ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಶೋಕನಗರ ಪೊಲೀಸರು ಆರೋಪಿಯೊಬ್ಬನನ್ನು ಬಂಧಿಸಿ ಠಾಣೆಗೆ ಕರೆ ತಂದಿದ್ದರು. ಈ ವೇಳೆ ಆರೋಪಿ ಕುಸಿದು ಬಿದ್ದಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಆತ ಹೃದಯಾಘಾತವಾಗಿ ಸಾವನ್ನಪ್ಪಿದ್ದಾನೆ ಎಂದು ನಗರ ಪೊಲೀಸ್ ಆಯುಕ್ತ ಚೇತನ್ ತಿಳಿಸಿದ್ದಾರೆ.
ಕಲಬುರಗಿ(ಆ.18): ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ವಶದಲ್ಲಿದ್ದ ಆರೋಪಿಯೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಗರದಲ್ಲಿ ನಡೆದಿದೆ. ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಆರೋಪಿಯನ್ನು ಸಿರಸಗಿ ಮಡ್ಡಿಯ ಉದಯ (50) ಎಂದು ಗುರುತಿಸಲಾಗಿದೆ.
ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಶೋಕನಗರ ಪೊಲೀಸರು ಆರೋಪಿಯೊಬ್ಬನನ್ನು ಬಂಧಿಸಿ ಠಾಣೆಗೆ ಕರೆ ತಂದಿದ್ದರು. ಈ ವೇಳೆ ಆರೋಪಿ ಕುಸಿದು ಬಿದ್ದಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಆತ ಹೃದಯಾಘಾತವಾಗಿ ಸಾವನ್ನಪ್ಪಿದ್ದಾನೆ ಎಂದು ನಗರ ಪೊಲೀಸ್ ಆಯುಕ್ತ ಚೇತನ್ ತಿಳಿಸಿದ್ದಾರೆ. ಪೊಲೀಸರು ಆರೋಪಿ ಸಾವಿಗೆ ಹೃದಯಾಘಾತ ಕಾರಣವೆನ್ನುತ್ತಿದ್ದರೆ ಅವರ ಮನೆ ಮಂದಿ, ಬಂಧುಗಳು ಪೊಲೀಸರ ವಿಚಾರಣೆ ತೀವ್ರತೆ ಪೆಟ್ಟಿಗೆ ಆತ ಸಾವನ್ನಪ್ಪಿದ್ದಾನೆಂದು ದೂರಿದ್ದಾರೆ. ಪ್ರಕರಣದ ತನಿಕೆಗೆ ಆಗ್ರಹಿಸಿದ್ದಾರೆ.
undefined
ಕಲಬುರಗಿ: ಕೆರೆಯಲ್ಲಿ ಎಮ್ಮೆಗಳನ್ನು ಸ್ನಾನ ಮಾಡಿಸಿದವರ ವಿರುದ್ಧ ಎಫ್‌ಐಆರ್ ದಾಖಲು!
ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆಂದು ಹೇಳಲ್ಪಡುವ ವ್ಯಕ್ತಿ ಉದಯ್ ಪೊಲೀಸರ ವಶದಲ್ಲಿದ್ದಾಗ ಸಾವನ್ನಪ್ಪಿರೋದರಿಂದ ಬಂಧುಗಳು, ಅವರ ಬಡಾವಣೆಯ ಜನ, ಶರಣಸಿರಸಗಿ ಮಡ್ಡಿಯ ಜನ ಕೆರಳಿದ್ದಾರೆ. ಪೊಲೀಸರೇ ವಿಚಾರಣೆ ನೆಪದಲ್ಲಿ ಥಳಿಸಿದ್ದಾರೆ. ಅದರಿಂದಾಗಿ ಉದಯ ಸಾವಾಗಿದೆ ಎಂದು ದೂರುತ್ತ ಪೊಲೀಸ್ ದೌರ್ಜದ್ದ ವ್ಯಕ್ತಿನ್ಯ ಖಂಡಿಸಿ ಬಸ್‌ನಿಲ್ದಾಣ ರಸ್ತೆಯ ಬಳಿ ಧರಣಿ, ರಸ್ತೆತಡೆ ನಡೆಸಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಕಳ್ಳತನ ಪ್ರಕರಣವೊಂದರಲ್ಲಿ ಪತ್ತೆಯಾದ ಬೆರಳಚ್ಚಿಗೂ ಉದಯ್ ಬೆರಳಚ್ಚಿಗೂ ಹೋಲಿಕೆಯಾಗಿದ್ದರಿಂದ ಆತನನ್ನು ಪೊಲೀಸರು ವಿಚಾರಣೆಗೆ ಕರೆ ತಂದಿದ್ದರು. ಠಾಣೆಯಲ್ಲಿನ ವಿಚಾರಣೆ ಸಂದರ್ಭದಲ್ಲಿ ಕುಸಿದು ಬಿದ್ದು ಉದಯ್ ಸಾವಾಗಿದೆ. ಇದು ಹೃದಯಾಘಾತದಿಂದ ಆದಂತಹ ಸಾವಲ್ಲ, ಬದಲಾಗಿ ಪೊಲೀಸರ ಥಳಿತದಿಂದ ಆಗಿರುವ ಸಾವು ಎಂದು ಉದಯ್ ಕುಟುಂಬ ವರ್ಗ ಬಲವಾಗಿ ದೂರಿದೆ. ಸದರಿ ಪ್ರಕರಣದ ಬಗ್ಗೆ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏತನ್ಮಧ್ಯೆ ಉದಯ್ ಸಾವಿನ ಪ್ರಕರಣದ ತನಿಖೆಯನ್ನು ಸಿಓಡಿ ವಹಿಸಿಕೊಳ್ಳಲಿದೆ. ತನಿಖೆಯಲ್ಲಿ ಸತಾಸತ್ಯತೆ ಹೊರಬರಲಿದೆ ಎಂದು ನಗರ ಪೊಲೀಸ್ ಆಯುಕ್ತ ಚೇತನ್ ಹೇಳಿದ್ದಾರೆ.