ವಿದೇಶದಲ್ಲಿ ನನಗೆ ಒಳ್ಳೆಯ ಕೆಲಸವಾಗಿದೆ. ವಿದೇಶಕ್ಕೆ ಹೋಗುತ್ತೇನೆ ಎಂದು ಹೇಳಿದ್ದ ಯುವತಿಯನ್ನು ಪೋಷಕರು ಏರ್ಪೋರ್ಟ್‌ಗೆ ಕೂಡ ಬಿಟ್ಟುಬಂದಿದ್ದರು. ಆದರೆ, ಪೋಷಕರು ಈ ಕಡೆ ಬರುತ್ತಿದ್ದಂತೆ ಆಕೆಯ ಎಸ್ಕೇಪ್ ಆಗಿದ್ದಾಳೆ. ಏನಿದು ಕೇಸ್.. ಇಲ್ಲಿದೆ ಡೀಟೇಲ್ಸ್..
ಬೆಂಗಳೂರು (ಆ.30): ಇದು ಹೆತ್ತ ಅಪ್ಪ-ಅಮ್ಮನಿಗೆ ಮಗಳು ನಿದರ್ಯವಾಗಿ ಮಾಡಿದ ಮೋಸದ ಕಥೆ. ಮಕ್ಕಳನ್ನು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಬೆಳೆಸಿದ ಹೆತ್ತವರು, ತಮ್ಮ ಕೊನೆಗಾಲದಲ್ಲಿ ಆಸರೆ ಆಗಬೇಕು ಎಂದು ಬಯಸುತ್ತಾರೆ. ಆದರೆ, ಇಲ್ಲೊಬ್ಬ ಯುವತಿ ತನ್ನ ಲವರ್ ಜೊತೆ ಎಸ್ಕೇಪ್ ಆಗುವ ಸಲುವಾಗಿ ಮಾಡಿದ್ದು ಮಹಾಮೋಸ. ವಿದೇಶದಲ್ಲಿ ನನಗೆ ಕೆಲಸ ಸಿಕ್ಕಿದೆ. ಅಲ್ಲಿಗೆ ಹೋಗಬೇಕು. ಪಾಸ್‌ಪೋರ್ಟ್ ಕೂಡ ರೆಡಿ ಮಾಡಿಕೊಂಡಿದ್ದೇನೆ. ವಿಮಾನದ ಟಿಕೆಟ್ ಕೂಡ ಬುಕ್ ಆಗಿದೆ ಎಂದು ಪೋಷಕರಿಗೆ ನಂಬಿಸಿದ್ದಳು. ಅದರಂತೆ ಪೋಷಕರು ಕೂಡ ಮಗಳಿಗೆ ಏನೋ ಒಳ್ಳೆಯದಾಗುತ್ತದೆ ಎಂದುಕೊಂಡು ಬೆಂಗಳೂರು ಏರ್‌ಪೋರ್ಟ್‌ಗೆ ಬಂದು ಆಕೆಯ ಏರ್‌ಪೋರ್ಟ್‌ನ ಒಳಹೋಗುವವರೆಗೂ ಕಾದು ಮನೆಗೆ ಹೊರಟಿದ್ದರು. ಆದರೆ, ಅಪ್ಪ-ಅಮ್ಮ ಅಲ್ಲಿಂದ ಹೋಗುತ್ತಿರುವುದನ್ನೇ ಕಾಯುತ್ತಿದ್ದ ಯುವತಿ, ಅಲ್ಲಿಂದ ಅನ್ಯಕೋಮಿನ ಯುವಕನ ಜೊತೆ ಎಸ್ಕೇಪ್ ಆಗಿದ್ದಾಳೆ. ಇದು ಗೊತ್ತಾದ ಬಳಿಕ ಯುವತಿಯ ಪೋಷಕರು ಬೆಂಗಳೂರಿನಲ್ಲಿ ಮಗಳು ನಾಪತ್ತೆಯಾಗಿರುವ ದೂರು ದಾಖಲು ಮಾಡಿದ್ದಾರೆ.
ಯುವತಿ ಮೂಲತಃ ದಕ್ಷಿಣ ಕನ್ನಡದ ಸುಳ್ಯ ತಾಲೂಕಿನ ಕೊಲ್ಲಮೊಗ್ರದವಳು. ಈ ವರ್ಷವಷ್ಟೇ ಪಿಯುಸು ಪಾಸ್ ಆಗಿದ್ದ ಯುವತಿಯದ್ದೂ ಇನ್ನೂ ಟೀನೇಜ್. ಆದರೆ, ವಿದೇಶದಲ್ಲಿ ಹಾಕಿದ್ದ ಕೆಲಸಕ್ಕೆ ಸೆಲೆಕ್ಟ್ ಆಗಿದ್ದೇನೆ. ಯುರೋಪ್‌ಗೆ ಹೋಗಬೇಕು, ಕೈತುಂಬಾ ಸಂಬಳ, ಒಳ್ಳೆಯ ಉದ್ಯೋಗ, ಅಲ್ಲಿಯೇ ನಾನು ವಿದ್ಯಾಭ್ಯಾಸ ಮುಂದುವರಿಸುತ್ತೇನೆ. ಮೊದಲಿಗೆ ಅಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತೇನೆ ಎಂದಿದ್ದಳು. ನನ್ನ ಪಾಸ್‌ಪೋರ್ಟ್ ಕೂಡ ರೆಡಿ ಆಗಿದೆ. ಯುರೋಪ್‌ಗೆ ಹೋಗುವ ಟಿಕೆಟ್ ಕೂಡ ಬುಕ್ ಮಾಡಿದ್ದೇನೆ ಎಂದು ಪೋಷಕರಿಗೆ ನಂಬಿಸಿದ್ದಳು.
ಬಡತನದಲ್ಲಿಯೇ ಇದ್ದ ಕುಟುಂಬಕ್ಕೆ ಮಗಳಿಗೆ ವಿದೇಶದಲ್ಲಿ ಕೆಲಸ ಸಿಕ್ಕ ಸುದ್ದಿಕೇಳಿ ಸಂಭ್ರಮ ಮುಗಿಲು ಮುಟ್ಟಿತ್ತು. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸ್ವತಃ ಈಕೆಯನ್ನು ಬಿಟ್ಟು, ಒಳ್ಳೆಯದಾಗಲಿ ಎಂದು ಹರಸಿ ಬಂದಿದ್ದಾರೆ. ಇನ್ನೊಂದೆಡೆ ಮಗಳು ಕೂಡ ವಿಮಾನ ನಿಲ್ದಾಣದ ಒಳಹೊಕ್ಕು ದೂರದಿಂದಲೇ ಅಪ್ಪಅಪ್ಪನಿಗೆ ಟಾಟಾ ಮಾಡಿದ್ದಾರೆ. ಮಗಳನ್ನು ಏರ್‌ಪೋರ್ಟ್‌ಗೆ ಬಿಟ್ಟು ಮನೆಗೆ ಬಂದ ಕುಟುಂಬದವರು, ತಮ್ಮ ವಾಟ್ಸಾಪ್ ಸ್ಟೇಟಸ್‌ಗಳಲ್ಲಿ ಇದರ ಮಾಹಿತಿಗಳನ್ನೂ ಕೂಡ ಹಂಚಿಕೊಂಡಿದ್ದಾರೆ.
ಮನೆಗೆ ಬಂದಾಯಿತು ಹೇಗಿದ್ದರೂ ಒಂದು ಫೋನ್ ಮಾಡೋಣ, ವಿಮಾನ ಹೊರಟಿತಾ ಎಂದು ಕೇಳೋಣ ಎಂದು ಕರೆ ಮಾಡಿದ್ದಾರೆ. ಈ ವೇಳೆ ಆಕೆಯ ಫೋನ್ ರಿಂಗ್ ಆಗಿದೆ. ಫೋನ್ ರಿಂಗ್ ಆಗಿದ್ದಿರಂದ ಮನೆಯವರಿಗೆ ಅನುಮಾನ ಶುರುವಾಗಿದೆ. ಈಗಾಗಲೇ ವಿಮಾನ ಹೊರಟ ಸಮಯವಾಗಿದೆ. ಹಾಗಿದ್ದರೂ ಆಕೆಯ ಮೊಬೈಲ್ ರಿಂಗ್ ಆಗೋದಕ್ಕೆ ಹೇಗೆ ಸಾಧ್ಯ ಎನ್ನುವ ಅನುಮಾನ ಬಂದಿದೆ. ಆ ಬಳಿಕ ಕೆಲ ದಿನಗಳ ಬಳಿಕ ಆಕೆಯನ್ನು ಧರ್ಮಸ್ಥಳ ಬಸ್‌ನಲ್ಲಿ ನೋಡಿರುವುದಾಗಿ ಕೆಲವರು ತಿಳಿಸಿದ್ದಾರೆ. ಇದು ಆಗಸ್ಟ್ 25 ರಂದು ನಡೆದ ಘಟನೆಯಾಗಿದೆ.
ಜೈಲ್ ದರ್ಬಾರ್ಗೆ ದರ್ಶನ್ ಕೊಟ್ಟಿದ್ದು 2 ಕೋಟಿ..?
ಆಗಿರೋದೇನೆಂದರೆ, ವಿಮಾನ ನಿಲ್ದಾಣದ ಒಳಹೊಕ್ಕು ಡ್ರಾಮಾ ಮಾಡಿದ್ದ ಪುತ್ರಿ ಆ ಬಳಿಕ ಅಲ್ಲಿಂದ ಅನ್ಯಕೋಮಿನ ಯುವಕನ ಜೊತೆಗೆ ಎಸ್ಕೇಪ್ ಆಗಿದ್ದಾಳೆ. ಮಗಳು ಕಾಣೆ ಆಗಿರುವ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಪೋಷಕರು ಬಂದರೆ, ಅವರನ್ನು ಬೆಂಗಳೂರಿನಲ್ಲೇ ದೂರು ನೀಡಬೇಕೆಂದು ಪೊಲೀಸರು ಕಳುಹಿಸಿಕೊಟ್ಟಿದ್ದಾರೆ. ಇನ್ನು ಹಿಂದೂ ಸಂಘಟನೆಗಳು ಕೂಡ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿದೆ.
Bengaluru: ಕರಿಯನ ಅಭಿಮಾನಿಗಳಿಗೆ ಜ್ವರ ಬರುವಂತೆ ಬಾರಿಸಿದ ಬೆಂಗಳೂರು ಪೊಲೀಸ್!