2 ಕುಟುಂಬಗಳ ಮಧ್ಯೆ ಜಮೀನು ವಿವಾದ, ಗಾಳಿಯಲ್ಲಿ ಗುಂಡು ಹಾರಿಸಿದ ರೈತ ಸಂಘದ ಅಧ್ಯಕ್ಷ!

By Suvarna News  |  First Published Oct 9, 2022, 6:18 PM IST

ಜಮೀನು ವಿವಾದ ಹಿನ್ನೆಲೆ ಮಾತುಕತೆಗೆ ತೆರಳಿದವರ ಮೇಲೆ ರೈತ ಸಂಘದ ಜಿಲ್ಲಾಧ್ಯಕ್ಷ ಶೂಟ್ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಮಾಕೋನಹಳ್ಳಿ ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ಓರ್ವನಿಗೆ ಗುಂಡು ತಗುಲಿದೆ.


ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಿಕ್ಕಮಗಳೂರು (ಅ.9): ಜಮೀನು ವಿವಾದ ಹಿನ್ನೆಲೆ ಮಾತುಕತೆಗೆ ತೆರಳಿದವರ ಮೇಲೆ ರೈತ ಸಂಘದ ಜಿಲ್ಲಾಧ್ಯಕ್ಷ ಶೂಟ್ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಮಾಕೋನಹಳ್ಳಿ ಗ್ರಾಮದಲ್ಲಿ ನಡೆದಿದೆ. ಭೂ ವಿವಾದ ಪಂಚಾಯ್ತಿಗೆ ತೆರಳಿದ್ದವರ ಮೇಲೆ ಗಾಳಿಯಲ್ಲಿ ಗುಂಡು ಹಾರಿಸಲಾಗಿದೆ. ಕಳೆದ ಹಲವು ವರ್ಷಗಳಿಂದ ದುಗ್ಗಪ್ಪಗೌಡ ಹಾಗೂ ಮಂಚೇಗೌಡರ ನಡುವೆ ಭೂ ವಿವಾದವಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಇಂದು ಪಂಚಾಯಿತಿ ಮಾಡಿ ವಿವಾದವನ್ನು ಬಗೆಹರಿಸುವ ಪ್ರಯತ್ನವನ್ನು ನಡೆಸಿದರು. ಮಾತುಕತೆ ವೇಳೆಯಲ್ಲಿ ಇಬ್ಬರ ನಡುವೆ ಗಲಾಟೆ ನಡೆದಿದೆ. ಗಲಾಟೆ ವಿಕೋಪಕ್ಕೆ ಹೋಗಿ ದುಗ್ಗಪ್ಪಗೌಡ ನಾಡ ಬಂದೂಕಿನಿಂದ ಗಾಳಿ ಗುಂಡು ಹಾರಿಸಿದ್ದರು. ಈ ಘಟನೆಯಲ್ಲಿ ಗುಂಡನಾರಾಯಣ್ ರಾಜ್ ಎನ್ನುವರಿಗೆ ಗುಂಡು ತಗುಲಿದೆ. ಮಾಕೋನಹಳ್ಳಿ ಗ್ರಾಮದ ರೈತ ಸಂಘದ ದುಗ್ಗಪ್ಪಗೌಡ ಹಾಗೂ ಮಂಚೇಗೌಡ ನಡುವೆ ಜಮೀನು ವಿವಾದವಿದ್ದು, ಮಂಚೇಗೌಡ ತಮ್ಮ ಜಮೀನನ್ನ ಮನೋಜ್ ಎಂಬುವರಿಗೆ ಮಾರಾಟ ಮಾಡಿದ್ದರು. ಮಂಚೇಗೌಡ ಅವರ ಜಮೀನು ಖರೀದಿಸಿದ ಮನೋಜ್ ಜಮೀನಿನ ಸರ್ವೇ ಕಾರ್ಯ ಮುಗಿಸಿದ್ದರು. ಈ ವೇಳೆ ಮನೋಜ್ ಖರೀದಿಸಿದ ಜಾಗವನ್ನ ದುಗ್ಗಪ್ಪಗೌಡ ಅವರು ಒತ್ತುವರಿ ಮಾಡಿ ಮನೆ ಕಟ್ಟಿದ್ದರು ಎಂದು ಹೇಳಲಾಗಿದೆ. 

Tap to resize

Latest Videos

ಹಾಗಾಗಿ, ಜಮೀನು ಖರೀದಿಸಿದ ಮನೋಜ್ ಹಾಗೂ ಅದೇ ಜಮೀನು ಪಕ್ಕದ ಜಮೀನಿನ ದುಗ್ಗಪ್ಪಗೌಡರಿಗೆ ಜಮೀನು ವಿವಾದ ಕೂಡ ಇತ್ತು. ಈ ಬಗ್ಗೆ ಮಾತನಾಡಲು ದುಗ್ಗಪ್ಪಗೌಡ ಅವರ ಮನೆ ಬಳಿ ಹೋದಾಗ ಮಹಡಿ ಮೇಲೆ ನಿಂತಿದ್ದ ದುಗ್ಗಪ್ಪಗೌಡ ಕೋವಿಯಿಂದ ಮಾತುಕತೆಗೆ ಬಂದವರ ಮೇಲೆ ಗುಂಡು ಹಾರಿದ್ದಾರೆ. ನಾರಾಯಣ್ರಾಜ್ ಎಂಬುವರ ಕಾಲಿಗೆ ಗುಂಡು ತಗುಲಿದ್ದು ಕೂಡಲೇ ಅವರನ್ನ ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೂಡಿಗೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮೂಡಿಗೆರೆ ಪೊಲೀಸರು ರೈತ ಸಂಘದ ಅಧ್ಯಕ್ಷ ದುಗ್ಗಪ್ಪಗೌಡರನ್ನ ಬಂಧಿಸಿದ್ದಾರೆ.

5 ಎಕರೆ, 11 ಗುಂಟೆ ಜಾಗಕ್ಕೋಸ್ಕರವೇ ನಡೆದಿತ್ತಾ ಕಗ್ಗೊಲೆ:

ಜೋಡಿ ಕೊಲೆ ಪ್ರಕರಣದಲ್ಲಿ ಆರು ಜನ ಬಂಧನ
ಬೆಳಗಾವಿ: ಕಳೆದ ಎರಡು ದಿನಗಳ ಹಿಂದೆ ಬೆಳಗಾವಿ ತಾಲೂಕಿನ ಸುಳೇಭಾವಿ ಗ್ರಾಮದಲ್ಲಿ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಡಿಸಿಪಿ ರವೀಂದ್ರ ಗಡಾದಿ ತಿಳಿಸಿದರು. ಬೆಳಗಾವಿ ತಾಲೂಕಿನ ಸುಳೇಭಾವಿಯ ಶಶಿಕಾಂತ ಭೀಮಪ್ಪ ಮಿಸಾಳೆ(24),ಯಲ್ಲೇಶ ಹುಂಕ್ರಿ ಪಾಟೀಲ್ (22),ಮಂಜುನಾಥ ಶಿವಾಜಿ ಪರೋಜಿ(22), ದೇವಪ್ಪ ರವಿ ಕುಕಡೊಳ್ಳಿ(26) ಹಾಗೂ ಗೋಕಾಕ ತಾಲೂಕಿನ ಖನಗಾಂವದ ಬಿ.ಕೆ. ಗ್ರಾಮದ ಸಂತೋಷ ಯಲ್ಲಪ್ಪ‌ಹಣಬರಟ್ಟಿ(20), ಭರಮಣ್ಣ ನಾಗಪ್ಪ ನಾಯಕ(20) ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.

ಚುನಾವಣೆ ಹೊಸ್ತಿಲಲ್ಲೇ ಗುಮ್ಮಟನಗರಿಯಲ್ಲಿ Country made pistol ಹಾವಳಿ..!

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅ.6ರಂದು ನಡೆದಿದ್ದ ಜೋಡಿ ಕೊಲೆ ಪ್ರಕರಣದಲ್ಲಿ ಮಹೇಶ ಮುರಾರಿ, ಪ್ರಕಾಶ ಹುಂಕ್ರಿ ಪಾಟೀಲ್ ಎಂಬವರ ಹತ್ಯೆಯಾಗಿತ್ತು. ಎರಡು ಗ್ಯಾಂಗ್‌ಗಳ ನಡುವೆ ವೈಷಮ್ಯ ಉಂಟಾಗಿ ಕೊಲೆ ನಡೆದಿತ್ತು. ಈ ಸಂಬಂಧ ಹತ್ಯೆಯಲ್ಲಿ ಭಾಗಿಯಾಗಿದ್ದ ಆರು ಜನರನ್ನು ಬಂಧಿಸಲಾಗಿದೆ. ಕೋರ್ಚ್‌ಗೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಹೇಳಿದರು.ಬಂಧಿತರ ಪೈಕಿ ನಾಲ್ವರು ಸುಳೇಭಾವಿ ಗ್ರಾಮದವರು. ಇಬ್ಬರು ಖನಗಾಂವ ಗ್ರಾಮದವರು. ಮೊದಲು ಇವರೆಲ್ಲರೂ ಒಂದೇ ಗ್ಯಾಂಗ್‌ನಲ್ಲಿದ್ದರು. ಐದು ತಿಂಗಳ ಹಿಂದೆಯಷ್ಟೇ ಎರಡು ಗುಂಪುಗಳಾಗಿ ವೈಷಮ್ಯ ಬೆಳೆದಿತ್ತು. ಇನ್ನು ಮಹೇಶ ಮುರಾರಿ ಗ್ಯಾಂಗ್‌ನವರು ನಮಗೆ ಬೆದರಿಕೆ ಹಾಕುತ್ತಿದ್ದರು. ನಮಗೆ ಏನಾದರೂ ಮಾಡಬಹುದು ಎಂದು ಕೊಲೆ ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದರು.

click me!