ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಜೈಲು ಸೇರಿರುವ ನಟ ದರ್ಶನ್ ಅವರನ್ನು ಪತ್ನಿ ವಿಜಯಲಕ್ಷ್ಮಿ ಭೇಟಿ ಮಾಡಿದ್ದಾರೆ. ನ್ಯಾಯಾಲಯದ ಅನುಮತಿ ಮೇರೆಗೆ ಆಪ್ತರು ಕೂಡ ಭೇಟಿ ಮಾಡಲು ಅವಕಾಶ ದೊರೆತಿದ್ದು, ದರ್ಶನ್ ಭೇಟಿಯಾಗಲು ಬಂದ ಧನ್ವೀರ್ ತಂದಿದ್ದ ಬ್ಯಾಗ್‌ನಲ್ಲಿ ಏನಿತ್ತು ಎಂಬ ಕುತೂಹಲ ಮೂಡಿದೆ.
ಬಳ್ಳಾರಿ (ಸೆ.17): ಬಳ್ಳಾರಿಯ ಕಾರಾಗೃಹದಲ್ಲಿರುವ ನಟ ದರ್ಶನ್ ಭೇಟಿ ಮಾಡಲು ಆಗಮಿಸಿದ ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರು ಹಲವು ವಸ್ತುಗಳನ್ನು ಬ್ಯಾಗ್‌ನಲ್ಲಿ ತಂದು ಕೊಟ್ಟಿದ್ದಾರೆ. ಆದರೆ, ಆ ಬ್ಯಾಗ್‌ನಲ್ಲಿ ಏನೆಲ್ಲಾ ವಸ್ತುಗಳಿದ್ದವು? ಅವುಗಳನ್ನು ಜೈಲಿನ ಒಳಗಡೆ ಬಿಡಲು ಅವಕಾಶ ಇದೆಯಾ? ಎಂಬ ಪ್ರಶ್ನೆಗೆ ಇಲ್ಲಿದೆ ನೋಡಿ ಉತ್ತರ..
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ವಿಚಾರಣಾಧೀನ ಕೈದಿಯಾಗಿ ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿ ಮುದ್ದೆ ಮುರಿಯುತ್ತಿರುವ ನಟ ದರ್ಶನ್ ಭೇಟಿ ಮಾಡಲು ಸೋಮವಾರ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್, ಭಾವಮೈದ ಹೇಮಂತ್ ಹಾಗೂ ನಟ ಧನ್ವೀರ್ ಸೇರಿ ಮೂವರು ಆಗಮಿಸಿದ್ದರು. ಮಧ್ಯಾಹ್ನ ಬಂದ ಇವರನ್ನು ಸಂಜೆ 4 ಗಂಟೆ ಸುಮಾರಿಗೆ ಭದ್ರತಾ ಕೇಂದ್ರದಲ್ಲಿ ತಪಾಸಣೆ ಮಾಡಲಾಯಿತು. ಜೈಲಿನಲ್ಲಿರುವ ಕೈದಿ ಭೇಟಿ ಮಾಡಲು ಬಂದ ಮೂವರಿಗೂ ಆಧಾರ ಕಾರ್ಡ್ ಹಾಗೂ ಎರಡು ಬ್ಯಾಗಗಳಲ್ಲಿ ತಂದಿದ್ದ ವಸ್ತುಗಳನ್ನು ಜೈಲಿನ ಭದ್ರತಾ ಸಿಬ್ಬಂದಿ ಪರಿಶೀಲನೆ ಮಾಡಿ, ಸಂದರ್ಶಕರ ಕೊಠಡಿಗೆ ಕಳುಹಿಸಿದ್ದಾರೆ.
undefined
ಕುರುಕ್ಷೇತ್ರ ಸಿನಿಮಾ ದುರ್ಯೋಧನ ಹೋದ ಜಾಗಕ್ಕೆ, ನಿರ್ಮಾಪಕ ಮುನಿರತ್ನನೂ ಎಂಟ್ರಿ: 14 ದಿನ ನ್ಯಾಯಾಂಗ ಬಂಧನ!
ಕೋರ್ಟ್ ಆದೇಶದ ಮೇರೆಗೆ ಆಪ್ತರ ಭೇಟಿಗೂ ಅವಕಾಶ: ಇನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಐಷಾರಾಮಿ ಸೌಕರ್ಯಗಳನ್ನು ಅನುಭವಿಸುತ್ತಿದ್ದ ನಟ ದರ್ಶನ್ ಗ್ಯಾಂಗ್ ಅನ್ನು ಕೋರ್ಟ್ ಆದೇಶದ ಮೇರೆ ರಾಜ್ಯದ ವಿವಿಧ ಜೈಲುಗಳಿಗೆ ವರ್ಗಾವಣೆ ಮಾಡಲಾಯಿತು. ಇದೇ ವೇಳೆ ನಟ ದರ್ಶನ್‌ನನ್ನು ಬಳ್ಳಾರಿ ಸೆಂಟ್ರಲ್ ಜೈಲಿಗೆ ಶಿಫ್ಟ್ ಮಾಡಲಾಯಿತು. ಮುಂದುವರೆದು ನ್ಯಾಯಾಲಯದಿಂದ ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್‌ನನ್ನು ಕೇವಲ ಹತ್ತಿರದ ಸಂಬಂಧಿಕರು ಮಾತ್ರ ಭೇಟಿ ಮಾಡಬಹುದು ಎಂದು ನಿರ್ದೇಶನ ನೀಡಿತ್ತು. ಆದರೆ, ಇಂದು ನಡೆದ ನ್ಯಾಯಾಲಯದ ವಿಚಾರಣೆಯಲ್ಲಿ ದರ್ಶನ್ ಆಪ್ತ ವಲಯದ ಸ್ನೇಹಿತರಿಗೂ ಭೇಟಿ ಮಾಡಲು ಅವಕಾಶ ನೀಡಬೇಕು ಎಂಬ ದರ್ಶನ್ ಪರ ವಕೀಲರ ಮನವಿಯನ್ನು ಪುರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮಿ, ಭಾಮೈದ ಹೇಮಂತ್ ಜೊತೆಗೆ ಇದೀಗ ದರ್ಶನ್ ಆಪ್ತ ನಟ ಧನ್ವೀರ್ ಕೂಡ ಬಳ್ಳಾರಿ ಜೈಲಿಗೆ ಬಂದಿದ್ದನು.
ದರ್ಶನ್‌ಗೆ ಕೊಟ್ಟ ಬ್ಯಾಗ್‌ನಲ್ಲಿ ಏನಿತ್ತು?
ನಟ ದರ್ಶನ್‌ಗೆ ಆತನ ಪತ್ನಿ ವಿಜಯಲಕ್ಷ್ಮಿ ಬ್ಯಾಗ್ ಕೊಟ್ಟಿದ್ದಾರೆ. ಅದರಲ್ಲಿ ಡ್ರೈ ಪ್ರೂಟ್ಸ್, ಬಿಸ್ಕೇಟ್, ಬಟ್ಟೆ, ಟೂತ್‌ಪೇಸ್ಟ್ , ಸಂತೂರ್ ಸೋಪ್, ಹಣ್ಣುಗಳು ಹಾಗೂ ಬೇಕರಿ ತಿಂಡಿಯನ್ನು ತಂದು ಕೊಡಲಾಗಿದೆ. ಇನ್ನು ಸುಮಾರು 3 ತಿಂಗಳ ಕಾಲ ಜೈಲಿನಲ್ಲಿಯೇ ಇರುವ ನಟ ದರ್ಶನ್‌ಗೆ ಮನೆ ಊಟ ಮಾಡಲು ನ್ಯಾಯಾಲಯದಿಂದ ಅನುಮತಿ ಸಿಗಲಿಲ್ಲ. ಆದ್ದರಿಂದ ಜೈಲೂಟವನ್ನೇ ಮಾಡುತ್ತಾ ಸಮಯ ಕಳೆಯುವಂತಾಗಿದೆ. ಇದರಿಂದಾಗಿ ದರ್ಶನ್ ತೀವ್ರ ಸೊರಗಿದಂತೆ ಕಾಣುತ್ತಿದ್ದಾರೆ. ದೇಹದಲ್ಲಿ ಶಕ್ತಿಯೂ ಕುಂದಿ ಹೋಗಿರಬಹುದೇ ಎಂಬ ಅನುಮಾನವೂ ವ್ಯಕ್ತವಾಗಿದೆ. ಆದರೆ, ದೈಹಿಕ ಆರೋಗ್ಯದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಹೀಗಾಗಿ, ವಿಜಯಲಕ್ಷ್ಮಿ ಅವರು ತಮ್ಮ ಪತಿ ದರ್ಶನ್‌ಗೆ ವಿವಿಧ ತಿಂಡಿಗಳನ್ನು ಮತ್ತು ನಿತ್ಯ ಕರ್ಮಗಳಿಗೆ ಅಗತ್ಯವಿರುವ ವಸ್ತುಗಳನ್ನು ತಂದು ಕೊಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಬೆಂಗಳೂರು ಮೆಟ್ರೋ ಹಳಿಗೆ ಜಿಗಿದ ಬಿಹಾರದ ವ್ಯಕ್ತಿ: ಸಾಯಲು ಮೆಟ್ರೋ ಹಳಿಯೇ ಆರಿಸಿಕೊಳ್ಳುವುದೇಕೆ?
ದರ್ಶನ್ ನೋಡಿ ಕಣ್ಣೀರಿಟ್ಟ ವಿಜಯಲಕ್ಷ್ಮಿ: ಪ್ರತಿವಾರ ದರ್ಶನ್ ನೋಡಲು ಜೈಲಿಗೆ ಬರುತ್ತಿದ್ದರೂ ಈ ಬಾರಿ ದರ್ಶನ್‌ನನ್ನು ನೋಡಿದ ವಿಜಯಲಕ್ಷ್ಮಿ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ. ಮೂರ್ನಾಲ್ಕು ವಾರ ಕೇವಲ ರಕ್ತ ಸಂಬಂಧಿಗಳು ಮಾತ್ರ ಭೇಟಿಯಾಗಲು ಬರುತ್ತಿದ್ದರು. ಈ ಬಾರಿ ನಟ ಧನ್ವೀರ್ ಕೂಡ ಆಗಮಿಸಿದ್ದರು. ದರ್ಶನ್ ನೋಡುತ್ತಿದ್ದಂತೆ ಹೇಮಂತ್ ಹಾಗೂ ಧನ್ವೀರ್ ಕೂಡ ಕಣ್ಣೀರಿಟ್ಟಿದ್ದಾರೆ. ಆದರೆ, ದರ್ಶನ್ ಮಾತ್ರ ಧೃತಿಗೆಡದೇ ಮೂವರನ್ನೂ ಸಂತೈಸಿದ್ದಾರೆ. ಸುಮಾರು ಅರ್ಧ ಗಂಟೆ ಚರ್ಚೆ ಬಳಿಕ ಆರೋಪಿ ದರ್ಶನ್ ಪುನಃ ಸೆಲ್‌ನತ್ತ ತೆರಳಿದ್ದಾರೆ. ಇಂದು ದರ್ಶನ್ ತಮ್ಮ ಕುಟುಂಬಸ್ಥರನ್ನು ಭೇಟಿ ಮಾಡಲು ಬರುವಾಗ ಮತ್ತು ಹೋಗುವಾಗ ನಗುಮುಖದಿಂದಲೇ ಇದ್ದರು.