ಪಟ್ಟಣದ ಶ್ರೀ ವೆಂಕಟೇಶ್ವರ ಟೆಕ್ಸ್‌ಟೈಲ್ ಮಿಲ್‌ನಲ್ಲಿ ಕಳೆದ ಹಲವು ವರ್ಷಗಳಿಂದ ನಡೆಯುತ್ತಿದ್ದ ಕಳ್ಳತನ ಪ್ರಕರಣವನ್ನು ಭೇದಿಸಿರುವ ಪೊಲೀಸರು, 24 ಜನರನ್ನು ಬಂಧಿಸಿ .5 ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಅಣ್ಣಿಗೇರಿ (ಮಾ.11) : ಪಟ್ಟಣದ ಶ್ರೀ ವೆಂಕಟೇಶ್ವರ ಟೆಕ್ಸ್‌ಟೈಲ್ ಮಿಲ್‌ನಲ್ಲಿ ಕಳೆದ ಹಲವು ವರ್ಷಗಳಿಂದ ನಡೆಯುತ್ತಿದ್ದ ಕಳ್ಳತನ ಪ್ರಕರಣವನ್ನು ಭೇದಿಸಿರುವ ಪೊಲೀಸರು, 24 ಜನರನ್ನು ಬಂಧಿಸಿ .5 ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಮಾರುತಿ ಬಸಪ್ಪ ಹರಣಶಿಕಾರಿ, ಮುಸ್ತಾಕಅಹ್ಮದ ಅಸಿಬಾಗಿಲ, ಆದಂ ಗುಳಗುಂದಿ, ರಾಚಪ್ಪ ಹಾಳಕೇರಿ, ಸಹಚರರಾದ ಶ್ರೀಕಾಂತ ಅಬ್ಬೀಗೇರಿ, ಅಶೋಕ ಹರಣಶಿಕಾರಿ, ಶರೀಫ್‌ಸಾಬ ಭದ್ರಾಪೂರ, ಇಮಾಮಸಾಬ ಸುಂಕದ, ಅಯಾನ್ ಇಮ್ತಿಯಾಜ್ ಸೌದಾಗರ, ಶರೀಫಸಾಬ ಧಾರವಾಡ, ಕೃಷ್ಣಾ ಬೂದಗೊಪ್ಪ, ದಾವಲಸಾಬ ತಹಶೀಲ್ದಾರ, ಖಾಜೆಸಾಬ್ ಮುಲ್ಲಾನವರ, ವಿಶಾಲ ಮಹ್ಮದಅಲಿ ಇಸ್ಮಾಯಿಲ್, ಶಿವಾನಂದ ಕರೆಯನ್ನವರ, ವಿರೂಪಾಕ್ಷಪ್ಪ ನಲವಡಿ, ನಾರಾಯಣ ಕಾಕಡೆ, ಮಂಜುನಾಥ ಕಟ್ಟಿಮನಿ, ಸಂತೋಷ ಬಸಾಪೂರ, ಪೈರೋಖಾನ ಜಂಗ್ಲಿಸಾಬ, ನವಲಗುಂದದ ರಿಯಾಜ ರಾಜೇಸಾಬ ಕಲೇಗಾರ, ಮೋದಿನಸಾಬ ದಾವಲಸಾಬ ಕೊಪ್ಪಳ, ಅಬ್ದುಲಸಾಬ್ ಜಿಗಳೂರ ಸೇರಿದಂತೆ 24 ಜನರನ್ನು ಬಂಧಿಸಲಾಗಿದೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಧಾರವಾಡ: ಮನೆ ಪೂರ್ತಿಗೊಳಿಸದ ಗುತ್ತಿಗೆದಾರಗೆ ₹7.50 ಲಕ್ಷ ದಂಡ!
ಏನಿದು ಪ್ರಕರಣ:
ವೆಂಕಟೇಶ್ವರ ಟೆಕ್ಸ್‌ಟೈಲ್ ಮಿಲ್(Venkateshwar textile) 1991ರಲ್ಲಿ ಪ್ರಾರಂಭಗೊಂಡಿತ್ತು. ಸರ್ಕಾರದಿಂದ ಶೇ.95, ರೈತರಿಂದ ಶೇ.5ರಷ್ಟುಬಂಡವಾಳ ಹೂಡಿಕೆಯಾಗಿತ್ತು. ಆದರೆ ಕಾರಣಾಂತರಗಳಿಂದ 2007ರಲ್ಲಿ ಕಾರ್ಯ ಸ್ಥಗಿತಗೊಂಡಿತ್ತು. ನಂತರ 2016ರಿಂದ ವೆಂಕಟೇಶ್ವರ ಮಿಲ್‌ಗಳಲ್ಲಿ ಕಳ್ಳತನ(Theft case)ವಾಗಲು ಶುರುವಾಗಿದೆ. 2016ರಿಂದ 2023ರ ವರೆಗೆ ಮಿಲ್‌ನಲ್ಲಿನ ಯಂತ್ರದ ಬಿಡಿಭಾಗಗಳು ಕಳ್ಳತವಾಗಿವೆ ಎಂದು ಸಮಾಪನ ಅಧಿಕಾರಿ ಹಾಗೂ ಸಹಕಾರಿ ಇಲಾಖೆಯ ಸಹಾಯಕ ನಿಬಂಧಕ ಎಸ್.ಜಿ. ಸುಣಗಾರ ದೂರು ದಾಖಲಿಸಿದ್ದರು. ಅದರಂತೆ ಅಣ್ಣಿಗೇರಿ ಠಾಣೆಯ ಸಿಪಿಐ ಡಿ.ವಿ.ಪಾಟೀಲ, ಪಿಎಸ್.ಐ ಉಮಾದೇವಿ ನೇತೃತ್ವದ ತಂಡ ಪರಿಶೀಲಿಸಿದ್ದರು. .1.18 ಕೋಟಿ ಮೌಲ್ಯದ ಯಂತ್ರಗಳ ಬಿಡಿಭಾಗಗಳು ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಈ ಪೈಕಿ ಇದೀಗ ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಅವರಿಂದ .5 ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಉಳಿದ ವಸ್ತುಗಳ ಹುಡುಕಾಟ ಇನ್ನು ನಡೆದಿದೆ.
ಒಬ್ಬನ ವಿಚಾರ, ಇಬ್ಬರು ಹುಡುಗಿಯರಿಂದ ಧಾರವಾಡ ಬೀದಿಯಲ್ಲೇ ಬಡಿದಾಟ!
ಠಾಣಾಧಿಕಾರಿ ಉಮಾದೇವಿ, ಸಿಬ್ಬಂದಿ ಎಚ್.ಆರ್. ಜಾಧವ, ಪಾಲಾಕ್ಷಿ ರಾಮಗಿರಿ, ಮೋಹನ ಪಾಟೀಲ, ವಿಕಾಸ ನಾಯ್ಕೋಡಿ, ಸೋಮು ರಾಠೋಡ, ಹುಲಿಯಪ್ಪ ಕುರುಬರ, ಚಂದ್ರಶೇಖರ ಅಮ್ಮಾಪುರ, ಚೆನ್ನಮಲ್ಲಯ್ಯ ಮಠಪತಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.