* ಒಂದೇ ಕುಟುಂಬದ ಐವರ ಕೊಲೆಗೈದ ದುಷ್ಕರ್ಮಿಗಳು
* ಮಹಿಳೆಯೊಂದಿಗೆ ನಾಲ್ವರು ಮಕ್ಕಳನ್ನು ಕೊಚ್ಚಿ ಕೊಂದ್ರು
* ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಗ್ರಾಮದಲ್ಲಿ ಘಟನೆ
ಮಂಡ್ಯ, (ಫೆ.06): ಒಂದೇ ಕುಟುಂಬದ (Family) ಐವರನ್ನು ಕೊಚ್ಚಿ ಕೊಲೆ(Murder) ಮಾಡಿರುವ ಘಟನೆ ಮಂಡ್ಯ (Mandya) ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಗ್ರಾಮದಲ್ಲಿ ನಡೆದಿದೆ.
ದುಷ್ಕರ್ಮಿಗಳು ಮಾರಕಾಸ್ತ್ರದಿಂದ ಕೊಚ್ಚಿ ನಾಲ್ವರು ಮಕ್ಕಳು, ಮಹಿಳೆಯನ್ನು ಹತ್ಯೆಗೈದಿದ್ದಾರೆ. ಲಕ್ಷ್ಮೀ(26), ರಾಜ್(12), ಕೋಮಲ್(7), ಕುನಾಲ್(4), ಗೋವಿಂದ(8) ಕೊಲೆಯಾದವರು. ಸ್ಥಳಕ್ಕೆ ಕೆಆರ್‌ಎಸ್ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಭೀಕರ ಕೃತ್ಯಕ್ಕೆ ಕೆಆರ್‌ಎಸ್ ಗ್ರಾಮ ಬೆಚ್ಚಿಬಿದ್ದಿದ್ದು, ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಆರೈಕೆಗೆ ಬಿಟ್ಟಿದ್ದ ಮಹಿಳೆಯಿಂದಲೇ ಮಗುವಿನ ಮೇಲೆ ಬರ್ಬರ ಹಲ್ಲೆ: ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ
ಲಕ್ಷ್ಮೀ ಪತಿ ಗಂಗಾರಾಮ್ 10 ದಿನದ ಹಿಂದೆ ವ್ಯಾಪಾರಕ್ಕೆ ಹೋಗಿದ್ದರು. ಗಂಗಾರಾಮ್ ಪ್ಲಾಸ್ಟಿಕ್ ಹೂವು ಸೇರಿ ಹಲವು ವಸ್ತುಗಳ ಮಾರಾಟ ಮಾಡುತ್ತಿದ್ದರು. ಒಮ್ಮೆ ವ್ಯಾಪಾರಕ್ಕೆ ಹೋದರೆ 15 ದಿನ, 1 ತಿಂಗಳು ಬಿಟ್ಟು ಬರುತ್ತಿದ್ದರು. ಗಂಗಾರಾಮ್ ಅಣ್ಣ ಗಣೇಶ್ ಪತ್ನಿ ಚಂಪಾಡಿ ಸಹಾ ವ್ಯಾಪಾರಕ್ಕೆ ತೆರಳಿದ್ದರು. ಇವರೆಲ್ಲಾ ಒಟ್ಟಿಗೆ ವಾಸವಾಗಿದ್ದರು. ಮಧ್ಯರಾತ್ರಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಬೆಳಗ್ಗೆ ಈ ವಿಚಾರ ಬೆಳಕಿಗೆ ಬಂದಿದೆ.
ಘಟನಾ ಸ್ಥಳಕ್ಕೆ ಮಂಡ್ಯ ಎಸ್ಪಿಎನ್ ಯತೀಶ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಡಿವೈಎಸ್‌ಪಿ ಸಂದೇಶ್ ಕುಮಾರ್ ಸೇರಿ ಹಲವು ಹಿರಿಯ ಅಧಿಕಾರಿಗಳು ಇದ್ದರು. ಶ್ವಾನದಳ, ಬೆರಳಚ್ಚು ತಜ್ಞರು ಸ್ಥಳ ಪರಿಶೀಲನೆ ಮಾಡಿದ್ದಾರೆ.
ಕೋಟಿಗಟ್ಟಲೇ ಆಸ್ತಿಯ ಒಡತಿ ಬೀದಿಗೆ
ಮಂಡ್ಯ : ಈ ವೃದ್ಧೆ ಕೋಟಿ ಕೋಟಿ ಆಸ್ತಿಯ ಒಡತಿ. ಆದ್ರೆ, ದತ್ತು ಪುತ್ರನ ಸೊಸೆ ಹಾಗೂ ಮೊಮ್ಮಕ್ಕಳ ಆಸ್ತಿ ದುರಾಸೆಗೆ ಬೀದಿಗೆ ಬಿದ್ದಿದ್ದಾಳೆ. ವಾಸಕ್ಕೆ ನೆಲೆಯೂ ಸಿಗದೆ ಮನೆ ಬಾಗಿಲಲ್ಲೇ ಪರಿತಪಿಸುತ್ತಿದ್ದಾಳೆ.
ನೆಲೆಯಿಲ್ಲದೇ ಪರಿತಪ್ಪಿಸುತ್ತಿರುವ ವೃದ್ಧೆಯ ಹೆಸರು ನಿಂಗಮ್ಮ. ಇವು ತಾಲೂಕಿನ ಕೋಣನಹಳ್ಳಿಯ ನಿವಾಸಿ. ಗ್ರಾಮದ ದಿ.ಬೋರೆಗೌಡರ ಎಂಬುವರು ಪತ್ನಿ. ಈ ಕೋಟ್ಯಧಿಪತಿ ದಂಪತಿಗೆ ಮಕ್ಕಳಿರಲಿಲ್ಲ.ಇದರಿಂದ ತಮ್ಮ ಸಂಬಂಧಿಯೇ ಆದ ಸಿದ್ದರಾಮೇಗೌಡನನ್ನು 16 ವರ್ಷವಿದ್ದಾಗಲೇ ದತ್ತು ಪಡೆದು ಸ್ವಂತ ಮಗನಂತೆ ಸಾಕಿದ್ದರು. ಹತ್ತಾರು ಎಕರೆ ಜಮೀನು, ಲಾಡ್ಜ್ಗಳು, ಏಳೆಂಟು ಮನೆಗಳಿವೆ. ಒಟ್ಟು ಆಸ್ತಿಯಲ್ಲಿ ಒಂದಷ್ಟು ಆಸ್ತಿಯನ್ನು ಭಾಗ ಮಾಡಿ ವಿಲ್ ಕೂಡ ಮಾಡಿದ್ದಾರೆ.
ಸದ್ಯ ವೃದ್ಧೆ ನಿಂಗಮ್ಮನ ಪತಿ ಬೋರೇಗೌಡ ಹಾಗೂ ದತ್ತು ಮಗ ಸಿದ್ದರಾಮೇಗೌಡ ಸಾವನ್ನಪ್ಪಿದ್ದಾರೆ. ಇದೀಗ ಬೋರೇಗೌಡರ ಸಂಪೂರ್ಣ ಆಸ್ತಿ ನನಗೆ ಸಲ್ಲಬೇಕು ಎಂದು ಪತ್ರಕ್ಕೆ ಸಹಿ ಹಾಕಿ ಎಂದು ಸಿದ್ದರಾಮೇಗೌಡನ ಪತ್ನಿ ನಾಗಮಣಿ, ಮೊಮ್ಮಕ್ಕಳಾದ ಮನು, ರಮ್ಯ, ಅಮೃತಾ, ಮನು ಪತ್ನಿ ರಾಜೇಶ್ವರಿ ಎಂಬುವರು ಕಿರುಕುಳ ನೀಡುತ್ತಿದ್ದಾರೆ ಅಂತಾ ಈ ಅಜ್ಜಿ ಆರೋಪಿಸಿದೆ.