ಚಿಕ್ಕಮಗಳೂರಲ್ಲಿ ಹೆಚ್ಚುತ್ತಿರುವ ಬೈಕ್ ಹೆಲ್ಮೆಟ್ ಕಳ್ಳತನ: ಬೈಕ್‌ ಸವಾರರ ಪೀಕಲಾಟ..!

Published : Jul 06, 2023, 11:15 PM IST
ಚಿಕ್ಕಮಗಳೂರಲ್ಲಿ ಹೆಚ್ಚುತ್ತಿರುವ ಬೈಕ್ ಹೆಲ್ಮೆಟ್ ಕಳ್ಳತನ: ಬೈಕ್‌ ಸವಾರರ ಪೀಕಲಾಟ..!

ಸಾರಾಂಶ

ಐಎಸ್ಐ ಗುಣಮಟ್ಟದ ಹೆಲ್ಮೆಟ್‌ಗಳನ್ನು ಕಷ್ಟದಿಂದ ಖರೀದಿಸುವ ಬೈಕ್ ಸವಾರರಿಗೆ ಮತ್ತೊಮ್ಮೆ ಹೊರೆಯಾಗದಂತೆ ಹೆಲ್ಮೆಟ್ ಕಳ್ಳರನ್ನು ಸೆರೆಹಿಡಿಯಲು ಮುಂದಾದರೆ ಮಾತ್ರ ಸವಾರರ ಜೇಬಿಗೆ ಕತ್ತರಿ ಬೀಳುವುದು ತಪ್ಪಲಿದೆ. 

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು(ಜು.06):  ಜಿಲ್ಲೆಯಲ್ಲಿ ಉತ್ತಮ ಗುಣಮಟ್ಟದ ಐಎಸ್ಐ ಹೆಲ್ಮೆಟ್‌ಗಳು ಕಳ್ಳತನವಾಗುತ್ತಿದೆ. ಕಳೆದ ಕೆಲವು ದಿನಗಳಿಂದ ದ್ವಿಚಕ್ರ ವಾಹನ ಸವಾರರ ಉತ್ತಮ ಗುಣಮಟ್ಟದ ಐಎಸ್ಐ ಹೆಲ್ಮೆಟ್‌ಗಳು ಕಳ್ಳತನವಾಗುವ ಪ್ರಕರಣಗಳು ಹೆಚ್ಚಾಗುತ್ತಿದೆ. ಇದರಿಂದ ಬೈಕ್ ಸವಾರರಿಗೆ ಮತ್ತೊಂದು ಹೆಲ್ಮೆಟ್‌ ಖರೀದಿಸುವ ಮೂಲಕ ಸಾವಿರಾರು ರೂ.ಗಳು ಜೇಬಿಗೆ ಕತ್ತರಿ ಬೀಳುವಂತಾಗಿದೆ.

ಹೆಲ್ಮೆಟ್ ಕಳ್ಳತನ ಸಿಸಿಟಿವಿಯಲ್ಲೂ ಸೆರೆ : 

ಚಿಕ್ಕಮಗಳೂರು ನಗರದ ದ್ವಿಚಕ್ರವಾಹನ ಸವಾರರಿಗೆ ಸರ್ಕಾರವು ಹಲವು ಸುರಕ್ಷತೆ ದೃಷ್ಟಿಯಿಂದ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದೆ. ಕಾನೂನು ನಿಯಮ ಪಾಲನೆ ದೃಷ್ಟಿಯಿಂದ ಬೈಕ್ ಸವಾರರು ಗುಣಮಟ್ಟದ ಹೆಲ್ಮೆಟ್‌ಗಳನ್ನು ಖರೀದಿಸಿದ್ದು ಇದನ್ನು ಸಹ ಕಳ್ಳತನ ಮಾಡುವ ಪ್ರಕರಣಗಳು ಪ್ರತಿನಿತ್ಯ ಹೆಚ್ಚಳಗೊಂಡಿರುವ ಬಗ್ಗೆ ಬೈಕ್ ಸವಾರರು ತೀವ್ರ ಅಸಮಾಧಾನ ಹೊರ ಹಾಕಿದ್ದಾರೆ.

ಚಿಕ್ಕಮಗಳೂರು: ದೇವಸ್ಥಾನದ ಜಾಗ ಎಂದು ಮನೆ ಕೆಡವಲು ಮುಂದಾದ ಗ್ರಾಮಸ್ಥರು

ನಗರದ ಪ್ರಮುಖ ಸರ್ಕಲ್‌ಗಳಲ್ಲಿ ದ್ವಿಚಕ್ರ ವಾಹನಗಳ ನಿಲ್ಲಿಸಿದಂತಹ ಜಾಗಗಳಲ್ಲಿ ಕೆಲವು ಹೆಲ್ಮೆಟ್ ಕಳ್ಳತನ ವೃತ್ತಿಯಲ್ಲಿ ತೊಡಗಿರುವ ಕಿಡಿಕೇಡಿಗಳು ಇದನ್ನೇ ಕಾಯಕವನ್ನಾಗಿ ಮಾಡಿಕೊಂಡಿರುವ ಪರಿಣಾಮ ಬಡವರು ಅತ್ಯಂತ ಕಷ್ಟಪಟ್ಟು ಕೊಂಡಂತಹ ಹೆಲ್ಮೆಟ್ಗಳನ್ನು ಕಳವು ಮಾಡಲಾಗುತ್ತಿದೆ. ಬೈಕ್ ಸವಾರರು ಕೇವಲ 10-15 ನಿಮಿಷಗಳ ಕಾಲ ವಾಹನದಲ್ಲೇ ಹೆಲ್ಮೆಟ್ ಇರಿಸಿ ಅಂಗಡಿ ಮುಂಗಟ್ಟುಗಳಿಗೆ ತೆರಳುತ್ತಾರೆ. ಇದನ್ನು ಕಾಯ್ದು ಕೊಂಡಿರುವ ಕಿಡಿಕೇಡಿಗಳು ರಾಜಾರೋಷವಾಗಿ ತಮ್ಮ ಹೆಲ್ಮೆಟ್‌ಗಳೆಂದೇ ತಿಳಿದು ಅಲ್ಲಿಂದ ಕಳ್ಳತನ ಮಾಡುವ ಮೂಲಕ ಪರಾರಿಯಾಗುತ್ತಿದ್ದಾರೆ. ಹೆಲ್ಮೆಟ್ ಕಳ್ಳತನ ಮಾಡಿರುವ ದೃಶ್ಯವೂ ಸಿಸಿಟಿವಿಯಲ್ಲೂ ಸೆರೆ ಆಗಿದೆ. 

ಬೈಕ್ ಸವಾರರಿಗೆ ಮತ್ತೊಮ್ಮೆ ಹೊರೆ : 

ಇತ್ತೀಚಿನ ದಿನಗಳಲ್ಲಿ ಆಫ್‌ಹೆಲ್ಮೆಟ್‌ಗಳನ್ನು ಬೈಕ್ ಸವಾರರಿಗೆ ಸುರಕ್ಷತೆಯಿಲ್ಲದಿರುವ ಪರಿಣಾಮ ಪೊಲೀಸ್ ಇಲಾಖೆ ಸವಾರರಿಂದ ಹೆಲ್ಮೆಟ್ ಪಡೆದು ದಂಡ ಹಾಕುವುದು. ನಂತರ ಬೈಕ್‌ ಸವಾರರು ದಂಡ ಕಟ್ಟುವ ಬದಲಾಗಿ ಗುಣಮಟ್ಟದ ಹೆಲ್ಮೆಟ್ಗಳ ಖರೀದಿಗೆ ಮುಂದಾದರೆ, ಹೆಲ್ಮೆಟ್‌ಗಳ ಕಳ್ಳರ ಹಾವಳಿಯಿಂದ ಎರಡೆರಡು ಬಾರಿ  ಖರೀದಿಸುವ ಮೂಲಕ ಹಣವನ್ನು ಕಳೆದುಕೊಳ್ಳಲಾಗುತ್ತಿದೆ ಎಂದು ಸವಾರರು ಹೇಳಿದ್ದಾರೆ.

ಹೆಲ್ಮೆಟ್ ಕಳ್ಳತನ ಮಾಡುವ ವ್ಯಕ್ತಿಗಳು ನೋಡುವುದಕ್ಕೆ ಉತ್ತಮ ಉಡುಪುಗಳನ್ನು ಧರಿಸಿ ಯಾರಿಗೂ ಅನು ಮಾನ ಬಾರದ ರೀತಿಯಲ್ಲಿ ಬೀದಿಕಂಬಗಳ ಬದಿಯ ಕತ್ತಲಲ್ಲಿ ನಿಲ್ಲುವ ಮೂಲಕ ಬೈಕ್ ಸವಾರರು ಎಲ್ಲಿ ನಿಲ್ಲಿಸುವರು ಅಲ್ಲಿಯೇ ಕಾಯುವ ಮೂಲಕ ಹೆಲ್ಮೆಟ್‌ಗಳನ್ನು ಕಳ್ಳತನ ಮಾಡಲಾಗುತ್ತಿದೆ. ಇನ್ನೂ ಕೆಲವು ಕಿಡಿಕೇಡಿಗಳು ಅಂಗಡಿ ಮುಂಗಟ್ಟುಗಳಲ್ಲಿ ವಾಹನದ ಮಾಲೀಕರ ಯಾವುದೋ ಕೆಲಸದಲ್ಲಿ ನಿರತರಾಗಿದ್ದರೆ ತಕ್ಷಣವೇ ಧಾವಿಸಿ  ಕಳ್ಳತನಕ್ಕೆ ಮುಂದಾಗುವ ಪ್ರಕರಣಗಳು ಹೆಚ್ಚಾಗಿವೆ. ಕೂಡಲೇ ಪೊಲೀಸ್ ಇಲಾಖೆಯ ಸಂಚಾರ ನಿಯಂತ್ರಣಾಧಿಕಾರಿಗಳು ಇವುಗಳ ಬಗ್ಗೆ ಹೆಚ್ಚು ಗಮನಹರಿಸಬೇಕಿದೆ. ಐಎಸ್ಐ ಗುಣಮಟ್ಟದ ಹೆಲ್ಮೆಟ್‌ಗಳನ್ನು ಕಷ್ಟದಿಂದ ಖರೀದಿಸುವ ಬೈಕ್ ಸವಾರರಿಗೆ ಮತ್ತೊಮ್ಮೆ ಹೊರೆಯಾಗದಂತೆ ಹೆಲ್ಮೆಟ್ ಕಳ್ಳರನ್ನು ಸೆರೆಹಿಡಿಯಲು ಮುಂದಾದರೆ ಮಾತ್ರ ಸವಾರರ ಜೇಬಿಗೆ ಕತ್ತರಿ ಬೀಳುವುದು ತಪ್ಪಲಿದೆ ಎಂದು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ: ಶಿಕ್ಷಕನಿಗೆ ಪೋಷಕರಿಂದ ಧರ್ಮದೇಟು!
ಬೆಂಗಳೂರಲ್ಲಿ ಹೊಟ್ಟೆಪಾಡಿಗೆ ಕಳ್ಳತನ ಮಾಡ್ತಿದ್ದ ಕಳ್ಳನನ್ನೇ ರಾಬರಿ ಮಾಡಿದ ಖತರ್ನಾಕ್ ಕಿತಾಪತಿಗಳು!