ಚಿತ್ರರಂಗದಲ್ಲಿ ಹೆಸರು ಮಾಡಬೇಕೆಂದು ಬೆಂಗಳೂರಿಗೆ ಬಂದಿದ್ದ ಯುವಕ ಅನುಮಾನಾಸ್ಪದ ಸಾವು!

By Govindaraj SFirst Published Sep 30, 2022, 10:28 AM IST
Highlights

ನಗರದ ಪಿಜಿಯಲ್ಲಿ ಯುವಕ ಅನುಮಾನಾಸ್ಪದ ಸಾವನಪ್ಪಿರುವ ಘಟನೆ ದಾಸರಹಳ್ಳಿಯ ವಿನಾಯಕ ಪಿಜಿಯಲ್ಲಿ ನಡೆದಿದೆ. ಸಿನಿಮಾ ರಂಗದಲ್ಲಿ ಹೆಸರು ಮಾಡಬೇಕು ಅಂತ ಶಿವಮೊಗ್ಗ ದಿಂದ ಬೆಂಗಳೂರಿಗೆ ಬಂದಿದ್ದ ಯುವಕ ಪಿಜಿ ಅವ್ಯವಸ್ಥೆಗೆ ಬಲಿಯಾಗಿದ್ದಾನೆ. 

ಬೆಂಗಳೂರು (ಸೆ.30): ಜೀವನದಲ್ಲಿ ಸಾಧನೆ ಮಾಡ್ಬೇಕು, ಬದುಕ್ಬೇಕು ಎಂಬ ಕಾರಣಕ್ಕೆ ಊರು ಬಿಟ್ಟು ನಗರಕ್ಕೆ ಹಲವಾರು ಮಂದಿ ಬರ್ತಾರೆ. ಅವರಿಗೆ ಸೂಕ್ತ ನೆಲೆ ಇರದ ಕಾರಣ ಕೆಲವೊಂದು ಪಿಜಿಗಳಲ್ಲಿ ವಾಸ್ತವ್ಯ ಹೂಡ್ತಾರೆ. ಅಂತಹ ಪಿಜಿಗಳೇ ಈಗ ಅವ್ಯವಸ್ಥೆಯ ತಾಣವಾಗಿದೆ.  ಯಸ್ ಸ್ವಚ್ಚತೆ ಇರದ ಪಿಜಿಯೊಂದು ಯುವಕನನ್ನ ಬಲಿ ಪಡೆದಿದೆ. ಗೋವಿಂದರಾಜನಗರ ಪೊಲೀಸ್ ಠಾಣಾ ವ್ಯಾಪ್ತಿಯ ದಾಸರಹಳ್ಳಿ ಬಳಿ ಇರುವ  ವಿನಾಯಕ ಪಿಜಿಯಲ್ಲಿ ನಡೆದ ಘಟನೆ ಇದು. 20 ದಿನಗಳ ಅನಿಲ್ ಕುಮಾರ್ ಎಂಬಾತ ಮೃತನಾಗಿದ್ದ. ಅಸಹಜ ಸಾವು ಎಂಬ ಕಾರಣ ನೀಡಿ ಅನಿಲ್ ತಂದೆ ಪಿಜಿ ಮಾಲೀಕರ ವಿರುದ್ಧ ದೂರು ನೀಡಿದ್ದಾರೆ.  

ಅಷ್ಟೆ ಅಲ್ಲದೆ ಮೃತದೇಹ ಬೇಕು‌ ಅಂದ್ರೆ ಸಹಜ ಸಾವುಬ ದಾಖಲಾತಿಗೆ ಪೊಲೀಸರೇ ಸಹಿ ಮಾಡಲು ಹೇಳಿದ್ದಾರೆಂದು ಅನಿಲ್ ತಂದೆ ದೂರಿದ್ದಾರೆ. ಶಿವಮೊಗ್ಗ ಮೂಲದವನಾದ ಅನಿಲ್ ಕುಮಾರ್ ಕಳೆದ 20 ದಿನಗಳ ಹಿಂದೆಯಷ್ಟೆ ನಗರಕ್ಕೆ ಬಂದಿದ್ದ. ಮಧ್ಯಮ ವರ್ಗದ ಕುಟುಂಬದಿಂದ ಬಂದಿದ್ದ ಅನಿಲ್, ಕಲಾವಿದನಾಗೋ ಆಸೆ ಇತ್ತು. ಸಿನಿರಂಗದಲ್ಲಿ ಏನಾದ್ರಿ ಸಾಧನೆ ಮಾಡ್ಬೇಕು ಎಂದು ನಗರಕ್ಕೆ ಬಂದಿದ್ದ. ಅದಕ್ಕಾಗಿ ಸಾಕಷ್ಟು ಸ್ಟ್ರಗಲ್ ಕೂಡ ಮಾಡ್ತಿದ್ದ. ನಗರದಲ್ಲಿ  ಕುಟುಂಬಸ್ಥರು ಸ್ನೇಹಿತರು ಯಾರೂ ಇಲ್ಲದ ಹಿನ್ನಲೆ ದಾಸರಹಳ್ಳಿಯ ವಿನಾಯಕ  ಪಿಜಿ ಸೇರಿಕೊಂಡಿದ್ದ.  ಆ ಪಿಜಿಯಲ್ಲಿ ಕೇವಲ 25 ಜನರು ಮಾತ್ರ ಪೇಯಿಂಗ್ ಗೆಸ್ಟ್ ಆಗಿದ್ರು.‌ 

Bharat Jodo Yatra: ರಾಹುಲ್‌ ಯಾತ್ರೆ ಬ್ಯಾನರ್‌ ಹರಿದ ಕಿಡಿಗೇಡಿಗಳು: ಪೊಲೀಸರಿಗೆ ದೂರು

ಆ ಪಿಜಿ ವಿಪರೀತ ಕೊಳಕು ಎಂಬುದಕ್ಕೆ ಈ ವಿಡಿಯೋಗಳೇ ಸಾಕ್ಷಿ. ಹಣ ಪಡೆದುಕೊಳ್ಳುವ ಪಿಜಿ ಮಾಲೀಕ ಅದರ ಸ್ಚಚ್ಚತೆ ಬಗ್ಗೆಯೂ ಗಮನ ಹರಿಸಬೇಕಿದೆ.  ಇವೆಲ್ಲದರ ಅರಿವೂ ಇರದ  ದೂರದ ಊರಿನಿಂದ ಬರುವ ಕೆಲ ಯುವಕರು ಕಡಿಮೆ ಹಣ ಎಂದು ಸೇರಿಕೊಳ್ತಾರೆ. ಹೀಗೆ ಸೇರಿಕೊಂಡವನೇ ಅನಿಲ್. ಇನ್ನು ಅಲ್ಲಿನ ಸ್ವಚ್ಚತೆ ಇಲ್ಲದ ಕಾರಣ ಶುಕ್ರವಾರ ಅನಿಲ್‌ಗೆ ಫುಡ್ ಪಾಯ್ಸನ್ ಆಗಿದೆ‌. ಈ ವಿಚಾರವನ್ನ ತನ್ನ ತಾಯಿಗೆ ಅನಿಲ್ ಕರೆ ಮಾಡಿ ಹೇಳಿದ್ದ. ಅಂದು ಶುಕ್ರವಾರ ಬಾತ್ರೂಂಗೆ ಹೋದವನು ಪತ್ತೆ ಇರಲಿಲ್ಲ. ಕರೆಗಳಿಗೂ ರೆಸ್ಪಾನ್ಸ್ ಮಾಡ್ತಿರಲಿಲ್ಲ. 

Bengaluru: ಮಾರಕಾಸ್ತ್ರ ಬೀಸಿ ಮೊಬೈಲ್‌ ಕಸಿಯಲು ಯತ್ನ: ಎಫ್‌ಐಆರ್‌ ದಾಖಲು

ಅಲ್ಲಿ ಇಲ್ಲಿ ಹುಡುಕಾಡಿದರೂ ಸಿಕ್ಕಿರಲಿಲ್ಲ. ಸೋಮವಾರ ಅಂದರೆ ಮೂರು ದಿನಗಳ ಬಳಿಕ ಹೌಸ್ ಕೀಪಿಂಗ್‌ನವರು ಬಾತ್ರೂಂ ಸ್ವಚ್ಚತೆಗೆ ಹೋದ ಸಂಧರ್ಭದಲ್ಲಿ ಅನಿಲ್‌ನ ಕೊಳೆತ ಶವ ಪತ್ತೆಯಾಗಿದೆ. ಇವೆಲ್ಲಾವೂ ಪಿಜಿಯಲ್ಲಿ ಸ್ಚಚ್ಚತೆ ಇರದ ಕಾರಣ ತನ್ನ ಮಗನಿಗೆ ಫುಡ್ ಪಾಯ್ಸನ್ ಆಗಿರಬಹುದು ಹೀಗಾಗಿ ಇದೊಂದು ಅಹಸಜ ಸಾವು ಎಂದು ಅನಿಲ್ ತಂದೆಯ ಆರೋಪ. ಹೀಗಾಗಿ ಪೊಲೀಸರು ಕೂಡ ಅಸಹಜ ಸಾವು ಎಂದು ದೂರು ದಾಖಲಿಸಿ ಪೋಸ್ಟ್ ಮಾರ್ಟಂ ರಿಪೋರ್ಟ್‌ಗಾಗಿ ಕಾಯುತ್ತಿದ್ದಾರೆ. ಇನ್ನು ಈ ಬಗ್ಗೆ ಪೊಲೀಸರೂ ಕೂಡ ಕಾಂಪ್ರೂ ಆಗದೆ ಮಾಲೀಕನ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ‌.  ಈ ಸಂಬಂಧ ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

click me!