ಎಣ್ಣೆ ಕುಡಿಯೋಕೆ ಹಣ ಕೊಟ್ಟಿಲ್ಲ ಅಂತ ಬ್ಲೇಡ್‌ನಿಂದ ಅಮಾಯಕನ ಕುತ್ತಿಗೆ ಕುಯ್ದ ಕುಡುಕ!

By Ravi Janekal  |  First Published Aug 30, 2024, 12:28 PM IST

ಎಣ್ಣೆ ಕುಡಿಯೋಕೆ ಹಣ ನೀಡಲಿಲ್ಲವೆಂದು ಕುಡುಕನೋರ್ವ ವ್ಯಕ್ತಿಯ ಕುತ್ತಿಗೆ ಕುಯ್ದ ಘಟನೆ ತುಮಕೂರು ನಗರದ ಸದಾಶಿವನಗರದ 4 ನೇ ಮುಖ್ಯರಸ್ತೆಯಲ್ಲಿ ಎರಡು ದಿನಗಳ ಹಿಂದೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.


ತುಮಕೂರು (ಆ.30): ಎಣ್ಣೆ ಕುಡಿಯೋಕೆ ಹಣ ನೀಡಲಿಲ್ಲವೆಂದು ಕುಡುಕನೋರ್ವ ವ್ಯಕ್ತಿಯ ಕುತ್ತಿಗೆ ಕುಯ್ದ ಘಟನೆ ತುಮಕೂರು ನಗರದ ಸದಾಶಿವನಗರದ 4 ನೇ ಮುಖ್ಯರಸ್ತೆಯಲ್ಲಿ ಎರಡು ದಿನಗಳ ಹಿಂದೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಹಣಮಂತ ಗಾಯಗೊಂಡ ವ್ಯಕ್ತಿ.  ಚಿತ್ರದುರ್ಗ ಮೂಲದ ಹನುಮಂತ ಎಂಬಾತ ತನ್ನ ಪತ್ನಿ ಮಕ್ಕಳೊಂದಿಗೆ, ದಿನಸಿ ಖರೀದಿಸಲು ಅಂಗಡಿಗೆ ಬಂದಿದ್ದ. ಈ ವೇಳೆ ರಸ್ತೆ ಬದಿ ನಿಂತಿದ್ದ ಪುಂಡನೊಬ್ಬ ಹನುಮಂತನ ಬಳಿ ಬಂದು ಕುಡಿಯಲು ಹಣ ಕೊಡುವಂತೆ ಕೇಳಿದ್ದಾನೆ. ಹಣ ಕೊಡಲು ಹಣಮಂತ ನಿರಾಕರಿಸಿದ್ದಾನೆ. ಇದರಿಂದ ಸಿಟ್ಟಿಗೆದ್ದು ಏಕಾಏಕಿ ಬ್ಲೇಡ್‌ನಿಂದ ಹಣಮಂತನ ಕುತ್ತಿಗೆ ಕುಯ್ದು ಪರಾರಿಯಾಗಿ ಯತ್ನಿಸಿದ ದುರುಳ. ಸಾರ್ವಜನಿಕರ ಸಹಾಯದಿಂದ ಕುಡುಕನನ್ನು ಹಿಡಿದು ಚಪ್ಪಲಿಯಲ್ಲಿ ಹಿಗ್ಗಾಮುಗ್ಗಾ ಥಳಿಸಿದ ಹಣಮಂತನ ಪತ್ನಿ. ಸಾರ್ವಜನಿಕರು ಸಹ ಪುಂಡನಿಗೆ ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

Tap to resize

Latest Videos

undefined

 

ಸದ್ಯ ಗಾಯಾಳು ಹಣಮಂತಗೆ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಘಟನೆ ಸಂಬಂಧ ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!