11 ವರ್ಷದ ಬಾಲಕಿ ಸಂತ್ರಸ್ತೆ. ಕಳೆದ 2-3 ದಿನದ ಹಿಂದೆಯೇ ಶಾಲೆಯಲ್ಲಿ ಬಾಲಕಿಯನ್ನು ಪುಸಲಾಯಿಸಿ ಹಾಜಿ ಮಲಂಗ್ ಅತ್ಯಾಚಾರ ಎಸಗಿದ್ದು, ಈ ವಿಷಯವನ್ನು ಮನೆಯಲ್ಲಿ ತಿಳಿಸದಂತೆ ಬೆದರಿಕೆ ಸಹ ಹಾಕಿದ್ದಾನೆ. ಬಾಲಕಿ ಪಕ್ಕದ ಮನೆಯವರ ಮುಂದೆ ಶಾಲೆಯಲ್ಲಿ ನಡೆದ ಘಟನೆ ವಿವರಿಸಿದ್ದಾಳೆ.
ಕಲಬುರಗಿ(ಡಿ.04): ಮುಖ್ಯಶಿಕ್ಷಕನೇ 5ನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಮಾಡಿ ಬೆದರಿಕೆ ಹಾಕಿದ ಹೇಯಕೃತ್ಯ ಕಲಬುರಗಿಯ ಯಡ್ರಾಮಿ ಪಟ್ಟಣದಲ್ಲಿ ನಡೆದಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಜಾರ್ ಸಮುದಾಯ ಸೇರಿ ವಿವಿಧ ಸಂಘಟನೆಗಳು ಯಡ್ರಾಮಿ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿವೆ. ಯಡ್ರಾಮಿ ಪಟ್ಟಣದ ನವೋದಯ ಕಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಹಾಜಿಮಲಂಗ್ ಗಣಿಯಾರ್ ಬಂಧಿತ ಆರೋಪಿ.
ಇದೇ ಶಾಲೆಯ 11 ವರ್ಷದ ಬಾಲಕಿ ಸಂತ್ರಸ್ತೆ. ಕಳೆದ 2-3 ದಿನದ ಹಿಂದೆಯೇ ಶಾಲೆಯಲ್ಲಿ ಬಾಲಕಿಯನ್ನು ಪುಸಲಾಯಿಸಿ ಹಾಜಿ ಮಲಂಗ್ ಅತ್ಯಾಚಾರ ಎಸಗಿದ್ದು, ಈ ವಿಷಯವನ್ನು ಮನೆಯಲ್ಲಿ ತಿಳಿಸದಂತೆ ಬೆದರಿಕೆ ಸಹ ಹಾಕಿದ್ದಾನೆ. ಬಾಲಕಿ ಪಕ್ಕದ ಮನೆಯವರ ಮುಂದೆ ಶಾಲೆಯಲ್ಲಿ ನಡೆದ ಘಟನೆ ವಿವರಿಸಿದ್ದಾಳೆ.
ಇನ್‌ಸ್ಟಾಗ್ರಾಮ್‌ನಿಂದ ಲಾಡ್ಜ್‌ಗೆ ಬರೋವರೆಗೂ ಚಿನ್ನಾ, ರನ್ನ; ಗರ್ಭಿಣಿಯಾದ್ಮೇಲೆ ಕೊಡ್ತಾನೆ ಕೈಯನ್ನ!
ಪಕ್ಕದ ಮನೆಯವರು ಕೂಡಲೇ ಬಾಲಕಿಯ ತಂದೆ-ತಾಯಿಗೆ ವಿಷಯ ತಿಳಿಸಿದ್ದು, ಬಂಜಾರಾ ಸಮುದಾಯದ ಹಿರಿಯರೊಂದಿಗೆ ಚರ್ಚಿಸಿ ಸೋಮವಾರ ಸಂಜೆ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ. ಘಟನೆ ಖಂಡಿಸಿ ಪ್ರತಿಭಟನೆ ನಡೆಯಿತು. ಶಾಸಕ ಡಾ.ಅಜಯಸಿಂಗ್, ಆಂದೋಲ ಮಠದ ಸಿದ್ದಲಿಂಗ ಸ್ವಾಮೀಜಿ ಕೂಡ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ಆರೋಪಿಗೆ ಕಠಿಣ ಶಿಕ್ಷೆಗೆ ಕ್ರಮ: ಶಾಸಕ ಡಾ.ಅಜಯ್ ಸಿಂಗ್
ಕಲಬುರಗಿ: ಯಡ್ರಾಮಿಯಲ್ಲಿ ಶಾಲಾ ಬಾಲಕಿ ಮೇಲೆ ನಡೆದಿರುವಂತಹ ಅತ್ಯಾಚಾರಘಟನೆಹೀನ ಕೃತ್ಯವೆಂದು ಖಂಡಿಸಿರುವ ಕೆಕೆಆರ್‌ಡಿಬಿ ಅಧ್ಯಕ್ಷ ಹಾಗೂ ಜೇವರ್ಗಿ ಶಾಸಕ ಡಾ.ಅಜಯ್ ಸಿಂಗ್ ದುಷ್ಟಕೃತ್ಯ ಎಸಗಿರುವರ ಜಾತಿ, ಮತ ನೋಡುತ್ತ ಕುಳಿ ತುಕೊಳ್ಳೋದಿಲ್ಲ, ಅಂತಹವರಿಗೆ ಕಠಿಣ ಶಿಕ್ಷೆಯಾಗುವಂತೆ ಕಾನೂ ನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.
ಯಡ್ರಾಮಿಯಲ್ಲಿ ಘಟನೆ ಖಂಡಿಸಿ ಮಂಗಳವಾರ ವಿವಿಧ ಸಂಘಟನೆಗಳವರು ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ಅಲ್ಲಿಗೆ ಭೇಟಿ ನೀಡಿ ಸಂತ್ರಸ್ತ ಕುಟುಂಬದ ಜೊತೆ ಮಾತನಾಡಿ, ಪ್ರತಿಭಟನಾ ನಿರತರಿಂದ ಮನವಿ ಸ್ವೀಕರಿಸಿದ ಬಳಿಕ ಅವರು ಮಾತನಾಡಿದರು.
ಖಾಸಗಿ, ಸರ್ಕಾರಿ ಶಾಲೆ ಯಾವುದೇ ಆಗಿರಲಿ, ಅವರು ಇತರರಿಗೆ ಮಾದರಿಯಾಗಿರುವಂತೆ ಶಿಸ್ತು, ಸಂಯಮದಿಂದ ಬದುಕ ಬೇಕು. ಅವರೇ ಇಂತಹ ಹೀನ ಕೃತ್ಯಕ್ಕೆ ಮುಂದಾಗುತ್ತಾರೆಂದರೆ ಅದನ್ನು ಯಾರೂ ಸಹಿಸಲಾಗದು. ಅಂತಹವರಿಗೆ ತಕ್ಕಪಾಠ ಕಲಿಸಲೇಬೇಕಾಗುತ್ತದೆ ಎಂದು ಹೇಳಿದರು.
ಆರೋಪಿಯ ಕೃತ್ಯ ಘೋರವಾಗಿದೆ. ಮಾನವೀಯತೆಯನ್ನೇ ಮರೆತು ವರ್ತಿಸಿದ್ದಾನೆ. ಇಲ್ಲಿ ಆರೋಪಿ ಯಾರು, ಆತನ ಸಮುದಾಯ ಇವನ್ನೆಲ್ಲ ನೋಡದೆ ಅಗತ್ಯ ಪೊಲೀಸ್, ವೈದ್ಯಕೀಯ, ನ್ಯಾಯಾಂಗ ಕ್ರಮಗಳೊಂದಿಗೆ ಕಾನೂನು ರೀತಿಯ ಶಿಕ್ಷೆಯಾಗಲಿದೆ ಎಂದರು.
ಸೌಹಾರ್ದತೆ ಇರುವ ನನ್ನ ಜೇವರ್ಗಿ ಮತ ಕ್ಷೇತ್ರದಲ್ಲಿ ಈ ರೀತಿ ಕೃತ್ಯ ನಡೆದಿದ್ದು, ನನಗೆ ಬೇಸರ ತಂದಿದೆ. ಯಾವುದೇ ರೀತಿ ಮುಲಾಜಿಲ್ಲದೆ ಈ ಕೃತ್ಯ ಮಾಡಿದ ಆರೋಪಿಯ ವಿರುದ್ಧ ಕಠಿಣ ಶಿಕ್ಷೆ ಕೊಡಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದು ಅವರು ಸಾರ್ವಜನಿಕರಿಗೆ, ಸಂತ್ರಸ್ತೆ ಪರಿವಾರಕ್ಕೆ ಭರವಸೆ ನೀಡಿದರು.
ಕುಂಟನ ಕಾಮಕ್ಕೆ ಬಲಿಯಾದ ವಿದ್ಯಾರ್ಥಿನಿ: ಒಂಟಿ ಕಾಲಿನ ಪೋಲಿಯೊ ಪೀಡಿತ ಸರಣಿ ಹಂತಕ ಆಗಿದ್ದು ಹೇಗೆ?
ಭಿಕ್ಷಾಟನೆಗೆ ಬಂದ ಫಕೀರನಿಂದ 75 ವರ್ಷದ ವೃದ್ಧೆಯ ಮೇಲೆ ಅತ್ಯಾಚಾರ
ಕಲಬುರಗಿ: ಕಲ್ಯಾಣ ಕರ್ನಾಟಕ ಸೇರಿದಂತೆ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ತೀವ್ರ ಬಡತನವಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದಲ್ಲಿ ವೃದ್ಧರನ್ನು ಬಿಟ್ಟು ಕೃಷಿ ಕೆಲಸಕ್ಕೆ ಮನೆ ಮಂದಿಯೆಲ್ಲಾ ಹೋಗಿರುತ್ತಾರೆ. ಆದರೆ, ಇದನ್ನೇ ದುರುಪಯೋಗ ಮಾಡಿಕೊಂಡ ಫಕೀರನೊಬ್ಬ 75 ವರ್ಷದ ವೃದ್ಧೆಯ ಮೇಲೆ ಅತ್ಯಾಚಾರವೆಸಗಿ ವಿಕೃತಿ ಮೆರೆದಿದ್ದನು.
ಈ ಘಟನೆ ಕಲ್ಯಾಣ ಕರ್ನಾಟಕದ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಚಂದ್ರಪಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮಕ್ಕೆ ಭಿಕ್ಷಾಟನೆ ಮಾಡಲು ಬಂದ ಫಕೀರ ಮನೆಯಲ್ಲಿ ಯಾರೂ ಇಲ್ಲದಾಗ ಅಜ್ಜಿ ಒಬ್ಬಂಟಿಯಾಗಿದ್ದ ಮನೆಯೊಳಗೆ ನುಗ್ಗಿ ಅಜ್ಜಿಯ ಮೇಲೆ ರೇಪ್ ಮಾಡಿ ಬಂದಿದ್ದಾನೆ. ಅತ್ಯಾಚಾರ ಮಾಡಿದವನನ್ನು ಇದೇ ಗ್ರಾಮದ ಪಕ್ಕದ ಐನೊಳ್ಳಿ ಗ್ರಾಮದ ಫಕೀರ ತಯ್ಯಬ್ ಎಂದು ಗುರುತಿಸಲಾಗಿದೆ. ಫಕೀರ ವೇಷಧಾರಿ ತಯ್ಯಬ್ ಬಿಕ್ಷಾಟನೆ ಮಾಡುತ್ತಾ ಊರಿರು ಸುತ್ತುತ್ತಿದ್ದನು. ಆದರೆ, ಚಂದ್ರಪಳ್ಳಿ ಗ್ರಾಮದಲ್ಲಿ 75 ವರ್ಷದ ನಿಸ್ಸಾಹಾಯಕ ಅಜ್ಜಿಯ ಮೇಲೆ ಅತ್ಯಾಚಾರಗೈದು ಹೀನ ಕೃತ್ಯವೆಸಗಿದ್ದನು.