ಬಾಯ್‌ಫ್ರೆಂಡ್‌ ಭೇಟಿ ಮಾಡಲು ಬಿಡದ ಹೆತ್ತ ತಾಯಿಗೆ ಚಹಾದಲ್ಲಿ ವಿಷ ಹಾಕಿದ ಹದಿಹರೆಯದ ಹುಡುಗಿ!

By BK Ashwin  |  First Published Oct 8, 2023, 3:28 PM IST

ತಾಯಿ ಚಹಾ ಸೇವಿಸಿದ ಬಳಿಕ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಾಗ ಬಾಲಕಿ ಗಾಬರಿಗೊಂಡು ನೆರೆಹೊರೆಯವರ ಸಹಾಯ ಕೇಳಿದ್ದಾಳೆ. ಬಳಿಕ, ಆಸ್ಪತ್ರೆಗೆ ದಾಖಲಿಸಲಾಗಿದೆ. 


ಲಖನೌ (ಅಕ್ಟೋಬರ್ 8, 2023): 16 ವರ್ಷದ ಬಾಲಕಿಯೊಬ್ಬಳು ಶುಕ್ರವಾರ ತನ್ನ ತಾಯಿಗೆ ವಿಷ ಬೆರೆಸಿದ ಚಹಾ ನೀಡಿದ ಘಟನೆ ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ನಡೆದಿದೆ. ಬಾಯ್‌ಫ್ರೆಂಡ್‌ನೊಂದಿಗೆ ತನ್ನ ಮಗಳ ಸಂಬಂಧವನ್ನು ವಿರೋಧಿಸಿ ಹುಡುಗನನ್ನು ಭೇಟಿಯಾಗದಂತೆ ತಾಯಿ ತಡೆದಿದ್ದೇ ಇದಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. 

ಆದರೂ, ತಾಯಿ ಚಹಾ ಸೇವಿಸಿದ ಬಳಿಕ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಾಗ ಬಾಲಕಿ ಗಾಬರಿಗೊಂಡು ನೆರೆಹೊರೆಯವರ ಸಹಾಯ ಕೇಳಿದ್ದಾಳೆ. ನಂತರ, ಸಂಗೀತಾ ಯಾದವ್ (48) ಎಂಬ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈಗ ಅವರು ಅಪಾಯದಿಂದ ಪಾರಾಗಿದ್ದಾರೆ ಎಂದೂ ಪೊಲೀಸರು ತಿಳಿಸಿದ್ದಾರೆ.

Tap to resize

Latest Videos

ಇದನ್ನು ಓದಿ: ಅಮೆರಿಕದಲ್ಲಿ ಭಾರತೀಯ ಕುಟುಂಬದ ನಾಲ್ವರ ಶವ ಪತ್ತೆ: ನಿಗೂಢ ಸಾವಿನ ಸುತ್ತ ಅನುಮಾನದ ಹುತ್ತ!

ಮಾರುಕಟ್ಟೆಯಿಂದ ವಿಷ ತರುವಂತೆ ಬಾಲಕಿ ತನ್ನ ಗೆಳೆಯನಿಗೆ ಕೇಳಿದ್ದಳು ಎಂದೂ ಘಟನೆ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಸಂಬಂಧ ರಾಯ್ ಬರೇಲಿಯ ಎಸ್ಪಿ ಅಲೋಕ್ ಪ್ರಿಯದರ್ಶಿನಿ ಅವರು ಐಪಿಸಿಯ ಸೆಕ್ಷನ್ 328 ಅಡಿಯಲ್ಲಿ ಹದಿಹರೆಯದ ಬಾಲಕಿ ಮತ್ತು ಆಕೆಯ ಗೆಳೆಯನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದೂ ತಿಳಿದುಬಂದಿದೆ. ಈ ಮಧ್ಯೆ, ಬಾಲಕಿಯನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ, ಆದರೆ ಆಕೆಯ ಗೆಳೆಯ ಪರಾರಿಯಾಗಿದ್ದಾನೆ ಎಂದೂ ಎಸ್‌ಪಿ ಹೇಳಿದರು.

ಬಾಲಕಿಯ ತಂದೆ ಬೇರೆ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಮತ್ತು ಹುಡುಗಿ ಮಾತ್ರ ತನ್ನ ತಾಯಿಯೊಂದಿಗೆ ವಾಸಿಸುತ್ತಾಳೆ ಎಂದು ಡೀಹ್‌ನ ಎಸ್‌ಎಚ್‌ಒ ಜಿತೇಂದ್ರ ಪ್ರತಾಪ್ ಸಿಂಗ್ ಹೇಳಿದ್ದಾರೆ. "ಹುಡುಗಿಯು ಅದೇ ಹಳ್ಳಿಯಲ್ಲಿ (ಪೂರ್ವ) ವಾಸಿಸುವ ಹುಡುಗನೊಂದಿಗೆ ಸಂಬಂಧ ಹೊಂದಿದ್ದಾಳೆ. ಆದರೆ, ಅವನನ್ನು ಭೇಟಿಯಾಗುವುದನ್ನು ತಾಯಿ ವಿರೋಧಿಸಿದ ಹಿನ್ನೆಲೆ ಹುಡುಗಿ ತನ್ನ ತಾಯಿಯೊಂದಿಗೆ ಆಗಾಗ್ಗೆ ಜಗಳವಾಡುತ್ತಿದ್ದಳು ಎಂದೂ SHO ಹೇಳಿದರು.

ಇದನ್ನೂ ಓದಿ: ಏರ್‌ಪೋರ್ಟ್‌ನಲ್ಲಿ ವೇಗವಾಗಿ ಬಿಎಂಡಬ್ಲ್ಯೂ ಕಾರು ಚಾಲನೆ: ಸಿಐಎಸ್‌ಎಫ್ ಜವಾನನ ಹತ್ಯೆಗೈದ ಹದಿಹರೆಯದ ಯುವಕ

ಇದೇ ರೀತಿ, ಸಂಗೀತಾ ತನ್ನ ಮಗಳಿಗೆ ಹುಡುಗನನ್ನು ಭೇಟಿಯಾಗುವುದನ್ನು ನಿಲ್ಲಿಸುವಂತೆ ಎಚ್ಚರಿಸಿದ್ದಳು. ಭೇಟಿ ಮುಂದುವರಿಸಿದರೆ ಮನೆಯಲ್ಲಿ ಲಾಕ್‌ ಮಾಡೋದಾಗಿ ಎಚ್ಚರಿಸಿದ್ದರು. ಇದರಿಂದ ಆಕೆ ತನ್ನ ತಾಯಿಗೆ ವಿಷ ನೀಡಲು ಉತ್ತೇಜಿಸಿರಬಹುದು ಎಂದೂ ಎಸ್‌ಎಚ್‌ಒ ಹೇಳಿದರು. ಇನ್ನೊಂದೆಡೆ, ಬಾಲಕಿಯ ತಾಯಿಯ ಹೇಳಿಕೆಯನ್ನು ಪಡೆದ ಪೊಲೀಸರು ಬಾಲಕಿ ಮತ್ತು ಆಕೆಯ ಪ್ರಿಯಕರನ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

ಇದನ್ನೂ ಓದಿ: ಗೂಗಲ್‌ ಮ್ಯಾಪ್ ನಂಬ್ಕೊಂಡು ಹೋದ ಇಬ್ಬರು ನೀರುಪಾಲು: ಹುಟ್ಟುಹಬ್ಬದ ದಿನವೇ ಬಲಿಯಾದ ಯುವ ವೈದ್ಯ!

click me!