ಲಿವಿಂಗ್ ಟುಗೆದರ್: ಶೀಲ ಶಂಕಿಸಿದ ಪ್ರಿಯತಮನ ಎದೆಗೆ ಚಾಕು ಇರಿದು ಕೊಂದ ಪ್ರಿಯತಮೆ..!
ವೈಯಕ್ತಿಕ ಕಾರಣಕ್ಕೆ ಮಂಗಳವಾರ ಮಧ್ಯಾಹ್ನ ಜಾವೇದ್ ಹಾಗೂ ರೇಣುಕಾ ಮಧ್ಯೆ ಜಗಳವಾಗಿದೆ. ಈ ಹಂತದಲ್ಲಿ ಕೆರಳಿದ ಆಕೆ, ಜಾವೇದ್‌ಗೆ ಎದೆಗೆ ಚಾಕುವಿನಿಂದ ಇರಿದಿದ್ದಾಳೆ. ಆಗ ಚೀರಾಟ ಕೇಳಿ ಸ್ಥಳಕ್ಕೆ ಬಂದ ಸ್ಥಳೀಯ ನಿವಾಸಿಗಳು, ಕೂಡಲೇ ಗಾಯಾಳುವನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ಜಾವೇದ್ ಮೃತಪಟ್ಟಿದ್ದಾನೆ.
ಬೆಂಗಳೂರು(ಸೆ.07): ತನ್ನ ಶೀಲ ಶಂಕಿಸಿ ಗಲಾಟೆ ಮಾಡುತ್ತಿದ್ದ ಎಂಬ ಕಾರಣಕ್ಕೆ ಕೋಪಗೊಂಡು ಯುವತಿಯೊಬ್ಬಳು ತನ್ನ ಪ್ರಿಯಕರನ ಎದೆಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ ಘಟನೆ ನಡೆದಿದೆ. ಅಕ್ಷಯ್ ನಗರದ ಸರ್ವೀಸ್ ಅಪಾರ್ಟ್‌ಮೆಂಟ್ ನಿವಾಸಿ ಜಾವೇದ್ (28) ಕೊಲೆಯಾದ ದುರ್ದೈವಿ. ಈ ಹತ್ಯೆ ಸಂಬಂಧ ಮೃತನ ಗೆಳತಿ ರೇಣುಕಾಳನ್ನು (34) ಪೊಲೀಸರು ಬಂಧಿಸಿದ್ದಾರೆ.
ವೈಯಕ್ತಿಕ ಕಾರಣಕ್ಕೆ ಮಂಗಳವಾರ ಮಧ್ಯಾಹ್ನ ಜಾವೇದ್ ಹಾಗೂ ರೇಣುಕಾ ಮಧ್ಯೆ ಜಗಳವಾಗಿದೆ. ಈ ಹಂತದಲ್ಲಿ ಕೆರಳಿದ ಆಕೆ, ಜಾವೇದ್‌ಗೆ ಎದೆಗೆ ಚಾಕುವಿನಿಂದ ಇರಿದಿದ್ದಾಳೆ. ಆಗ ಚೀರಾಟ ಕೇಳಿ ಸ್ಥಳಕ್ಕೆ ಬಂದ ಸ್ಥಳೀಯ ನಿವಾಸಿಗಳು, ಕೂಡಲೇ ಗಾಯಾಳುವನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ಜಾವೇದ್ ಮೃತಪಟ್ಟಿದ್ದಾನೆ. ಬಳಿಕ ಅಪಾರ್ಚ್‌ಮೆಂಟ್ ಮಾಲಿಕ ಗಣೇಶ್ ದೂರು ಆಧರಿಸಿ ರೇಣುಕಾಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆಂಟಿಗೆ ಮೆಸೇಜ್ ಮಾಡಿದವನು ಹೆಣವಾದ..! ಸಂಜೆ ರಾಜಿ ಪಂಚಾಯ್ತಿ.. ರಾತ್ರಿ ಮರ್ಡರ್..!
ಮೂರೂವರೆ ವರ್ಷಗಳಿಂದ ಕೇರಳ ರಾಜ್ಯ ಕಣ್ಣೂರು ಮೂಲದ ಜಾವೇದ್ ಹಾಗೂ ಬೆಳಗಾವಿ ಜಿಲ್ಲೆಯ ರೇಣುಕಾ ಲಿವಿಂಗ್ ಟುಗೆದರ್ ರಿಲೇಷನ್‌ಶಿಪ್‌ನಲ್ಲಿದ್ದು, ಮೂರು ದಿನಗಳಿಂದ ಅಕ್ಷಯ್ ನಗರದ ಸರ್ವಿಸ್ ಅಪಾರ್ಚ್‌ಮೆಂಟ್‌ನಲ್ಲಿ ಈ ಇಬ್ಬರು ನೆಲೆಸಿದ್ದರು. ತನ್ನ ಸ್ನೇಹಿತ ರಶೀದ್ ಮೂಲಕ ಅಪಾರ್ಚ್‌ಮೆಂಟ್‌ನಲ್ಲಿ ಫ್ಲ್ಯಾಟ್ ಅನ್ನು ಜಾವೇದ್ ಬುಕ್ ಮಾಡಿಸಿದ್ದ. ಆದರೆ ಪ್ರತಿ ದಿನ ಜಾವೇದ್ ಹಾಗೂ ರೇಣುಕಾ ಮಧ್ಯೆ ಜಗಳವಾಗುತ್ತಿತ್ತು. ತನ್ನ ಸ್ನೇಹಿತೆ ಜತೆ ಶೀಲ ಶಂಕಿಸಿ ಜಾವೇದ್ ಗಲಾಟೆ ಮಾಡುತ್ತಿದ್ದ ಎನ್ನಲಾಗಿದೆ. ಅಂತೆಯೇ ಮಂಗಳವಾರ ಮಧ್ಯಾಹ್ನ 3ರ ಸುಮಾರಿಗೆ ಇಬ್ಬರ ನಡುವಿನ ಉಂಟಾದ ಜಗಳವು ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪುರುಷರ ಜೊತೆ ತಾತ್ಕಾಲಿಕ ಸಾಂಗತ್ಯ
ತನಗೆ ಜಾವೇದ್ ಜತೆ ಹೇಗೆ ಸ್ನೇಹವಾಯಿತು ಎಂಬ ಖಚಿತ ಮಾಹಿತಿಯನ್ನು ವಿಚಾರಣೆ ವೇಳೆ ಆಕೆ ನೀಡುತ್ತಿಲ್ಲ. ಮೊಬೈಲ್ ರಿಪೇರಿ ಮಾಡಿಕೊಂಡು ಜಾವೇದ್ ಜೀವನ ಸಾಗಿಸುತ್ತಿದ್ದ. ಇನ್ನು ರೇಣುಕಾಳಿಗೆ ನಿಶ್ಚಿತ ಉದ್ಯೋಗವಿರಲಿಲ್ಲ. ಆಕೆಗೆ 6 ವರ್ಷದ ಮಗಳು ಕೂಡಾ ಇದ್ದಾಳೆ. ರೇಣುಕಾ ಬಂಧನದ ಬಳಿಕ ಬಾಲ ಮಂದಿರಕ್ಕೆ ಆಕೆಯ ಮಗುವನ್ನು ಬಿಡಲಾಗಿದೆ. ಪಬ್‌ಗಳಿಗೆ ಒಂಟಿಯಾಗಿ ಹೋಗುವ ಪುರುಷರ ಜತೆ ತಾತ್ಕಾಲಿಕ ಸಂಗಾತಿಯಾಗಿ ಆಕೆ ಹೋಗುತ್ತಿದ್ದಳು. ಇದರಿಂದ ರೇಣುಕಾಳಿಗೆ ಹಣ ಸಿಗುತ್ತಿತ್ತು. ಅಲ್ಲದೆ ಐಷಾರಾಮಿ ಜೀವನಕ್ಕೆ ಆಕೆ ಮಾರು ಹೋಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.