ಹೆಂಡತಿ ತಂಗಿಯನ್ನೇ ಗರ್ಭಿಣಿಯನ್ನಾಗಿಸಿದ ಭೂಪ, ಕಾಮುಕನ ನೀಚ ಕೃತ್ಯ ಬಯಲು

Published : Feb 06, 2022, 02:40 PM ISTUpdated : Feb 06, 2022, 02:41 PM IST
ಹೆಂಡತಿ ತಂಗಿಯನ್ನೇ ಗರ್ಭಿಣಿಯನ್ನಾಗಿಸಿದ  ಭೂಪ, ಕಾಮುಕನ ನೀಚ ಕೃತ್ಯ ಬಯಲು

ಸಾರಾಂಶ

* ಹೆಂಡತಿ ತಂಗಿಯನ್ನೇ ಗರ್ಭಿಣಿಯನ್ನಾಗಿಸಿದ  ಭೂಪ * ಮಗು ಸತ್ತ ಬಳಿಕ ಕೃತ್ಯ ಬಯಲು * ಆರೋಪಿ ಸದ್ಯ ಪೊಲೀಸರ ಅತಿಥಿ

ಶಿವಮೊಗ್ಗ, (ಫೆ.06): ಪತ್ನಿಯ ತಂಗಿ ಜೊತೆ ದೈಹಿಕ ಸಂಪರ್ಕ ಬೆಳೆಸಿ, ಆಕೆಯನ್ನು ಗರ್ಭಿಣಿಯನ್ನಾಗಿಸಿದ ಆರೋಪಿ ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ.

ಶಿವಮೊಗ್ಗ(Shivamogga) ತಾಲೂಕು ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮವೊಂದರಲ್ಲಿ ಪ್ರವೀಣ ಎಂಬಾತನ್ನು ಪೊಲೀಸರು ಬಂಧಿಸಿದ್ದಾರೆ.

Shivamogga Rape Case: 4 ವರ್ಷಗಳಿಂದ ಮಗಳ ಮೇಲೆಯೇ ರೇಪ್‌ ಮಾಡಿದ ಕಾಮುಕ ತಂದೆ

ಪ್ರವೀಣ ಹೋಟೆಲ್ ನಡೆಸುತ್ತಿದ್ದನು. ಮದುವೆಯಾದ ಬಳಿಕ ತನ್ನ ಹೆಂಡತಿಯ ತಂಗಿಯನ್ನು ತನ್ನ ಮನೆಯಲ್ಲಿ ಇಟ್ಟುಕೊಂಡು ಓದಿಸುತ್ತಿದ್ದನು. ಕಳೆದ ಐದಾರು ವರ್ಷಗಳಿಂದ ಮನೆಯಲ್ಲೇ ಇದ್ದ ತನ್ನ ಪತ್ನಿ ತಂಗಿಯ ಮೇಲೆ ಕಣ್ಣಿಟ್ಟಿದ್ದ ಪ್ರವೀಣ ಬಲವಂತದಿಂದ ಕಳೆದ ಒಂದು ವರ್ಷದಿಂದ ದೈಹಿಕ‌ ಸಂಪರ್ಕ ಬೆಳೆಸಿದ್ದಾನೆ.

ಮಗುವಿನ ಸಾವು ಪ್ರವೀಣ ಕೃತ್ಯ ಬಯಲು:
ಕಳೆದ ಐದಾರು ವರ್ಷಗಳಿಂದ ಮನೆಯಲ್ಲೇ ಇದ್ದ ತನ್ನ ಪತ್ನಿ ತಂಗಿಯ ಮೇಲೆ ಕಣ್ಣಿಟ್ಟಿದ್ದ ಪ್ರವೀಣ ಬಲವಂತದಿಂದ ಕಳೆದ ಒಂದು ವರ್ಷದಿಂದ ದೈಹಿಕ‌ ಸಂಪರ್ಕ ಬೆಳೆಸಿದ್ದ. ಆಕೆ ಹೊಟ್ಟೆ ನೋವು ಅಂತ ಹೇಳಿದಾಗ ಪೋಷಕರು ಆಸ್ಪತ್ರೆಗೆ ಕರೆದು‌ಕೊಂಡು ಹೋದಾಗ ಐದು ತಿಂಗಳ ಗರ್ಭಿಣಿ‌ ಎಂಬುದು ಗೊತ್ತಾಗಿತ್ತು. ಇದರಿಂದ ಹೆದರಿದ ಪೋಷಕರು ಆಕೆಯನ್ನುತಮ್ಮ‌ ಮನೆಗೆ ಕರೆದು‌ಕೊಂಡು ಹೋಗಿದ್ದಾರೆ. ನಂತರ ಎಂಟು ತಿಂಗಳಿಗೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆ ಆಗುತ್ತದೆ. ಅವಧಿಗೂ ಮುನ್ನ ಜನಿಸಿದ ಮಗುವನ್ನು ಖಾಸಗಿ ಆಸ್ಪತ್ರೆಯಿಂದ ಮೆಗ್ಗಾನ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗುತ್ತದೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಮಗು ಸಾವನ್ನಪ್ಪಿದೆ.

ಆಸ್ಪತ್ರೆಗೆ ದಾಖಲಿಸಿದ ವೇಳೆ ಅಪ್ತಾಪ್ತೆಯ ವಯಸ್ಸು 19 ಎಂದು ದಾಖಲಿಸಲಾಗಿರುತ್ತದೆ. ಆಧಾರ ಸಂಖ್ಯೆಯನ್ನು ತಪ್ಪಾಗಿ ನೀಡಲಾಗಿರುತ್ತದೆ. ಆಸ್ಪತ್ರೆಯಲ್ಲಿ ಕೇವಲ ಒಂದೇ ದಿನಕ್ಕೆ ಮಗು ಸಾವನ್ನಪ್ಪುತ್ತದೆ. ಬಳಿಕ ಅಪ್ತಾಪ್ತೆ ಜೊತೆ ಪೋಷಕರು ಅಲ್ಲಿಂದ ಪರಾರಿಯಾಗುತ್ತಾರೆ. ಈ ವಿಷಯ ಪೊಲೀಸರಿಗೆ ತಿಳಿಯುತ್ತದೆ. ಆದರೆ ಆಸ್ಪತ್ರೆಯಲ್ಲಿ ತಪ್ಪು ವಿಳಾಸ ನೀಡಿರುತ್ತಾರೆ. ಆದ್ರೂ ಪೊಲೀಸರು ವಿಳಾಸ ಪತ್ತೆ ಹಚ್ಚಿ ಸತ್ಯಾಂಶ ಬಯಲು ಮಾಡಿದ್ದಾರೆ. ಪ್ರವೀಣನ ವಿರುದ್ಧ ಕೇಸು ದಾಖಲಿಸಿ ಬಂಧಿಸಲಾಗಿದೆ.

4 ವರ್ಷಗಳಿಂದ ಮಗಳ ಮೇಲೆಯೇ ರೇಪ್‌ ಮಾಡಿದ ಕಾಮುಕ ತಂದೆ
ತಂದೆ-ಮಗಳ ಸಂಬಂಧ ಬೆಲೆ ಕಟ್ಟಲಾಗದ ಸಂಬಂಧ. ಆದರೆ ಇಲ್ಲೊಬ್ಬ ಪಾಪಿ ತಂದೆ ಹೆತ್ತ ಮಗಳ ಮೇಲೆಯೇ ನಿರಂತರವಾಗಿ ಅತ್ಯಾಚಾರವೆಸಗಿದ(Rape) ಘಟನೆ ಶಿವಮೊಗ್ಗ(Shivamogga) ತಾಲೂಕಿನ ಗೊಂವಿದಪುರ ಗ್ರಾಮದಲ್ಲಿ ನಡೆದಿದೆ. ಒಂದಲ್ಲ ಎರಡಲ್ಲ, ಬರೋಬ್ಬರಿ ನಾಲ್ಕು ವರ್ಷಗಳ ಕಾಲ ತನ್ನ ಮಗಳ ಮೇಲೆಯೇ ಕಾಮುಕ ತಂದೆ ಅತ್ಯಾಚಾರ ಎಸಗಿದ್ದನು ಎಂದು ತಿಳಿದು ಬಂದಿದೆ. 

ಇಂತಹ ಅಮಾನವೀಯ ಕೃತ್ಯವೆಸಗಿದ ದುಷ್ಟ ತಂದೆಯ ಹೆಸರು ಗೋಣಪ್ಪ (45). ಈತ ಮೂಲತಃ ಹಾವೇರಿ(Haveri) ಜಿಲ್ಲೆಯ ಹಿರೆಕೇರೂರು ತಾಲೂಕಿನ ಲಿಂಗಾಪುರ ಗ್ರಾಮದವನಾಗಿದ್ದಾನೆ. ಶುಂಠಿ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಈತನಿಗೆ ಒಬ್ಬಳು ಮಗಳು, ಮತ್ತಿಬ್ಬರು ಗಂಡು ಮಕ್ಕಳಿವೆ. 

ಹೆತ್ತಮ್ಮನಿಗೆ ಹೇಳಲಾಗದೇ ತಂದೆಯ ಅಸಹ್ಯಕರ ವರ್ತನೆಯನ್ನು ಮಗಳು(Girl) ವರ್ಷಗಳ ಕಾಲ ಸಹಿಸಿಕೊಂಡಿದ್ದಳು. ಮನೆಯಲ್ಲಿಯೇ ತನಗೆ ರಕ್ಷಣೆ ಇಲ್ಲದೇ ಅಪ್ರಾಪ್ತ ಬಾಲಕಿ ಸಂಕಟ ಪಟ್ಟಿದ್ದಳು. ಕೊನೆಗೊಂದು ದಿನ ತಾಯಿಗೆ ವಿಷಯ ತಿಳಿದರೂ ಎನೂ ಮಾಡಲಾಗದೇ ಅಸಹಾಯಕ ಸ್ಥಿತಿ ಇತ್ತು. ಗಂಡನ ದುವರ್ತನೆಯನ್ನು ತಡೆಗಟ್ಟಲಾಗದೇ ಮಗಳನ್ನು ಸಂಕಷ್ಟದಿಂದ ಪಾರು ಮಾಡಲಾಗದೇ ತಾಯಿ ಕಣ್ಣೀರು ಹೇಳ ತೀರದಾಗಿತ್ತು. 

ತಂದೆಯಿಂದ ಅತ್ಯಾಚಾರಕ್ಕೊಳಗಾಗುತ್ತಿದ್ದ ಮಗಳನ್ನು ಪಾರು ಮಾಡಲು ತಾಯಿ ಪ್ಲಾನ್‌ವೊಂದನ್ನು ಮಾಡಿದ್ದಳು. ಮಗಳಿಗೆ ಗಂಡೊಂದನ್ನು ನೋಡಿ ಕಳೆದ 15 ದಿನಗಳ ಹಿಂದ ಎಂಗೇಜ್‌ಮೆಂಟ್ ಮಾಡಿದ್ದಳು. ಈಗಷ್ಟೇ ಮಗಳ ವಯಸ್ಸು 18 ತುಂಬಲಿರುವುದರಿಂದ ಮದುವೆಗೆ ಸಿದ್ಧತೆ ನಡೆಸಿದ್ದಳು. ಯಾವಾಗ ಎಂಗೇಜ್ ಮೆಂಟ್ ಆಯ್ತೋ ಪಾಪಿ ತಂದೆ ಕೆರಳಿದ್ದ, ಅತನನ್ನು ಮದುವೆಯಾದರೆ ನಿನ್ನನ್ನು ಬಿಡೋಲ್ಲ ಎಂದು ಮಗಳಿಗೆ ಹೆದರಿಸಿದ್ದನಂತೆ. ತಂದೆಯ ದುಷ್ಟತನದ ವರ್ತನೆಯಿಂದ ಮಗಳು ಕಣ್ಣೀರಿಟ್ಟಿದ್ದಳು. ಮಗಳನ್ನು ಬಿಡೊಲ್ಲ ಎಂದು ಗೊತ್ತಾದ ತಾಯಿ ಕೊನೆಗೊಂದು ಕಠಿಣ ನಿರ್ಧಾರ ಕೈಗೊಂಡಿದ್ದಳು. ಮಗಳೊಂದಿಗೆ ತನ್ನಿಬ್ಬರು ಗಂಡು ಮಕ್ಕಳನ್ನು ಕರೆದುಕೊಂಡು ತವರು ಮನೆ ಶಿವಮೊಗ್ಗಕ್ಕೆ ಬಂದಿದ್ದಳು. ಆದರೆ ಹೆತ್ತಮ್ಮನ ಮನೆಗೆ ಹೋಗದ ತಾಯಿ ಮಕ್ಕಳೊಂದಿಗೆ ಅತ್ಮಹತ್ಯೆ(Suicide) ಮಾಡಿಕೊಳ್ಳಲು ನಿರ್ದರಿಸಿ ಬಿಟ್ಟಿದ್ದಳು. 

ಹನಿ ಟ್ರ್ಯಾಪ್
ಶಿರಸಿಯಲ್ಲಿ ಹನಿ ಟ್ರ್ಯಾಪ್ (Honeytrap) ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು (Arrest) ಬಂಧಿಸಲಾಗಿದೆ.  ಹನಿಟ್ರ್ಯಾಪ್ ಮಾಡಿ ಸಂತ್ರಸ್ತನಿಂದ 15 ಲಕ್ಷ ರೂ. ಬೇಡಿಕೆಯಿಟ್ಟಿದ್ದ(Blackmail) ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಮಾಹಿತಿ ಗೊತ್ತಾಗಿ 24 ಗಂಟೆಗಳ ಒಳಗೆ ಆರೋಪಿಗಳನ್ನು ಬಂಧಿಸಿ ಜೈಲಿಗೆ ಅಟ್ಟಲಾಗಿದೆ.  ಶಿರಸಿ (Sirsi)ಉಂಚಳ್ಳಿಯ ಅಜಿತ್ ಶ್ರೀಕಾಂತ್ ನಾಡಿಗ್ (25), ಬನವಾಸಿ ರಸ್ತೆಯ ಗೊಲಕೇರಿ ಓಣಿಯ ಧನುಷ್ಯ ಕುಮಾರ್ ಯಾನೆ ದಿಲೀಪ್ ಕುಮಾರ್ ಶೆಟ್ಟಿ (25) ಹಾಗೂ ಶಿವಮೊಗ್ಗ (Shivamogga)ಗೋಪಾಳ ರಂಗನಾಥ್ ಬಡಾವಣೆಯ ಪದ್ಮಜಾ ಡಿ.ಎನ್. (50) ಬಂಧಿತ ಆರೋಪಿಗಳು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕ್ಯಾಸ್ಟ್ರೋಲ್ ಬ್ರಾಂಡ್‌ನ ನಕಲಿ ಎಂಜಿನ್ ಆಯಿಲ್ ಉತ್ಪಾದನೆ ಮಾಡುತ್ತಿದ್ದ ಘಟಕದ ಮೇಲೆ ದಾಳಿ
ಕೋಲಾರ: ಅಪ್ಪ- ಅಮ್ಮನ ವಿಚ್ಚೇದನಕ್ಕೆ ಮನನೊಂದು 26 ವರ್ಷದ ಪುತ್ರ ಆತ್ಮ*ಹತ್ಯೆ!