
ವರದಿ - ಪುಟ್ಟರಾಜು. ಆರ್. ಸಿ. ಏಷಿಯಾನೆಟ್ ಸುವರ್ಣ ನ್ಯೂಸ್ , ಚಾಮರಾಜನಗರ.
ಚಾಮರಾಜನಗರ (ಸೆ.17) : ಟಿಪ್ಪರ್ ಲಾರಿ ಹರಿದು ಕೇರಳದ ವಯನಾಡಿನ ಮೂವರು ದುರ್ಮರಣ ಹೊಂದಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದ ಹೊರ ವಲಯದ ಕೇರಳ ರಸ್ತೆಯಲ್ಲಿ ನಡೆದಿದೆ.
ದನೇಶ್, ಪತ್ನಿಅಂಜು ಮತ್ತು ಮಗ ಮೃತ ದುರ್ದೈವಿಗಳು. ಕೇರಳದ ವಯನಾಡು ಮೂಲದವರಾದ ಮೃತರು. ಮೂವರು ಒಂದೇ ಬೈಕ್ ನಲ್ಲಿ ಕೇರಳದಿಂದ ಗುಂಡ್ಲುಪೇಟೆ ಕಡೆಗೆ ಬೈಕ್ ನಲ್ಲಿ ಬರುತ್ತಿದ್ದರು. ಗುಂಡ್ಲುಪೇಟೆಯ ಹೊರ ವಲಯದಲ್ಲಿ ಕೂತನೂರು ಗುಡ್ಡದಿಂದ ಕಲ್ಲು ತುಂಬಿಕೊಂಡು ಬರುತ್ತಿದ್ದ ಕೆ.ಎ.11-ಬಿ 8497 ನೋಂದಣಿಯ ಟಿಪ್ಪರ್ ಲಾರಿಯನ್ನು ಚಾಲಕ. ಕಂಠಪೂರ್ತಿ ಕುಡಿದು ಚಾಲನೆ ಮಾಡುತ್ತಿದ್ದ ಡ್ರೈವರ್. ಕುಡಿದ ಮತ್ತಿನಲ್ಲಿ ವೇಗವಾಗಿ ಚಾಲನೆ ಮಾಡಿದ್ದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.
ಫೇಕ್ ಭಕ್ತಿಗೆ ಸಿಟ್ಟಿಗೆದ್ದ ಮಹಾದೇವ: ಗಂಗಾ ನದಿಗೆ ಬಿದ್ದ ರೀಲ್ಸ್ ರಾಣಿ
ಟಿಪ್ಪರ್ ಚಾಲಕನ ಅಜಾರೂಕ ಚಾಲನೆಯಿಂದ ಮುಂಬದಿ ಹೋಗುತ್ತಿದ್ದ ಬೈಕ್ ಗೆ ಗುದ್ದಿದ್ದಾನೆ. ಬೈಕ್ ಸವಾರನ ಮೇಲೆ ಲಾರಿ ಹರಿದು ದೇಹ ರಸ್ತೆಯಲ್ಲೇ ಬಿದ್ದಿದ್ದು, ಇನ್ನಿಬ್ಬರು ಲಾರಿ ಅಡಿಯಲ್ಲಿ ಬೈಕ್ ಸಮೇತ ಸಿಲುಕಿಕೊಂಡಿದ್ದರೂ ಸಹ ಸುಮಾರು 300 ಮೀಟರ್ ನಷ್ಟು ಲಾರಿ ಎಳೆದುಕೊಂಡು ಬಂದಿದೆ. ಇಬ್ಬರ ದೇಹದ ಮಾಂಸದ ತುಂಡುಗಳು ಚೆಲ್ಲಾಪಿಲ್ಲಿಯಾಗಿ ರಸ್ತೆಯಲ್ಲಿ ಬಿದ್ದು ಅಪಘಾತ ನಡೆದ ಸ್ಥಳ ಭೀಕರವಾಗಿದೆ. ಈ ಸ್ಥಳದಲ್ಲಿ ಟಿಪ್ಪರ್ ಓಡಾಟ ಅತಿಯಾಗಿದ್ದು ಪೋಲಿಸರು ಇವರ ಮೇಲೆ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ಗುಂಡ್ಲುಪೇಟೆ ಪಟ್ಟಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮೃತ ದೇಹಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ