ಪಟ್ಟಣದ ಮೇಗಳಪೇಟೆಯ ಹೊರವಲಯದಲ್ಲಿ ಕತ್ತೆ ಕಿರುಬವೊಂದನ್ನು ಕೊಂದುಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಸಿಬ್ಬಂದಿ ಓರ್ವನನ್ನು ಬಂಧಿಸಿದ್ದಾರೆ.
ಮುದಗಲ್ (ಜೂ.13): ಪಟ್ಟಣದ ಮೇಗಳಪೇಟೆಯ ಹೊರವಲಯದಲ್ಲಿ ಕತ್ತೆ ಕಿರುಬವೊಂದನ್ನು ಕೊಂದುಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಸಿಬ್ಬಂದಿ ಓರ್ವನನ್ನು ಬಂಧಿಸಿದ್ದಾರೆ. ಪಟ್ಟಣದ ಮೇಗಳಪೇಟೆಯ ನಿವಾಸಿ ಗ್ಯಾನಪ್ಪ ಆದಪ್ಪ (42) ಬಂಧಿತ ಆರೋಪಿ.
ಇತ್ತೀಚೆಗೆ ಗುಡ್ಡಗಾಡಿನಲ್ಲಿದ್ದ ಕತ್ತೆ ಕಿರುಬವೊಂದನ್ನು ಕೆಲವರು ಕಲ್ಲು, ಕಟ್ಟಿಗೆ, ಮತ್ತು ಕೊಡಲಿಯಿಂದ ಹೊಡೆದು ಕೊಂದಿದ್ದರು. ಕೊಲ್ಲುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪ್ರಾಣಿಪ್ರಿಯರು ಕ್ರಮಕ್ಕೆ ಆಗ್ರಹಿಸಿದ್ದರು. ವಿಡಿಯೋದ ಜಾಡು ಬೆನ್ನು ಹತ್ತಿದ ಅರಣ್ಯ ಇಲಾಖೆ ತಂಡವು ಇದೀಗ ಓರ್ವನನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೊಳಪಡಿಸಿದ್ದು, ತನಿಖೆ ಮುಂದುವರಿಸಿ ಉಳಿದವರ ಪತ್ತೆಗಾಗಿ ಶೋಧ ಕಾರ್ಯ ನಡೆಸಿದೆ.
undefined
Kolar: ಬೀದಿ ನಾಯಿಗಳ ಕಾಟ: ಸಾರ್ವಜನಿಕರಿಗೆ ತೀವ್ರ ತೊಂದರೆ!
ಏನಿದು ಘಟನೆ: ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಮುದಗಲ್ ಹೋಬಳಿಯಲ್ಲಿ ಕತ್ತೆ ಕಿರುಬವನ್ನು ಕೆಲವರು ಹೊಡೆದು ಸಾಯಿಸಿದ್ದು, ಇದಕ್ಕೆ ಪ್ರಾಣಿಪ್ರಿಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಬಂಡೆಗಳ ನಡುವೆ ಇದ್ದ ಕತ್ತೆ ಕಿರುಬದ ಮೇಲೆ ಕಲ್ಲು, ಬಡಿಗೆ, ಕೊಡಲಿಯಿಂದ ದಾಳಿ ನಡೆಸಿ ಕೊಂದು ವಿಕೃತಿ ಮೆರೆದಿದ್ದು, ಹಲ್ಲೆ ನಡೆಸುವ ದೃಶ್ಯಗಳು ವೈರಲ್ ಆಗಿತ್ತು. ಹಲ್ಲೆಕೋರರಿಂದ ತಪ್ಪಿಸಿಕೊಂಡು ಕತ್ತೆಕಿರುಬ ಬಂಡೆಗಳ ಗವಿಯೊಳಗೆ ಹೋದರೂ ಬಿಡದೆ, ಕಲ್ಲಿನಿಂದ ಹೊಡೆದು ಅದರ ಕಾಲು ಮುರಿದು, ಹೊರಗೆಳೆದು ಕೊಡಲಿ, ಬಡಿಗೆಯಿಂದ ಬಡಿದು ಸಾಯಿಸಲಾಗಿತ್ತು.
Davanagere: 777 ಚಾರ್ಲಿ ವೀಕ್ಷಣೆಗೆ ಡಯನಾಗೆ ಸಿಗಲಿಲ್ಲ ಅನುಮತಿ: ಪ್ರತಿಭಟಿಸಿದ ಮಾಲೀಕ
ದಾಳಿಯ ದೃಶ್ಯ ವೈರಲ್ ಆಗಿದ್ದರೂ ರಾಯಚೂರು ಜಿಲ್ಲಾ ಅರಣ್ಯಾಧಿಕಾರಿಗಳು ಯಾವುದೇ ಕ್ರಮ ಜರುಗಿಸದಿರುವುದು ಪ್ರಾಣಿಪ್ರಿಯರ ಆಕ್ರೋಶಕ್ಕೆ ಕಾರಣವಾಗಿತ್ತು. ಕತ್ತೆ ಕಿರುಬವನ್ನು ಅಟ್ಟಾಡಿಸಿ ಹತ್ಯೆಗೈದಿರುವುದು ಹೇಯಕೃತ್ಯವಾಗಿದೆ. ಈ ಬಗ್ಗೆ ಕ್ರಮ ಜರುಗಿಸಬೇಕೆಂದು ಪ್ರಾಣಿಪ್ರಿಯರು ಆಗ್ರಹಿಸಿದ್ದರು. ಕತ್ತೆ ಕಿರುಬ ಒಂದು ನಿಶಾಚರಿ ಪ್ರಾಣಿಯಾಗಿದ್ದು, ಸತ್ತ ಪ್ರಾಣಿಗಳನ್ನು ತಿನ್ನುತ್ತದೆ. ಬೇಟೆಯಾಡುವ ಇತರ ಪ್ರಾಣಿಗಳು ತಿಂದು ಮಿಗಿಸಿದುದು ಇದರ ಪಾಲಿಗೆ ಆಹಾರ. ನಿಶಾಚರಿಯಾದ್ದರಿಂದ ಸಾಮಾನ್ಯವಾಗಿ ಒಂಟಿಯಾಗಿಯೇ ಜೀವಿಸುತ್ತದೆ. ಆಹಾರವನ್ನು ವಾಸನೆಯಿಂದ ಪತ್ತೆ ಹಚ್ಚುತ್ತದೆ. ಮನುಷ್ಯನನ್ನು ಕಂಡರೆ ಭಯಪಡುವ ಈ ಪ್ರಾಣಿ ಅವನು ವಾಸಿಸುವ ಸ್ಥಳಗಳಿಂದ ದೂರವೇ ಇರುತ್ತದೆ.