Belagavi; ಪತ್ನಿ ಸೀಮಂತಕ್ಕೆ ಬಂದಿದ್ದ ಯೋಧ ಅಪಘಾತದಲ್ಲಿ ದುರ್ಮರಣ!

By Suvarna News  |  First Published Jun 4, 2022, 5:28 PM IST
  • ಎರಡು ವರ್ಷಗಳ ಹಿಂದೆಯಷ್ಟೇ ವಿವಾಹವಾಗಿದ್ದ ಯೋಧ ಪ್ರಕಾಶ್
  • ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಅಪರಿಚಿತ ವಾಹನ ಡಿಕ್ಕಿಯಾಗಿ ದುರ್ಮರಣ
  • ಮುಗಿಲು ಮುಟ್ಟಿದ ಗರ್ಭಿಣಿ ಪತ್ನಿ ಕುಟುಂಬಸ್ಥರ ಆಕ್ರಂದನ

ಬೆಳಗಾವಿ (ಜೂ.4): ಪತ್ನಿಯ ಸೀಮಂತ ಕಾರ್ಯ (baby shower) ಅದ್ಧೂರಿಯಾಗಿ ಮಾಡಬೇಕೆಂದು ರಜೆ ಮೇಲೆ ಮನೆಗೆ ಬಂದಿದ್ದ ಯೋಧ ರಸ್ತೆ ಅಪಘಾತದಲ್ಲಿ ದುರ್ಮರಣಕ್ಕೀಡಾದ ಹೃದಯವಿದ್ರಾವಕ ಘಟನೆ ಬೆಳಗಾವಿ ತಾಲೂಕಿನ ಹಲಗಾ ಗ್ರಾಮದ ಬಳಿ ಜೂನ್ 2ರ ರಾತ್ರಿ ನಡೆದಿದೆ.

ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಹೊಸೂರಿನ ಗ್ರಾಮದವರಾಗಿದ್ದ ಯೋಧ 28 ವರ್ಷದ ಪ್ರಕಾಶ್ ಮಡಿವಾಳಪ್ಪ ಸಂಗೊಳ್ಳಿ (Prakash Madiwalappa Sangolli) ಕಳೆದ 9 ವರ್ಷಗಳ ಹಿಂದೆ ಬೆಳಗಾವಿಯ (belagavi) ಮರಾಠಾ ಲಘು ಪದಾತಿದಳದಲ್ಲಿ ಸೈನಿಕನಾಗಿ ಸೇವೆಗೆ ಸೇರಿದ್ದರು‌.

Tap to resize

Latest Videos

ಎರಡು ವರ್ಷಗಳ ಹಿಂದೆಯಷ್ಟೇ ಜ್ಯೋತಿ ಎಂಬುವರ ಜೊತೆ ಯೋಧ ಪ್ರಕಾಶ್ ಸಂಗೊಳ್ಳಿ ವಿವಾಹವಾಗಿದ್ದ. ಜೂನ್ 12ರಂದು ಅದ್ಧೂರಿಯಾಗಿ ಪತ್ನಿ ಜ್ಯೋತಿಯ ಸೀಮಂತ ಕಾರ್ಯ ಮಾಡಬೇಕು ಎಂದುಕೊಂಡಿದ್ದ‌‌. ಪ್ರಕಾಶ್ ತಂದೆ ಮಡಿವಾಳಪ್ಪ ಸಹ ಯೋಧರಾಗಿ ದೇಶ ಸೇವೆ ಸಲ್ಲಿಸಿದ್ದರು‌. ನಿವೃತ್ತರಾದ ಬಳಿಕ ಹೊಸೂರು ಗ್ರಾಮದಲ್ಲಿ ನೆಲೆಸಿದ್ದರು‌. ಎರಡು ತಿಂಗಳ ಹಿಂದೆಯಷ್ಟೇ ಯೋಧ ಪ್ರಕಾಶ್ ತಂದೆ ಸಹ ಮೃತಪಟ್ಟಿದ್ದರು‌.

Udupi; ಕೊಲ್ಲೂರು ಕ್ಷೇತ್ರದ ಸುತ್ತಲೂ ಕೊಳಚೆ, ಭಕ್ತರಿಗೆ ಬೇಸರ

ರಜೆ ಮೇಲೆ ಊರಿಗೆ ಬಂದಿದ್ದ ಯೋಧ ಪ್ರಕಾಶ್ ಕಾರ್ಯನಿಮಿತ್ತ ಬೆಳಗಾವಿಗೆ ತೆರಳಿದ್ದರು. ಬೆಳಗಾವಿಯಿಂದ ಹೊಸೂರು ಗ್ರಾಮಕ್ಕೆ ಬೈಕ್‌ನಲ್ಲಿ ತೆರಳುವ ವೇಳೆ ಬೆಳಗಾವಿ ತಾಲೂಕಿನ ಹಲಗಾ ಗ್ರಾಮದ ಬಳಿ ಅಪರಿಚಿತ ವಾಹನ ಡಿಕ್ಕಿಯಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಯೋಧ ಪ್ರಕಾಶ್ ಪಾರ್ಥಿವ ಶರೀರವನ್ನು ಬೈಲಹೊಂಗಲ ಪಟ್ಟಣದಿಂದ ನೂರಾರು ಯುವಕರು ಹೊಸೂರು ಗ್ರಾಮಕ್ಕೆ ತಂದಿದ್ದರು. 

ಗಂಡನ ಕಳೆದುಕೊಂಡು ಪತ್ನಿ ಜ್ಯೋತಿ, ತಾಯಿ ಕಸ್ತೂರವ್ವ, ಸಹೋದರ ಸೋಮನಿಂಗ ಸೇರಿದಂತೆ ಕುಟುಂಬಸ್ಥರು, ಗ್ರಾಮಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಗರ್ಭಿಣಿ ಪತ್ನಿಯ ಆಕ್ರಂದನ ನೋಡಿ ಗ್ರಾಮಸ್ಥರು ಸಹ ಕಣ್ಣೀರಿಟ್ಟರು‌. ಯೋಧನ ಪಾರ್ಥಿವ ಶರೀರ ಸಾರ್ವಜನಿಕ ದರ್ಶನಕ್ಕೆ ಮನೆಯ ಎದುರೇ ವ್ಯವಸ್ಥೆ ಮಾಡಲಾಗಿತ್ತು‌. ಬಳಿಕ ಸಾವಿರಾರು ಜನರ ಸಮ್ಮುಖದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಯೋಧ ಪ್ರಕಾಶ್ ಸಂಗೊಳ್ಳಿ ಅಂತ್ಯಕ್ರಿಯೆ ನೆರವೇರಿತು.

Chitradurga ಏತ ನೀರಾವರಿ ಯೋಜನೆಗೆ ಬೊಮ್ಮಾಯಿ ಚಾಲನೆ

RCF ಕಂಪನಿಯ 900 ಚೀಲ ರಸಗೊಬ್ಬರ ಕದ್ದಿದ್ದವರು ಅರೆಸ್ಟ್: ಬೆಳಗಾವಿ ತಾಲೂಕಿನ ದೇಸೂರು ಗ್ರಾಮದ ರೇಲ್ವೆ ನಿಲ್ದಾಣದ ಬಳಿಯ ಗೋದಾಮಿನಿಂದ 900 ಚೀಲ RCF ಕಂಪನಿಯ DAP ರಸಗೊಬ್ಬರ ಕಳ್ಳತನ ಮಾಡಿದ್ದ ಐವರು ಆರೋಪಿಗಳನ್ನು ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಾಸ್ಟರ್‌ಮೈಂಡ್‌ ನಾಗರಾಜ ಈರಣ್ಣ ಪಠಾತ್, ಪಂಡಿತ್ ಸನದಿ ಲಾರಿ ಚಾಲಕರಾದ ವಸೀಂ ಮಕಾಂದಾರ್, ಮಂಜುನಾಥ ಹಮ್ಮನ್ನವರ್, ಗಜಬರ ಅಲಿ ಜಿಡ್ಡಿಮನಿಯನ್ನು ಬಂಧಿಸಿದ್ದು, ಎರಡು ಲಾರಿಗಳನ್ನು ಜಪ್ತಿ ಮಾಡಿದ್ದಾರೆ‌. 10 ಲಕ್ಷ 93 ಸಾವಿರದ 500 ಮೌಲ್ಯದ 810 ಚೀಲ ಡಿಎಪಿ ರಸಗೊಬ್ಬರ, ಹಾಗೂ ರಸಗೊಬ್ಬರ ಸಾಗಿಸಲು ಬಳಸಿದ್ದ 15 ಲಕ್ಷ ಮೌಲ್ಯದ ಎರಡು ಲಾರಿಗಳು ಸೇರಿ ಒಟ್ಟು ಒಟ್ಟು 25 ಲಕ್ಷ 93 ಸಾವಿರದ 500 ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಅಷ್ಟಕ್ಕೂ ಘಟನೆ ನಡೆದಿದ್ದು ಹೇಗೆ?: ಬೆಳಗಾವಿ ತಾಲೂಕಿನ ದೇಸೂರು ರೇಲ್ವೆ ನಿಲ್ದಾಣಕ್ಕೆ ಗೂಡ್ಸ್ ರೈಲಿನಲ್ಲಿ ದೇಶದ ವಿವಿಧೆಡೆಯಿಂದ ಸರಕು ಆಗಮಿಸುತ್ತೆ‌. ಸರಕು ಲೋಡಿಂಗ್ ಅನ್‌ಲೋಡಿಂಗ್ ಮಾಡಿ ಬಳಿಕ ಗೋದಾಮಿನಲ್ಲಿ ಇರಿಸಲಾಗುತ್ತೆ‌.

ಮಠಾಧೀಶರ ಹೋರಾಟ ತಡೆದರೆ ರಾಜ್ಯಕ್ಕೆ ಬೆಂಕಿ ಹತ್ತುತ್ತೆ : Pramod Muthalik ಎಚ್ಚರಿಕೆ

ದೇಸೂರು ರೇಲ್ವೆ ನಿಲ್ದಾಣ ಬಳಿಯ ಸಾಗರ್ ಟ್ರಾನ್ಸ್‌ಪೋರ್ಟ್‌ಗೆ ಸೇರಿದ ಗೋದಾಮಿನಲ್ಲಿ ಇರಿಸಿದ್ದ 900 ಚೀಲ ರಸಗೊಬ್ಬರ ನಾಪತ್ತೆಯಾಗಿತ್ತು. ಮೇ 17ರಂದು ಸಾಗರ ಟ್ರಾನ್ಸ್‌ಪೋರ್ಟ್‌ಗೆ ಸೇರಿದ ಗೋದಾಮಿನಲ್ಲಿ 72,600 RCF-DAP ರಸಗೊಬ್ಬರ ಚೀಲಗಳ ಸಂಗ್ರಹವಾಗಿತ್ತು.‌

ಈ ವೇಳೆ RCF-DAP ರಸಗೊಬ್ಬರ ಚೀಲಗಳನ್ನು ಸರಬರಾಜು ಸಹ ಮಾಡಲಾಗಿರುತ್ತೆ. ಕೊನೆಗೆ ಪರಿಶೀಲನೆ ನಡೆಸುವಾಗ 900 ಚೀಲಗಳು ಕಡಿಮೆ‌ ಇರೋದು ಗೊತ್ತಾಗುತ್ತೆ‌. ಈ ವೇಳೆ ಯಾರೋ ರಸಗೊಬ್ಬರ ಚೀಲಗಳನ್ನು ಕದ್ದಿದ್ದಾರೆ ಎಂದು ಮೇ 23ರಂದು ಬೆಳಗಾವಿ ಗ್ರಾಮೀಣ ಠಾಣೆಗೆ ಗೋದಾಮಿನ ಮ್ಯಾನೇಜರ್ ಶಿವಾಜಿ ಆನಂದಾಚೆ ದೂರು ನೀಡಿರುತ್ತಾರೆ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿರುತ್ತಾರೆ.

click me!