
ಕುಣಿಗಲ್ (ಆ.30): ಪ್ರೀತಿ ನಿರಾಕರಿಸಿದ ಮಂಗಳಮುಖಿಗೆ ಚಾಕು ಇರಿದು ಪರಾರಿ ಆಗುವಾಗ ಪ್ರೇಮಿಯನ್ನು ಸಾರ್ವಜನಿಕರು ಹಿಡಿದು ಥಳಿಸಿ ಪೊಲೀಸ್ ಠಾಣೆಗೆ ನೀಡಿದ ಘಟನೆ ಪಟ್ಟಣದ ದೊಡ್ಡಪೇಟೆ ಬಳಿ ನಡೆದಿದೆ. ಮಂಡ್ಯದ ಆದೀಲ್ (23) ಚಾಕುವಿನಿಂದ ಇರಿದ ಆರೋಪಿ. ಪಟ್ಟಣದ ಕೋಟೆ ನಿವಾಸಿ ಮಹಮದ್ ಆಲೀಸಾ ಖಾದ್ರಿ (21) ಮಂಗಳಮುಖಿಯಾಗಿ ಬದಲಾಗಿದ್ದು, ಹನೀಶಾ ಎಂದು ಹೆಸರು ಇಟ್ಟುಕೊಂಡಿದ್ದು, ಚಾಕು ಇರಿತಕ್ಕೆ ಒಳಗಾದ ಪ್ರೇಯಸಿ.
ಪ್ರೇಮದ ಹಿನ್ನೆಲೆ: ಕಳೆದ ಆರು ತಿಂಗಳ ಹಿಂದೆ ಫೇಸ್‌ಬುಕ್‌ನಲ್ಲಿ ಮಂಗಳಮುಖಿ ಹನೀಶಾ ಮಂಡ್ಯದ ಆದೀಲ್‌ಗೆ ಪರಿಚಯವಾಗಿ ನಂತರ ಪ್ರೇಮಕ್ಕೆ ತಿರುಗಿತ್ತು. ಪ್ರೇಮಿ ಆದೀಲ್ ಕುಣಿಗಲ್ ಹನಿಶಾ ಮನೆಗೆ ಬಂದು ಅನಾಥ ಎಂದು ಸುಳ್ಳು ಹೇಳಿ ಕಳೆದ ನಾಲ್ಕು ಐದು ತಿಂಗಳಿನಿಂದ ವಾಸವಾಗಿದ್ದನು. ಮನೆಯ ಕುಟುಂಬ ನಿರ್ವಹಣೆ ಮಾಡುತ್ತಿದ್ದ ಎನ್ನಲಾಗಿದೆ. ಇಬ್ಬರ ಪ್ರೀತಿಯಲ್ಲಿ ವ್ಯತ್ಯಾಸ ಉಂಟಾಗಿ ಕೆಲ ವಿಚಾರವಾಗಿ ಹನೀಶಾ ಹಾಗೂ ಆದೀಲ್ ನಡುವೆ ಜಗಳ ನಡೆಯುತ್ತಿತ್ತು.
ಹನೀಶಾ ಮೇಲೆ ಆದೀಲ್ ಹಲ್ಲೆ ನಡೆಸಿ ಮಂಡ್ಯಗೆ ಹೋಗಿ ನೆಲೆಸಿದ್ದನು. ಪ್ರೇಮದ ವಿಚಾರವಾಗಿ ಮಾತನಾಡಲು ಕರೆಸಿ ಗ್ರಾಮ ದೇವತೆ ಸರ್ಕಲ್ ಬಳಿ ಚಾಕುವಿನಿಂದ ಇರಿದ ಆದೀಲ್ ಆಕೆಯ ಕಿರುಚಾಟದಿಂದ ಗಾಬರಿಗೊಂಡ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾನೆ. ಆತನನ್ನು ಹಿಂಬಾಲಿಸಿದ ಪುರಸಭೆ ಸದಸ್ಯ ರಂಗಸ್ವಾಮಿ ಮತ್ತು ಸ್ನೇಹಿತರು ದೊಡ್ಡಪೇಟೆ ರಸ್ತೆ ಬಳಿ ಆತನ ಹಿಡಿದು ಪೊಲೀಸರ ವಶಕ್ಕೆ ನೀಡಿದ್ದಾರೆ.
ಎತ್ತಿನಹೊಳೆಯಿಂದ ನೀರೆತ್ತುವ ಕಾರ್‍ಯಕ್ಕೆ ಡಿ.ಕೆ.ಶಿವಕುಮಾರ್ ಪ್ರಾಯೋಗಿಕ ಚಾಲನೆ
ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಗಾಯಾಳು, ಮಂಗಳಮುಖಿ ಹನಿಷಾಗೆ ಚಿಕಿತ್ಸೆ ನೀಡಿದ್ದು, ಹೆಚ್ಚಿನ ಚಿಕಿತ್ಸೆಗೆ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಾಕು ಇರಿದ ಆರೋಪಿಯನ್ನು ಕುಣಿಗಲ್ ಪೊಲೀಸರು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ. ಪ್ರಕರಣ ದಾಖಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ