ಸಾಕು ನಾಯಿಗಳ ವಿಚಾರವಾಗಿ ಜಗಳ: ಬಾಲ್ಕನಿಯಿಂದ್ಲೇ 8 ಜನರಿಗೆ ಶೂಟ್‌ ಮಾಡಿದ ಭದ್ರತಾ ಸಿಬ್ಬಂದಿ!

Published : Aug 18, 2023, 08:07 PM ISTUpdated : Aug 18, 2023, 08:11 PM IST
ಸಾಕು ನಾಯಿಗಳ ವಿಚಾರವಾಗಿ ಜಗಳ: ಬಾಲ್ಕನಿಯಿಂದ್ಲೇ 8 ಜನರಿಗೆ ಶೂಟ್‌ ಮಾಡಿದ ಭದ್ರತಾ ಸಿಬ್ಬಂದಿ!

ಸಾರಾಂಶ

ಬ್ಯಾಂಕ್‌ನ ಭದ್ರತಾ ಸಿಬ್ಬಂದಿ ರಾಜಪಾಲ್ ಸಿಂಗ್ ರಾಜಾವತ್ ತನ್ನ ಬಾಲ್ಕನಿಯಿಂದ ನೆರೆಹೊರೆಯವರ ಮೇಲೆ ಗುಂಡು ಹಾರಿಸಿದ್ದು, ಇಬ್ಬರು ಮೃತಪಟ್ಟಿದ್ದು, ಮತ್ತು ಆರು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಭೋಪಾಲ್ (ಆಗಸ್ಟ್‌ 18, 2023): ಮಧ್ಯಪ್ರದೇಶದ ಇಂದೋರ್‌ನಲ್ಲಿ ಗುರುವಾರ ಸಾಕು ನಾಯಿಗಳ ನಡುವಿನ ಕಾದಾಟವು ಅವುಗಳ ಮಾಲೀಕರ ನಡುವೆ ಜಗಳವಾಗಿ ಎರಡು ಸಾವಿನೊಂದಿಗೆ ಅಂತ್ಯಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಿನ್ನೆ ರಾತ್ರಿ ಬ್ಯಾಂಕ್‌ನ ಭದ್ರತಾ ಸಿಬ್ಬಂದಿ ರಾಜಪಾಲ್ ಸಿಂಗ್ ರಾಜಾವತ್ ತನ್ನ ಬಾಲ್ಕನಿಯಿಂದ ನೆರೆಹೊರೆಯವರ ಮೇಲೆ ಗುಂಡು ಹಾರಿಸಿದ್ದು, ಇಬ್ಬರು ಮೃತಪಟ್ಟಿದ್ದು, ಮತ್ತು ಆರು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

"ರಾಜ್ಪಾಲ್ ಸಿಂಗ್ ರಾಜಾವತ್ ಅವರು ಬ್ಯಾಂಕ್ ಆಫ್ ಬರೋಡಾದ ಸ್ಥಳೀಯ ಶಾಖೆಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಾರೆ. ಸಾಕು ನಾಯಿಗಳ ನಡುವಿನ ಜಗಳದಿಂದ ಹಲವರು ವಾದ ಮಾಡಿದ್ದು, ಈ ಹಿನ್ನೆಲೆ ಖಜ್ರಾನಾ ಪೊಲೀಸ್ ಠಾಣಾ ವ್ಯಾಪ್ತಿಯ ಕಾಲೋನಿಯಲ್ಲಿ ತಮ್ಮ ಪರವಾನಗಿ ಪಡೆದ ಬಂದೂಕಿನಿಂದ ಗುಂಡು ಹಾರಿಸಿದ್ದಾರೆ" ಎಂದು ಹೆಚ್ಚುವರಿ ಪೊಲೀಸ್ ಉಪ ಆಯುಕ್ತ ಅಮರೇಂದ್ರ ಸಿಂಗ್ ಹೇಳಿದ್ದಾರೆ.

ಇದನ್ನು ಓದಿ: ಮ್ಯಾಟ್ರಿಮೋನಿಯಲ್ ಸೈಟ್‌ನಲ್ಲಿ 20ಕ್ಕೂ ಹೆಚ್ಚು ಮಹಿಳೆಯರ ವಂಚಿಸಿ ಕೋಟಿ ಕೋಟಿ ಲೂಟಿ ಹೊಡೆದ ‘ಹಾರ್ಟ್‌ ಸ್ಪೆಷಲಿಸ್ಟ್‌’!

ಸಾಕು ನಾಯಿಗಳ ಬಗ್ಗೆ ವಾದದ ನಂತರ ರಾಜಾವತ್ ಮತ್ತು ಅವರ ನೆರೆಹೊರೆಯವರಾದ ವಿಮಲ್ ಅಮ್ಚಾ (35) ರಾತ್ರಿ 11 ಗಂಟೆಗೆ ಕೃಷ್ಣಾ ಬಾಗ್ ಕಾಲೋನಿಯ ಕಿರಿದಾದ ಲೇನ್‌ನಲ್ಲಿ ತಮ್ಮ ನಾಯಿಗಳೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಎರಡು ಪ್ರಾಣಿಗಳು ಪರಸ್ಪರ ಕಿತ್ತಾಡಿಕೊಂಡಿವೆ. ಶೀಘ್ರದಲ್ಲೇ, ಇಬ್ಬರು ವ್ಯಕ್ತಿಗಳ ನಡುವೆ ವಾಗ್ವಾದ ಪ್ರಾರಂಭವಾಗಿದ್ದು, ನಂತರ ರಾಜಾವತ್ ತನ್ನ ಮೊದಲ ಮಹಡಿಯ ಮನೆಗೆ ಓಡಿ 12-ಬೋರ್ ಶಾಟ್‌ಗನ್ ಬಳಸಿ ಅಮ್ಚಾ ಮೇಲೆ ಗುಂಡು ಹಾರಿಸಿದ್ದಾರೆ ಎಂದು ತಿಳಿದುಬಂದಿದೆ.

ರಾಜಾವತ್ ಶಾಟ್‌ಗನ್ ಅನ್ನು ಲೋಡ್ ಮಾಡುವುದನ್ನು ಭೀಕರ ಗುಂಡಿನ ದಾಳಿಯ ವಿಡಿಯೋ ತೋರಿಸುತ್ತದೆ. ನಗರದಲ್ಲಿ ಹೇರ್ ಸಲೂನ್ ನಡೆಸುತ್ತಿದ್ದ ಅಮ್ಚಾ, ಆತನ ಸೋದರ ಮಾವ 27 ವರ್ಷದ ರಾಹುಲ್ ವರ್ಮಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರಾಹುಲ್ ವರ್ಮಾ ಅವರ ಗರ್ಭಿಣಿ ಪತ್ನಿ ಜ್ಯೋತಿ ವರ್ಮಾ ಅವರ ಕಣ್ಣಿಗೆ ಪೆಲೆಟ್ ಗಾಯವಾಗಿದೆ ಎಂದೂ ಪೊಲೀಸರು ತಿಳಿಸಿದ್ದಾರೆ. ಹೊಡೆದಾಟ ನಡೆದಾಗ ಬೀದಿಯಲ್ಲಿದ್ದ ಇತರ ಆರು ಮಂದಿಗೂ ಗುಂಡು ತಗುಲಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದೂ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ವಿದ್ಯಾರ್ಥಿನಿಯರಿಗೆ ಅಶ್ಲೀಲ ವಿಡಿಯೋ ತೋರಿಸಿ ಅಸಹ್ಯವಾಗಿ ಮುಟ್ತಿದ್ದ ಕಾಮುಕ ಶಿಕ್ಷಕ: ಪೋಷಕರಿಂದ ಧರ್ಮದೇಟು!

ಈ ಪ್ರಕರಣ ಸಂಬಂಧ ರಾಜಾವತ್ ಹಾಗೂ ಅವರ ಪುತ್ರ ಸುಧೀರ್ ಮತ್ತು ಇನ್ನೊಬ್ಬ ಸಂಬಂಧಿ ಶುಭಂ ಅವರನ್ನು ಬಂಧಿಸಲಾಗಿದೆ. ಅವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. 

ಇದನ್ನೂ ಓದಿ: ಈ ಕನ್ನಡಿ ಮುಂದೆ ನಿಂತವ್ರೆಲ್ಲ ಬೆತ್ತಲಾಗಿ ಕಾಣ್ತಾರಂತೆ: ನಾಸಾ ವಿಜ್ಞಾನಿಗಳಿಂದ್ಲೂ ಬಳಕೆ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!
ಕೊಪ್ಪಳ: ಹಸೆಮಣೆ ಏರಬೇಕಿದ್ದ ಜೋಡಿ ಮಸಣಕ್ಕೆ - ಪ್ರಿ-ವೆಡ್ಡಿಂಗ್ ಶೂಟಿಂಗ್ ಮುಗಿಸಿ ವಾಪಸಾಗುವಾಗ ಭೀಕರ ದುರಂತ!