Shivamogga: ರೌಡಿಶೀಟರ್‌ಗಳಿಂದ ಮಹಿಳೆ ಮೇಲೆ ಹಲ್ಲೆ, ಕಾರಿಗೆ ಬೆಂಕಿ

By Sathish Kumar KH  |  First Published Dec 17, 2022, 2:33 PM IST

ಹಣಕಾಸಿನ ವಿಚಾರಕ್ಕೆ ಮಹಿಳೆಯ ಮೇಲೆ ಹಲ್ಲೆ ಮಾಡಿದ್ದ ರೌಡಿ ಶೀಟರ್‌ ವಿರುದ್ಧ ಪೊಲೀಸ್‌ ಠಾಣೆಗೆ ದೂರು ನೀಡಿದ್ದ ಹಿನ್ನೆಲೆಯಲ್ಲಿ, ಪುನಃ ಮಹಿಳೆಯ ಕಾರಿಗೆ ಬೆಂಕಿ ಹಚ್ಚಿ ರೌಡಿಶೀಟರ್‌ಗಳು ವಿಕೃತಿ ಮೆರೆದಿದ್ದಾರೆ. 


ಶಿವಮೊಗ್ಗ (ಡಿ.17):  ಶಿವಮೊಗ್ಗದ ಹೊಸಮನೆ ಬಡಾವಣೆಯಲ್ಲಿ ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಕಾರಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು. ವನಜಾಕ್ಷಿ ಎಂಬುವರಿಗೆ ಸೇರಿದ ಕಾರಿಗೆ ಬೆಂಕಿ ಹಚ್ಚಿ ರೌಡಿ ಶೀಟರ್‌ಗಳು ವಿಕೃತಿ ಮೆರೆದಿದ್ದಾರೆ. 

ಕಳೆದ 3 ತಿಂಗಳ ಹಿಂದೆ ಹಣಕಾಸಿನ ವಹಿವಾಟು ಹಿನ್ನೆಲೆಯಲ್ಲಿ ವರಜಾಕ್ಷಿ ಮೇಲೆ ಮೋಟು ಪ್ರವೀಣ್ ಹಲ್ಲೆ ನಡೆಸಿದ್ದನು. ಈ ಸಂಬಂಧ ಮಹಿಳೆಯು ಪೊಲೀಸ್ ಠಾಣೆಗೆ ಹೋಗಿ ಪ್ರಕರಣ ದಾಖಲಿಸಿದ್ದರಿಂದ ಮೋಟು ಪ್ರವೀಣ್ ಜೈಲಿಗೆ ಹೋಗಿದ್ದನು. ಇನ್ನು ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿ ಬರುತ್ತಲೇ ಕೇಸು ಹಿಂಪಡೆಯುವಂತೆ ವನಜಾಕ್ಷಿ ಮೇಲೆ ಒತ್ತಡ ಹೇರಿದ್ದನು. ಆದರೆ, ವನಜಾಕ್ಷಿಯವರು ಒಪ್ಪದ ಹಿನ್ನೆಲೆಯಲ್ಲಿ ರೌಡಿ ಮೋಟು ಪ್ರವೀಣ್ ಮತ್ತು ಸಹಚರರು ವನಜಾಕ್ಷಿ ಅವರ ಮನೆಯ ಮುಂದೆ ನಿಲ್ಲಿಸಲಾಗಿದ್ದ ಲಕ್ಷಾಂತರ ರೂ. ಕಾರಿಗೆ ಬೆಂಕಿ ಹಚ್ಚಿ ದುಷ್ಕೃತ್ಯ ಮೆರೆದಿದ್ದಾರೆ. 

Tap to resize

Latest Videos

ಆಂಧ್ರದ ರಕ್ತ ಚರಿತ್ರೆ ಸೇಡಿಗೆ ಕರ್ನಾಟಕದಲ್ಲಿ ಸ್ಪಾಟ್ ಫಿಕ್ಸ್..!

ಆರು ಜನರಿಂದ ಬೆಂಕಿ ಹಚ್ಚಿ ವಿಕೃತಿ: ರೌಡಿ ಶೀಟರ್ ಗಳಾದ ಶ್ಯಾಡೋ ಸಚಿನ್, ಮೋಟು ಪ್ರವೀಣ ಸೇರಿದಂತೆ ಆರು ಜನರ ಗುಂಪಿನಿಂದ ಕೃತ್ಯ ನಡೆದಿದೆ. ಕಾರಿಗೆ ಬೆಂಕಿ ಹಚ್ಚಿದ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಮತ್ತೊಂದು ದೂರು ದಾಖಲು ಆಗಿದೆ. ಇನ್ನು ಕೃತ್ಯ ನಡೆಸಿ ಪರಾರಿಯಾದ ಮೋಟು ಪ್ರವೀಣ್ ಶ್ಯಾಡೋ ಸಚಿನ್ ಮತ್ತಿತರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಹಳೆಯ ವೈಷಮ್ಯದ ಹಿನ್ನೆಲೆಯುಳ್ಳ ಪ್ರಕರಣ ಇನ್ನೂ ಅತಿರೇಕಕ್ಕೆ ಹೋಗುವ ಮೊದಲೇ ಪೊಲೀಸರಿಂದ ರೌಡಿ ಶೀಟರ್‌ಗಳ ಪುಂಡಾಟಕ್ಕೆ ಬ್ರೇಕ್‌ ಬೀಳಬೇಕಿದೆ. ಇಲ್ಲವಾದರೆ ಮಹಿಳೆಯರು ಮತ್ತು ಜನಸಾಮಾನ್ಯರ ಮೇಲೆ ನಡೆಯುವ ದಾಳಿಗಳ ಹೆಚ್ಚಳಕ್ಕೆ ಮತ್ತಷ್ಟು ಪ್ರೋತ್ಸಾಹ ಸಿಕ್ಕಂತಾಗಲಿದೆ.

click me!