
ಹುಮನಾಬಾದ(ಜು.06): ಜೂ.26ರಂದು ಧುಮ್ಮನಸೂರ ಗ್ರಾಮದ ಹೊಲದ ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದ ಎತ್ತು ಹಾಗೂ ಆಕಳನ್ನು ಕಳವು ಮಾಡಿದ್ದ 3 ಆರೋಪಿಗಳನ್ನು ಹುಮನಾಬಾದ ಪೊಲೀಸ್ ಠಾಣೆ ಸಿಬ್ಬಂದಿ ಬಂಧಿಸಿ, ಕಳುವಾಗಿದ್ದ ಎತ್ತು, ಆಕಳನ್ನು ವಾರಸುದಾರರಿಗೆ ಒಪ್ಪಿಸಿದ್ದಾರೆ.
ಹುಮನಾಬಾದ ತಾಲೂಕಿನ ಧುಮ್ಮನಸೂರ ಗ್ರಾಮದ ನಿವಾಸಿ ಜಗನ್ನಾಥ ತುಕಾರಾಮ ಮೇತ್ರೆ ಅವರ ಹೊಲದ ದನಗಳ ಕೊಟ್ಟಿಗೆಯಲ್ಲಿದ್ದ 40 ಸಾವಿರ ಮೌಲ್ಯದ ಎತ್ತು ಹಾಗೂ 20 ಸಾವಿರ ಮೌಲ್ಯದ ಆಕಳು ಕಳ್ಳತನ ಮಾಡಲಾಗಿದೆ ಎಂದು ಹುಮನಾಬಾದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
Kodagu crimes: ಪಾನಮತ್ತನಾಗಿ ಪತ್ನಿ, ಮಗುವಿನ ಮೇಲೆ ಹಲ್ಲೆ: ಬಂಧನ
ದೂರಿನ ಹಿನ್ನಲೆ ಎಸ್‌ಪಿ ಚೆನ್ನಬಸವಣ್ಣ ಲಂಗೋಟಿ, ಎಎಸ್‌ಪಿ ಮಹೇಶ ಮೇಘಣ್ಣನವರ್, ಹುಮನಾಬಾದ ಹಿರಿಯ ಸಹಾಯಕ ಪೊಲೀಸ್ ಅಧೀಕ್ಷಕ ಶಿವಾಂಶು ರಜಪುತ್, ಹುಮನಾಬಾದ ಸಿಪಿಐ ಶರಣಬಸಪ್ಪಾ ಕೋಡ್ಲಾ ಮಾರ್ಗದರ್ಶನದಲ್ಲಿ ಅಪರಾಧ ವಿಭಾಗ ಪಿಎಸ್‌ಐ ಸುರೇಶ ಹಜ್ಜರ್ಗಿ, ಪಿಎಸ್‌ಐ ಮಂಜನಗೌಡ ಪಾಟೀಲ್ ಸಿಬ್ಬಂದಿಗಳಾದ ಭಗವಾನ ಬಿರಾದಾರ, ಬಾಬುರಾಯ ಕೋರೆ, ಮಹೇಶಕುಮಾರ, ಶೀಲಸಾಗರ, ಬಸವಂತರೆಡ್ಡಿ, ಬಾಲಾಜಿ ಪಿಚರಾಟೆ, ಸೂರ್ಯಕಾಂತ ದಾಂಡೆಕರ್ ತಂಡವು ಆರೋಪಿ ಪತ್ತೆ ಕಾರ್ಯ ಚುರುಕುಗೊಳಿಸಿ, 4 ದಿವಸಗಳಲ್ಲಿಯೇ ಪ್ರಕರಣ ಭೇಧಿಸಿ, 3 ಜನ ಆರೋಪಿತರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ