ಬಂಧಿಸಲು ಹೋದ ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ ಆರೋಪಿ ಅಬ್ದುಲ್ಲಾ!

By Kannadaprabha NewsFirst Published Feb 1, 2023, 8:29 AM IST
Highlights

ಜಿಲ್ಲೆಯಿಂದ ಗಡಿಪಾರಾಗಿ ಮರಳಿ ಮನೆಗೆ ಆಗಮಿಸಿದ್ದ ಆರೋಪಿ ಅಬ್ದುಲ್‌ ಆಡೂರನನ್ನು ಗೂಂಡಾ ಕಾಯ್ದೆಯಡಿ ಬಂಧಿಸಲು ತೆರಳಿದ್ದ ವೇಳೆ ಪೊಲೀಸರ ಮೇಲೆ ಆರೋಪಿ ಸೇರಿದಂತೆ ಅವನ ಬೆಂಬಲಿಗರು ಹಲ್ಲೆ ಮಾಡಿ, ಜೀವ ಬೆದರಿಕೆ ಹಾಕಿರುವ ಘಟನೆ ಸೋಮವಾರ ರಾತ್ರಿ ಪಟ್ಟಣದ ಹೊಸ ಬಸ್‌ ನಿಲ್ದಾಣದ ಎದುರಿಗೆ ನಡೆದಿದೆ.

ಲಕ್ಷ್ಮೇಶ್ವರ (ಫೆ.1) : ಜಿಲ್ಲೆಯಿಂದ ಗಡಿಪಾರಾಗಿ ಮರಳಿ ಮನೆಗೆ ಆಗಮಿಸಿದ್ದ ಆರೋಪಿ ಅಬ್ದುಲ್‌ ಆಡೂರನನ್ನು ಗೂಂಡಾ ಕಾಯ್ದೆಯಡಿ ಬಂಧಿಸಲು ತೆರಳಿದ್ದ ವೇಳೆ ಪೊಲೀಸರ ಮೇಲೆ ಆರೋಪಿ ಸೇರಿದಂತೆ ಅವನ ಬೆಂಬಲಿಗರು ಹಲ್ಲೆ ಮಾಡಿ, ಜೀವ ಬೆದರಿಕೆ ಹಾಕಿರುವ ಘಟನೆ ಸೋಮವಾರ ರಾತ್ರಿ ಪಟ್ಟಣದ ಹೊಸ ಬಸ್‌ ನಿಲ್ದಾಣದ ಎದುರಿಗೆ ನಡೆದಿದೆ.

ಆರೋಪಿ ಅಬ್ದುಲ್‌ ಜಿಲ್ಲೆಯಿಂದ ಗಡಿಪಾರಾಗಿದ್ದನು. ಗಡಿಪಾರು ಅವಧಿ ಈಚೆಗೆ ಮುಗಿದಿದ್ದು ಕಳೆದ ಕೆಲವು ದಿನಗಳಿಂದ ಪಟ್ಟಣದಲ್ಲಿರುವ ತಮ್ಮ ಮನೆಯಲ್ಲಿ ವಾಸವಾಗಿದ್ದನು. ಈಗಾಗಲೇ ಅವನ ಮೇಲೆ 12ಕ್ಕೂ ಅಧಿಕ ಪ್ರಕರಣ ಇರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಅಬ್ದುಲ್‌ನನ್ನು ಗೂಂಡಾ ಕಾಯ್ದೆಯಡಿ ಬಂಧಿಸುವಂತೆ ಆದೇಶ ಹೊರಡಿಸಿದ್ದರು. ಅವರ ಸೂಚನೆಯ ಮೇರೆಗೆ ಅಬ್ದುಲ್‌ನನ್ನು ಬಂಧಿಸಿಲು ಪಿಎಸ್‌ಐ ಡಿ. ಪ್ರಕಾಶ್‌ ನೇತೃತ್ವದಲ್ಲಿನ ತಂಡ ತೆರಳಿತ್ತು.

Davanagere: ಹಣಕಾಸಿನ ಜಗಳ ಮಧ್ಯೆ ಪ್ರವೇಶಿಸಿದ ಪೊಲೀಸರ ಮೇಲೆ ಹಲ್ಲೆ: ಯುವತಿಯರು ಸೇರಿ ನಾಲ್ವರ ಬಂಧನ

ಪೊಲೀಸರು ಬಂಧಿಸಲು ಬಂದಿರುವ ವಿಷಯ ತಿಳಿಯುತ್ತಿದ್ದಂತೆ ಅಬ್ದುಲ್‌ ಹಾಗೂ ಅವನ 15ಕ್ಕೂ ಹೆಚ್ಚು ಬೆಂಬಲಿಗರು ಕೆಲಕಾಲ ಪೊಲೀಸರೊಂದಿಗೆ ವಾಗ್ವಾದ, ತಳ್ಳಾಟ- ನೂಕಾಟ ನಡೆಸಿದ್ದಾರೆ. ಈ ವೇಳೆ ಪಿಎಸ್‌ಐ ಡಿ. ಪ್ರಕಾಶ ಅವರ ಕಾಲಿಗೆ ಗಾಯವಾಗಿದ್ದು, ಅಲ್ಲದೇ ಆತನ ಸಹಚರರು ಬಂಧಿಸಲು ಬಂದ ಪೊಲೀಸರರಿಗೆ ಚಾಕು ಹಾಕುವ ಬೆದರಿಕೆ ಹಾಕಿ, ಅಲ್ಲಿಂದ ಆರೋಪಿ ಪರಾರಿಯಾಗಲು ಸಹಾಯ ಮಾಡಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಪುರಸಭೆ ಸದಸ್ಯ ಫಿರ್ದೊಷ್‌ ಆಡೂರ, ಇಸ್ಮಾಯಿಲ್‌ ಆಡೂರ, ಮೊಹಮ್ಮದ್‌ ಆಡೂರ, ನೌಶಾದ ಆಡೂರ, ಅತ್ತಾರಸಾಬ ಆಡೂರ, ನಿಜಾಮುದ್ದೀನ್‌ ಚಂಗಾಪೂರಿ, ಸುಲೇಮಾನ್‌ ಆಡೂರ ಹಾಗೂ ಬೆಂಬಲಿಗರು ಸೇರಿದಂತೆ 10ಕ್ಕೂ ಹೆಚ್ಚು ಜನರ ಮೇಲೆ ಲಕ್ಷ್ಮೇಶ್ವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ತನಿಖೆ ಮುಂದುವರೆದಿದೆ.

ರಾಜಸ್ಥಾನದಿಂದ ಗಾಂಜಾ ತಂದು ಮಾರಲೆತ್ನ: 4 ಸೆರೆ

ಬೆಂಗಳೂರು: ನಗರದಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸಿದ್ದ ನಾಲ್ವರನ್ನು ಸಿ.ಟಿ.ಮಾರ್ಕೆಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ರಾಜಸ್ಥಾನ ಮೂಲದ ಭರತ್‌ ಕುಮಾರ್‌, ರಾಕೇಶ್‌ ಕುಮಾರ್‌ ಅಲಿಯಾಸ್‌ ಸುನೀಲ್‌ ಪ್ರಜಾಪತ್‌, ಅನಿಲ್‌ ಸಿಂಗ್‌ ಹಾಗೂ ಮುಖೇಶ್‌ ಅಲಿಯಾಸ್‌ ಪುಷ್ಪಾಲ್‌ ಬಂಧಿತರಾಗಿದ್ದು, ಆರೋಪಿಗಳಿಂದ 4.250 ಕೇಜಿ ಗಾಂಜಾ, ಬೈಕ್‌ಗಳು ಹಾಗೂ ಹಣ ಸೇರಿ ಒಟ್ಟು .2 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಬಳೆಪೇಟೆ ಸರ್ಕಲ್‌ ಬಳಿ ಗಾಂಜಾ ಮಾರಾಟಕ್ಕೆ ಕೆಲವರು ಯತ್ನಿಸಿದ್ದರು. ಆಗ ಅನುಮಾನದ ಮೇರೆಗೆ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಗಾಂಜಾ ಮಾರಾಟ ಬಯಲಾಯಿತು ಎಂದು ಪೊಲೀಸರು ಹೇಳಿದ್ದಾರೆ.

100ಕ್ಕೂ ಹೆಚ್ಚು ಆಫ್ರಿಕನ್ ಪ್ರಜೆಗಳಿಂದ ಪೊಲೀಸರ ಮೇಲೆ ದಾಳಿಗೆ ಯತ್ನ

ಈ ನಾಲ್ವರು ರಾಜಸ್ಥಾನ ರಾಜ್ಯದವರಾಗಿದ್ದು, ಬಳೇಪಟ್ಟೆವ್ಯಾಪ್ತಿ ಅಂಗಡಿಗಳಲ್ಲಿ ಕೆಲಸ ಮಾಡಿಕೊಂಡಿದ್ದರು. ಹಣದಾಸೆಗೆ ಗಾಂಜಾ ಮಾರಾಟಕ್ಕಿಳಿದಿದ್ದ ಇವರು, ತಮ್ಮೂರಿನಿಂದ ರೈಲಿನಲ್ಲಿ ಗಾಂಜಾ ತಂದು ನಗರದಲ್ಲಿ ಮಾರಲು ಮುಂದಾಗಿದ್ದರು. ಅಷ್ಟರಲ್ಲಿ ಮಾಹಿತಿ ಪಡೆದು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

click me!