ನಸುಕಿನ ಜಾವ ಕಳ್ಳರ ಗ್ಯಾಂಗ್ ಮನೆಯೊಂದರಲ್ಲಿ ಕಳ್ಳತನಕ್ಕೆ ಯತ್ನಿಸಿದ ವೇಳೆ ನೆರೆಮನೆಯವರ ಸಮಯಪ್ರಜ್ಞೆಯಿಂದಾಗಿ ಕಳ್ಳನ ಮಾಡುವ ಪಯತ್ನ ವಿಫಲವಾಗಿ ಮನೆಗಳ್ಳರು ಓಡಿಹೋದ ಘಟನೆ ಬೆಂಗಳೂರಿನ ನಾಗರಭಾವಿ ಪೂರ್ಣಚಂದ್ರ ಲೇಔಟ್‌ನಲ್ಲಿ ನಡೆದಿದೆ.
ಬೆಂಗಳೂರು (ನ.22) ನಸುಕಿನ ಜಾವ ಕಳ್ಳರ ಗ್ಯಾಂಗ್ ಮನೆಯೊಂದರಲ್ಲಿ ಕಳ್ಳತನಕ್ಕೆ ಯತ್ನಿಸಿದ ವೇಳೆ ನೆರೆಮನೆಯವರ ಸಮಯಪ್ರಜ್ಞೆಯಿಂದಾಗಿ ಕಳ್ಳನ ಮಾಡುವ ಪಯತ್ನ ವಿಫಲವಾಗಿ ಮನೆಗಳ್ಳರು ಓಡಿಹೋದ ಘಟನೆ ಬೆಂಗಳೂರಿನ ನಾಗರಭಾವಿ ಪೂರ್ಣಚಂದ್ರ ಲೇಔಟ್‌ನಲ್ಲಿ ನಡೆದಿದೆ.
ನಿನ್ನೆ ನವೆಂಬರ್ 21ರ ಬೆಳಗಿನ ಜಾವ ಸುಮಾರು 3 ಗಂಟೆ ವೇಳೆ ನುಗ್ಗಿದ್ದ ಮನೆಗಳ್ಳರು. ಎರಡು ಬೈಕ್ ಗಳಲ್ಲಿ ಬಂದಿದ್ದ ಮೂವರು ಖದೀಮರು, ಕಬ್ಬಿಣದ ರಾಡ್ ನಿಂದ ಮನೆ ಬಾಗಿಲು ಒಡೆದು ಒಳನುಸುಳಿದ್ದರು. ನೆರೆಮೆನೆಯವರು ಕೂಗಾಡ್ತಿದ್ದಂತೆ ಕದ್ದ ಬೆಳ್ಳಿ ಆಭರಣಗಳನ್ನು ಬಿಟ್ಟು ಓಡಿಹೋದ ಕಳ್ಳರು. ಕಳ್ಳರ ಚಲನವಲನ ದೃಶ್ಯ ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದೆ. ಸದ್ಯ ಪ್ರಕರಣ ಸಂಬಂಧ ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
undefined
ಒಬ್ಬಂಟಿ ವೃದ್ಧೆಯನ್ನು ಮಾರಕಾಸ್ತ್ರಗಳಿಂದ ಭೀಕರವಾಗಿ ಹತ್ಯೆ ಮಾಡಿದ ದುಷ್ಕರ್ಮಿಗಳು!
ಎಲೆಕ್ಟ್ರಾನಿಕ್ ಹಾರ್ಡ್‌ವೇರ್ ಕಳ್ಳತನ ಮಾಡಿದ್ದವರ ಬಂಧನ:
ತುರುವೇಕೆರೆ: ಎಲೆಕ್ಟ್ರಾನಿಕ್ಸ್ ಮತ್ತು ಹಾರ್ಡ್‌ವೇರ್ ಗಳಲ್ಲಿ ಕಳ್ಳತನ ಮಾಡಿದ್ದ ಖತರ್ನಾಕ್ ಕಳ್ಳರಿಬ್ಬರನ್ನು ಪೋಲಿಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪೋಲಿಸ್ ಠಾಣೆ ಮುಂಭಾಗದ ಸಿಟಿ ಎಲೆಕ್ಟ್ರಾನಿ ಕ್ಸ್ಅಂಗಡಿ ಶೀಟ್ ಮುರಿದು ಲಕ್ಷಾಂತರ ರು. ಮೌಲ್ಯದ ಮೊಬೈಲ್ ಮತ್ತು ಟಿವಿಯನ್ನು ಅಪಹರಿಸಿ ಪರಾರಿಯಾಗಿದ್ದರು. ಅಲ್ಲದೇ ಬಾಣಸಂದ್ರ ರಸ್ತೆಯಲ್ಲಿರುವ ಶಾರದಾ ಎಲೆಕ್ಟ್ರಿಕಲ್ಸ್ ನ ಬೀಗ ಮುರಿದು ಅಲ್ಲಿಯೂ ಲಕ್ಷಾಂತರ ರು. ಮೌಲ್ಯದ ಮೋಟಾರ್ ಪಂಪ್ ಕೇಬಲ್ ಅಪಹರಿಸಿ ಪರಾರಿಯಾಗಿದ್ದರು. ಮುನಿಯೂರು ಗೇಟ್ ಬಳಿಯ ಗಂಗಾಧರ ಹಾರ್ಡ್‌ವೇರ್ ಅಂಗಡಿಗೂ ನುಗ್ಗಿ ಅಲ್ಲಿಯೂ ಪಂಪ್‌ಸೆಟ್ ಗೆ ಸಂಬಂಧಿಸಿದ ವಸ್ತುಗಳನ್ನು ಅಪಹರಿಸಿದ್ದರು.
ಒಬ್ಬಂಟಿ ವೃದ್ಧೆಯನ್ನು ಮಾರಕಾಸ್ತ್ರಗಳಿಂದ ಭೀಕರವಾಗಿ ಹತ್ಯೆ ಮಾಡಿದ ದುಷ್ಕರ್ಮಿಗಳು!
ಈ ಎಲ್ಲಾ ಪ್ರಕರಣಗಳು ಪೋಲಿಸ್ ಠಾಣೆಯಲ್ಲಿ ದಾಖಲಾಗಿತ್ತು. ಆದರೆ, ಕಳ್ಳರ ಪತ್ತೆ ಕಾರ್ಯ ಆಗದೇ ಸಾರ್ವಜನಿಕರಿಂದ ಪೋಲಿಸರ ಕಾರ್ಯವೈಖರಿಯ ಬಗ್ಗೆ ಆಕ್ಷೇಪಣೆ ಕೇಳಿ ಬಂದಿದ್ದವು. ಈ ಹಿನ್ನೆಲೆ ತನಿಖೆ ಚುರುಕುಗೊಳಿಸಿದ ಪೋಲಿಸರು ಮೈಸೂರು ಜಿಲ್ಲೆಯ ಉದಯಗಿರಿ ತಾಲೂಕಿನ ಸಯ್ಯದ್ ಅಜರುದ್ದೀನ್(೨೮) ಮತ್ತು ಹತಾವುಲ್ಲಾ (೨೩) ಕಳ್ಳರನ್ನು ಬಂಧಿಸಿದ್ದಾರೆ. ಇನ್ನೂ ಇಬ್ಬರು ಕಳ್ಳರು ನಾಪತ್ತೆಯಾಗಿದ್ದಾರೆ. ಇವರು ಮೈಸೂರು, ಮಂಡ್ಯ, ತುಮಕೂರು ಜಿಲ್ಲೆಗಳಲ್ಲೂ ತಮ್ಮ ಕೈಚಳಕ ತೋರಿಸಿದ್ದು, ಹಲವಾರು ಪ್ರಕರಣಗಳಿಗೆ ಬೇಕಾಗಿರುವ ವ್ಯಕ್ತಿಗಳಾಗಿದ್ದಾರೆ. ಇನ್ನೂ ಇಬ್ಬರ ಪತ್ತೆ ಕಾರ್ಯಕ್ಕೆ ಪೋಲಿಸರು ಬಲೆ ಬೀಸಿದ್ದಾರೆ.
ಇಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಸಿಪಿಐ ಲೋಹಿತ್ ತಂಡ ಕಳ್ಳರನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದೆ.