ಹಿಜಾಬ್​ಗಾಗಿ ಪ್ರಾಣ ಕಳೆದುಕೊಂಡ ವಿದ್ಯಾರ್ಥಿನಿ: ಬಚಾವ್​ ಮಾಡಿದ್ರೂ ಅಗ್ನಿಗಾಹುತಿಯಾದಳು!

Published : Apr 11, 2025, 09:42 PM ISTUpdated : Apr 12, 2025, 09:42 AM IST
ಹಿಜಾಬ್​ಗಾಗಿ ಪ್ರಾಣ ಕಳೆದುಕೊಂಡ ವಿದ್ಯಾರ್ಥಿನಿ:  ಬಚಾವ್​ ಮಾಡಿದ್ರೂ ಅಗ್ನಿಗಾಹುತಿಯಾದಳು!

ಸಾರಾಂಶ

ರಾಜಸ್ಥಾನದ ಜೋಧ್‌ಪುರದಲ್ಲಿ ನಮಾಜ್ ಮಾಡುತ್ತಿದ್ದ 19 ವರ್ಷದ ವಿದ್ಯಾರ್ಥಿನಿ ಸಾದಿಯಾ, ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ಬೆಂಕಿಗೆ ಆಹುತಿಯಾಗಿದ್ದಾಳೆ. ಉಮ್ರಾ ಯಾತ್ರೆಗೆ ಸಿದ್ಧತೆ ನಡೆಸುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಸಾದಿಯಾ ಮತ್ತು ಒಂದು ವರ್ಷದ ಮಗು ಮೃತಪಟ್ಟಿದ್ದು, 14 ಜನರಿಗೆ ಗಾಯಗಳಾಗಿವೆ. ಬೆಂಕಿ ನಂದಿಸಲು ಅಗ್ನಿಶಾಮಕ ದಳ ತಡವಾಗಿ ಬಂದಿದ್ದರಿಂದ ಅವಘಡ ಹೆಚ್ಚಾಯಿತೆಂದು ಸ್ಥಳೀಯರು ಆರೋಪಿಸಿದ್ದಾರೆ.

ನಮಾಜ್​ ಮಾಡುತ್ತಿದ್ದ 19 ವರ್ಷದ ವಿದ್ಯಾರ್ಥಿನಿಯೊಬ್ಬಳು, ಹಿಜಾಬ್​ಗಾಗಿ ಬೆಂಕಿಯ ಜ್ವಾಲೆಯಲ್ಲಿ ಬೆಂದು ಹೋದ ಆಘಾತಕಾರಿ ಘಟನೆ ರಾಜಸ್ತಾನದ ಜೋಧ್‌ಪುರದಲ್ಲಿ ನಡೆದಿದೆ. ಇಲ್ಲಿಯ  ಗುಲಾಬ್ ಸಾಗರ್ ಪ್ರದೇಶದ ಬಳಿಯ ಮಿಯಾನ್ ಕಿ ಮಸೀದಿ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ. ಮೊಹಮ್ಮದ್ ಸತ್ತಾರ್ ಚೌಹಾಣ್ ಅವರ ಪುತ್ರಿ ಸಾದಿಯಾ ಬೆಂಕಿಗೆ ಆಹುತಿಯಾದ ಯುವತಿ. ಉಮ್ರಾ ಯಾತ್ರೆಗೆ ಸಿದ್ಧಗೊಂಡಿದ್ದ ಈ ಕುಟುಂಬದಲ್ಲೀಗ ಶೋಕಮಡುಗಟ್ಟಿದೆ. ಗ್ಯಾಸ್​ ಸಿಲಿಂಡರ್​ ಸ್ಫೋಟದಿಂದ ಈ ಅವಘಡ ಸಂಭವಿಸಿದ್ದು ಘಟನೆಯನ್ನು ಸಾದಿಯಾ ಹಾಗೂ ವರ್ಷದ ಮಗು ಮೃತಪಟ್ಟಿದೆ. 14 ಜನರಿಗೆ ಸುಟ್ಟ ಗಾಯಗಳಾಗಿವೆ. 

ಅಷ್ಟಕ್ಕೂ ಆಗಿದ್ದೇನೆಂದರೆ,   ಉಮ್ರಾ ಯಾತ್ರೆಯ ಸಿದ್ಧತೆ ನಡೆಯುತ್ತಿತ್ತು. ಈ ಯಾತ್ರೆಗೆ ಹೋಗುವ ಮೊದಲು, ಹೂವಿನ ಆಚರಣೆ ಎನ್ನುವ ಪದ್ಧತಿ ಇದೆ. ಇದೂ ಸೇರಿದಂತೆ ಕೆಲವು ಧಾರ್ಮಿಕ ಆಚರಣೆಗಳನ್ನು ಮಾಡಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ತಮ್ಮ ಕುಟುಂಬದವರನ್ನು ಮೊಹಮ್ಮದ್ ಸತ್ತಾರ್ ಚೌಹಾಣ್  ಆಹ್ವಾನಿಸಿದ್ದರು. ಆದರೆ ಅಡುಗೆ ಮಾಡುವ ಸಮಯದಲ್ಲಿ  ಗ್ಯಾಸ್ ಸಿಲಿಂಡರ್ ಸೋರಿಕೆಯಾಗಿ ಇದ್ದಕ್ಕಿದ್ದಂತೆ ದೊಡ್ಡ ಬೆಂಕಿ ಕಾಣಿಸಿಕೊಂಡಿದೆ.  ಅದು ಇಡೀ ಮನೆಯನ್ನು ಆವರಿಸಿಕೊಂಡಿದೆ. ಅಲ್ಲಿಯೇ ಇದ್ದ ಮಗು ಸಾವನ್ನಪ್ಪಿದೆ. ಈ ಸಂದರ್ಭದಲ್ಲಿ 2ನೇ ಮಹಡಿಯಲ್ಲಿ ಸಾದಿಯಾ  ನಮಾಜ್​ ಮಾಡುತ್ತಿದ್ದಳು. ಆಕೆಯ ಕೋಣೆಯಲ್ಲಿ ಹೊಗೆಯಾಡಿರುವುದನ್ನು ನೋಡಿ ಗಾಬರಿಯಿಂದ ಆಕೆ  ಚಿಕ್ಕಪ್ಪನಿಗೆ ಕರೆ ಮಾಡಿದ್ದಾಳೆ. ಕೂಡಲೇ ಅವರು  ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ.

ಬೈಕ್ ಚಲಾಯಿಸುತ್ತಲೇ ಮೈಮರೆತ ಪ್ರೇಮಿಗಳು! ಸರಸ ಸಲ್ಲಾಪದ ವಿಡಿಯೋ ವೈರಲ್​- ಜನರ ಆತಂಕ...

ಅಗ್ನಿಶಾಮಕ ಸಿಬ್ಬಂದಿ ಮತ್ತು ಸ್ಥಳೀಯರು ಸೇರಿ ಸಾದಿಯಾಳನ್ನು ಅಗ್ನಿಯ ಕೆನ್ನಾಲಿಗೆಯಿಂದ ಬಚಾವ್​ ಮಾಡಿದ್ದರು. ಆದರೆ ಸಾದಿಯಾ ಹಿಜಾಬ್​ ಕೊಠಡಿಯಲ್ಲಿಯೇ ಇಟ್ಟು ಬಂದಿದ್ದಳು. ಅದನ್ನು ತರುವುದಾಗಿ ಹೇಳಿದರು. ಅದಾಗಲೇ ಬೆಂಕಿ ಹೊತ್ತಿ ಉರಿಯುತ್ತಿದ್ದುದರಿಂದ ಅಲ್ಲಿದ್ದವರು ಬೇಡ ಎಂದರೂ ಕೇಳದೇ ಕೋಣೆಯನ್ನು ಹೊಕ್ಕಿದ್ದಾಳೆ. ಆಗ ಬೆಂಕಿಯಿಂದ ಉರಿಯುತ್ತಿರುವ ಬಾಗಿಲು ಅವಳ ಮೇಲೆ ಬಿದ್ದಿದೆ. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ಸಾದಿಯಾಳನ್ನು ಜೋಧ್‌ಪುರ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟಿದ್ದಾಳೆ.
 
ಗಾಯಾಳುಗಳ ಪೈಕಿ ಕೆಲವರ ಸ್ಥಿತಿ ಗಂಭೀರವಾಗಿದೆ. ಇದುವರೆಗೆ ಗಾಯಾಳುಗಳ ಬಗ್ಗೆ ಮಾಹಿತಿ ಬರಲಿಲ್ಲ. ಅಗ್ನಿಶಾಮಕ ಸಿಬ್ಬಂದಿ ಕರೆ ಮಾಡಿದ ಕೂಡಲೇ ಸ್ಥಳಕ್ಕೆ ಧಾವಿಸಲಿಲ್ಲ. ಈ ಹಿನ್ನೆಲೆಯಲ್ಲಿ, ಬೆಂಕಿಯ ಜ್ವಾಲೆ ಹೆಚ್ಚಿತು ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅಷ್ಟಕ್ಕೂ ಮಹಡಿಯ ಮೇಲಿದ್ದ ಮಹಿಳೆಯರು ಸುರಕ್ಷಿತವಾಗಿದ್ದಾರೆ ಎಂದೇ ಎಲ್ಲರೂ ಅಂದುಕೊಂಡಿದ್ದರಿಂದ ಅವರ ಬಗ್ಗೆ ಅಷ್ಟು ಗಮನ ಹರಿಸಲಿಲ್ಲ ಎನ್ನಲಾಗಿದೆ.  ಆದರೆ ಹೊಗೆ ಅವರನ್ನು ಉಸಿರುಗಟ್ಟಿಸಲು ಪ್ರಾರಂಭಿಸಿತು ಮತ್ತು ಅವರೆಲ್ಲರೂ ಪ್ರಜ್ಞೆ ತಪ್ಪಿ ಬಿದ್ದಿದ್ದರು. ನೆರೆಹೊರೆಯವರು ಬಾಗಿಲು ಒಡೆದು ಅವರನ್ನು ಹೊರಗೆ ಕರೆದೊಯ್ದರು. ಇಲ್ಲದಿದ್ದರೆ ಇನ್ನೂ ಹೆಚ್ಚಿನ ಸಾವುನೋವು ಆಗುವ ಸಂಭವವಿತ್ತು. ಪ್ರದೇಶದ ಬೀದಿಗಳಲ್ಲಿ ಕಿರುಚಾಟ ಮತ್ತು ಕೂಗಾಟ ಕೇಳಿಬರುತ್ತಿತ್ತು. ಕೆಲವರು ಸಿಲಿಂಡರ್‌ಗಳನ್ನು ಎತ್ತಿಕೊಂಡು ಓಡಿಹೋದರು, ಕೆಲವರು ತಮ್ಮ ವಾಹನಗಳನ್ನು ಹೊರತೆಗೆಯಲು ಪ್ರಾರಂಭಿಸಿದರು. ಬೆಂಕಿ ಎಷ್ಟು ಭೀಕರವಾಗಿತ್ತೆಂದರೆ ಅದು ಹತ್ತಿರದ ಅಂಗಡಿಗಳು ಮತ್ತು ಕಂಪ್ರೆಸರ್ ಅನ್ನು ಸಹ ಆವರಿಸಿತು. ಮನೆಯ ಸುತ್ತಲೂ ಸುಡುವ ವಾಸನೆ ಮತ್ತು ಗೋಡೆಗಳ ಮೇಲಿನ ಮಸಿ ಇನ್ನೂ ಆ ರಾತ್ರಿಗೆ ಸಾಕ್ಷಿಯಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ. 

ಉಫ್​... ಲೈಕ್ಸ್​ಗಾಗಿ ಇದೆಂಥ ಹುಚ್ಚು? ಟವಲ್​ ಸುತ್ತಿಕೊಂಡು ಬಿಚ್ಚಿಬಿಚ್ಚಿ ತೋರಿಸಿದ ಯುವತಿಯರು!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮಿರ್ಜಾ ಇಸ್ಮಾಯಿಲ್ ಮೊಮ್ಮಗಳ ಹಂತಕನಿಗೆ ಜೈಲೇ ಗತಿ, ಏನಿದು ಪ್ರಕರಣ?
ಬೆಂಗಳೂರಿನ ಬಾಡಿಗೆ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ