* ಮಗನ ಸಾವಿನ ಹಿಂದೆ ಸೊಸೆಯ ಕೈವಾಡ ಶಂಕೆ.
* ಪೋಷಕರ ದೂರಿನ ಮೇರೆಗೆ ಹೂತಿಟ್ಟ ಶವ ಹೊರ ತೆಗೆ ಪರೀಕ್ಷೆ.
* ಟಿ.ನರಸೀಪುರ ತಾಲೂಕು ಯಡದೊರೆ ಗ್ರಾಮದ ವಿನೋದರಾಜ್ ಸಾವಿನ ಸುತ್ತ
* ಒಂದು ತಿಂಗಳ ಹಿಂದೆ ಸಾವನ್ನಪ್ಪಿದ್ದ ವಿನೋದ್ ರಾಜ್
ಮೈಸೂರು(ಮಾ. 11): ಮಗನ ಸಾವಿನ (Death) ಹಿಂದೆ ಸೊಸೆಯೇ ಇದ್ದಾಳೆ ಎಂದು ಪೋಷಕರು ಅನುಮಾನ ವ್ಯಕ್ತಪಡಿಸಿದ ಕಾರಣ ಹೂತಿದ್ದ ಶವ ಹೊರಗೆ ತೆಗೆದು ಪರೀಕ್ಷೆ (Post mortem) ಮಾಡಿಸಿದಾಗ ಮತ್ತಷ್ಟು ಅನುಮಾನಗಳು ಹುಟ್ಟಿಕೊಂಡಿವೆ.ಮಗನ ಶವದ ಮುಂದೆ ತಾಯಿ (Mother) ರೋದಿಸುತ್ತಿರುವ ದೃಶ್ಯ ಮನಕಲಕುವಂತೆ ಇತ್ತು. ಸಹೋದರ ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿ ತಮ್ಮ ರಘು ದೂರು ನೀಡಿದ್ದರು. ಅಂತ್ಯಸಂಸ್ಕಾರ ಮಾಡಿದ್ದ ಶವ ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಯಿತು.
ತಹಸೀಲ್ದಾರ್ ಬಿ.ಗಿರಿಜಾ, ಪೋಲೀಸ್ ಇಲಾಖೆ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಯಿತು ಮಗನ ಶವದ ಮುಂದೆ ಗೋಳಾಡುತ್ತಿರುವ ತಾಯಿ ರಾಜಮ್ಮ ಕಣ್ಣೀರು ಸುರಿಸಿದರು ಅಣ್ಣನ ಸಾವಿನ ವೇಳೆ ನಮ್ಮ ಕುಟುಂಬಕ್ಕೆ ಅಣ್ಣನ ಪತ್ನಿ ಯಾವುದೇ ಮಾಹಿತಿ ತಿಳಿಸಿಲ್ಲ.
ಅನಾರೋಗ್ಯದ ವಿಚಾರವನ್ನು ತಿಳಿಸದೇ ಇದ್ದಿದ್ದು ನಮಗೆ ಅನುಮಾನ ಮೂಡಿಸಿದೆ. ಆಗಾಗಿ ಅಣ್ಣನ ಸಾವಿನ ಬಗ್ಗೆ ಅನುಮಾನಗೊಂಡು ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದೇವೆ ಅವರ ಸಾವಿಗೆ ನ್ಯಾಯ ಸಿಗಬೇಕು ಎಂದು ಕುಟುಂಬ ಮನವಿ ಮಾಡಿದೆ. ಒಟ್ಟಿನಲ್ಲಿ ಎಲ್ಲ ವರದಿಗಳು ಬಂದ ನಂತರ ಪ್ರಕರಣಕ್ಕೆ ಒಂದು ದಿಕ್ಕು ಸಿಗಲಿದೆ.
Sexual Harassment : ಮಹಿಳಾ ಪೇದೆ ಮೇಲೆ ನಿರಂತರ ಅತ್ಯಾಚಾರ, ಗರ್ಭಪಾತ... ನಾಪತ್ತೆಯಾದ ಪೊಲೀಸಪ್ಪ!
ಆಸ್ತಿ ಕೇಳಿದ ಮಗನ ಥಳಿಸಿದ ತಂದೆ: ಆಸ್ತಿ ವಿಚಾರ ನಡೆದ ಗಲಾಟೆಯಲ್ಲಿ ತಂದೆಯೇ ಹೆತ್ತ ಮಗನ ಕೈ, ಕಾಲು ಕಟ್ಟಿಹಾಕಿ ಮನಬಂದಂತೆ ಥಳಿಸಿದ್ದಾನೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಎರೇಗೌಡನಹಳ್ಳಿಯಿಂದ ಪ್ರಕರಣ ವರದಿಯಾಗಿದೆ.
ಎರೆಗೌಡನಹಳ್ಳಿ ಗ್ರಾಮದ ನಾಗೇಶ್ ಎಂಬಾತನೇ ತಂದೆ ಹಾಗೂ ಕುಟುಂಬಸ್ಥರಿಂದಲೇ ಹಲ್ಲೆಗೊಳಗಾದ ವ್ಯಕ್ತಿ. ಹಲ್ಲೆಗೊಳಗಾದ ವ್ಯಕ್ತಿಯ ಪತ್ನಿ ಪೊಲೀಸರಿಗೆ ದೂರು ನೀಡಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಾಗೇಶ್ ತನ್ನ ತಂದೆ ಬಳಿ ಆಸ್ತಿಯಲ್ಲಿ ಪಾಲುಕೊಡುವಂತೆ ಕೇಳಿದ್ದು, ಇದರಿಂದ ಕೋಪಗೊಂಡಿರೋ ತಂದೆ ಹಾಗೂ ಕುಟುಂಬಸ್ಥರು ಆತನ ಕೈ-ಕಾಲು ಕಟ್ಟಿಹಾಕಿ ಮನಬಂದಂತೆ ಥಳಿಸಿ ಮನೆಯ ಬಳಿ ಹಾಕಿದ್ದರಂತೆ. ಇತ್ತ ಮನೆಗೆ ಹೋಗಿ ಆಸ್ತಿ ವಿಚಾರವಾಗಿ ಮಾತನಾಡಿ ಬರುವುದಾಗಿ ಹೇಳಿ ಹೋಗಿದ್ದ ಗಂಡ ಮರಳಿ ಬಾರದ ಕಾರಣ ಸ್ಥಳಕ್ಕೆ ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದ್ದು ಪತ್ನಿ ಠಾಣೆಗೆ ದೂರು ನೀಡಿದ್ದಾರೆ
ಬೀದಿ ನಾಯಿ ಮೇಲೆ ಆಸಿಡ್ ಎರಚಿದರು: ಬೀದಿ ನಾಯಿ ಮೇಲೆ ಪುಂಡರು ಕ್ರೂರತನ ಮೆರೆದಿದ್ದರು. ಬೀದಿ ನಾಯಿ ಮೇಲೆ ಆಸಿಡ್ (Acid attack) ಎರಚಿದ್ದು ಅಲ್ಲದೇ ವೃದ್ಧೆಗೆ ಬೆದರಿಕೆ ಹಾಕಿದ್ದ ಪ್ರಕರಣ ಬೆಂಗಳೂರಿನಿಂದ ವರದಿಯಾಗಿತ್ತು.
ಶ್ವಾನಕ್ಕೆ ಹಿಂಸೆ ನೀಡುತ್ತಿರುವುದನ್ನು ಪ್ರಶ್ನೆ ಮಾಡಿದ ಹಿರಿಯ ನಾಗರಿಕರಿಗೂ ಆವಾಜ್ ಹಾಕಿದ್ದರು. ಮದ್ಯದ ಅಮಲಿನಲ್ಲಿ ಮಧ್ಯರಾತ್ರಿ ರಸ್ತೆಯಲ್ಲಿ ಓಡಾಡುವ ಪುಂಡರು ತಮ್ಮನ್ನು ನೋಡಿ ಬೊಗಳುವ ಬೀದಿ ನಾಯಿಗಳ ಶಬ್ದವನ್ನು ಎಂಜಾಯ್ ಮಾಡ್ತಿದ್ದರಂತೆ! ಪೊಲೀಸರು ತನಿಖೆ ವೇಳೆ ಈ ವಿಚಾರ ಪತ್ತೆ ಮಾಡಿದ್ದರು.
ಮಾರ್ಚ್ 4 ರಂದು ನಾಲ್ಕರಿಂದ ಐದು ಜನ ಸೇರಿ ಬೀದಿ ನಾಯಿಯನ್ನು ಕಟ್ಟಿ ಹಾಕಿ ಮನಸೋ ಇಚ್ಛೆ ಥಳಿಸಿದ್ದಾರೆ. ನಾಯಿ ಮೇಲೆ ಪೆಟ್ರೋಲ್ ಮತ್ತು ಆಸಿಡ್ ಸುರಿದಿದ್ದಾರೆ. ಐದು ಜನ ಪುಂಡರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದರು. ಶ್ವಾನವನ್ನು ಆರೈಕೆ ಕೇಂದ್ರಕ್ಕೆ ಕಳುಹಿಸಲಾಗಿದ್ದು ಚೇತರಿಸಿಕೊಳ್ಳುತ್ತಿದೆ. ಬೀದಿ ನಾಯಿ ಮೇಲೆ ಹಲ್ಲೆ ಮಾಡಿದವರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಸೋಶಿಯಲ್ ಮೀಡಿಯಾದಲ್ಲಿ ಒತ್ತಾಯ ಕೇಳಿ ಬಂದಿತ್ತು.