
ಮೈಸೂರು(ಫೆ.18): ಸಂಘದಲ್ಲಿ ಸಾಲ(Loan) ತೆಗೆದುಕೊಂಡು ಮಗನಿಗೆ ವ್ಯಾನ್ ತೆಗೆದುಕೊಟ್ಟ ತಾಯಿಯನ್ನು(Mother) ಮಗ ವ್ಯಾನ್ ಹತ್ತಿಸಿ ಕೊಲೆ(Murder) ಮಾಡಿದ್ದಾನೆ. ಮೈಸೂರು(Mysuru) ಜಿಲ್ಲೆ ಬೆಟ್ಟದಪುರ ಹೋಬಳಿಯ ಸೂಳೆಕೋಟೆ ಗ್ರಾಮದ ಹೇಮರಾಜ್ ಹೆತ್ತ ತಾಯಿಯನ್ನೇ ಕೊಲೆ ಮಾಡಿದ ಆರೋಪಿ.
ಹೇಮರಾಜ್ ತಾಯಿ ನಾಗಮ್ಮನ ಹೆಸರಿನಲ್ಲಿ ಸಂಘದಿಂದ ಸುಮಾರು 70 ಸಾವಿರ ಸಾಲ ಪಡೆದು ತೂಫಾನ್ ವಾಹನವನ್ನು ತೆಗೆದುಕೊಂಡಿದ್ದ, ಸಾಲ ವಾಪಸ್ ಕಟ್ಟದಿದ್ದಾಗ ಸಂಘದ ಇತರ ಸದಸ್ಯರು ನಾಗಮ್ಮಳನ್ನು ಒತ್ತಾಯಿಸಿದ್ದರು. ಇದರಿಂದ ನಾಗಮ್ಮ ಮಗ ಹೇಮರಾಜ್‌ನಿಗೆ ಸಾಲ ವಾಪಸ್ ಕಟ್ಟುವಂತೆ ಹೇಳಿದಾಗ ವಾಗ್ವಾದ ನಡೆದಿದೆ.
Suvarna FIR : ಸಿಂಧನೂರು, ಕೊಟ್ಟ ಸಾಲಕ್ಕಾಗಿ ಸ್ನೇಹಿತನ ಕರೆಸಿ ಎಣ್ಣೆ ಪಾರ್ಟಿ ಕೊಟ್ಟು ಕೊಲೆ ಮಾಡಿದ್ರು!
ನಾಗಮ್ಮ ವಾಹನ ಅಡ್ಡಗಟ್ಟಿ, ಸಾಲ ಕಟ್ಟಿ ತೆಗೆದುಕೊಂಡು ಹೋಗು ಎಂದಿದ್ದಾಳೆ. ಆದರೆ ಹೇಮರಾಜ್ ತಾಯಿಯ ಮೇಲೆಯೇ ವಾಹನ ಹರಿಸಿ ಹೋಗಿದ್ದಾನೆ. ಪರಿಣಾಮ ನಾಗಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾಳೆ(Death). ಈ ಕುರಿತು ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು(Police) ಆರೋಪಿಯನ್ನು(Accused) ಬಂಧಿಸಿ(Arrest) ಮುಂದಿನ ಕ್ರಮ ಕೈಗೊಂಡಿದ್ದಾರೆ.
ಮೊಬೈಲ್ ಜಗಳ ಗೆಳೆಯನ ಕೊಲೆಯಲ್ಲಿ ಅಂತ್ಯ
ಬೆಂಗಳೂರು(Bengaluru): ಮೊಬೈಲ್ ವಿಚಾರವಾಗಿ ಬಾರ್ ಕೆಲಸಗಾರರ ನಡುವೆ ಉಂಟಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಫೆ.14 ರಂದು ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು.
ಜಂಬೂ ಸವಾರಿ ದಿಣ್ಣೆ ಸಮೀಪದ ನಿವಾಸಿ ಮಂಜುನಾಥ್(36) ಮೃತ ದುರ್ದೈವಿ. ಪ್ರಕರಣ ಸಂಬಂಧ ಮೃತನ ಗೆಳೆಯ ಶರತ್‌ಕುಮಾರ್‌ನನ್ನು ಕೋಣನಕುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮದ್ಯದ ಅಮಲಿನಲ್ಲಿ ಸೋಮವಾರ ರಾತ್ರಿ 11 ಗಂಟೆ ಸುಮಾರಿಗೆ ಜಂಬೂ ಸವಾರಿ ದಿಣ್ಣೆ ಬಳಿ ಕ್ಷುಲ್ಲಕ ಕಾರಣಕ್ಕೆ ಇಬ್ಬರ ಮಧ್ಯೆ ಜಗಳವಾಗಿದೆ. ಆಗ ಕೆರಳಿದ ಆರೋಪಿ, ಮಂಜುನಾಥ್ ತಲೆಗೆ ಸಿಮೆಂಟ್ ಇಟ್ಟಿಗೆಯಿಂದ ಹಲ್ಲೆ ನಡೆಸಿದ್ದಾನೆ. ತೀವ್ರವಾಗಿ ಗಾಯಗೊಂಡು ಆತ ಸ್ಥಳದಲ್ಲಿ ಮೃತಪಟ್ಟಿದ್ದ. ಈ ಘಟನೆ ಬಗ್ಗೆ ಮಾಹಿತಿ ತಿಳಿದ ಕೂಡಲೇ ಆರೋಪಿ ಬಂಧಿಸಲಾಯಿತು ಎಂದು ಅಧಿಕಾರಿಗಳು ಹೇಳಿದ್ದರು.
ಬನಶಂಕರಿ ಸಮೀಪ ಜಮುನಾ ಬಾರ್ ಅಂಡ್ ರೆಸ್ಟೋರೆಂಟ್‌ನಲ್ಲಿ ಮಂಜುನಾಥ್ ಹಾಗೂ ಶರತ್ ಕೆಲಸ ಮಾಡುತ್ತಿದ್ದರು. ಎಂದಿನಂತೆ ರಾತ್ರಿ ಬಾರ್ ವಹಿವಾಟು ಮುಗಿದ ಬಳಿಕ ತಮ್ಮ ಸ್ನೇಹಿತರ ಜತೆ ಅವರು ಮನೆಗೆ ಮರಳುತ್ತಿದ್ದರು. ಆಗ ಮಾರ್ಗ ಮಧ್ಯೆ ಮೊಬೈಲ್ ಕೊಡುವಂತೆ ಶರತ್‌ಗೆ ಮಂಜುನಾಥ ಕೇಳಿದ್ದಾನೆ. ಇದಕ್ಕೆ ಆತ ಆಕ್ಷೇಪಿಸಿದ್ದಾನೆ. ಆಗ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಕೋಪಗೊಂಡ ಶರತ್, ಮಂಜುನಾಥ್ ತಲೆಗೆ ಸಿಮೆಂಟ್ ಇಟ್ಟಿಗೆಯಿಂದ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದರು.
ಕುಡಿದ ಮತ್ತಿನಲ್ಲಿ ತಾಯಿಯನ್ನೇ ಕೊಂದ ಮಗ;
ಹಾಸನ(Hassan): ಕುಡಿದ ಮತ್ತಿನಲ್ಲಿ ಮಗನೇ ತಾಯಿಯನ್ನು ಬರ್ಬರವಾಗಿ ಹತ್ಯೆಗೈದು ಪತ್ನಿ ಮೇಲೆಯೂ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಫೆ. 13 ರಂದು ಸಂಕಲಾಪುರ ಗ್ರಾಮದಲ್ಲಿ ನಡೆದಿದೆ.
Murder in Vijayapura: ಪ್ರೀತಿಸಿ ಮದುವೆಯಾಗಿದ್ದೇ ತಪ್ಪಾಯ್ತು...ಬೈಕ್ ನಲ್ಲಿ ತೆರಳುತ್ತಿದ್ದವನ ಹತ್ಯೆ!
ಜಿಲ್ಲೆಯ ಸಂಕಲಾಪುರ ಗ್ರಾಮದ ಸಣ್ಣಮ್ಮ( 68) ಹತ್ಯೆಯಾದ ಮಹಿಳೆ. ಆರೋಪಿ ಪತ್ನಿ ರೂಪ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿದ್ದಾರೆ. ಭಾನುವಾರ ರಾತ್ರಿ ಕಂಠಪೂರ್ತಿ ಕುಡಿದು ಬಂದ ಪುತ್ರ ನಂಜೇಶ್ ಗೌಡ ಹೆತ್ತಮ್ಮನನ್ನು ಕೊಲೆ ಮಾಡಿದ್ದಾನೆ.
ತಾಯಿಯನ್ನು ಕೊಂದ ಬಳಿಕ ಪತ್ನಿಯ ಕ್ಯಾಂಟೀನ್ ಬಳಿ ಬಂದು ಆಕೆಯ ಮೇಲೆಯೂ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಸಣ್ಣಮ್ಮ ಮೂಲತಃ ಹಾಸನ ತಾಲೂಕಿನ ಗೋಳೇನಹಳ್ಳಿಯವರಾಗಿದ್ದು, ಸದ್ಯ ಸಣ್ಣಮ್ಮ ಕುಟುಂಬ ಸಂಕಲಾಪುರದಲ್ಲಿ ನೆಲೆಸಿತ್ತು. ರೂಪಾ ಹಾಸನದ ಜಿಲ್ಲಾಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ