ಶಿರಡೋಣ ಅರಣ್ಯದಲ್ಲಿ ಮರ್ಡರ್‌ ಪ್ರಕರಣ: ಕಾಣೆಯಾಗಿದ್ದವನೇ ತನ್ನ ಗೆಳೆಯನ ಕೊಲೆಗಾರÜನಾಗಿದ್ದ!

By Kannadaprabha News  |  First Published Jul 7, 2023, 5:15 AM IST

ಕಮಲಾಪುರ ತಾಲೂಕಿನ ಶಿರಡೋಣ ಅರಣ್ಯದಲ್ಲಿನ ಮರ್ಡರ್‌ ರಹಸ್ಯ ಭೇದಿಸಿದ ಪೊಲೀಸರು. ಶಿರಡೋಣ್‌ಗೆ ಬಾರದ ಸತೀಶನ ಬೆನ್ನು ಬಿದ್ದು ವಿಚಾರಿಸಿದಾಗ ಅವ್ನೇ ಕೊಲೆಗಡುಕನೆಂದು ಸಾಬೀತು ; ಕೊಲೆ ಮಾಡಿ ಶವ ಬ್ಯಾರಲ್‌ನಲ್ಲಿ ಸಾಗಿಸಿದ್ದ, ಶಂಕೆ ಬಾರದಂತೆ ಮನೆಶಿಫ್‌್ಟಮಾಡೋ ನಾಟಕ ಆಡಿದ್ದ!


ಶೇಷಮೂರ್ತಿ ಅವಧಾನಿ

 ಕಲಬುರಗಿ (ಜು.7) :  ಕಲಬುರಗಿ ಪೊಲೀಸರು ಸಂಕೀರ್ಣ ಕೊಲೆ ಪ್ರಕರಣ ಒಂದನ್ನು ಭೇದಿಸಿ ಹಂತಕರ ಹೆಡಮುರಿ ಕಟ್ಟಿಜನಮನ ಸೆಳೆದಿದ್ದಾರೆ.ಕಳೆದ ಮೇ 31ರಂದು ಕಮಲಾಪುರ ತಾಲೂಕಿನ ಮಹಾಗಾಂವ್‌ ಠಾಣಾ ವ್ಯಾಪ್ತಿಯ ಶಿರಡೋಣ ಅರಣ್ಯದಲ್ಲಿ ನೆಲದಿಂದ ವ್ಯಕ್ತಿಯೊಬ್ಬನ ಕೈ ಹೊರಬಂದು ಬಿದ್ದಿರೋದು ಕಂಡು ಜನ ಗಾಬರಿಯಾಗಿದ್ದರು. ಅದು ಬರೀ ತುಂಡಾದ ಕೈ ಅಷ್ಟೇ ಅಲ್ಲ, ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿ ಯಾರೋ ಕೊಲೆ ಮಾಡಿದ ದೇಹ ತಂದು ಮಣ್ಣಲ್ಲಿ ಮುಚ್ಚಿ ಹೋಗಿದ್ದಾರೆಂದು ಮಹಾಗಾಂವ್‌ ಪೊಲೀಸರ ಪರಿಶೀಲನೆಯಿಂದ ಗೊತ್ತಾಗಿತ್ತು.

Latest Videos

undefined

ಶವದ ವಾಸನೆಯಿಂದಾಗಿ ಪ್ರಾಣಿಗಳು ಕೆದರಿ ಕೈ ಹೊರಬಂದಿತ್ತು, ಪರಿಶೀಲನೆ ನಡೆಸಿದಾಗ ಗುರುತು ಸಿಗದಷ್ಟುಹಾಳಾದ ಮಾನವ ದೇಹ ಕಂಡಿತ್ತು. ಈ ಪ್ರಕರಣದಲ್ಲಿ ಕೊಲೆಯಾದವ, ಕೊಲೆಗಡುಕರ ಪತ್ತೆಗೆ ಪೊಲೀಸ್‌ ಮೇಲೆ ಯಾವುದೇ ಒತ್ತಡ ಇರಲಿಲ್ಲ. ಆದಾಗ್ಯೂ, ಪೊಲೀಸರು ವೃತ್ತಿ ಜಾಣ್ಮೆ ಮೇರೆದು ಕೊಲೆಯಾದ ವ್ಯಕ್ತಿಯನ್ನ ಪತ್ತೆ ಮಾಡುವುದರ ಜೊತೆಗೆ ಕೊಲೆಗಾರರನ್ನು ಕಂಬಿ ಎಣಿಸುವಂತೆ ಮಾಡಿದ್ದಾರೆ.ಈ ಪ್ರಕರಣದಲ್ಲಿ ಹಂತಕ ಶಿರಡೋಣ ಸತೀಶ ಮೊದಲು ಸಿಕ್ಕು ನಂತರ ಕೊಲೆಯಾದ ವ್ಯಕ್ತಿ ಕಲಬುರಗಿ ಆಶ್ರಯ ಕಾಲೋನಿ ರಾಜು ಎಂದು ಗೊತ್ತಾಗಿದೆ. ಕೊಲೆಯಾದ ವ್ಯಕ್ತಿಯನ್ನು ಪತ್ತೆ ಮಾಡಲು ಹೋದಾಗ ಪೊಲೀಸರಿಗೆ ಮೊದಲೇ ಕೊಲೆ ಆರೋಪಿ ಸಿಕ್ಕಿಬಿದ್ದು, ನಂತರ ಕೊಲೆಯಾದ ವ್ಯಕ್ತಿಯ ಮಾಹಿತಿ ಗೊತ್ತಾಗಿ ಗಮನ ಸೆಳೆದಿದೆ.

ಪತ್ನಿ ಬಗ್ಗೆ ಅವಾಚ್ಯ ಮಾತು: ಅಣ್ಣನನ್ನೇ ರಾಡ್‌ನಿಂದ ಹೊಡೆದು ಕೊಂದ ತಮ್ಮ

ಮೊಬೈಲ್‌ ಟವರ್‌ ಲೊಕೇಷನ್‌ ಮೊರೆ ಹೋದ್ರು:

ಹಂತಕರು ಸಿನಿಮೀಯವಾಗಿ ಕೊಲೆ ಮಾಡಿ ಶಂಕೆ ಬಾರದಂತೆ ಶವ ಹೂತು ಹಾಕಿ ಕೈ ತೊಳೆದುಕೊಂಡಿದ್ದರೂ ಟೆಂಟ್‌ಹೌಸ್‌ನಿಂದ ಸಿಕ್ಕ ಸಣ್ಣ ಸುಳಿವು ಇವರನ್ನ ಜೈಲಿಗಟ್ಟಿದ್ದೇ ರೋಚಕ.

ಅನಾಥ ಶವ ಯಾರದ್ದೆಂದು ಪೋಲಿಸರು ಅನೇಕರನ್ನು ವಿಚಾರಣೆ ಮಾಡಿದರು. ಶವದ ಅವಸ್ಥೆ ಕಂಡೇ ಪೊಲೀಸರು ಅದನ್ನು ಮರ್ಡರ್‌ ಎಂದು ನಿಶ್ಚಯಿಸಿ , Üು್ತ. ಕೊಲೆಯಾದ ವ್ಯಕ್ತಿ, ಕೊಲೆ ಗಡುಕರಿಬ್ಬರ ಪತ್ತೆಗೆ ಮುಂದಾದರು.

ಶವವಾದ ವ್ಯಕ್ತಿಯ ಗುರುತು ಪತ್ತೆಗೆ ಮೊಬೈಲ್‌ ಟವರ್‌ ಲೋಕೇಷನ್‌ ಮೊರೆ ಹೋದರೂ ಫಲ ನೀಡಿರಲಿಲ್ಲ. ಕಲಬುರಗಿ ಸುತ್ತಮುತ್ತ ಕಾಣೆಯಾದವರ ಪ್ರಕರಣದ ಮಾಹಿತಿ ಕೋರಿದ್ದರೂ ಪ್ರಯೋಜನವಾಗಿರಲಿಲ್ಲ...

ಊರಿಂದ ಕಾಣೆಯಾಗಿದ್ದವನೇ ಹಂತಕನಾಗಿದ್ದ

ಪೋಲಿಸರು ಛಲ ಬಿಡದೆ ಶಿರಡೋಣಾ ಸುತ್ತ ನೂರಾರು ವ್ಯಕ್ತಿಗಳನ್ನು ವಿಚಾರಿಸಿದರು. ತುಂಬ ದಿನದಿಂದ ಮನೆಗೆ ಬಾರದೇ ಇರುವವರು, ಕಲಬುರಗಿ ಸುತ್ತಲಿನ ಕಂಪನಿ, ಕಾರ್ಖಾನೆಗಳಲ್ಲಿ ಕಾರ್ಮಿಕರ ಕುರಿತು ಮಾಹಿತಿ ಸಂಗ್ರಹಿಸಿಸಲು ಮುಂದಾದಾಗ ಓರ್ವ ವ್ಯಕ್ತಿ ತಮ್ಮ ಗ್ರಾಮಕ್ಕೆ ಕೆಲ ದಿನಗಳಿಂದ ಇಂತಹವರು ಬಾರದೇ ಇರುವ ಕುರಿತು ಪೊಲೀಸರಿಗೆ ಮಾಹಿತಿ ಕೊಟ್ಟಿದ್ದ.

ಆತ ಯಾರೆಂದು ನೋಡಿದಾಗ ಶಿರಡೋಣಾ ಗ್ರಾಮದ ಸತೀಶ್‌ ಎಂದು ಗೊತ್ತಾಯಿತು. ಕಾಣೆಯಾದ ಸತೀಶನ ಸಾವಾಗಿರಬಹುದೆ? ಎಂದುಕೊಂಡಿದ್ದವರಿಗೆ . ಸತೀಶ ಬದುಕಿದ್ದಾನೆಂಬ ವಿಚಾರ ಖಾತ್ರಿಯಾಯ್ತು. ಕಲಬುರಗಿ ಹೊರವಲಯದ ಕಂಪನಿಯೊಂದರಲ್ಲಿ ಕೆಲಸಕ್ಕಿದ್ದ ಸತೀಶ ಅನೇಕ ದಿನದಿಂದ ಕೆಲಸಕ್ಕೆ ಬಂದಿಲ್ಲವೆಂಬ ವಿಚಾರ ಗೊತ್ತಾದಾಗ ಪೊಲೀಸರು ಸತೀಶನ ಬೆನ್ನು ಬಿದ್ದವರೇ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಆತನೇ ಹಂತಕನೆಂಬುದು ಗೊತ್ತಾಯ್ತು. ಗೆಳೆಯರೊಂದಿಗೆ ಸೇರಿಕೊಂಡು ಆಶ್ರಯ ಕಾಲೋನಿ ನಿವಾಸಿ ರಾಜು ಎಂಬಾತನ್ನನು ಕೊಲೆ ಮಾಡಿದ್ದಾಗಿ ಬಾಯಿಬಿಟ್ಟಿದ್ದ!..

ಮೇಲ್ಜಾತಿಯವರಿಗೆ ಬುದ್ಧಿ ಹೇಳಿದ ದಲಿತ ಯುವಕ, ಮರುದಿನವೇ ಶವವಾಗಿ ಪತ್ತೆ

ಟೆಂಟ್‌ ಹೌಸ್‌ನಲ್ಲಿತ್ತು ಕೊಲೆ ಗಡುಕನ ಸುಳಿವು!

ಬರ್ಬರವಾಗಿ ಕೊಲೆಯಾದ ರಾಜು (35) ಕಲಬುರಗಿ ಆಶ್ರಯ ಕಾಲೋನಿಯ ನಿವಾಸಿ. ಹಲವು ಅಪರಾಧಗಳಲ್ಲಿದ್ದುದರಿಂದ ಮನೆಯವರು ದೂರವಿದ್ದರು. ಕೊಲೆಗಡುಕ ಸತೀಶ್‌ ಕೂಡ ಕೆಲ ತಿಂಗಳಿನಿಂದ ಆಶ್ರಯ ಕಾಲೋನಿಯಲ್ಲಿಯೇ ವಾಸವಾಗಿದ್ದ, ಪ್ರತಿವಾರ ತನ್ನೂರಿಗೆ ಹೋಗಿ ಬಂದು ಮಾಡುತ್ತಿದ್ದ. ರಾಜು ತನ್ನ ಪತ್ನಿ ಮೇಲೆ ಕಣ್ಣು ಹಾಕಿದ್ದಾನೆಂಬ ಕೋಪದಲ್ಲಿ ತಾನು ಕೊಲ ಮಾಡಿದ್ದಾಗಿ ವಿಚಾರಣೆಯಲ್ಲಿ ಗೊತ್ತಾಗಿದೆ. ಸತೀಶನನ್ನು ವಿಚಾರಣೆಗೊಳಪಡಿಸಿದಾಗ ರಾಜು ತೇಗ್ನೂರ್‌ ಕೊಲೆ ಮಾಡಿರೋದನ್ನ ಒಪ್ಪಿ ಸಹಚರರ ಹೆಸರು ಹೇಳಿದ್ದು, ಪೊಲೀಸರು ಪ್ರದೀಪ್‌ ಮತ್ತು ಶರಣು ಸೇರಿದಂತೆ ಇನ್ನಿಬ್ಬರು ಕಾನೂನಿನೊಂದಿಗೆ ಸಂಘರ್ಷಕ್ಕೆ ಒಳಗಾದ ಬಾಲಕರನ್ನು ವಶಕ್ಕೆ ಪಡೆದಿದ್ದಾರೆ. ಎಸ್ಪಿ ಇಶಾ ಪಂತ್‌ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಚಿಕ್ಕಮಠ, ಸಿಪಿಐ ನಾರಾಯಣ, ಪಿಎಲ್‌ಐ ಆಶಾ ರಾಠೋಡ, ಕುಪೇಂದ್ರ, ಅಶೋಕ, ರಾಮಲಿಂಗ ತಂಡ ಯಶಸ್ವಿ ಕಾರ್ಯಾಚರಣೆಯಲ್ಲಿತ್ತು.

click me!