* ಪೊಲೀಸ್ ಅಧಿಕಾರಿ ವಿರುದ್ಧ ಅತ್ಯಾಚಾರ ಆರೋಪ.
* ಇನ್ಸ್ಪೆಕ್ಟರ್ ವಿರುದ್ಧ ಮಹಿಳಾ ಕಾನ್ಸ್‌ಟೇಬಲ್ ಆತ್ಯಾಚಾರದ ಆರೋಪ..
* ರಾಜ್ಯ ಗುಪ್ತದಳದ ಇನ್ಸ್ಪೆಕ್ಟರ್ ಮಧುಸೂದನ್ ವಿರುದ್ಧ ಆರೋಪ..
* ಬಲವಂತವಾಗಿ ಲೈಂಗಿಕ ದೌರ್ಜನ್ಯ ಎಸಗಿದ ಪೊಲೀಸ್
ಬೆಂಗಳೂರು(ಮೇ 11) ಪೊಲೀಸ್ ಅಧಿಕಾರಿ (Karnataka Police) ವಿರುದ್ಧ ಅತ್ಯಾಚಾರ (Rape) ಆರೋಪ ಕೇಳಿ ಬಂದಿದ್ದು ಇನ್ಸ್ಪೆಕ್ಟರ್ ವಿರುದ್ಧ ಮಹಿಳಾ ಕಾನ್ಸ್‌ಟೇಬಲ್ ದೂರು ನೀಡಿದ್ದಾರೆ. ರಾಜ್ಯ ಗುಪ್ತದಳದ ಇನ್ಸ್ಪೆಕ್ಟರ್ ಮಧುಸೂದನ್ ವಿರುದ್ಧ ರೇಪ್ ಆರೋಪ ಬಂದಿದೆ.
ಬಲವಂತವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ (Sexual Harassment) ಎಂದು ಗೋವಿಂದರಾಜನಗರ ಠಾಣೆಗೆ ಸಂತ್ರಸ್ತೆ ದೂರು ನೀಡಿದ್ದಾರೆ. ಸದ್ಯ ಗುಪ್ತ ದಳ ಇನ್ಸ್ಪೆಕ್ಟರ್ ಮಧುಸೂದನ್ ವಿರುದ್ಧ ಎಫ್ ಐ ಆರ್ ದಾಖಲಿಸಿಕೊಳ್ಳಲಾಗಿದೆ.
ದೂರಿನಲ್ಲಿ ಏನಿದೆ? 2017ರಿಂದಲೂ ಇನ್ಸ್ಪೆಕ್ಟರ್ ಮಧುಸೂದನ್ ಪರಿಚಯವಾಗಿದ್ದ. ಇದೇ ಪರಿಚಯ ಬಳಸಿಕೊಂಡು ಬಿಡದಿ ಸಮೀಪದ ರೆಸಾರ್ಟ್ ವೊಂದಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ನಿನ್ನ ಜತೆ ಮಾತನಾಡಬೇಕೆಂದು ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎಂದು ದೂರು ನೀಡಿದ್ದಾರೆ.
Sexual Harassment : ಅಣ್ಣನ ಮಕ್ಕಳನ್ನೇ ಕಾಡಿದ ಕಾಮುಕನಿಗೆ ಪತ್ನಿಯದ್ದೂ ಸಾಥ್ ...ಶಿಕ್ಷೆ ಕಡಿಮೆ ಆಯ್ತು!
ಲೈಂಗಿಕ ದೌರ್ಜನ್ಯದ ಪರಿಣಾಮ ಮಹಿಳಾ ಕಾನ್ಸ್ಟೇಬಲ್ ಆರೋಗ್ಯದಲ್ಲಿ ಏರುಪೇರು ಕಂಡಿತ್ತು. ಈ ವೇಳೆ ಭಯಗೊಂಡಿದ್ದ ಇನ್ಸ್ಪೆಕ್ಟರ್ ಮಧುಸೂದನ್ ರಿಂದ ನಾನೇ ಮದುವೆಯಾಗ್ತೀನಿ ಎಂದು ನಂಬಿಸಿದ್ದ. 2019ರ ಫೆಬ್ರವರಿಯಲ್ಲಿ ಮಹಿಳಾ ಕಾನ್ಸ್‌ಟೇಬಲ್ ಗರ್ಭಿಣಿಯಾಗಿದ್ದರು. ಈ ವೇಳೆ ತನ್ನದೇ ಕಾರಿನಲ್ಲಿಚಿಕ್ಕಬಳ್ಳಾಪುರಕ್ಕೆ ಕರೆದುಕೊಂಡು ಹೋಗಿದ್ದ.
ಮೂರು ತಿಂಗಳ ಗರ್ಭಿಣಿಯಾಗಿದ್ದಾಗ ಒತ್ತಾಯ ಪೂರ್ವಕವಾಗಿ ಗರ್ಭಪಾತವನ್ನು ಮಾಡಿಸಿದ್ದ ಕಿರಾತಕ ಗರ್ಭಪಾತ ಮಾತ್ರೆ ನುಂಗಿಸಿ ಆರೋಗ್ಯ ಹದಗೆಡಿವಂತೆ ಮಾಡಿದ್ದ. ನಂತರ ನಗರದ ಮೂಡಲಪಾಳ್ಯದಲ್ಲಿ ಬಾಡಿಗೆ ಮನೆಯಲ್ಲಿರಿಸಿ ನೋಡಿಕೊಳ್ಳುತ್ತಿದ್ದ. ನಂತರ ಮಹಿಳಾ ಸಿಬ್ಬಂದಿ ಗರ್ಭಿಣಿಯಾಗಿದ್ದಾಗಿದ್ದಾಳೋಎ. ಈ ಸಾರಿ ಮದುವೆಯಾಗುವಂತೆ ಕೇಳಿದಾಗ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಫೆಬ್ರುವರಿ 13ರಂದು ಮನೆಗೆ ಹೋಗಿ ಹೊಟ್ಟೆಯ ಮೇಲೆ ಒದ್ದಿದ್ದಾನೆ. ಅಲ್ಲದೇ ವ್ಯಾಟ್ಸಪ್ ಕರೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾನೆ. ಸದ್ಯ ಆರೋಪಿತ ಇನ್ಸ್ಪೆಕ್ಟರ್ ಮಧುಸೂದನ್ ಪರಾರಿಯಾಗಿದ್ದು ಗೋವಿಂದರಾಜನಗರ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ದೆಹಲಿಯ ಮನೆಯೊಂದರಿಂದ ಘೋರ ಪ್ರಕರಣ ವರದಿಯಾಗಿತ್ತು. ಇಲ್ಲಿನ ತಿಲಕ್‌ನಗರದಲ್ಲಿರುವ ಮನೆಯೊಂದಕ್ಕೆ ಗ್ಯಾಸ್ ಏಜೆನ್ಸಿಯವ ಎಂದು ಹೇಳಿಕೊಂಡು ನುಗ್ಗಿದ ಅಪರಿಚಿತ ವ್ಯಕ್ತಿಯೊಬ್ಬ 87 ವರ್ಷದ ಹಾಸಿಗೆ ಹಿಡಿದಿರುವ ವೃದ್ಧೆಯ ಮೇಲೆ ಅತ್ಯಾಚಾರ ಎಸಗಿ ಪರಾರಿಯಾಗಿದ್ದ. ನೊಂಧ ವ್ಯಕ್ತಿಯೊಬ್ಬರು ಈ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು .
ಪೊಲೀಸರಿಗೆ ಮಾಹಿತಿ ನೀಡಿದರೆ ದೂರು ಸಲ್ಲಿಸಲು ವಿಳಂಬ ಮಾಡಿದರು ಎಂದು ಆರೋಪಿಸಿದ್ದರು. ಆದರೆ ಈ ವಿಚಾರವನ್ನು ಅಲ್ಲಗಳೆದಿದ್ದ ಪೊಲೀಸರು ಮೊದಲು ಕೇವಲ ಮೊಬೈಲ್ ಕಳೆದಿದೆ ಎಂದು ದೂರು ನೀಡಿದ್ದರು. ಈಗ ಉಲ್ಟಾ ಹೊಡೆದಿದ್ದಾರೆ ಎಂದಿದ್ದರು. ಹೆತ್ತ ತಾಯಿ ಮೇಲೆಯೇ ಅತ್ಯಾಚಾರ ಎಸಗಿದ್ದ ಪ್ರಕರಣ ಕರ್ನಾಟಕದ ಪುತ್ತೂರಿನಿಂದ ವರದಿಯಾಗಿತ್ತು.
ಬಾಲಕಿ ಮೇಲೆ ಎರಗಿದ ಕಾಮಾಂಧ: ಏನೂ ಅರಿಯದ ಕಂದಮ್ಮನ ಮೇಲೆ ಈ ಪಾಪಿ ಕ್ರೌರ್ಯ (Sexual Harassment) ಮೆರೆದಿದ್ದಾನೆ. 11 ವರ್ಷದ ಹುಡುಗಿ ಮೇಲೆ ಅತ್ಯಾಚಾರವೆಸಿದ (Rape) 23 ವರ್ಷದ ಕಿರಾತಕ ಆಕೆಯನ್ನು ಗ್ರಾಮದ ಟ್ಯಾಂಕ್ ವೊಂದರಲ್ಲಿ ಎಸೆದಿದ್ದ. ಹಾಸನ (Hassan) ತಾಲೂಕಿನಿಂದ ಘಟನೆ ವರದಿಯಾಗಿದೆ. ಭಾನುವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಮನೆ ಬಳಿ ತನ್ನ ಸ್ನೇಹಿತರೊಂದಿಗೆ ಆಟವಾಡುತ್ತಿದ್ದ ಬಾಲಕಿಯನ್ನು ಪುಸಲಾಯಿಸಿದ ಪಕ್ಕದ ಮನೆಯ ಕೀರ್ತಿ ಸಾಗರ್ ನಿರ್ಜನ ಪ್ರದೇಶವೊಂದಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ.
ಈತನ ದಾಳಿಯಿಂದ ಬಾಲಕಿ ಅಸ್ವಸ್ಥಗೊಂಡಿದ್ದಾಳೆ. ಯಾರಿಗೂ ಗೊತ್ತಾಗಬಾರದು ಎಂದು ಟ್ಯಾಂಕ್ ವೊಂದಕ್ಕೆ ಎಸೆದಿದ್ದಾನೆ. ಆದರೆ ಅಲ್ಲಿ ಸಮೀಪ ಕೆಲಸ ಮಾಡುತ್ತಿದ್ದ ಗ್ರಾಮಸ್ಥರೊಬ್ಬರು ಆಕಸ್ಮಿಕವಾಗಿ ಇದನ್ನು ಗಮನಿಸಿ ಬಾಲಕಿಯ ರಕ್ಷಣೆ ಮಾಡಿದ್ದಾರೆ. ಘಟನೆ ಬಗ್ಗೆ ಮಾಹಿತಿ ಪಡೆದ ನಂತರ ಪೋಷಕರು ಸ್ಥಳಕ್ಕೆ ಧಾವಿಸಿದ್ದು, ಆಕೆಯನ್ನು ಹಾಸನದ ಹಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ಆಕೆ ಆಟವಾಡುತ್ತಿದ್ದಾಗ ಗಿಫ್ಟ್ ನೀಡುವುದಾಗಿ ಹೇಳಿ ಕರೆದುಕೊಂಡು ಹೋಗಿದ್ದೆ ಎಂದು ತನ್ನ ತಪ್ಪನ್ನು ಆರೋಪಿ ಒಪ್ಪಿಕೊಂಡಿದ್ದಾನೆ. ಗೊರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.