ಬಳ್ಳಾರಿಯಲ್ಲಿ ಎಗ್ಗಿಲ್ಲದೇ ನಡೆಯುತ್ತಿದೆಯಾ ಗಾಂಜಾ ದಂಧೆ?: ಸಿನಿಮೀಯ ರೀತಿಯಲ್ಲಿ ಪೊಲೀಸರ ದಾಳಿ

Published : Nov 22, 2023, 10:37 AM IST
ಬಳ್ಳಾರಿಯಲ್ಲಿ ಎಗ್ಗಿಲ್ಲದೇ ನಡೆಯುತ್ತಿದೆಯಾ ಗಾಂಜಾ ದಂಧೆ?: ಸಿನಿಮೀಯ ರೀತಿಯಲ್ಲಿ ಪೊಲೀಸರ ದಾಳಿ

ಸಾರಾಂಶ

ಆಂಧ್ರದ ಹೊಲದಲ್ಲಿ ಬೆಳೆದು ಬಳ್ಳಾರಿ ಗುಪ್ತ ಸ್ಥಳಗಳಲ್ಲಿ ಪುಡಿಯಾಗಿ ಮಾರಾಟವಾಗ್ತಿದೆ ಗಾಂಜಾ. ಮೇಲ್ನೋಟಕ್ಕೆ ಆರೋಪಿಗಳಿಬ್ಬರು ವಾಚ್ ಮ್ಯಾನ್ ಮತ್ತು ಆಟೋ ಚಾಲಕ ವೃತ್ತಿ ಮಾಡ್ತಿದ್ದಾರೆ. ಆದರೆ, ಪ್ರವೃತ್ತಿಯಲ್ಲಿ ಮಾತ್ರ ಗಾಂಜಾ ಮಾರಾಟ. ಹೌದು, ಹೀಗೆ ಸಣ್ಣ ಸಣ್ಣ ಓಣಿಗಳಲ್ಲಿ‌ ಸಿನಿಮೀಯ ರೀತಿಯಲ್ಲಿ ಹೋದ ಪೊಲೀಸರು ದೊಡ್ಡ ಮಟ್ಟದಲ್ಲಿ ಸಂಗ್ರಹ ಮಾಡಿದ್ದ ಗಾಂಜಾ ಜಪ್ತಿ ಮಾಡಿದ್ದಾರೆ. 

ವರದಿ: ನರಸಿಂಹ ಮೂರ್ತಿ ಕುಲಕರ್ಣಿ

ಬಳ್ಳಾರಿ(ನ.21):  ಗಾಂಜಾ ಮಾರಾಟಗಾರರ ತವರೂರಾಗ್ತಿದೆಯಾ ಬಳ್ಳಾರಿ..? ಹೀಗೊಂದು ಅನುಮಾನ ದಿನದಿಂದ ದಿನಕ್ಕೆ ಜಾಸ್ತಿಯಾಗ್ತಿದೆ. ಕಾರಣ ಇಷ್ಟು ದಿನ ತೆರೆಮರೆಯಲ್ಲಿದ್ದ ವ್ಯವಹಾರ ಇದೀಗ ಬಹಿರಂಗ ಗೊಂಡಿದೆ. ಸಿನಿಮೀಯ ರೀತಿಯಲ್ಲಿ ಪೊಲೀಸರು ದಾಳಿ ಮಾಡಿದಾಗ ಬರೋಬ್ಬರಿ 35 ಲಕ್ಷ ಮೌಲ್ಯದ ಗಾಂಜಾ ಜಪ್ತಿ ಮಾಡಿದ್ದಾರೆ. ಅಷ್ಟಕ್ಕೂ ಇಷ್ಟೊಂದು ದೊಡ್ಡ ‌ಮೊತ್ತದ ಗಾಂಜಾ ಬಳ್ಳಾರಿಗೆ ಬರುತ್ತಿರೋದಾದ್ರು ಎಲ್ಲಿಂದ ಅಂತೀರಾ ಈ ಸ್ಟೋರಿ ನೋಡಿ..

ಬಳ್ಳಾರಿ ನಗರ ಪ್ರದೇಶದಲ್ಲಿಯೇ ದೊಡ್ಡ ಮಟ್ಟದಲ್ಲಿ ಗಾಂಜಾ ಸ್ಟಾಕ್ ಮಾಡಿದ್ದ ಪೆಡ್ಲರ್‌ಗಳು 

ಆಂಧ್ರದ ಹೊಲದಲ್ಲಿ ಬೆಳೆದು ಬಳ್ಳಾರಿ ಗುಪ್ತ ಸ್ಥಳಗಳಲ್ಲಿ ಪುಡಿಯಾಗಿ ಮಾರಾಟವಾಗ್ತಿದೆ ಗಾಂಜಾ. ಮೇಲ್ನೋಟಕ್ಕೆ ಆರೋಪಿಗಳಿಬ್ಬರು ವಾಚ್ ಮ್ಯಾನ್ ಮತ್ತು ಆಟೋ ಚಾಲಕ ವೃತ್ತಿ ಮಾಡ್ತಿದ್ದಾರೆ. ಆದರೆ, ಪ್ರವೃತ್ತಿಯಲ್ಲಿ ಮಾತ್ರ ಗಾಂಜಾ ಮಾರಾಟ. ಹೌದು, ಹೀಗೆ ಸಣ್ಣ ಸಣ್ಣ ಓಣಿಗಳಲ್ಲಿ‌ ಸಿನಿಮೀಯ ರೀತಿಯಲ್ಲಿ ಹೋದ ಪೊಲೀಸರು ದೊಡ್ಡ ಮಟ್ಟದಲ್ಲಿ ಸಂಗ್ರಹ ಮಾಡಿದ್ದ ಗಾಂಜಾ ಜಪ್ತಿ ಮಾಡಿದ್ದಾರೆ. 

ಬೀದರ್‌: ಯನಗುಂದಾ ಗ್ರಾಮದಲ್ಲಿ ಹಸಿ ಗಾಂಜಾ ಜಪ್ತಿ, ಇಬ್ಬರ ಬಂಧನ

ಕಳೆದ ಹಲವು ದಿನಗಳಿಂದ ಬಳ್ಳಾರಿಯಲ್ಲಿ ಸಣ್ಣ ಪುಟ್ಟ ಗಾಂಜಾ ಸೇವನೆ ಮಾಡೋರೋ ಸಿಗುತ್ತಿದ್ರು. ಆದ್ರೇ ಈ ಗಾಂಜಾ ಇವರಿಗೆ ಎಲ್ಲಿ ಸಿಕ್ತದೆ ಅನ್ನೋದು ದೊಡ್ಡ ಪ್ರಶ್ನೆಯಾಗಿತ್ತು. ಇದೀಗ ತಮಗೆ ಸಿಕ್ಕ ಸಣ್ಣ ಎಳೆಯೊಂದನ್ನು‌ ಹಿಡಿದ ಬಳ್ಳಾರಿ ಸೈಬರ್ ಕ್ರೈಮ್ ಪೊಲೀಸರು ಸರಿ‌ ಸುಮಾರು 35 ಕೆಜಿ ಪೌಡರ್ ಮಾದರಿಯ 35 ಲಕ್ಷಕ್ಕೂ ಹೆಚ್ಚು ಮೌಲ್ಯದ ಗಾಂಜಾ ಜಪ್ತಿ‌ ಮಾಡಿದ್ದಾರೆ ಬಳ್ಳಾರಿ ಮಿಲ್ಲರಪೇಟೆಯ ಸರ್ಕಾರಿ ಉರ್ದು ಶಾಲೆ ಹತ್ತಿರ  ಖಾಜಾಹುಸೇನ್ ಎನ್ನುವವರ ಮನೆಯಲ್ಲಿ ಗಾಂಜಾ ಸ್ಟಾಕ್ ಮಾಡಿಡಲಾಗಿತ್ತು.  

ಆಂಧ್ರದ ಕಡೆಯಿಂದ ಬರೋ ಈ ಗಾಂಜಾ ಗಿಡಗಳನ್ನು ಮತ್ತಷ್ಟು ನೆಶೆ ಬರೋ‌ ಪೌಡರ್ ಮಿಕ್ಸ್ ಮಾಡೋ ಮೂಲಕ ಆರೋಪಿಗಳಾದ ಜಾಫರ್ ಮತ್ತು ಖಾಜಾ ಹುಸೇನ್  ಮಾರಾಟ ಮಾಡ್ತಿದ್ರು.. ಸಣ್ಣ ಸಣ್ಣ ಪೊಟ್ಟಣಗಳನ್ನು ಮಾಡೋ ಮೂಲಕ ಮೆಡಿಕಲ್ ಕಾಲೇಜು ಸೇರಿದಂತೆ ಇತರೆ ಕಾಲೇಜುಗಳ ಬಳಿ ಮಾರಾಟ ಮಾಡ್ತಿದ್ರು. ಎಂದು ಬಳ್ಳಾರಿ ರಂಜಿತ್ ಕುಮಾರ್ ಬಂಡಾರು‌ ಸುವರ್ಣ ನ್ಯೂಸ್ ಗೆ ಮಾಹಿತಿ ನೀಡಿದ್ದಾರೆ..

ಬೆಂಗಳೂರು: ಪೂಜೆ ಮಾಡಲು ಪಾಟ್‌ನಲ್ಲಿ ಗಾಂಜಾ ಗಿಡ ಬೆಳೆಸಿದ್ದ ಪೇಯಿಂಟರ್‌ ಜೈಲಿಗೆ..!

ಶಾಲಾ ಕಾಲೇಜುಗಳು ಬಳಿ ಗಾಂಜಾ ಮಾರಾಟ 

ಇನ್ನೂ ಕೆಲವರು ಈ ಚಟವನ್ನು ಹೊಂದಿರುವವರು ತಮ್ಮ ಸ್ನೇಹಿತರಿಗೂ ಇದರ ಅಭ್ಯಾಸ ಮಾಡ್ತಿದ್ದಾರೆ. ಇದಕ್ಕೆ ಕಾರಣ ಸರಳವಾಗಿ ಯುವಕರ ಕೈಗೆ ಈ ರೀತಿಯಲ್ಲಿ ಮಾದಕ ವಸ್ತು ಸಿಗೋದಾಗಿದೆ. ಹೀಗಾಗಿ ಇದಕ್ಕೆ ಕಡಿವಾಣ ಹಾಕೋ ಮೂಲಕ ಪೊಲೀಸರು ಇದರ ಮೂಲ ಹುಡುಕಿ ಆರೋಪಗಳ ಹೆಡೆಮುರಿ ಕಟ್ಟಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಅಲ್ಲದೇ ಕೆಲ ಕಾಲೇಜುಗಳ ಮುಂದೆ ಮಾರಾಟ ಮಾಡೋದು ಎಲ್ಲರಿಗೂ ಗೊತ್ತಿದ್ರು. ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ ಕೇವಲ ಗಾಂಜಾವನ್ನು ಜಪ್ತಿ ಮಾಡಿ ಗಾಂಜಾ ಸೇವನೆ ಮಾಡೋರಿಗೆ ವಾರ್ನಿಂಗ್ ಮಾಡಿ ಕಳುಹಿಸುತ್ತಿದ್ದಾರೆ. ಹೀಗೆ ಮಾಡಿದ್ರೇ, ಆರೋಪಿಗಳು ಸಿಗೋದಿಲ್ಲ. ಹೀಗಾಗಿ ಮೊದಲು ಸೇವನೆ ಮಾಡೋರನ್ನು ಬಂಧನ ಮಾಡಿದ್ರೇ ಮಾತ್ರ ಎಲ್ಲಿಂದ ಗಾಂಜಾ ಸಪ್ಲೈ ಆಗುತ್ತದೆ ಎನ್ನುವುದು ಗೊತ್ತಾಗಲಿದೆ ಎನ್ನುತ್ತಿದ್ದಾರೆ ಸ್ಥಳೀಯ ಹೋರಾಟಗಾರ ಎರಿಸ್ಬಾಮಿ..

ಅರೋಪಿಗಳ ಮೂಲ ಹುಡುಕಬೇಕಿದೆ 

ಇನ್ನೂ ಮೇಲ್ನೋಟಕ್ಕೆ ಈ ಆರೋಪಿಗಳ ಹಿಂದೆ ದೊಡ್ಡ ಜಾಲವಿರೋ ಶಂಕೆಯಿದೆ. ಸದ್ಯಕ್ಕೆ ಇಬ್ಬರನ್ನೂ ಬಂಧಿಸಿರೋ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಆದ್ರೇ ಇದು ಕೇವಲ‌ ಪೊಲೀಸರ ಕೆಲಸವಷ್ಟೇ ಅಲ್ಲದೇ ಸಾರ್ವಜನಿಕರು ಇದಕ್ಕೆ ಸಹಕಾರ ನೀಡಬೇಕಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!
ಕೆಲಸ ಇಲ್ಲದ ಗಂಡನಿಗೆ ಪತ್ನಿ ಶೀಲದ ಮೇಲೆ ಶಂಕೆ: ನಿದ್ರೆಯಲ್ಲಿದ್ದ ಮಗಳ ಕತ್ತು ಸೀಳಿದ ಪತಿ