* ಕುಮಾರಸ್ವಾಮಿಗೆ ಹಾರ ಹಾಕಲು ಬಂದು 1 ಲಕ್ಷ ಕಳೆದುಕೊಂಡ ಯುವಕ
* ಕುಮಾರಸ್ವಾಮಿಗೆ ಹಾರ ಹಾಕುವಾಗ ಜೇಬಿಗೆ ಕತ್ತರಿ ಹಾಕಿದ ಖದೀಮರು
* ಕಷ್ಟಪಟ್ಟು ದುಡಿದಿದ್ದ ಒಂದು ಹಣ ಕಳೆದುಕೊಂಡು ಪರದಾಡಿದ ಯುವಕ
ಬೆಂಗಳೂರು, (ನ.07): ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ (HD Kumaraswamy) ಅವರಿಗೆ ಹಾರ ಹಾಕಲು ಬಂದ ಯುವಕನೊಬ್ಬ ಬರೋಬ್ಬರಿ ಒಂದು ಲಕ್ಷ ಕಳೆದುಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ನಡೆದಿದೆ.
ಇಂದು (ನ.07) ದೇವನಹಳ್ಳಿ (Devanahalli) ಪಟ್ಟಣಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಆಗಮಿಸಿದ್ರು. ಈ ವೇಳೆ ಹೂ ವ್ಯಾಪಾರಿ (Flower Marchant) ರಾಜೇಶ್, ಕುಮಾರಸ್ವಾಮಿಗೆ ಹೂವಿನ ಹಾರ ಹಾಕಲು ಹೋಗಿದ್ದಾರೆ. ಆ ಗದ್ದಲದಲ್ಲಿ ಖದೀಮರು ರಾಜೇಶ್ ಪ್ಯಾಂಟ್ ಜೇಬಿಗೆ ಕತ್ತರಿ ಹಾಕಿ ಒಂದು ಲಕ್ಷ ಎಗರಿಸಿಕೊಂಡು ಪರಾರಿಯಾಗಿದ್ದಾರೆ.
undefined
Karnataka Poliitcs: ಹಳ್ಳಿಗಳತ್ತ ಕುಮಾರಸ್ವಾಮಿ ಚಿತ್ತ, ಮತ್ತೊಮ್ಮೆ ಕೊನೆ ಹೋರಾಟ ಎಂದ ಎಚ್‌ಡಿಕೆ
ಕಷ್ಟಪಟ್ಟು ದುಡಿದಿದ್ದ ಹಣ ಕಳೆದುಕೊಂಡು ರಾಜೇಶ್ ಪರದಾಡಿದ್ದು, ದೀಪಾವಳಿ ಹಬ್ಬಕ್ಕೆ ಅಂತ ಮನೆಯಲ್ಲಿದ್ದ ಚಿನ್ನಾಭರಣ (Gold) ಅಡಿವಿಟ್ಟು ಹಣ ಪಡೆದಿದ್ದ. ಜತೆಗೆ ಹೂ ವ್ಯಾಪಾರ ಮಾಡಿ ಬಂದಿದ್ದ ಒಂದು ಲಕ್ಷ ಹಣದಲ್ಲಿ ಅಡವಿಟ್ಟಿದ್ದ ಆಭರಣ ಬಿಡಿಸಿಕೊಳ್ಳಲು ರಾಜೇಶ್ ಬಂದಿದ್ದ. ಆದ್ರೆ, ಕಳ್ಳರು ತಮ್ಮ ಕೈಚೆಳಕ ತೋರಿಸಿದ್ದಾರೆ. ಹಾರ ಹಾಕಿ ಬಂದ ನಂತರ ಹಣ ಕಳ್ಳತನವಾಗಿರೂದು ಕಂಡು ರಾಜೇಶ್ ಕಣ್ಣಿರು ಹಾಕಿದರು.
ಕುಮಾರಸ್ವಾಮಿಗೆ ಹೂವಿನ ಹಾರ ಹಾಕಲು ಬಂದಿದ್ದೆ ತಪ್ಪಾಯ್ತು ಎನ್ನುವಂತಾಯ್ತು.
ರಾಜಕೀಯ ಸಮಾವೇಶಗಳಲ್ಲಿ ಕಿಸೆಗಳ್ಳರ ಕೈಚಳಕ ಉದಾಹರಣೆಗಳು ಇವೆ. ರಾಜಕೀಯ ಕಾರ್ಯಕ್ರಮ ಅಂದ್ರೆ ಗದ್ದಲ, ಗಲಾಟೆ ಇರುತ್ತೆ. ಖದೀಮರಿಗೆ ಇಂತಹ ಜನಸಂದಣಿ ಇದ್ರೆ ಸಾಕು ಹಬ್ಬವೋ ಹಬ್ಬ.
ಅಧಿಕ ಬಡ್ಡಿ ಆಸೆ ತೋರಿಸಿ ಪಂಗನಾಮ ಹಾಕಲೆತ್ನಿಸಿದ ಮೂವರ ಬಂಧನ
ಬೆಂಗಳೂರು: ಚೈನ್ ಲಿಂಕ್ ಮೂಲಕ ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿದರೆ ಶೇ.20 ರಷ್ಟು ಲಾಭ ಗಳಿಸಬಹುದು ಎಂದು ಸಾರ್ವಜನಿಕರನ್ನು ನಂಬಿಸಿ ಕೋಟ್ಯಂತರ ರೂ.
ವಂಚನೆಗೆ ಮುಂದಾಗಿದ್ದ ಪೊಮೋ ಎಕ್ಸ್ ಕಂಪನಿಯ ಮೂವರು ವ್ಯಕ್ತಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಹೆಚ್‍ಎಸ್‍ಆರ್ ಲೇಔಟ್ ನಿವಾಸಿಗಳಾದ ರಾಘವೇಂದ್ರ, ನಾಗರಾಜು ಮತ್ತು ಶಿವಮೂರ್ತಿ ಬಂತ ಆರೋಪಿಗಳು.
ಆರೋಪಿಗಳು ಮತ್ತಿತರ ವ್ಯಕ್ತಿಗಳೊಂದಿಗೆ ಶಾಮೀಲಾಗಿ ಪೊಮೋಎಕ್ಸ್ ಕಂಪನಿಯಲ್ಲಿ ಕ್ರಿಪ್ಟೋ ಕರೆನ್ಸಿಗೆ ಬಂಡವಾಳ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಗಳಿಸಿ ಬೇಗ ಶ್ರೀಮಂತರಾಗಬಹುದು ಎಂದು ಸಾರ್ವಜನಿಕರನ್ನು ನಂಬಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪೊಮೋ ಎಕ್ಸ್ ಕಂಪನಿ ಅಮೆರಿಕಾ, ಸಿಂಗಾಪೂರ್, ಚೈನಾ ದೇಶಗಳಲ್ಲೂ ಕಚೇರಿ ಹೊಂದಿರುವುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಕೆಲ ದಿನಗಳ ಹಿಂದೆ ಯಲಹಂಕದಲ್ಲಿರುವ ರಾಯಲ್ ಆರ್ಕಿಡ್ ಹೋಟೆಲ್‍ನಲ್ಲಿ ಸಭೆ ನಡೆಸಿ ಸಾರ್ವಜನಿಕರಿಗೆ ತಮ್ಮ ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡುವಂತೆ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು.
ಪೊಮೋ ಎಕ್ಸ್ ಕಂಪನಿ ಅಮೆರಿಕಾ, ಸಿಂಗಾಪೂರ್, ಚೈನಾ ದೇಶಗಳಲ್ಲೂ ಕಚೇರಿ ಹೊಂದಿರುವುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಕೆಲ ದಿನಗಳ ಹಿಂದೆ ಯಲಹಂಕದಲ್ಲಿರುವ ರಾಯಲ್ ಆರ್ಕಿಡ್ ಹೋಟೆಲ್‍ನಲ್ಲಿ ಸಭೆ ನಡೆಸಿ ಸಾರ್ವಜನಿಕರಿಗೆ ತಮ್ಮ ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡುವಂತೆ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು.
ಈ ಹಿಂದೆ ಇದೆ ವಂಚಕರು ಇಎಸ್‍ಪಿಎನ್ ಗ್ಲೋಬಲ್ ಈ ಒರಾಕಲ್ ಕಂಪನಿಯಲ್ಲಿ ಕೋಟಿ ಕೋಟಿ ಹಣ ಹೂಡಿಕೆ ಮಾಡಿಸಿ ಕೋಟ್ಯಂತರ ರೂ.ವಂಚಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪೊಮೋ ಎಕ್ಸ್ ಕಂಪನಿಯಲ್ಲಿ ಕ್ರಿಪ್ಟೋ ಕರೆನ್ಸಿ ಖರೀದಿಸಿ ನಂತರ ಬೇರೆ ವ್ಯಕ್ತಿಗಳನ್ನು ಕರೆತಂದು ಅವರಿಂದ ಚೈನ್ ಲಿಂಕ್ ಆಧಾರದಲ್ಲಿ ಎಡ-ಬಲದಲ್ಲಿ ಹಣ ಹೂಡಿಕೆ ಮಾಡಿಸಿದರೆ ಭಾರಿ ಲಾಭ ನೀಡುವ ಆಮಿಷ ಒಡ್ಡಿದ್ದರು.