* ಶಿವಮೊಗ್ಗದ ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣ
* ಶಿವಮೊಗ್ಗ ಪೊಲೀಸ್ ವರಿಷ್ಠಾಧಿಕಾರಿ ಸುದ್ದಿಗೋಷ್ಠಿ
* ವಿಡಿಯೋ ಕಾಲ್ ಸೇರಿದಂತೆ ಹರ್ಷ ಕೊಲೆ ಆರೋಪಿಗಳ ಬಗ್ಗೆ ಮಾಹಿತಿ ನಿಡಿದ ಎಸ್‌ಪಿ
ಶಿವಮೊಗ್ಗ, (ಫೆ.25): ಶಿವಮೊಗ್ಗದ ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ (Harsha Murder) ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲಾ ಬಿಎಂ ಲಕ್ಷ್ಮೀಪ್ರಸಾದ್ ಮಾಹಿತಿ ನೀಡಿದ್ದಾರೆ.
ಇಂದು(ಶುಕ್ರವಾರ) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈವರೆಗೆ ಒಟ್ಟು 10 ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಹರ್ಷ ಮೊಬೈಲ್ ಫೋನ್ (Mobile Phone) ಇನ್ನೂ ಪತ್ತೆಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.
Harsha Murder Case: ಎಸ್‌ಪಿ ಲಕ್ಷ್ಮೀ ಪ್ರಸಾದ್ ವರ್ಗಾವಣೆ ಸಾಧ್ಯತೆ
ಹರ್ಷ ಮೊಬೈಲ್ಗೆ ಯುವತಿಯರು ವಿಡಿಯೋ ಕಾಲ್ ಮಾಡಿರುವ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿರುವ ಎಸ್‌ಪಿ, ಹತ್ಯೆಯಾದ ಹರ್ಷನ ಸ್ನೇಹಿತನ ಹೇಳಿಕೆಯನ್ನು ಪಡೆಯಲಾಗಿದೆ. ಹರ್ಷನ ಮೊಬೈಲ್ ಇದುವರೆಗೆ ಪತ್ತೆಯಾಗಿಲ್ಲ. ಆದರೆ ಆತನಿಗೆ ವೀಡಿಯೋ ಕರೆ ಮಾಡಿದವರನ್ನು ಪತ್ತೆ ಮಾಡಿದ್ದೇವೆ. ಯುವತಿಯರು ಯಾರು ಎನ್ನುವ ತನಿಖೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಈಗಾಗಲೇ ಪ್ರಕರಣದಲ್ಲಿ 2 ಕಾರು, ಒಂದು ಬೈಕ್ ಸೀಜ್ ಮಾಡಲಾಗಿದೆ. ಆದರೆ ಕೃತ್ಯಕ್ಕೆ ಬಳಸಿರುವುದು ಒಂದೇ ಕಾರು ಎಂಬುದು ದೃಢವಾಗಿದೆ. ಇಂದಿನ ಪರಿಸ್ಥಿತಿ ಅವಲೋಕಿಸಿ ಕರ್ಫ್ಯೂ ವಿಸ್ತರಣೆ ಬಗ್ಗೆ ನಿರ್ಧಾರ ಮಾಡಲಾಗುವುದು. ಹರ್ಷನ ಕೊಲೆಗೆ ಹಣ ವರ್ಗಾವಣೆ, ರೌಡಿಗಳ ಪಾತ್ರ ಸೇರಿದಂತೆ ಎಲ್ಲ ಆಯಾಮಗಳಲ್ಲೂ ತನಿಖೆ ಮಾಡಲಾಗುತ್ತಿದೆ ಎಂದರು.
ನಿನ್ನೆ(ಗುರುವಾರ) ಅಬ್ದುಲ್ ರೋಶನ್ ಮತ್ತು ಜಾಫರ್ ಸಾಧೀಕ್ನ ಬಂಧಿಸಲಾಗಿದೆ. ಅಬ್ದುಲ್ ರೋಶನ ಕೃತ್ಯಕ್ಕೆ ಸಹಾಯ ಮಾಡಿದ್ದಾನೆ. ಜಾಫರ್ ಸಾದೀಕ್ ಆರೋಪಿ ಫರಾಜ್ ತಂದೆ. ತಂದೆ ಮಗ ಫರಾಜ್ ತಪ್ಪಿಸಿ ಕೊಂಡು ಹೋಗಲು ಸಹಾಯ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ತಂದೆ ಜಾಫರ್ ಸಾದೀಕ್ ಬಂಧನ ಆಗಿದೆ. ನಿನ್ನೆ ಕೃತ್ಯಕ್ಕೆ ಬಳಸಿದ ಕಾರ್ ಸೀಜ್ ಆಗಿದೆ. ಕೃತ್ಯಕ್ಕೆ ಬಳಸಿದ ಕಾರು ಯಾರದ್ದು? ಅದರ ಮಾಲೀಕ ಯಾರು? ಎನ್ನುವ ಕುರಿತು ಪತ್ತೆ ಮಾಡಲಾಗುತ್ತಿದೆ. ಹೊರ ರಾಜ್ಯದಿಂದ ಬಂತಾ? ಅದನ್ನು ವ್ಯಾಪಾರ ಮಾಡಿದ್ದು ಯಾರು? ಎನ್ನುವ ಕುರಿತು ತನಿಖೆ ನಡೆಯುತ್ತಿದೆ ಎಂದು ವಿವರಿಸಿದರು.
ಶವಯಾತ್ರೆ ವೇಳೆ ನಡೆದ ಗಲಭೆಗೆ ಸಂಬಂಧಿಸಿದಂತೆ 35 ಕೇಸ್ ದಾಖಲಾಗಿವೆ. ಎ1 ಆರೋಪಿ ಖಾಸಿಫ್ ಮೇಲೆ 5 ಕೇಸ್ ಇದೆ. ಆಸಿಫ್ ಮೇಲೆ ಐದು ಕೇಸ್ ಇದೆ. ಎ 5 ಅಫ್ನಾನ್ ಮೇಲೆ ಎರಡು ಕೇಸ್ ಇದೆ. ಮಹ್ಮದ್ ರಿಹಾನ್ ಮೇಲೆ 3 ಕೇಸ್ ಇದೆ. ಇವರ ಮೇಲೆ ಕಳ್ಳತನ ಸೇರಿದಂತೆ ಇತರೆ ಕೇಸ್‌ಳಿವೆ. 2016-17ರಲ್ಲಿ ಹರ್ಷ ಮೇಲೆ ಕಾನೂನು ಸುವ್ಯವಸ್ಥೆ ಮತ್ತು ಧರ್ಮ ನಿಂದನೆ ಎರಡು ಕೇಸ್ ಮಾತ್ರ ಇತ್ತು ಮಾಹಿತಿ ನೀಡಿದರು.
ಹರ್ಷ ಹತ್ಯೆ (Harsha Murder) ಬೆನ್ನಲ್ಲೇ ಶಿವಮೊಗ್ಗ ಎಸ್‌ಪಿ ಲಕ್ಷ್ಮೀ ಪ್ರಸಾದ್ (SP Lakshmi Prasad) ವರ್ಗಾವಣೆಯಾಗುವ ಸಾಧ್ಯತೆ ಇದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಹರ್ಷ ಕೊಲೆ ನಂತರ ಗಲಭೆ ನಿಯಂತ್ರಿಸುವಲ್ಲ ಎಸ್‌ಪಿ ಲಕ್ಷ್ಮೀ ಪ್ರಸಾದ್ ವಿಫಲರಾಗಿದ್ದಾರೆ ಎಂದು ವರ್ಗಾವಣೆಯಾಗುವ ಮಾಡಲಾಗುತ್ತೆ ಎನ್ನಲಾಗುತ್ತಿದೆ. ಆದ್ರೆ, ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಪ್ರತಿಕ್ರಿಯಿಸಿದ್ದು, ಶಿವಮೊಗ್ಗ ಎಸ್‌ಪಿ ವರ್ಗಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನು ಈ ಪ್ರಕರಣವನ್ನು ಉನ್ನತ ಮಟ್ಟದಲ್ಲಿ ತನಿಖೆಯಾಗಬೇಕೆಂದು ಬಿಜೆಪಿ ನಾಯಕರುಗಳೇ ತಮ್ಮ ಸರ್ಕಾರಕ್ಕೆ ಒತ್ತಾಯ ಮಾಡುತ್ತಿದ್ದಾರೆ. ಅಲ್ಲದೇ ವಿವಿಧ ಜಿಲ್ಲೆ-ತಾಲೂಕುಗಳಲ್ಲಿ ಹಿಂದೂಪರ ಸಂಘಟನೆಗಳು ಪ್ರತಿಭಟನೆ ಮಾಡುತ್ತಿದ್ದು, ಹರ್ಷ ಹತ್ಯೆಗೆ ಆರೋಪಿಗಳಿಗೆ ಕಠಿಣ ಶಿಕ್ಷಣ ನೀಡಬೇಕು. ಹಾಗೇ ಎಸ್‌ಡಿಪಿಐ ಹಾಗೂ ಪಿಎಫ್‌ಐ ಸಂಘಟನೆಗಳನ್ನ ನಿಷೇಧ ಮಾಡಬೇಕೆಂದು ಒತ್ತಾಯಿಸುತ್ತಿವೆ.