣ ಡ್ರಾ ಮಾಡಿಕೊಡುವ ನೆಪದಲ್ಲಿ ಎಟಿಮ್  ಪಿನ್ ನಂಬರ್ ಪಡೆದು ಹಣ ವಂಚನೆ ಮಾಡುತ್ತಿದ್ದ  ಆರೋಪಿಯನ್ನು ದಾವಣಗೆರೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.


ವರದಿ : ವರದರಾಜ್  ಏಷ್ಯಾನೆಟ್ ಸುವರ್ಣನ್ಯೂಸ್ 

ದಾವಣಗೆರೆ (ಅ.9): ಹಿರಿಯ ನಾಗರಿಕರು ರೈತರು ಅಮಾಯಕರಿಗೆ  ಹಣ ಡ್ರಾ ಮಾಡಿಕೊಡುವ ನೆಪದಲ್ಲಿ ಎಟಿಮ್  ಪಿನ್ ನಂಬರ್ ಪಡೆದು ಹಣ ವಂಚನೆ ಮಾಡುತ್ತಿದ್ದ  ಆರೋಪಿಯನ್ನು ಹರಿಹರ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅರುಣಕುಮಾರ (35) ಬಂಧಿತ ಆರೋಪಿ ಆಗಿದ್ದು, ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ‌ ನಿವಾಸಿ ಆಗಿದ್ದಾನೆ. ಎಟಿಮ್ ಗಳ ಬಳಿ ನಿಂತು ಅಮಾಯಕರನ್ನೇ ಗುರಿಯಾಗಿಸಿಕೊಂಡಿದ್ದ ಅರುಣ್ ಕುಮಾರ್  ಆರೋಪಿಯಿಂದ 3 ಲಕ್ಷ ನಗದು, 32 ಎಟಿಎಂ ಕಾರ್ಡ್ ಹಾಗೂ ಬೈಕ್ ವಶಪಡಿಸಿಕೊಳ್ಳಲಾಗಿದೆ. ದಾವಣಗೆರೆ ಜಿಲ್ಲೆ  ಹರಿಹರ ಪಟ್ಟಣದ  ಎಸ್‌ಬಿಐ ಎಟಿಎಂ ಬಳಿ ಹಣ ಡ್ರಾ ಮಾಡಿಕೊಡುವ ನೆಪದಲ್ಲಿ ವಂಚನೆ ಮಾಡುತ್ತಿದ್ದ ಅರುಣ್ ಕುಮಾರ್ ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾನೆ.  ಎಸ್ ಬಿ ಐ ಎಟಿಮ್ ಬಳಿ ಬಂದ   ಹಿರಿಯ ನಾಗರಿಕರೊಬ್ಬರಿಗೆ ಹಣ ಬಿಡಿಸಿಕೊಡುವ ನೆಪದಲ್ಲಿ  ಪಿನ್ ನಂಬರ್ ಪಡೆದುಕೊಂಡಿದ್ದಾನೆ..  ನಂತರ ಅಲ್ಲಿಂದ ಹಿರಿಯ ನಾಗರಿಕ ತೆರಳಿದ ಮೇಲೆ   ಬೇರೊಂದು ಎಟಿಎಂ ಕಾರ್ಡ್ ನೀಡಿ ಹಣ ಡ್ರಾ ಮಾಡಿದ್ದಾನೆ. ಈ ಬಗ್ಗೆ  ಹರಿಹರ  ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಸಿಸಿಟಿವಿ ಮೂಲಕ  ಆರೋಪಿ ಜಾಡು ಹಿಡಿದ ಪೊಲೀಸರು   ಅರುಣಕುಮಾರನನ್ನು ಬಂಧಿಸಿದ್ದಾರೆ.   ಹರಿಹರ ನಗರ ಠಾಣೆಯಲ್ಲಿ ಈತನ ವಿರುದ್ಧ  4 ಪ್ರಕರಣ ದಾಖಲಾಗಿದೆ.  ಬಸವನಗರ ಠಾಣೆ ಯಲ್ಲಿ 1  ಹಾಗು , ಬಡಾವಣೆ ಠಾಣೆಯಲ್ಲಿ 1 ಪ್ರಕರಣ ದಾಖಲಾಗಿದ್ದು ಆರೋಪಿ ಕೃತ್ಯದ ಬಗ್ಗೆ ಹೆಚ್ಚಿನ ವಿಚಾರಣೆ ನಡೆದಿದೆ.

Tap to resize

Latest Videos

ಆರೋಪಿ ಅರುಣ್ ಕುಮಾರ್ ಮೂಲತಃ ಶಿರಾ ತಾಲ್ಲೂಕ್ ನಿವಾಸಿಯಾಗಿದ್ದು ಬೆಂಗಳೂರು, ತುಮಕೂರು  ಚಿತ್ರದುರ್ಗ ದಾವಣಗೆರೆ ಹಾವೇರಿ ಸೇರಿದಂತೆ ಎಲ್ಲಾ ಪ್ರಮುಖ ನಗರಗಳಲ್ಲಿ ಕಳ್ಳತನ ಮಾಡಿದ್ದಾನೆ. ಪೊಲೀಸರು ನೀಡಿರುವ ಮಾಹಿತಿಯಂತೆ ಒಟ್ಟು 15 ಕಡೆ ಎಟಿಮ್ ಗಳಲ್ಲಿ ಇದೇ ರೀತಿಯ ಕಳ್ಳತನ ಮಾಡಿದ್ದಾನೆ.  ಹಳೇ ಎಟಿಮ್ ಕಾರ್ಡ್ ಗಳನ್ನು ಹಿಡಿದು ಹಣ ಬಿಡಿಸುವುದಕ್ಕೆ ಎಟಿಮ್ ಬಳಿ ನಿಂತುಕೊಂಡು ಅಲ್ಲಿಗೆ ಬರುವ ಹಿರಿಯ ನಾಗರಿಕರು ರೈತರು ವಯಸ್ಸಾದ ವ್ಯಕ್ತಿಗಳನ್ನು ವಾಚ್ ಮಾಡುತ್ತಿದ್ದ. ಹಣ ಬಿಡಿಸಿಕೊಡುವ ನೆಪದಲ್ಲಿ ಅವರ ಬಳಿ ಎಟಿಮ್ ಪಿನ್ ಪಡೆದು ಕ್ಷಣಾರ್ಧದಲ್ಲಿ ಡೂಪ್ಲಿಕೇಟ್ ಕಾರ್ಡ್ ಗಳನ್ನು ನೀಡಿ  ಅವರು ಅಲ್ಲಿಂದ ತೆರಳಿದ ಮೇಲೆ ವರ್ಜಿನಲ್ ಕಾರ್ಡ್  ಮೂಲಕ ಹಣ ಬಿಡಿಸಿಕೊಳ್ಳುತ್ತಿದ್ದ.

Bengaluru: ಬೆಟ್ಟಿಂಗ್‌ ಬೆದರಿಕೆಯೊಡ್ಡಿ ಸುಲಿಗೆ: ಐವರು ಪೊಲೀಸರು ಅಮಾನತು

ಈ ರೀತಿ ಎಟಿಮ್ ಗಳನ್ನು ಎಗರಿಸಿ ಜುವೆಲರಿ ಶಾಪ್ ಗಳಲ್ಲಿ ಬಂಗಾರವನ್ನು ಖರೀದಿಸಿದ್ದಾನೆ. ಹರಿಹರ ನಗರ ಪೊಲೀಸರು ಆರೋಪಿಯಿಂದ 10 ಗ್ರಾಂ ಬಂಗಾರವನ್ನು ವಶಪಡಿಸಿಕೊಂಡಿದ್ದಾರೆ. ಹೀಗೆ ಡ್ರಾ ಮಾಡಿದ ಹಣವನ್ನು ಮೋಜು ಮಸ್ತಿಗೆ ಬಳಸುತ್ತಿದ್ದ ಅರುಣ್ ಕುಮಾರ್ ದುಡಿಮೆಗೆ ಎಟಿಮ್ ವಾಚ್ ಮಾಡಿ ವಂಚಿಸುವುದನ್ನೇ ಕಾಯಕ ಮಾಡಿಕೊಂಡಿದ್ದ. ಇದೇ ಕಾರಣಕ್ಕೆ ಆರೋಪಿ ಅರುಣ್ ಕುಮಾರ್ ನನ್ನು ಅವರ ಮನೆಯವರು ಮನೆಯಿಂದ ಹೊರಹಾಕಿದ್ದಾರೆ. ಆದ್ರು ಅರುಣ್ ಕುಮಾರ್ ಎಟಿಮ್ ಬಳಿ ಅಮಾಯಕರನ್ನು ವಂಚಿಸುವುದನ್ನು ಬಿಟ್ಟಿಲ್ಲ. 

ಚುನಾವಣೆ ಹೊಸ್ತಿಲಲ್ಲೇ ಗುಮ್ಮಟನಗರಿಯಲ್ಲಿ Country made pistol ಹಾವಳಿ..!

ಎಎಸ್‌ಪಿ ಕನಿಕಾ ಸಿಕ್ರಿವಾಲ್ ಮಾರ್ಗದರ್ಶನದಲ್ಲಿ ಸಿಪಿಐ ಸತೀಶ್‌ಕುಮಾರ್, ಪಿಎಸ್‌ಐ ಚಿದಾನಂದಪ್ಪ ಅವರ ನೇತೃತ್ವದಲ್ಲಿ ತಂಡ ಹಾಗೂ ಸಿಬ್ಬಂದಿ ಮಂಜುನಾಥ, ಮಂಜುನಾಥ ಕ್ಯಾತಮ್ಮನವರ, ಹನುಮಂತಪ್ಪ ಗೋಪನಾಳ ದಾಳಿ ನಡೆಸಿ ಆರೋಪಿ ಪತ್ತೆ ಮಾಡಿದ್ದಾರೆ. ಅಪರಿಚಿತರ ಬಳಿ ಎಟಿಎಂ ಕಾರ್ಡ್ ಹಾಗೂ ಪಾಸ್‌ವರ್ಡ್‌ಗಳನ್ನು ನೀಡಬಾರದು ಎಂದು ಎಸ್‌ಪಿ ಸಿ.ಬಿ.ರಿಷ್ಯಂತ್ ತಿಳಿಸಿದ್ದಾರೆ.

click me!