ಮನೆಯ ಬಾಲ್ಕನಿಯಲ್ಲಿಯೇ 19 ವರ್ಷದ ಯುವತಿ ಪ್ರಿಯಾಂಕಾ ನೇಣು ಬಿಗಿದುಕೊಂಡು ಸಾವು ಕಂಡಿದ್ದಾರೆ. ನವೆಂಬರ್ 29 ರಂದು ಬೆಂಗಳೂರಿನ ರಾಜಾಜಿನಗರದಲ್ಲಿ ಈ ಘಟನೆ ನಡೆದಿದೆ.
ಬೆಂಗಳೂರು (ಡಿ.3): ಕಾಲೇಜಿನಲ್ಲಿ ಜೊತೆಯಾಗಿಯೇ ಓದುತ್ತಿದ್ದ ಸಹಪಾಠಿಯೊಬ್ಬ 15 ಲಕ್ಷ ರೂಪಾಯಿ ಮೋಸ ಮಾಡಿದ್ದರಿಂದ 19 ವರ್ಷದ ಯುವತಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ರಾಜಾಜಿನಗರದಲ್ಲಿರುವ ತಮ್ಮ ಮನೆಯಲ್ಲಿಯೇ ಆಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಡೆಕ್ಕನ್ ಹೆರಾಲ್ಡ್ ವರದಿ ಮಾಡಿರುವಂತೆ ನವೆಂಬರ್ 29 ರಂದು ಪ್ರಿಯಾಂಕಾ ತನ್ನ ಮನೆಯ ಬಾಲ್ಕನಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಸಾವಿಗೂ ಮುನ್ನ ಡೆತ್ ನೋಟ್‌ಅನ್ನು ಆಕೆ ಬರೆದಿಟ್ಟಿದ್ದು, ತನ್ನ ಕಾಲೇಜು ಸಹಪಾಠಿ ದಿಗಂತ್ ತನಗೆ ₹ 15 ಲಕ್ಷ ಮೌಲ್ಯದ ಚಿನ್ನಾಭರಣವನ್ನು ವಂಚಿಸಿದ್ದಾನೆ ಎಂದು ಆರೋಪಿಸಿದ್ದಾರೆ. ಹೂಡಿಕೆ ನೆಪದಲ್ಲಿ ಹಣದ ವಂಚನೆ ಮಾಡಿದ್ದಾನೆ ಎಂದು ತಿಳಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಹ್ಯಾಕಾಶದಲ್ಲಿ ಮಣ್ಣಿಲ್ಲದೆ ಎಲೆಕೋಸು ಬೆಳೆಯುತ್ತಿರುವ ಸುನೀತಾ ವಿಲಿಯಮ್ಸ್, ಆದರೆ ಇದು ತಿನ್ನೋದಕ್ಕಲ್ಲ!
ತನ್ನಲ್ಲಿದ್ದ ಅಪಾರ ಮೌಲ್ಯದ ಚಿನ್ನಾಭರಣಗಳನ್ನು ತೆಗೆದುಕೊಂಡು ಕ್ಯಾಸಿನೋಗಳಲ್ಲಿ ಆತ ಹೂಡಿಕೆ ಮಾಡಿದ್ದ ಎಂದು ದಿಗಂತ್ ಬಗ್ಗೆ ಪ್ರಿಯಾಂಕಾ ತಿಳಿಸಿದ್ದಾಳೆ ಎಂದು ಎಫ್‌ಐಆರ್‌ನಲ್ಲಿ ದಾಖಲಾಗಿದೆ. ಆಕೆ ಪದೇ ಪದೇ ಚಿನ್ನಾಭರಣವನ್ನು ವಾಪಾಸ್ ನೀಡುವಂತೆ ಕೇಳಿದರೂ, ದಿಗಂತ್ ಹಿಂದಿರುಗಿಸಲು ವಿಫಲನಾಗಿದ್ದ.
ಛತ್ರಪತಿ ಶಿವಾಜಿ ಬಯೋಪಿಕ್‌ನಲ್ಲಿ ರಿಷಬ್ ಶೆಟ್ಟಿ, 'ಇಮ್ಮಡಿ ಪುಲಕೇಶಿ' ಸಿನಿಮಾ ಕೂಡ ಮಾಡಿ ಎಂದ ಕನ್ನಡಿಗರು!
ಭರತ್ ಕುಮಾರ್ ನೀಡಿದ ದೂರಿನ ಮೇರೆಗೆ ರಾಜಾಜಿನಗರ ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 108 (ಆತ್ಮಹತ್ಯೆಗೆ ಪ್ರಚೋದನೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.