Vijayapura: ಪಿಎಸ್‌ಐ ಪುತ್ರನ ಹತ್ಯೆ ಪ್ರಕರಣ: ನಾಲ್ವರು ಆರೋಪಿಗಳ ಬಂಧನ

By Kannadaprabha News  |  First Published Feb 25, 2022, 7:57 AM IST

*   ವಿಜಯಪುರ ನಗರದ ರೇಡಿಯೋ ಕೇಂದ್ರದ ಬಳಿ ನಡೆದಿದ್ದ ಭೀಕರ ಹತ್ಯೆ 
*   ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು 
*   ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿ
 


ವಿಜಯಪುರ(ಫೆ.25):  ಪಿಎಸ್‌ಐ ಪುತ್ರನ ಹತ್ಯೆ(Murder) ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು(Police) ನಾಲ್ವರು ಆರೋಪಿಗಳನ್ನು ಗುರುವಾರ ಬಂಧಿಸಿದ್ದಾರೆ.

ಪಾಲಿಕೆ ಮಾಜಿ ಸದಸ್ಯ ರೌಫ ಶೇಖ, ರೌಫ ಪುತ್ರ ಆತೀಫ್‌ ಶೇಖ, ವಿಲಾಸ ರಾಠೋಡ, ಅನಿಲ ಚವ್ಹಾಣ ಬಂಧಿತ ಆರೋಪಿಗಳು. ಪಾಲಿಕೆ ಮಾಜಿ ಸದಸ್ಯ ರೌಫ ಶೇಖ ಅವರ ಪುತ್ರಿ ಅತೀಕಾಳನ್ನು ಗಾಂಧಿ ಚೌಕ ಕ್ರೈಂ ಪಿಎಸ್‌ಐ ರಿಯಾಜ ಕೂಡಗಿ ಅವರ ಪುತ್ರ ಮುಸ್ತಕಿನ್‌ ಕೂಡಗಿ ಪ್ರೇಮಿಸಿ ಮದುವೆಯಾಗಿದ್ದ. ಈ ಸಿಟ್ಟಿನಿಂದಾಗಿ ಫೆ.15ರಂದು ವಿಜಯಪುರ(Vijayapura) ನಗರದ ರೇಡಿಯೋ ಕೇಂದ್ರದ ಬಳಿ ಮುಸ್ತಕಿನ್‌ ಕೂಡಗಿ ಭೀಕರ ಹತ್ಯೆ ನಡೆದಿತ್ತು. ಇದು ವಿಜಯಪುರ ನಗರದಲ್ಲಿ ಭಾರಿ ಸಂಚಲನ ಮೂಡಿಸಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ(Arrest) ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ. ಆನಂದಕುಮಾರ ಅವರು ಮಾಹಿತಿ ನೀಡಿದ್ದಾರೆ.

Tap to resize

Latest Videos

Bengaluru: ತೃತೀಯ ಲಿಂಗಿ ಜತೆ ಸ್ನೇಹಕ್ಕೆ ಆಕ್ಷೇಪಿಸಿದ್ದಕ್ಕೆ ಸ್ನೇಹಿತನ ಹತ್ಯೆಗೆ ಯತ್ನ

8 ಗಂಟೆಯಲ್ಲೇ ಐವರು ಅಪಹರಣಕಾರರ ಹೆಡೆಮುರಿ ಕಟ್ಟಿದ ಪೊಲೀಸರು

ಇಂಡಿ:  ಬೇಕರಿ ಮಾಲೀಕನನ್ನು ಅಪಹರಣ(Kidnap) ಮಾಡಿ 20 ಲಕ್ಷ ಹಣದ ಬೇಡಿಕೆ ಇಟ್ಟಿದ್ದ ಆರೋಪಿಗಳನ್ನು(Accused) ಕೇವಲ ಎಂಟು ಗಂಟೆಯೊಳಗೆ ಬಂಧಿಸಿ ಬೇಕರಿ ಮಾಲೀಕನನ್ನು ರಕ್ಷಣೆ ಮಾಡಲಾಗಿದೆ ಎಂದು ಎಸ್ಪಿ ಎಚ್‌.ಡಿ. ಆನಂದಕುಮಾರ ಹೇಳಿದರು.

ಫೆ.22 ರಂದು ಅಗರಖೇಡದ ಷಣ್ಮುಖ ಕಾಂಬಳೆ (24), ರಿಯಾಜ ಮುಜಾವರ (25), ದೇವರನಿಂಬರಗಿಯ ಉತ್ತಮ ಹೋಕುಳೆ (35), ದಿಲೀಪ ಗಾಡಗೆ (40), ಚಡಚಣದ ರಾಮಚಂದ್ರ ಅಪ್ಪು ಜಾಧವ ಬಂಧಿತ(Arrest) ಆರೋಪಿಗಳು. ಈ ಕುರಿತು ಮಂಗಳವಾರ ಪಟ್ಟಣದ ಇಂಡಿ ಶಹರ ಪೊಲೀಸ್‌ ಠಾಣೆಯ ಆವರಣದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಗೂಂಡಾಗಿರಿ ಕಾನೂನು ಬಾಹಿರ ಚಟುವಟಿಕೆಗಳನ್ನು(Illegal Activities) ತೊಡಗುವವರನ್ನು ಪೊಲೀಸರು ಸುಮ್ಮನೆ ಬಿಡುವುದಿಲ್ಲ. ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗುವವರ ವಿರುದ್ಧ ಕ್ರಮ ಖಚಿತ. ಕಿಡ್ನಾಪ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 5 ಜನ ಆರೋಪಿಗಳಬನ್ನು ಬಂಧಿಸಲಾಗಿದೆ ಎಂದು ಹೇಳಿದರು.

ಘಟನೆ ವಿವರ:

ಪಟ್ಟಣದಲ್ಲಿ ಬೇಕರಿ ಅಂಗಡಿ ಇಟ್ಟುಕೊಂಡಿದ್ದ ಮಾನಸಿಂಗ್‌ ಎಂಬುವವರನ್ನು ಸೋಮವಾರ ಸಂಜೆ 7 ಗಂಟೆ ಸುಮಾರಿಗೆ ವಿಜಯಪುರ ರಸ್ತೆಯ ಭಾರತ ಗ್ಯಾಸ್‌ ಏಜೆನ್ಸಿ ಬಳಿ ಕಾರ್‌ನಲ್ಲಿ ಹಾಕಿಕೊಂಡು ಹೋಗಿ 20 ಲಕ್ಷ ಹಣಕ್ಕೆ(Money) ಬೇಡಿಕೆ ಇಟ್ಟಿದ್ದರು. ಕಿಡ್ನಾಪ್‌ ಮಾಡಿ ಬೇಕರಿ ಮಾಲೀಕನ ಕೈ ಹಾಗೂ ಕಾಲಿಗೆ ಚಾಕುವಿನಿಂದ ಚುಚ್ಚಿ ಗಾಯಗೊಳಿಸಿದ್ದಾರೆ. ಇಂಡಿ ಪೊಲೀಸರು(Police) ಮಿಂಚಿನ ಕಾರ್ಯಾಚರಣೆ ನಡೆಸಿದ್ದರ ಪರಿಣಾಮ ಲೋಣಿ ಕ್ರಾಸ್‌ ಬಳಿ ಆರೋಪಿತರ ಕಾರು ಬೆನ್ನಟ್ಟಿ ಕಾರು ಸಮೇತ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.

Bengaluru Crime: ಡ್ರಗ್ಸ್‌ ದಂಧೆಯಲ್ಲಿ ತೊಡಗಿದ್ದ ನೈಜಿರಿಯನ್‌ ಪ್ರಜೆ ಬಂಧನ

ಅಪಹರಣ ಆಗಿರುವ ಮಾನಸಿಂಗ್‌ನ ಪತ್ನಿ ದೂರು ಸಲ್ಲಿಸಿದ್ದರು. ಆಕೆಗೆ ಪತಿ ಮಾನಸಿಂಗ್‌ ಕರೆ ಮಾಡಿ, ಭಾರತ ಗ್ಯಾಸ್‌ ಏಜೆನ್ಸಿ ಬಳಿ ಕೆಲವರು ನನ್ನನ್ನು ಒಂದು ಕಾರ್‌ನಲ್ಲಿ ಕಿಡ್ನಾಪ್‌ ಮಾಡಿದ್ದಾರೆ. ಅವರು 20 ಲಕ್ಷ ಕೇಳುತ್ತಿದ್ದಾರೆ. ಇಲ್ಲವಾದಲ್ಲಿ ಅವರು ನನಗೆ ಜೀವ ಸಹಿತ ಬಿಡಲ್ಲ ಅಂತಿದ್ದಾರೆ ಎಂದಿದ್ದಾನೆ.

ಆಗ ಅಲ್ಲಿದ್ದ ಬೇರೊಬ್ಬರು ಆ ಫೋನ್‌ ತೆಗೆದುಕೊಂಡು ನಾವು ಶಶಿ ಮುಂಡೆವಾಡಿ ಕಡೆಯವರು ಇದ್ದೀವಿ. ನಿಮ್ಮ ಗಂಡನನ್ನು ಕಿಡ್ನಾಪ್‌ ಮಾಡಿದ್ದೇವೆ. ನಮ್ಮ ಜೊತೆ ಕಾರಿನಲ್ಲಿ ಹಿಡಿದುಕೊಂಡು ಬಂದಿದ್ದೇವೆ. 20 ಲಕ್ಷ ತಂದು ಕೊಟ್ಟರೆ ನಿಮ್ಮ ಗಂಡನಿಗೆ ಬಿಡ್ತಿವಿ. ಇಲ್ಲವಾದರೆ ಅವನ ಕೊಲೆ ಮಾಡ್ತಿವಿ ಅಂತ ಹೇಳಿದ್ದಾರೆ ಎಂದು ಇಂಡಿ ಶಹರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು.  
 

click me!