ಮುಂಬೈ: ಯುವಕನೋರ್ವ ತನ್ನ ಗೆಳತಿಗೆ ಗುಂಡಿಕ್ಕಿ ಬಳಿಕ ಚಲಿಸುತ್ತಿದ್ದ ವಾಹನದ ಕೆಳಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡು ಆಘಾತಕಾರಿ ಘಟನೆ ಮಹಾರಾಷ್ಟ್ರದ ಪಾಲ್‌ಗಾರ್ ಜಿಲ್ಲೆಯ ಬೋಯ್ಸರ್‌ದಲ್ಲಿ ನಡೆದಿದ್ದು, ಈ ಭಯಾನಕ ದೃಶ್ಯದ ವಿಡಿಯೋ ಅಲ್ಲೇ ಅಳವಡಿಸಲಾಗಿದ ಕ್ಯಾಮರಾದಲ್ಲಿ ಸೆರೆ ಆಗಿದೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಆಗಿದ್ದು, ಭಯ ಮೂಡುವಂತಿದೆ.
ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಬೋಯ್ಸರ್‌ನ ಟಿಐಎಂಎ (TIMA) ಆಸ್ಪತ್ರೆ ಮುಂದೆ ಕೃಷ್ಣ ಯಾದವ್ (Krishna Yadav) ಎಂಬ ಯುವಕ ತನ್ನ ಗೆಳತಿ ನೇಹಾ ಮಹತೋ (Neha Mahato) ಜೊತೆ ಜಗಳವಾಡಿದ್ದಾನೆ. ಈ ಜಗಳ ವಿಕೋಪಕ್ಕೆ ತಿರುಗಿದ್ದು, ಆತ ಕೂಡಲೇ ತನ್ನ ಬಳಿ ಇದ್ದ ಕಂಟ್ರಿ ಮೇಡ್ ಪಿಸ್ತೂಲ್‌ನಿಂದ ನೇಹಾಗೆ ಸಮೀಪದಿಂದಲೇ ಗುಂಡಿಕ್ಕಿದ್ದಾನೆ. ಇದರಿಂದ ಆಕೆ ಸ್ಥಳದಲ್ಲೇ ಕುಸಿದು ಬಿದ್ದು ಪ್ರಾಣ ಬಿಟ್ಟಿದ್ದಾಳೆ. ನಂತರ ಆ ಸ್ಥಳದಿಂದ ಓಡಿದ ಕೃಷ್ಣ ಯಾದವ್, ಅಲ್ಲಿಂದ 500 ಮೀಟರ್ ದೂರ ಬಂದಿದ್ದಾನೆ. ಈ ವೇಳೆ ರಸ್ತೆಯಲ್ಲಿ ವೇಗವಾಗಿ ಬರುತ್ತಿದ್ದ ಕೇಂದ್ರ ಕೈಗಾರಿಕಾ ಭದ್ರತಾ ಪಡೆ(Central Industrial Security Force) ಯ ವಾಹನದ ಎದುರು ಹಾರಿದ್ದಾನೆ.
ಶಾಂತಂ ಪಾಪಂ ಧಾರಾವಾಹಿ ನೋಡಿ ಗಂಡನ ಹತ್ಯೆ!
ಇದರಿಂದ ಕೃಷ್ಣ ಯಾದವ್ ತಲೆಗೆ ಗಂಭೀರ ಗಾಯವಾಗಿದ್ದು, ಕೂಡಲೇ ಆತನನ್ನು ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ, ಅಷ್ಟರಲ್ಲಾಗಲ್ಲೇ ಆತ ಪ್ರಾಣಿ ಬಿಟ್ಟಿದ್ದಾನೆ. ಈತನ ಬಳಿ ಇದ್ದ ನಾಡ ಬಂದೂಕನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೃತರ ಬಳಿ ಇದ್ದ ಗುರುತಿನ ಚೀಟಿಯಿಂದಾಗಿ ಇವರ ಹೆಸರು ತಿಳಿದು ಬಂದಿದೆ. ಆದರೆ ಈ ಹತ್ಯೆ ಹಾಗೂ ಕೊಲೆಗೆ ಏನು ಕಾರಣ ಇರಬಹುದು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.
ಹಿಜಾಬ್ ತೆಗೆದು ಕೂದಲು ಕಟ್ಟಿದ ಯುವತಿ ವಿಡಿಯೋ ವೈರಲ್ ಆದ ಬೆನ್ನಲ್ಲೇ ಗುಂಡಿಕ್ಕಿ ಹತ್ಯೆ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ