ಅಶ್ಲೀಲ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಸಿ ವ್ಯಕ್ತಿಯೋರ್ವನಿಂದ 96 ಸಾವಿರ ರೂಪಾಯಿ ಪಡೆದು ವಂಚಿಸಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಹುಬ್ಬಳ್ಳಿ (ಅ.8): ಅಶ್ಲೀಲ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಸಿ ವ್ಯಕ್ತಿಯೋರ್ವನಿಂದ 96 ಸಾವಿರ ರೂಪಾಯಿ ಪಡೆದು ವಂಚಿಸಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ರಂಜೀತನಾಥ ವಂಚನೆಗೆ ಒಳಗಾದ ವ್ಯಕ್ತಿಯಾಗಿದ್ದು, ಅಪರಿಚಿತರು ಫೇಸ್‌ಬುಕ್ ಮೂಲಕ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸಿದಾಗ ಬೆತ್ತಲೆ ಇರುವ ದೃಶ್ಯ ಸ್ಕ್ರೀನ್ ರೆಕಾರ್ಡ್ ಮಾಡಿಕೊಂಡಿದ್ದಾರೆ. ಬಳಿಕ ಅಶ್ಲೀಲ ದೃಶ್ಯ ತೋರಿಸಿ ಹಣಕ್ಕೆ ಬೇಡಿಕೆ ಇಟ್ಟಿರುವ ದುಷ್ಕರ್ಮಿಗಳು. ಹಣ ಕೊಡಲು ನಿರಾಕರಿಸಿದಾಗ ಅಶ್ಲೀಲ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡುವುದಾಗಿ ಬೆದರಿಕೆ ಒಡ್ಡಿದ್ದಾರೆ. ಅಷ್ಟೇ ಅಲ್ಲದೆ ಕುಟುಂಬಕ್ಕೆ ತೋರಿಸುವುದಾಗಿ ಬೆದರಿಕೆ ಹಾಕಿದ ಹಿನ್ನೆಲೆ ರಂಜೀತನಾಥ 96 ಸಾವಿರ ರೂಪಾಯಿ ಕೊಟ್ಟಿದ್ದು, ಮತ್ತೆ ಹಣದ ಬೇಡಿಕೆ ಇಟ್ಟ ಹಿನ್ನೆಲೆ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೋ ನೋಡುತ್ತಿದ್ದ ಪ್ರಭಾವ, 7 ವರ್ಷದ ಬಾಲಕನಿಂದ 5 ವರ್ಷದ ಬಾಲಕಿಯ ರೇಪ್
ಎಷ್ಟೇ ಜಾಗೃತಿ ಮೂಡಿಸಿದರು ಪದೇಪದೆ ವಂಚನೆ ಪ್ರಕರಣಗಳು ನಡೆಯುತ್ತಿವೆ. ದುಷ್ಕರ್ಮಿಗಳು ಅಮಾಯಕರನ್ನು ಟಾರ್ಗೆಟ್ ಮಾಡಿ ಕರೆ ಮಾಡಿ ಅಶ್ಲೀಲ ವಿಡಿಯೋ ರೆಕಾರ್ಡ್ ಮಾಡಿಕೊಂಡು ಹಣಕ್ಕೆ ಬೇಡಿಕೆ ಇಡುತ್ತಿರುವ ದೊಡ್ಡ ಜಾಲವೇ ಸಕ್ರಿಯವಾಗಿದೆ. ಫೇಸ್‌ಬುಕ್, ಇನ್ಸ್‌ಟಗ್ರಾಮ್ ಬಳಸುವವರು ಅಪರಿಚಿತರ ಕರೆ ಸ್ವೀಕರಿಸದಂತೆ ಎಚ್ಚರಿಕೆ ವಹಿಸಬೇಕಾಗಿದೆ.
ಶಿವಮೊಗ್ಗ: ತೀರ್ಥಹಳ್ಳಿ ರಾಜಕೀಯ ಮುಖಂಡನ ರಾಸಲೀಲೆ ವೀಡಿಯೋ ವೈರಲ್..!
₹1.45 ಲಕ್ಷ ಮೌಲ್ಯದ ಆಭರಣ ಕಳ್ಳತನ
ಹುಬ್ಬಳ್ಳಿ
ಇಲ್ಲಿಯ ಜೋಳದ ಓಣಿಯ ಶ್ವೇತಾ ಖೋಡೆ ಎಂಬುವರ ಮನೆಗೆ ಆಭರಣ ತೊಳೆಯುವ ನೆಪದಲ್ಲಿ ಬಂದ ಅಪರಿಚಿತರಿಬ್ಬರು ಮೋಸತನದಿಂದ ಅವರ ಬಂಗಾರ ಆಭರಣ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಬಂಗಾರ ತೊಳೆಯುವುದಾಗಿ ನಾಟಕ ಮಾಡಿ ₹1.20 ಲಕ್ಷ ಮೌಲ್ಯ ಮಂಗಳ ಸೂತ್ರ, ₹25 ಸಾವಿರ ಮೌಲ್ಯ ಬಂಗಾರ ಸರ ತೆಗೆದುಕೊಂಡು ಮೋಸ ಮಾಡಿದ್ದಾರೆ ಎಂದು ಘಂಟಿಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.