ಪತ್ನಿಯ ಶೀಲ ಶಂಕಿಸಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪತಿರಾಯ!

By Ravi Janekal  |  First Published Nov 22, 2023, 12:49 PM IST

ಪತ್ನಿಯ ಶೀಲ ಶಂಕಿಸಿ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ಬೆಂಗಳೂರಿನ ಕದಿರೇನಹಳ್ಳಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.


ಬೆಂಗಳೂರು (ನ.22): ಪತ್ನಿಯ ಶೀಲ ಶಂಕಿಸಿ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ಬೆಂಗಳೂರಿನ ಕದಿರೇನಹಳ್ಳಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಶ್ರೀನಿವಾಸ್ ಬಂಧಿತ ಆರೋಪಿ. ಬೆಂಕಿಯಿಂದ ತೀವ್ರ ಗಾಯಗೊಂಡಿರುವ ಪತ್ನಿ ಪುಷ್ಪಮ್ಮ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೇ 16 ರಂದು ನಡೆದಿದ್ದ ಘಟನೆ . 18 ವರ್ಷಗಳ ಹಿಂದೆ ಮದುವೆಯಾಗಿದ್ದ ದಂಪತಿ. ಪ್ಲಂಬರ್ ಕೆಲಸ ಮಾಡಿಕೊಂಡಿದ್ದ ಶ್ರೀನಿವಾಸ ಮೊದಲು ಪತ್ನಿಯೊಂದಿಗೆ ಚೆನ್ನಾಗಿಯೇ ಇದ್ದರು. ಬಳಿಕ ಪತ್ನಿಯ ಶೀಲ ಶಂಕಿಸಲು ಶುರು ಮಾಡಿದ್ದ ಪತಿ. ಇದೇ ವಿಚಾರವಾಗಿ ಪತ್ನಿ ಪುಷ್ಪಮ್ಮ ಜೊತೆಗೆ ಆಗಾಗ ಗಲಾಟೆ ಮಾಡುತ್ತಿದ್ದ. 

Tap to resize

Latest Videos

ಲಿವಿಂಗ್‌ ಟುಗೆದರ್‌: ಶೀಲ ಶಂಕಿಸಿದ ಪ್ರಿಯತಮನ ಎದೆಗೆ ಚಾಕು ಇರಿದು ಕೊಂದ ಪ್ರಿಯತಮೆ..!

ಈ ವಿಚಾರವಾಗಿ ಗಲಾಟೆಯಾಗುತ್ತಿರುವುದು ಅಕ್ಕಪಕ್ಕದವರಿಗೆ ಗೊತ್ತಾಗಿ ಬುದ್ಧಿವಾದ ಹೇಳಿದ್ದರು. ಹಿರಿಯರು ಅನೇಕ ಬಾರಿ ಪಂಚಾಯಿತಿ ಮಾಡಿದ್ದರು. ಎಲ್ಲ ಸರಿಹೋಗಿದ್ದ ಶ್ರೀನಿವಾಸ ಮತ್ತೆ ಪತ್ನಿ ಮೇಲೆ ಅನುಮಾನಗೊಂಡು ಜಗಳ ತೆಗೆಯಲು ಶುರು ಮಾಡಿದ್ದ. 

ಬೆಂಗಳೂರಲ್ಲಿ ಗಂಡ- ಮಂಡ್ಯದಲ್ಲಿ ಹೆಂಡ್ತಿ: ಶೀಲ ಶಂಕೆಯಿಂದ ಕೊಂದೇಬಿಟ್ಟ ಪತಿರಾಯ

ಮೊನ್ನೆ ನವೆಂಬರ್ 16ರಂದು ಇದೇ ವಿಚಾರಕ್ಕೆ ಪರಸ್ಪರ ಕಿತ್ತಾಡಿಕೊಂಡಿದ್ದರು. ಈ ವೇಳೆ ಆರೋಪಿ ಶ್ರೀನಿವಾಸ ಪತ್ನಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ. ಬಳಿಕ ಗಾಬರಿಗೊಂಡು ಪತ್ನಿಯ ಮೇಲೆ ನೀರು ಸುರಿದಿರುವ ಆರೋಪಿ ಶ್ರೀನಿವಾಸ. ಸದ್ಯ ಪುಷ್ಪಮ್ಮಗೆ ಸುಟ್ಟ ಗಾಯಗಳಾಗಿದ್ದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಇತ್ತ ಅನುಮಾನ ಪಿಶಾಚಿ ಪತಿಯನ್ನ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಬನಶಂಕರಿ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ.

click me!