* ಕಲಬುರಗಿ ಜಿಲ್ಲೆ ಚಿತ್ತಾಪೂರ ತಾಲೂಕಿನ ನಾಲವಾರ ಸ್ಟೇಷನ್ ಏರಿಯಾದಲ್ಲಿ ನಡೆದ ಘಟನೆ
* ಕಾದ ಕೊಳವೆಯಿಂದ ಕೈಗೆ ಸುಟ್ಟು, ಮಂಚಕ್ಕೆ ಕಟ್ಟಿ ಹಾಕಿದ ತಾಯಿ
* ಮಗು ಸಂಕಷ್ಟ ಗುರುತಿಸಿ ಮನೆಗೆ ನುಗ್ಗಿ ರಕ್ಷಕಿಸಿದ ಸ್ಥಳಿಯರು
ಕಲಬುರಗಿ(ಜೂ.07): ಮಾತು ಕೇಳದ ಮಲಮಗನಿಗೆ ತಾಯಿ ಕಾದ ಕಬ್ಬಿಣದಿಂದ ಸುಟ್ಟ ಅಮಾನವೀಯ ಘಟನೆ ಕಲಬುರಗಿ ಜಿಲ್ಲೆ ಚಿತ್ತಾಪೂರ ತಾಲೂಕಿನ ನಾಲವಾರ ಸ್ಟೇಷನ್ ಏರಿಯಾದಲ್ಲಿ ಇಂದು(ಮಂಗಳವಾರ) ನಡೆದಿದೆ.
ನಾಲವಾರ ತಾಂಡಾ ನಿವಾಸಿ ಮರೆಮ್ಮ ಎಂಬಾಕೆಯೇ ನಾಲ್ಕು ವರ್ಷದ ಮಗನ ಮೇಲೆ ವಿಕೃತಿ ಮೆರೆದ ಮಲತಾಯಿಯಾಗಿದ್ದಾಳೆ. ಮಗು ಆಟವಾಡಲು ಪಕ್ಕದ ಮನೆಗಳಿಗೆ ಹೋಗುತ್ತಿದೆ ಎನ್ನುವ ಕಾರಣಕ್ಕೆ ಮಲತಾಯಿಯ ವಿಕೃತಿ ಮೆರೆದಿದ್ದಾಳೆ.
Kalaburagi Crime: ಮೊಬೈಲ್ ಸ್ಟೇಟಸ್‌ನಲ್ಲಿ ಕೊಲೆಯ ಮುನ್ಸೂಚನೆ..!
ಕಾದ ಕೊಳವೆಯಿಂದ ಕೈಗೆ ಸುಟ್ಟು, ಮಂಚಕ್ಕೆ ಕಟ್ಟಿ ಹಾಕಿದ್ದಾಳೆ ಮಹಾತಾಯಿ. ಮಗುವಿನ ಸಂಕಷ್ಟವನ್ನ ಗುರುತಿಸಿ ಸ್ಥಳಿಯರೇ ಮನೆಗೆ ನುಗ್ಗಿ ರಕ್ಷಕಿಸಿದ್ದಾರೆ. ಮಗುವನ್ನು ರಕ್ಷಿಸಿ ಮಲತಾಯಿಗೆ ಸ್ಥಳಿಯರು ಕ್ಲಾಸ್ ತಗೊಂಡಿದ್ದಾರೆ. ಅಲ್ಲದೇ ವಾಡಿ ಪೊಲೀಸರ ಠಾಣೆಗೆ ಮಗುವನ್ನ ಸ್ಥಳೀಯರು ಒಪ್ಪಿಸಿದ್ದಾರೆ.
ಸದ್ಯ ಮಗು ಚೈಲ್ಡ್ ಲೈನನವರ ಸುಪರ್ದಿಯಲ್ಲಿದೆ ಅಂತ ತಿಳಿದು ಬಂದಿದೆ. ಮರೆವ್ವನ ಗಂಡ ಮಹಾರಾಷ್ಟ್ರದ ಪುಣೆಯಲ್ಲಿ ವಾಸವಿರುತ್ತಾನೆ. ಮರೆವ್ವ ತಿಂಗಳ ಹಿಂದಷ್ಟೆ ಹೆರಿಗೆಯಾಗಿದ್ದು ಗಂಡು ಮಗುವಿಗೆ ಜನ್ಮ ನೀಡಿದ್ದಳು. ತನಗೆ ಮಗುವಾದ ಮೇಲೆ ಮಲ ಮಕ್ಕಳಿಗೆ ಈ ರೀತಿ ಕಿರುಕುಳ ನೀಡುತ್ತಿರುವ ಮರೆವ್ವ.