
166ಕ್ಕೂ ಅಧಿಕ ಜನರ ಸಾವಿಗೆ, 300ಕ್ಕೂ ಅಧಿಕ ಜನರ ಭೀಕರ ನೋವಿಗೆ ಕಾರಣವಾದ ಭಯಾನಕ ಘಟನೆ 2008ರ ನವೆಂಬರ್ 26ರಂದು ನಡೆದಿದ್ದ ಮುಂಬೈ ಭಯೋತ್ಪಾದನಾ ದಾಳಿ. 26/11 ಎಂದೇ ಇತಿಹಾಸದ ಪುಟಗಳಲ್ಲಿ ದಾಖಲಾದ ಈ ದಾಳಿ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಮುಂಬೈ ದಾಳಿಗೆ ಬಂದಿದ್ದ 10 ಉಗ್ರರ ಪೈಕಿ ಜೀವಂತವಾಗಿ ಸೆರೆ ಸಿಕ್ಕವ ಅಮೀರ್ ಅಜ್ಮಲ್ ಕಸಬ್. 2012ರಲ್ಲಿ ಅವನನ್ನು ಗಲ್ಲಿಗೇರಿಸಲಾಗಿತ್ತು. 2008ರಿಂದ 2012ರವರೆಗೆ ಹಲವು ಕೋರ್ಟ್ಗಳನ್ನು ಅಲೆದು ಕೊನೆಗೆ ಸುಪ್ರೀಂಕೋರ್ಟ್ನಲ್ಲಿ ಅವನಿಗೆ ಗಲ್ಲುಶಿಕ್ಷೆ ಕಾಯಂ ಆಗಿತ್ತು. ಆಗಸ್ಟ್ 29, 2012ರಲ್ಲಿ ಸುಪ್ರೀಂಕೋರ್ಟ್ ಅಂತಿಮವಾಗಿ ಮರಣದಂಡನೆ ವಿಧಿಸಿತ್ತು. ಇನ್ನೊಂದು ವಾರದಲ್ಲಿ, ಈ ಗಲ್ಲುಶಿಕ್ಷೆ ವಿಧಿಸಿ, 14 ವರ್ಷ ಆಗಲಿದೆ.
ನವೆಂಬರ್ 21, 2012 ರಂದು ಪುಣೆಯ ಯೆರವಾಡಾ ಕೇಂದ್ರ ಕಾರಾಗೃಹದಲ್ಲಿ ಬೆಳಿಗ್ಗೆ 7.30ಕ್ಕೆ ಗಲ್ಲಿಗೇರಿಸಲಾಯಿತು. ಅವನನ್ನು ಗಲ್ಲಿಗೇರಿಸುವ ಮೊದಲು, ಅವನು ಬೆಳಿಗ್ಗೆ ಪ್ರಾರ್ಥನೆ ಸಲ್ಲಿಸಿದನು. ಗಲ್ಲುಶಿಕ್ಷೆಗೆ ಒಳಗಾದವರು ಎಷ್ಟೇ ಕ್ರೂರರಾಗಿದ್ದರೂ, ಅವರಿಗೆ ಭಾರದ ಕಾನೂನಿನ ಪ್ರಕಾರ ಅಂತಿಮ ಆಸೆಯನ್ನು ಕೇಳಲಾಗುತ್ತದೆ. ಅದರಂತೆಯೇ ಕಸಬ್ಗೂ ಅಂತಿಮ ಆಸೆ ಕೇಳಿದಾಗ, ಅವನು ಹೇಳಿದ್ದು, ಟೊಮ್ಯಾಟೋ ತಿನ್ನುವ ಆಸೆ! ಬಹುಶಃ ಇತಿಹಾಸದ ಯಾವುದೇ ಕೈದಿಯೂ ಕೇಳದ ಆಸೆಯನ್ನು ಆತ ಕೇಳಿದ್ದ. ಅದರಂತೆಯೇ ಪೊಲೀಸರು ಒಂದು ಬಟ್ಟಲು ಟೊಮ್ಯಾಟೋ ಹಣ್ಣನ್ನು ತಂದು ಅವನ ಕೈಗೆ ಇತ್ತಿದ್ದರು. ಆದರೆ ಕಸಬ್ ಅದರಲ್ಲಿ ಎರಡೇ ಎರಡು ಟೊಮ್ಯಾಟೋ ಹಣ್ಣನ್ನು ತಿಂದು, ಮಿಕ್ಕಿದ್ದನ್ನು ವಾಪಸ್ ನೀಡಿದ್ದ.
ಕಸಬ್ ಸತ್ತು, 14 ವರ್ಷವಾದರೂ, ಆ ಟೊಮ್ಯಾಟೋ ರಹಸ್ಯ ಮಾತ್ರ ಅವನ ಜೊತೆಗೇ ಮಣ್ಣಾಗಿ ಹೋಗಿದೆ. ಕೈದಿಗಳ ಅಂತಿಮ ಇಚ್ಛೆಯನ್ನು ಕೇಳಲಾಗುತ್ತದೆಯೇ ವಿನಾ ಅದು ಯಾಕೆ, ಏನು ಎಂದು ಕೇಳಲಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಉಗ್ರ ಕಸಬ್ ಅಂತಿಮ ಇಚ್ಛೆಯಾಗಿ ಟೊಮ್ಯಾಟೋ ಕೇಳಿದಾಗ, ಅದಕ್ಕೆ ಕಾರಣವನ್ನು ಪೊಲೀಸರು ಪ್ರಶ್ನಿಸಿರಲಿಲ್ಲ. ಆದರೆ ಇಂದಿಗೂ ಆ ಟೊಮ್ಯಾಟೋ ರಹಸ್ಯ ಮಾತ್ರ ರಹಸ್ಯವಾಗಿಯೇ ಉಳಿದಿದೆ. ಇದಕ್ಕೆ ಕಾರಣ ಏನಿರಬಹುದು ಎಂದು ಹಲವರು ತಮ್ಮದೇ ಆದ ರೀತಿಯಲ್ಲಿ ವಿಶ್ಲೇಷಿಸುತ್ತಿದ್ದರೂ, ನಿಜವಾದ ಕಾರಣ ಮಾತ್ರ ಕಸಬ್ ಜೊತೆ ಮಣ್ಣಾಗಿದೆ.
ಇನ್ನು ಅವನ ಗಲ್ಲುಶಿಕ್ಷೆಯ ದಿನ ಏನಾಗಿತ್ತು ಎನ್ನುವುದು ಕೂಡ ಆ ವೇಳೆ ಸಾಕಷ್ಟು ಸುದ್ದಿಯಾಗಿತ್ತು. ಮುಂಬೈನ ಆರ್ಥರ್ ರೋಡ್ ಜೈಲಿನಿಂದ ಪುಣೆಯ ಯರವಾಡ ಜೈಲಿಗೆ ಕಸಬ್ ನನ್ನು ಸಾಗಿಸಲು 3 ಗಂಟೆ ಬೇಕಾಯಿತು. ಈ ಸ್ಥಳಾಂತರದ ಸಮಯದಲ್ಲಿ, ಕಸಬ್ ತುಂಬಾ ಭಯಭೀತನಾಗಿದ್ದನು, ಅವನ ಬಾಯಿಂದ ಒಂದು ಪದವೂ ಹೊರಡಲಿಲ್ಲ ಎನ್ನಲಾಗಿದೆ. ಪುಣೆ ಜೈಲಿಗೆ ಸ್ಥಳಾಂತರಗೊಂಡ ನಂತರ, ಮರಣದಂಡನೆಗೆ ಒಂದು ದಿನ ಮೊದಲು, ಕಸಬ್ ಬಳಿ ಕೊನೆಯ ಆಸೆಯನ್ನು ಕೇಳಿದಾಗ, ಆಗ ಆತ ಏನನ್ನೂ ಹೇಳಲಿಲ್ಲ. ಕೊನೆಗೆ ಟೊಮ್ಯಾಟೋ ಆಸೆ ವ್ಯಕ್ತಪಡಿಸಿದ್ದ. ಜೊತೆಗೆ, ಗಲ್ಲು ಶಿಕ್ಷೆ ಹೆಸರು ಕೇಳಿ ಇಡೀ ರಾತ್ರಿ ನಿದ್ದೆ ಬಂದಿರಲಿಲ್ಲ ಎಂದು ಅಧಿಕಾರಿಗಳು ಹೇಳಿದ್ದರು. ಕಸಬ್ ಗಲ್ಲಿಗೇರಿದ ದಿನ ಬೆಳಗ್ಗೆ ಸ್ನಾನ ಮಾಡಲಾಗಿತ್ತು. ನೇಣಿಗೆ ಶರಣಾಗುವ ಹಿಂದಿನ ರಾತ್ರಿ ಕಸಬ್‌ಗೆ ನಿದ್ದೆಯೇ ಬಂದಿರಲಿಲ್ಲ. ಕಣ್ಮಿಚ್ಚಿ ತೆರೆಯುವಷ್ಟರಲ್ಲಿ ರಾತ್ರಿ ಕಳೆದು ಹೋಗಿತ್ತು. ಆತ ನವೆಂಬರ್ 21 ರಂದು ಅಂದರೆ ಗಲ್ಲಿಗೇರಿಸುವ ಬೆಳಿಗ್ಗೆ ನಮಾಜ್ ಮಾಡಿದ್ದ ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ