ಮಂಗಳೂರು: ಮನೆಗೆ ಫೋನ್ ಮಾಡಲು ಬಿಡಲಿಲ್ಲ ಎಂದು ವಿದ್ಯಾರ್ಥಿ ಆತ್ಮಹತ್ಯೆ

By Suvarna News  |  First Published Jun 13, 2022, 1:17 PM IST

ತಲಪಾಡಿಯ ಖಾಸಗಿ ವಿದ್ಯಾಸಂಸ್ಥೆಯಲ್ಲಿ 9ನೇ ತರಗತಿ ವಿದ್ಯಾರ್ಥಿಯೋರ್ವ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ವಿದ್ಯಾಸಂಸ್ಥೆ, ಪ್ರಾಂಶುಪಾಲರು ಹಾಗೂ ಹಾಸ್ಟೆಲ್‌ ವಾರ್ಡನ್‌ ವಿರುದ್ಧ ದೂರು ದಾಖಲಾಗಿದೆ. 


ಮಂಗಳೂರು (ಜೂ. 13): ತಲಪಾಡಿಯ ಖಾಸಗಿ ವಿದ್ಯಾಸಂಸ್ಥೆಯಲ್ಲಿ 9ನೇ ತರಗತಿ ವಿದ್ಯಾರ್ಥಿಯೋರ್ವ ನೇಣು ಹಾಕಿಕೊಂಡು (Suicide) ಆತ್ಮಹತ್ಯೆ ಮಾಡಿಕೊಂಡಿದ್ದು, ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ವಿದ್ಯಾಸಂಸ್ಥೆ, ಪ್ರಾಂಶುಪಾಲರು ಹಾಗೂ ಹಾಸ್ಟೆಲ್‌ ವಾರ್ಡನ್‌ ವಿರುದ್ಧ ದೂರು ದಾಖಲಾಗಿದೆ.

ಮೊಬೈಲ್‌ ಅಲ್ಲಿ ಗೇಮ್ ಆಡ್ಬೇಡ ಅಂದ್ಲು ತಾಯಿ, ನನಗೆ ಈ ಜಗತ್ತೇ ಬೇಡ ಡಂದು ಸೂಸೈಡ್ ಮಾಡ್ಕೊಂಡ ಮಗ!

Tap to resize

Latest Videos

ಬೆಂಗಳೂರಿನ ಹೊಸಕೋಟೆ (Hosakote)ನಿವಾಸಿ ರಮೇಶ್‌ ಹಾಗೂ ಮಂಜುಳಾ ದಂಪತಿ ಪುತ್ರ ಪೂರ್ವಜ್‌ (14) ಮೃತ ವಿದ್ಯಾರ್ಥಿ. ಜೂ. 11ರಂದು ತಾಯಿ ಮಂಜುಳಾ ಅವರ ಹುಟ್ಟು ಹಬ್ಬವಿದ್ದು, ಅದಕ್ಕಾಗಿ ಶುಭಾಶಯ ಕೋರಲು ಮೊಬೈಲ್‌ ಕೇಳಿದ್ದಾನೆ. ವಾರ್ಡನ್‌ ನೀಡದೇ ಇರುವುದರಿಂದ ನೊಂದು ಬಾಲಕ ಪೂರ್ವಜ್‌ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೋಷಕರು ಆರೋಪಿಸಿದ್ದಾರೆ. ಹೆತ್ತವರು ಕರೆ ಮಾಡಿದರೂ ಸಂಭಾಷಣೆಗೆ ಶಾಲಾಡಳಿತ ಮಂಡಳಿ ಅವಕಾಶ ನೀಡುತ್ತಿರಲಿಲ್ಲ. ರುಕುಳದಿಂದಲೇ ಪೂರ್ವಜ್‌ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೋಷಕರು ದೂರು ನೀಡಿದ್ದು, ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.

click me!