T20 World Cup; 'ನಮ್ಮ ಮೇಲೆ ಪಾಕ್ ಗೆದ್ದಿದ್ದಕ್ಕೆ ಪಟಾಕಿ ಸಿಡಿಸಿದ ಪತ್ನಿ ಬಂಧಿಸಿ'

By Suvarna NewsFirst Published Nov 7, 2021, 9:28 PM IST
Highlights

* ವಿಶ್ವಕಪ್ ನಲ್ಲಿ ಪಾಕ್ ವಿರುದ್ಧ ಭಾರತಕ್ಕೆ ಸೋಲು
* ಸಂಭ್ರಮಾಚರಣೆ ಮಾಡಿದ್ದ ಪತ್ನಿ ವಿರುದ್ಧ ಕ್ರಮ ತೆಗೆದುಕೊಳ್ಳಿ
* ಪೊಲೀಸರಿಗೆ ದೂರು ನೀಡಿದ ಉತ್ತರ ಪ್ರದೇಶದ ಗಂಡ
* ಘೋಷಣೆ ಕೂಗಿದ್ದ ಕಾಶ್ಮೀರಿ ವಿದ್ಯಾರ್ಥಿಗಳನ್ನು ಬಂಧಿಸಲಾಗಿತ್ತು

ಲಕ್ನೋ(ನ. 07)   ಟಿ ಟ್ವೆಂಟಿ ವಿಶ್ವಕಪ್(T20 World Cup) ನಿಂದ ಭಾರತ (Team India) ಹೊರಬಿದ್ದಿರುವ ಸುದ್ದಿ ಅಧಿಕೃತವಾಗುತ್ತಿದೆ.  ಭಾರತ ತನ್ನ ಮೊದಲಿನ ಪಂದ್ಯವನ್ನು ಪಾಕ್ (Pakistan) ವಿರುದ್ಧ ಸೋತಿತ್ತು. ಆದರೆ ಅದಕ್ಕೆ ಸಂಬಂಧಿಸಿದ ಸುದ್ದಿ ಮಾತ್ರ ಕೊನೆಯಾಗುತ್ತಿಲ್ಲ.

ಉತ್ತರ ಪ್ರದೇಶದ (Uttar Pradesh) ವ್ಯಕ್ತಿಯೊಬ್ಬರು(Husband) ತನ್ನ ಹೆಂಡತಿ (Wife)ಮತ್ತು ಆಕೆಯ ಸಹೋದರರ ವಿರುದ್ಧ ದೂರು ದಾಖಲಿಸಿದ್ದಾರೆ. ಭಾರತದ ವಿರುದ್ಧ ಪಾಕ್ ಗೆದ್ದಾಗ ಸಂಭ್ರಮಾಚರಣೆ ಮಾಡಿದ್ದರು. ಅಕ್ಟೋಬರ್ 24  ರಂದು ಪಂದ್ಯ ನಡೆದಿದ್ದು ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ರಾಂಪುರದ ಅಜೀಮ್ ನಗರದ ನಿವಾಸಿ ಇಶಾನ್ ಮಿಯಾ ಅವರು ತಮ್ಮ ಪತ್ನಿ ರಬಿಯಾ ಶಮ್ಸಿ ಮತ್ತು ಅವರ ಕುಟುಂಬ ಪಟಾಕಿ ಸಿಡಿಸಿ ಸಂಭ್ರಮಿಸಿದೆ ಎಂದು ಆರೋಪಿಸಿದ್ದಾರೆ. ಭಾರತ ತಂಡವನ್ನು ಗೇಲಿ ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಪಾಕ್ ವಿರುದ್ಧ ಭಾರತ ಸೋಲು ಕಂಡಿದ್ದಕ್ಕೆ ಕಾರಣ

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153-ಎ ಮತ್ತು ಮಾಹಿತಿ ತಂತ್ರಜ್ಞಾನ (ತಿದ್ದುಪಡಿ) ಕಾಯಿದೆ, 2008 ರ ಸೆಕ್ಷನ್ 67 ರ ಅಡಿಯಲ್ಲಿ ರಾಂಪುರ ಜಿಲ್ಲೆಯ ಗಂಜ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

 ಆಗ್ರಾ ಮತ್ತು ಜಮ್ಮು ಮತ್ತು ಕಾಶ್ಮೀರದಿಂದಲೂ ಪಾಕಿಸ್ತಾನದ ವಿಜಯದ ಸಂಭ್ರಮಾಚರಣೆಗಳು ವರದಿಯಾಗಿದ್ದವು. 

ಕಳೆದ ತಿಂಗಳು, ಜಮ್ಮು ಮತ್ತು ಕಾಶ್ಮೀರ ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ಎರಡು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದರು. 

ಕಾಶ್ಮೀರದ ಜನರು ಪಾಕಿಸ್ತಾನದ ಗೆಲುವನ್ನು ಸಂಭ್ರಮಿಸಿದರು ಮತ್ತು ಪಂದ್ಯದ ನಂತರ ಘೋಷಣೆ ಕೂಗಿದರು ಎಂದು ಹೇಳುವ ಕೆಲವು ವೀಡಿಯೊಗಳು ಸಾಮಾಜಿಕ ತಾಣದಲ್ಲಿ ವೈರಲ್ ಆದ ನಂತರ ಪೊಲೀಸರು ಕ್ರಮ ತೆಗೆದುಕೊಂಡಿದ್ದರು. 

ಶ್ರೀನಗರದಲ್ಲಿ ಕಾಶ್ಮೀರಿ ಎಂಬಿಬಿಎಸ್ ವಿದ್ಯಾರ್ಥಿಗಳ ಸಂಭ್ರಮಾಚರಣೆಯ ವೀಡಿಯೊ ದೊಡ್ಡ ಸುದ್ದಿಗೆ ಕಾರಣವಾಗಿತ್ತು. ಆಗ್ರಾದಲ್ಲಿ ಇಂಜಿನಿಯರಿಂಗ್ ಓದುತ್ತಿದ್ದ ಮೂವರು ಕಾಶ್ಮೀರಿ ವಿದ್ಯಾರ್ಥಿಗಳನ್ನು ಪಾಕ್ ಪರ ಸಂಭ್ರಮಾಚರಣೆ ನಡೆಸಿದ ಆರೋಪದಲ್ಲಿ ಬಂಧಿಸಲಾಗಿತ್ತು.

ಐಸಿಸಿ ವಿಶ್ವಕಪ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಟೀಂ ಇಂಡಿಯಾ(Team India) ಬದ್ಧವೈರಿ ಪಾಕಿಸ್ತಾನ(Pakistan) ವಿರುದ್ಧ ಸೋಲು ಅನುಭವಿಸಿತ್ತು. ಈ  T20 World Cup 2021ರ ಟೂರ್ನಿಯನ್ನು ಸೋಲಿನೊಂದಿಗೆ ಆರಂಭಿಸಿತ್ತು.  ನಾಯಕ ಬಾಬರ್ ಅಜಮ್ ಹಾಗೂ ಮೊಹಮ್ಮದ್ ರಿಜ್ವಾನ್ ಅಬ್ಬರದ ಬ್ಯಾಟಿಂಗ್‌ನಿಂದ ಪಾಕಿಸ್ತಾನ 10 ವಿಕೆಟ್ ಭರ್ಜರಿ ಗೆಲುವು ಸಾಧಿಸಿತ್ತು.  ಟಿಟ್ವೆಂಟಿ ವಿಶ್ವ ಕಪ್ ಸೆಮೀಸ್ ಹಂತ ತಲುಪುತ್ತಿದ್ದು ಒಂದು ಕಡೆಯಿಂದ   ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ಲಗ್ಗೆ ಇಡುತ್ತಿದ್ದರೆ ಇನ್ನೊಂದು ಕಡೆಯಿಂದ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಪ್ರಮುಖ ಘಟ್ಟ ತಲುಪುವುದನ್ನು ಖಚಿತ ಮಾಡಿಕೊಂಡಿವೆ.

 

click me!