ಮಾಸಿಕ 1.2 ಲಕ್ಷ ಪಿಂಚಣಿ ಪಡೆಯಲು ತಂದೆಯ ಮೃತದೇಹವನ್ನೇ ಬಚ್ಚಿಟ್ಟ ಮಹಿಳೆ!

By Vinutha Perla  |  First Published May 11, 2024, 11:14 AM IST

ಹಣ ಕಂಡ್ರೆ ಹೆಣಾನೂ ಬಾಯಿ ಬಿಡುತ್ತೆ ಅಂತಾರೆ..ಆದ್ರೆ ಈ ಮಹಿಳೆ ಹಣಕ್ಕಾಗಿ ತನ್ನ ತಂದೆಯ ಹೆಣವನ್ನೇ ಬಚ್ಚಿಟ್ಟಿದ್ದಾಳೆ. ತಂದೆ ಬದುಕಿದ್ದಾರೆಂದು ಬಿಂಬಿಸಿ ಅವರ 1.2 ಲಕ್ಷ ಪಿಂಚಣಿಯನ್ನು ಕಬಳಿಸಿದ್ದಾಳೆ. ಆ ಬಗ್ಗೆ ಇಲ್ಲಿದೆ ಮಾಹಿತಿ.


ಮನುಷ್ಯ ದುರಾಸೆಗೆ ಕೊನೆಯಿಲ್ಲ. ಎಷ್ಟಿದ್ದರೂ ಮತ್ತಷ್ಟು, ಮಗದಷ್ಟು ಬೇಕೆಂಬ ಆಸೆ. ಅದಕ್ಕಾಗಿ ಬೇಕಾದರೆ ಸಂಬಂಧ, ಮಾನವೀಯತೆ ಎಲ್ಲವನ್ನೂ ಮರೆತು ಬಿಡುತ್ತಾರೆ. ಹಾಗೆಯೇ ಇಲ್ಲೊಬ್ಬ ಮಹಿಳೆ ಹಣಕ್ಕಾಗಿ ತನ್ನ ತಂದೆಯ ಹೆಣವನ್ನೇ ಬಚ್ಚಿಟ್ಟಿದ್ದಾಳೆ. ತಂದೆ ಬದುಕಿದ್ದಾರೆಂದು ಬಿಂಬಿಸಿ ಅವರ 1.2 ಲಕ್ಷ ಪಿಂಚಣಿಯನ್ನು ಕಬಳಿಸಿದ್ದಾಳೆ. ತೈವಾನ್ ಮಹಿಳೆ ಹೀಗೆ ಮಾಡಿರುವುದನ್ನು ಇಲ್ಲಿನ ಪೊಲೀಸ್ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಮಹಿಳೆ ತನ್ನ ಮಿಲಿಟರಿ ತಂದೆಯ ಪಿಂಚಣಿಯನ್ನು ಪಡೆಯಲು ತನ್ನ ಸತ್ತ ತಂದೆಯ ದೇಹವನ್ನು ತನ್ನ ಮನೆಯಲ್ಲಿ ವರ್ಷಗಳ ಕಾಲ ಬಚ್ಚಿಟ್ಟಿದ್ದಾಳೆ ಎಂದು ಆರೋಪಿಸಿದ್ದಾರೆ. 

ದಕ್ಷಿಣ ತೈವಾನ್‌ನ ಕಾಹ್‌ಸಿಯುಂಗ್‌ನಲ್ಲಿ ಮಹಿಳೆ ಐದು ದಶಕಗಳಿಂದ ತನ್ನ ತಂದೆಯೊಂದಿಗೆ ವಾಸಿಸುತ್ತಿದ್ದರು ಎಂದು ವರದಿಯಾಗಿದೆ. ತನ್ನ ನಿವಾಸದಲ್ಲಿ ಡೆಂಗ್ಯೂ ತಡೆಗಟ್ಟುವ ರಾಸಾಯನಿಕಗಳನ್ನು ಅನ್ವಯಿಸದಂತೆ ಆರೋಗ್ಯ ಅಧಿಕಾರಿಗಳಿಗೆ ಅಡ್ಡಿಪಡಿಸಿದ್ದಕ್ಕಾಗಿ ಆಕೆಗೆ 1.50 ಲಕ್ಷ ದಂಡ ವಿಧಿಸಲಾಗಿತ್ತು. ಜೊತೆಗೆ ಮನೆಯೊಳಗೆ ಬರದಂತೆ ಆಕೆಯ ನಿರಂತರ ನಿರಾಕರಣೆಯು ಅಧಿಕಾರಿಗಳಿಗೆ ಅನುಮಾನ ಮೂಡಿಸಿತು. ಮತ್ತು ಪೊಲೀಸ್‌ ಅಧಿಕಾರಿಗಳಿಗೆ ವಿಷಯ ತಿಳಿಸಲು ಕಾರಣವಾಯಿತು. 

Latest Videos

undefined

ಮಗಳ ಶವದೊಂದಿಗೆ 3 ದಿನ ಕಳೆದ ತಾಯಿ, ಸತ್ತ ವಿಷಯ ತಿಳಿದೊಡನೆ ಕೊನೆಯುಸಿರೆಳೆದ ಅಮ್ಮ!

ತನಿಖೆಯ ಸಮಯದಲ್ಲಿ, ಅಧಿಕಾರಿಗಳು ಮಹಿಳೆಯನ್ನು ಆಕೆಯ ತಂದೆಯ ಕುರಿತು ವಿಚಾರಣೆ ನಡೆಸಿದಾಗ, ಆಕೆಯ ತಂದೆ ನರ್ಸಿಂಗ್ ಸೌಲಭ್ಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದರು. ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಪ್ರಕಾರ, ಮಹಿಳೆಯ ತಂದೆ 20 ವರ್ಷಗಳ ಕಾಲ ದೇಶಕ್ಕೆ ಸೇವೆ ಸಲ್ಲಿಸಿದ ಮಿಲಿಟರಿ ಅನುಭವಿ. ಹೀಗಾಗಿ ಅವರು ಅಂದಾಜು Rs 1.27 ಲಕ್ಷ ಮಾಸಿಕ ಪಿಂಚಣಿ ಪಡೆಯುತ್ತಾರೆ. ಮಹಿಳೆ ಈ ಹಣವನ್ನು ಗಳಿಸಲು ಮೃತದೇಹ ಬಚ್ಚಿಟ್ಟಿರುವುದು ತನಿಖೆಯಲ್ಲಿ ಬಯಲಾಗಿದೆ.

ಪೊಲೀಸರು ಪದೇ ಪದೇ ಪ್ರಶ್ನೆ ಕೇಳಿದರೂ ಮಹಿಳೆ ವಿಷಯವನ್ನು ಮುಚ್ಚಿಡುತ್ತಲೇ ಹೋದಳು. ಮೊದಲು ತನ್ನ ಸಹೋದರ ತನ್ನ ತಂದೆಯನ್ನು ಬೇರೆಡೆಗೆ ಸಾಗಿಸಿದ್ದೇನೆ ಎಂದು ತಿಳಿಸಿದಳು.. ನಂತರ ತಂದೆ ಬೇರೆಡೆ ನಿಧನರಾದರು ಎಂದು ಪೊಲೀಸರಿಗೆ ತಿಳಿಸಿದಳು. ಅವರು ಮರಣ ಪ್ರಮಾಣಪತ್ರವನ್ನು ಕೇಳಿದಾಗ, ಮಹಿಳೆಯು ದಾಖಲೆಗಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಯಲ್ಲಿದ್ದಾಳೆ ಎಂದು ಹೇಳಿದಳು. ಮಹಿಳೆಯ ವಿಭಿನ್ನ ಹೇಳಿಕೆಗಳ ನಂತರ, ಅಧಿಕಾರಿಗಳು ಮನೆಯ ಆವರಣದಲ್ಲಿ ಹುಡುಕಾಟ ನಡೆಸಿದರು. ಮತ್ತು ವಯಸ್ಸಾದ ವ್ಯಕ್ತಿಯ ಅವಶೇಷಗಳನ್ನು ಹೊಂದಿರುವ ಕಪ್ಪು ಪ್ಲಾಸ್ಟಿಕ್ ಕಸದ ಚೀಲವನ್ನು ಪತ್ತೆಹಚ್ಚಿದರು. ತನಿಖೆ ನಡೆಸಿದಾಗ, ಆ ವ್ಯಕ್ತಿ ಬಹಳ ಹಿಂದೆಯೇ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಕಂಡುಕೊಂಡರು. 

ಮಂಡ್ಯ: ತಬ್ಬಿಕೊಂಡ ಸ್ಥಿತಿಯಲ್ಲೇ ಜೋಡಿ ಮೃತದೇಹ‌ ಪತ್ತೆ

ದೇಹವು ಅಸ್ಥಿಪಂಜರದ ಅವಶೇಷಗಳಾಗಿ ಕೊಳೆಯಲು ಸಾಮಾನ್ಯವಾಗಿ ಒಂದರಿಂದ ಎರಡು ವರ್ಷಗಳವರೆಗೆ ತೆಗೆದುಕೊಳ್ಳುತ್ತದೆ ಎಂದು ವಿಧಿವಿಜ್ಞಾನ ತಜ್ಞರು ಬಹಿರಂಗಪಡಿಸಿದ್ದಾರೆ. ತೈವಾನ್‌ನಲ್ಲಿ ಶವವನ್ನು ದುರುಪಯೋಗಪಡಿಸಿಕೊಂಡರೆ ಅಥವಾ ತಪ್ಪಾಗಿ ನಿರ್ವಹಿಸುವುದಕ್ಕೆ ಸಂಬಂಧಿಸಿದ ಅಪರಾಧಗಳಿಗೆ ದಂಡಗಳು ತೀವ್ರವಾಗಿರುತ್ತವೆ. ಮತ್ತೊಂದೆಡೆ, ಅಂತಹ ಅಪರಾಧವು ನೇರ ಸಂಬಂಧಿ ಅಥವಾ ನಿಕಟ ಕುಟುಂಬದ ಸದಸ್ಯರನ್ನು ಒಳಗೊಂಡಿದ್ದರೆ, ಶಿಕ್ಷೆಯನ್ನು 1.5 ಪಟ್ಟು ಹೆಚ್ಚಿಸಲಾಗುತ್ತದೆ.

click me!