ಪ್ರೀತಿ ಹೆಸರಲ್ಲಿ ಕಾಮದ ತೀಟೆ ತೀರಿಸಿಕೊಂಡು ಮೋಸ, ಇಂಜಿನಿಯರ್ ಕಂಬಿ ಹಿಂದೆ

By Suvarna News  |  First Published Jun 7, 2022, 11:02 AM IST

*  ಮದುವೆಯಾಗುವುದಾಗಿ ಹೇಳಿ ವಂಚಿಸಿದ ಇಂಜಿನಿಯರ್
* ಮದುವೆಯಾಗುವುದಾಗಿ ನಂಬಿಸಿ ಯುವತಿ ಜೊತೆ ದೈಹಿಕ ಸಂಪರ್ಕ
* ಬಳ್ಳಾರಿ ಕೆಎಂಎಫ್​ನ ಅಸಿಸ್ಟೆಂಟ್ ಟೆಕ್ನಿಕಲ್ ಇಂಜಿನಿಯರ್


ಬಳ್ಳಾರಿ, (ಜೂನ್07) : ಮದುವೆಯಾಗುವುದಾಗಿ ನಂಬಿಸಿ ಪ್ರೀತಿಸಿದ ಯುವತಿಯ ಜೊತೆ ದೈಹಿಕ ಸಂಪರ್ಕ ನಡೆಸಿ ಬಳಿಕ ಆಕೆಗೆ ವಂಚಿಸಿದ ಇಂಜಿನಿಯರ್‌ನನ್ನು ಪೊಲೀಸರು ಬಂಧಿಸಿದ್ದಾರೆ.

 ಯುವತಿ ಜತೆ ದೈಹಿಕ ಸಂಪರ್ಕ ನಡೆಸಿ ಬಳಿಕ ಆಕೆಗೆ ವಂಚಿಸಿದ ಆರೋಪದಡಿ ಬಳ್ಳಾರಿ ಕೆಎಂಎಫ್​ನ ಅಸಿಸ್ಟೆಂಟ್ ಟೆಕ್ನಿಕಲ್ ಇಂಜಿನಿಯರ್​ವೊಬ್ಬರನ್ನು  ಮಹಿಳಾ ಠಾಣೆಯ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

Tap to resize

Latest Videos

undefined

ಪಿ.ವೆಂಕಟೇಶ್ ಎಂಬುವರೆ ಬಂಧಿತ ಇಂಜಿನಿಯರ್. ರಾಯಚೂರು ಮೂಲದ ವೆಂಕಟೇಶ್  ಬಳ್ಳಾರಿಯ ಯುವತಿಯೊಬ್ಬಳನ್ನು ಪ್ರೀತಿಸಿದ್ದ. ಬಳಿಕ ಮದುವೆಯಾಗುವುದಾಗಿ ನಂಬಿಸಿನಿರಂತರ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ತದನಂತರ ಯುವತಿ ಮದುವೆಯಾಗೋಣ ಎಂದಾಗ ಅದೆಲ್ಲ ಸದ್ಯ ಬೇಡ, ಹೀಗೆಯೇ ಸ್ನೇಹಿತರಾಗಿ ಇರೋಣ ಎಂದು ಹೇಳಿದ್ದಾನೆ. 

Ballari; ಆಪ್ತಾಪ್ತೆಯನ್ನು ಪ್ರೀತಿಸಿದ ಯುವಕನ ದುರಂತ ಅಂತ್ಯ!

ಯುವಕನ ಮಾತಿನಿಂದ ಯುವತಿಗೆ ಪ್ರೀತಿಯ ನಾಟಕವಾಡಿ ವಂಚನೆ ಆಗಿರುವುದು ಗೊತ್ತಾಗಿದೆ. ಹೀಗಾಗಿ, ಪ್ರೇಮದ ವಿಚಾರವನ್ನು ಮನೆಯವರಲ್ಲಿ ತಿಳಿಸಿದ್ದಾಳೆ. ವಿಷಯ ತಿಳಿದ ಪೋಷಕರು ವೆಂಕಟೇಶ್​​ ಬಳಿ ತಮ್ಮ ಮಗಳನ್ನು ಮದುವೆ ಆಗುವಂತೆ ಕೇಳಿದ್ದಾರೆ. ಆದರೆ, ಯಾವುದೇ ಕಾರಣಕ್ಕೂ  ಮದುವೆಯಾಗುವುದಿಲ್ಲ ಎಂದು ವೆಂಕಟೇಶ್ ಗಲಾಟೆ ಮಾಡಿದ್ದಾನೆ ಎನ್ನಲಾಗಿದೆ.

ಕೊನೆಗೆ ಯುವತಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ದೂರು ನೀಡಿದ್ದಾಳೆ.  ಯುವತಿಯ ದೂರಿನ ಮೇರೆಗೆ ಬಳ್ಳಾರಿ ಮಹಿಳಾ ಪೊಲೀಸರು ಆರೋಪಿ ವೆಂಕಟೇಶ್ ಹಾಗೂ ಆತನಿಗೆ ಸಹಕಾರ ನೀಡಿದ ಹಿನ್ನೆಲೆಯಲ್ಲಿ ಸಹೋದರರಾದ ರಾಮಕೃಷ್ಣ, ತಾಯಣ್ಣ ಅವರನ್ನ ಬಂಧಿಸಿದ್ದು, ಸದ್ಯ ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.

click me!