ಯುವಕನೊಂದಿಗೆ ಸುತ್ತಾಡಿ ಗರ್ಭಿಣಿ, ಫಾಕ್ಸ್‌ಕಾನ್ ಕಂಪನಿಯ ಟಾಯ್ಲೆಟ್‌ನಲ್ಲೇ ಮಗು ಹಡೆದು ಭಯದಿಂದ ಶಿಶುವಿನ ಕತ್ತು ಕುಯ್ದು ಎಸೆದು ಹೋದ ತಾಯಿ!

Kannadaprabha News   | Kannada Prabha
Published : Apr 24, 2026, 07:33 AM IST
Teen Gives Birth Inside Foxconn Toilet In Bengaluru Slits Baby s Throat

ಸಾರಾಂಶ

ದೇವನಹಳ್ಳಿಯ ಫಾಕ್ಸ್‌ಕಾನ್‌ ಕಂಪನಿಯಲ್ಲಿ ಯುವತಿಯೊಬ್ಬಳು ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿ, ಭಯದಿಂದ ನವಜಾತ ಶಿಶುವಿನ ಕತ್ತು ಸೀಳಿ ಹತ್ಯೆಗೈದು ಎಸೆದಿದ್ದಾಳೆ. ಈ ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದ್ದು, ವಿಶ್ವನಾಥಪುರ ಪೊಲೀಸರು ಯುವತಿಯನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

ದೇವನಹಳ್ಳಿ (ಏ.24) ಯುವಕನೊಬ್ಬ ಯುವತಿಯನ್ನು ಪುಸಲಾಯಿಸಿ ದೈಹಿಕ ಸಂಪರ್ಕ ಬೆಳೆಸಿಕೊಂಡಿದ್ದ ಪರಿಣಾಮ ಯುವತಿಗೆ 7.5 ತಿಂಗಳಿಗೆ ಮಗು ಜನಿಸಿದ್ದು, ಭಯಭೀತಳಾಗಿ ಶೌಚಾಲಯದಲ್ಲಿ ಹಸುಗೂಸಿನ ಕತ್ತು ಕುಯ್ದು ಎಸೆದಿರುವ ಹೃದಯವಿದ್ರಾವಕ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಶ್ವನಾಥಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬೀರಸಂದ್ರ ಗ್ರಾಮದಲ್ಲಿರುವ ಪ್ರತಿಷ್ಠಿತ ಫಾಕ್ಸ್ ಕಾನ್ ಕಂಪನಿಯಲ್ಲಿ ಘಟನೆ

ತಾಲೂಕಿನ ಬೀರಸಂದ್ರ ಗ್ರಾಮದಲ್ಲಿರುವ ಪ್ರತಿಷ್ಠಿತ ಫಾಕ್ಸ್ ಕಾನ್ ಕಂಪನಿಯಲ್ಲಿ ಘಟನೆ ನಡೆದಿದ್ದು, ಯಾದಗಿರಿ ಮೂಲದ ರೇಣುಕಾ(19) ನವಜಾತ ಶಿಶುವಿನ ಕತ್ತು ಕುಯ್ದು ಟಾಯ್ಲೆಟ್‌ನಲ್ಲಿ ಎಸೆದಿರುವ ಮಹಿಳೆ. ಈಕೆ ಅದೇ ಜಿಲ್ಲೆಯ ಯುವಕನೊಂದಿಗೆ ಸುತ್ತಾಡಿ ಗರ್ಭಿಣಿ ಆಗಿದ್ದಳೆಂದೂ, ಈಕೆ ಗರ್ಭಿಣಿ ಎಂದು ತಿಳಿದು ಆತ ಬೇರೊಂದು ಯುವತಿಯೊಂದಿಗೆ ಮದುವೆ ಆಗಿದ್ದಾನೆ. ಗರ್ಭಿಣಿ ಆಗಿದ್ದ ರೇಣಿಕಾ ದಿಕ್ಕುತೋಚದೆ ಶೌಚಾಲಯದಲ್ಲಿ ಮಗುವನ್ನು ಹಡೆದು ಅಲ್ಲೇ ಕತ್ತು ಕುಯ್ದು ಎಸೆದು ಹೋಗಿದ್ದಲೆನ್ನಲಾಗಿದೆ.

ತಂದೆ ತಾಯಿ ಇಲ್ಲದೆ ಅಕ್ಕ ಭಾವನ ಜೊತೆಯಲ್ಲಿದ್ದ ರೇಣುಕಾ

ತಂದೆ ತಾಯಿ ಇಲ್ಲದೆ ಅಕ್ಕ ಭಾವನ ಜೊತೆಯಲ್ಲಿದ್ದ ರೇಣುಕಾ, ಕಳೆದ ಒಂದು ತಿಂಗಳ ಹಿಂದೆ ಫಾಕ್ಸ್ ಕಾನ್ ಕಂಪನಿಯಲ್ಲಿ ಕೆಲಸ ಸಿಕ್ಕಿದೆ ಎಂದು ದೊಡ್ಡಬಳ್ಳಾಪುರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ಕೆಲಸಕ್ಕೆ ಹೋಗಿ ಬರುತ್ತಿದ್ದಳು. ಈ ವೇಳೆ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಹೆರಿಗೆ ನೋವು ಕಾಣಿಸಿಕೊಂಡು ಟಾಯ್ಲೆಟ್‌ನಲ್ಲಿ ಮಗುವಿಗೆ ಜನನವಾಗಿದೆ. 7.5 ತಿಂಗಳ ಮಗುವನ್ನು ಏನು ಮಾಡಬೇಕು ಎಂದು ತಿಳಿಯದೆ, ಶೌಚಾಲಯದಲ್ಲಿದ್ದ ಲೋಹದ ಪ್ಲೇಟ್‌ನಿಂದ ಮಗುವಿನ ಕತ್ತು ಸೀಳಿ ಟಾಯ್ಲೆಟ್ ಬೇಸಿನ್ ಒಳಗೆ ಹಾಕಿ ನೀರು ಬಿಟ್ಟು ಅಲ್ಲಿಂದ ಹೊರ ಹೋಗಿದ್ದಾಳೆ. ನಂತರ ಬೇರೆ ಮಹಿಳೆ ಶೌಚಾಲಯದ ಒಳಗೆ ಹೋದಾಗ ಮಗುವಿನ ತಲೆ ಕಾಣಿಸಿದೆ. ಕೂಡಲೇ ಕಂಪನಿ ಸಿಬ್ಬಂದಿ ಮೂಲಕ ವಿಶ್ವನಾಥಪುರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ತೆರಳಿದ ಪೊಲೀಸ್‌ ಸಿಬ್ಬಂದಿ ಮಗುವಿನ ದೇಹ ಹೊರತೆಗೆದು ಯುವತಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಘಟನೆ ಸಂಬಂಧ ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಮುಂದುವರಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪವಿತ್ರಾ ಗೌಡ ಅಲ್ಲ, ರೇಣುಕಾಸ್ವಾಮಿನೂ ಅಲ್ಲ; ಸತ್ಯ ಹೇಳ್ಬೇಕು ಅಂದ್ರೆ- ದರ್ಶನ್ ದುಸ್ಥಿತಿಗೆ ಅಸಲಿ ಕಾರಣ ಇವರು?
ಮದ್ವೆ ಶೂಟಿಂಗ್​ ಮಾಡುತ್ತಿದ್ದ ಫೋಟೋಗ್ರಾಫರ್​ ಮೇಲೆ ಹರಿದ ಕಾರು: ಭಯಾನಕ ವಿಡಿಯೋ ವೈರಲ್​