ವಾಟ್ಸಾಪ್‌ನಲ್ಲಿ ಬಂದ ಫೋಟೋ ಓಪನ್‌ ಮಾಡಿ 2 ಲಕ್ಷ ಕಳೆದುಕೊಂಡ ವ್ಯಕ್ತಿ: ಏನಿದು ವಂಚನೆ?

Published : Apr 11, 2025, 06:07 PM ISTUpdated : Apr 12, 2025, 09:14 AM IST
 ವಾಟ್ಸಾಪ್‌ನಲ್ಲಿ ಬಂದ ಫೋಟೋ ಓಪನ್‌ ಮಾಡಿ  2 ಲಕ್ಷ ಕಳೆದುಕೊಂಡ ವ್ಯಕ್ತಿ: ಏನಿದು ವಂಚನೆ?

ಸಾರಾಂಶ

ಸೈಬರ್ ಅಪರಾಧಿಗಳು ವಾಟ್ಸಾಪ್ ಮೂಲಕ ಫೋಟೋ ಕಳುಹಿಸಿ ಬ್ಯಾಂಕ್ ಖಾತೆಗೆ ಕನ್ನ ಹಾಕುವ ಹೊಸ ವಂಚನೆ ಆರಂಭಿಸಿದ್ದಾರೆ. ಅಪರಿಚಿತ ಸಂಖ್ಯೆಯಿಂದ ಬರುವ ಫೋಟೋಗಳನ್ನು ಡೌನ್‌ಲೋಡ್ ಮಾಡಬೇಡಿ. ಕುತೂಹಲ ಅಥವಾ ಭಯದಿಂದ ಡೌನ್‌ಲೋಡ್ ಮಾಡಿದರೆ ಫೋನ್ ಕ್ರ್ಯಾಶ್ ಆಗಿ ಖಾಸಗಿ ಮಾಹಿತಿ ಕದಿಯಬಹುದು. ವಾಟ್ಸಾಪ್ ನಂಬರ್ ಅನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಬೇಡಿ. ಅನುಮಾನ ಬಂದರೆ ಸೈಬರ್ ಕ್ರೈಂ ಸಹಾಯವಾಣಿಗೆ ಕರೆ ಮಾಡಿ.

ಸೈಬರ್ ಅಪರಾಧಿಗಳು ನಿರಂತರವಾಗಿ ಹೊಸ ವಂಚನೆ ವಿಧಾನಗಳನ್ನು ಕಂಡುಕೊಳ್ಳುತ್ತಿದ್ದಾರೆ. ಸೈಬರ್‌ ಕ್ರೈಂಗಳ ಬಗ್ಗೆ ಜನರು ಎಚ್ಚೆತ್ತುಕೊಳ್ಳುತ್ತಿದ್ದಂತೆಯೇ ಹೊಸ ಹೊಸ ವಿಧಾನಗಳ ಮೂಲಕ ಜನರನ್ನು ಮೋಸದ ಜಾಲದಲ್ಲಿ ಸಿಲುಕಿಸುತ್ತಿದ್ದಾರೆ. ಈ ಮೂಲಕ ಜನರು ಲಕ್ಷ ಲಕ್ಷ ಹಣವನ್ನು ಕಳೆದುಕೊಳ್ಳುವಂತಾಗಿದೆ. ಫೋನ್‌ಗಳಲ್ಲಿ ಕರೆ ಮಾಡಿದ ವ್ಯಕ್ತಿಗಳನ್ನು ನಂಬಬೇಡಿ ಎಂದು ಪದೇ ಪದೇ ಫೋನ್‌ ಮಾಡಿದಾಗಲೆಲ್ಲಾ ಎಚ್ಚರಿಕೆಯ ಕರೆಗಳು ಬರುತ್ತಿದ್ದರೂ, ತಮಗೇನೂ ಆಗುವುದಿಲ್ಲ ಎನ್ನುವಂತೆ ಒಂದಷ್ಟು ಮಂದಿ ಈ ವಂಚಕರ ಜಾಲದಲ್ಲಿ ಬೀಳುತ್ತಿದ್ದರೆ, ಅದೇ ಇನ್ನೊಂದೆಡೆ ಈಗ ಮತ್ತೊಂದು ರೀತಿಯ ಸ್ಕ್ಯಾಮ್‌ ಶುರು ಮಾಡಿದ್ದಾರೆ ಸೈಬರ್‌ ಅಪರಾಧಿಗಳು.

 ವಾಟ್ಸಾಪ್ ಮೂಲಕ ಫೋಟೋಗಳನ್ನು ಕಳುಹಿಸಿ ನಿಮ್ಮ ಬ್ಯಾಂಕ್‌ ಖಾತೆಯ ಕನ್ನ ಹಾಕಲಾಗುವ ಹೊಸ ಮೋಸ ಇದಾಗಿದೆ.  ಸಾಮಾನ್ಯವಾಗಿ ವಾಟ್ಸಾಪ್‌ ನಂಬರ್‌ ಬ್ಯಾಂಕ್‌ ಅಕೌಂಟ್‌ಗೆ ಲಿಂಕ್‌ ಆಗದವರು ಈ ವಂಚನೆಗೆ ಸುಲಭದಲ್ಲಿ ಒಳಗಾಗುತ್ತಿದ್ದಾರೆ. ಇತ್ತೀಚೆಗೆ, ಮಧ್ಯಪ್ರದೇಶದ ಜಬಲ್ಪುರದ ವ್ಯಕ್ತಿಯೊಬ್ಬ ಅಪರಿಚಿತ ಸಂಖ್ಯೆಯಿಂದ ವಾಟ್ಸಾಪ್ ಮೂಲಕ ಬಂದ ಚಿತ್ರವನ್ನು ಡೌನ್‌ಲೋಡ್ ಮಾಡಿದ ನಂತರ ಸುಮಾರು 2 ಲಕ್ಷ ರೂಪಾಯಿಗಳನ್ನು ಕಳೆದುಕೊಂಡ ಆತಂಕಕಾರಿ ಘಟನೆ ಸಂಭವಿಸಿದೆ. ಟೆಲಿಕಾಂ ಇಲಾಖೆ ಈ ರೀತಿಯ ಸೈಬರ್ ಅಪರಾಧದ ಬಗ್ಗೆ ಎಚ್ಚರಿಕೆಗಳನ್ನು ನೀಡುತ್ತಲೇ ಬಂದರೂ ಜನರು ಮೋಸ ಹೋಗುತ್ತಿದ್ದಾರೆ. ಸಾಂಪ್ರದಾಯಿಕ ತಂತ್ರಗಳಾದ OTP, ನಕಲಿ ಲಿಂಕ್‌ ಇವೆಲ್ಲವುಗಳಿಂದ ಜನರು ಎಚ್ಚೆತ್ತುಕೊಳ್ಳುತ್ತಿರುವ ಕಾರಣದಿಂದ ಈ ಹೊಸ ವಂಚನೆ ಆರಂಭಿಸಿರುವುದಾಗಿ ಸೈಬರ್‌ ಕ್ರೈಂ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.  

ಬುರ್ಖಾದೊಳಗೆ ಕೈಹಾಕಿದಷ್ಟೂ ಉದುರಿದ ಲಕ್ಷಾಂತರ ಮೌಲ್ಯದ ಕದ್ದ ವಸ್ತು- ವಿಡಿಯೋ ನೋಡಿದವರು ಸುಸ್ತೋ ಸುಸ್ತು!
 
ಈ ವಂಚನೆ ಹೇಗೆ ಕೆಲಸ ಮಾಡುತ್ತದೆ? ನೀವು ಹೇಗೆ ಜಾಲದಲ್ಲಿ ಸಿಲುಕುತ್ತೀರಿ? 
ವಂಚಕರು ವಾಟ್ಸಾಪ್ ಅಥವಾ ಇತರ ಸಂದೇಶ ವೇದಿಕೆಗಳ ಮೂಲಕ ಚಿತ್ರಗಳನ್ನು ಕಳುಹಿಸುವ ಮೂಲಕ ಈ ವಂಚನೆಯನ್ನು ಪ್ರಾರಂಭಿಸುತ್ತಾರೆ. ಕೆಲವು ಸಂದರ್ಭಗಳಲ್ಲಿ, ಅವರು ಫೋನ್ ಕರೆಯನ್ನೂ ಮಾಡಬಹುದು.  ವಾಟ್ಸಾಪ್ ಮೂಲಕ ಕಳುಹಿಸಲಾದ ಚಿತ್ರದಲ್ಲಿ ಚಿತ್ರಿಸಲಾದ ವ್ಯಕ್ತಿಯನ್ನು ಗುರುತಿಸಲು ಗ್ರಾಹರನ್ನು ಕೇಳಲಾಗುತ್ತದೆ.  ಕೆಲವೊಮ್ಮೆ ಅಶ್ಲೀಲ ಎನ್ನುವ ಚಿತ್ರ ಕಳುಹಿಸಿ ಈ ಚಿತ್ರದಲ್ಲಿ ಇರುವುದು ನೀವೇ ಹೌದಾ ಇತ್ಯಾದಿ ಪ್ರಶ್ನೆಗಳನ್ನು ಕೇಳುವ ಮೂಲಕ ಭಯವನ್ನು ಹುಟ್ಟಿಸಲಾಗುತ್ತದೆ. ಇಲ್ಲವೇ ವಿಡಿಯೋ, ಆಡಿಯೋ ಕೂಡ ಕಳುಹಿಸಬಹುದು. ಕುತೂಹಲಕ್ಕೋ ಇಲ್ಲವೇ ಭಯ ಬಿದ್ದೋ ನೀವೇನಾದರೂ ಆ ಫೋಟೋ ಅನ್ನು  ಡೌನ್‌ಲೋಡ್ ಮಾಡಿದರೆ, ತಕ್ಷಣ ನಿಮ್ಮ  ಫೋನ್ ಕ್ರ್ಯಾಶ್ ಆಗುತ್ತದೆ, ಇದರಿಂದಾಗಿ ಸ್ಕ್ಯಾಮರ್‌ಗಳು ನಿಮ್ಮ  ಸ್ಮಾರ್ಟ್‌ಫೋನ್‌ಗೆ ಪ್ರವೇಶವನ್ನು ಪಡೆಯುತ್ತಾರೆ.  
 
ಈ ತಂತ್ರವನ್ನು ಸ್ಟೆಗನೊಗ್ರಫಿ ಎಂದು ಕರೆಯಲಾಗುತ್ತದೆ. ಸ್ಟೆಗನೋಗ್ರಫಿ ಎಂದರೆ ಪತ್ತೆಹಚ್ಚುವಿಕೆಯಿಂದ ತಪ್ಪಿಸಿಕೊಳ್ಳಲು ಮತ್ತೊಂದು ಸಂದೇಶ ಅಥವಾ ಭೌತಿಕ ವಸ್ತುವಿನೊಳಗೆ ಮಾಹಿತಿಯನ್ನು ಮರೆಮಾಡುವ ಅಭ್ಯಾಸ. ಪಠ್ಯ, ಚಿತ್ರಗಳು, ವೀಡಿಯೊಗಳು ಅಥವಾ ಆಡಿಯೊ ಸೇರಿದಂತೆ ವಿವಿಧ ರೀತಿಯ ಡಿಜಿಟಲ್ ವಿಷಯವನ್ನು ಮರೆಮಾಡಲು ಇದನ್ನು ಬಳಸಬಹುದು. ಗುಪ್ತ ಡೇಟಾವನ್ನು ನಂತರ ಅದರ ಮೂಲ ಸ್ಥಾನದಿಂದ ಹೊರತೆಗೆಯಬಹುದು.
 
ನೀವು ಎಚ್ಚರ ವಹಿಸುವುದು ಹೇಗೆ? 
ನೀವು ಅಪರಿಚಿತ ಸಂಖ್ಯೆಯಿಂದ ಯಾವುದೇ ಪರಿಚಯವಿಲ್ಲದ ಫೋಟೋ, ವಿಡಿಯೋ ಅಥವಾ ಧ್ವನಿ ಸಂದೇಶ  ಸ್ವೀಕರಿಸಿದರೆ, ಅದನ್ನು ಡೌನ್‌ಲೋಡ್ ಮಾಡಬೇಡಿ. ಡೌನ್‌ಲೋಡ್‌ ಮಾಡುವಂತೆ ಯಾವುದೇ ಕರೆ ಅಥವಾ ಸಂದೇಶ ಬಂದರೆ ಅದರ ಕಡೆ ಕಿವಿಗೊಡಬೇಡಿ. ಕೂಡಲೇ ಕಾಲ್‌ ಕಟ್‌ ಮಾಡಿ. ಫೋಟೋ, ವಿಡಿಯೋ, ಆಡಿಯೋ ಡೌನ್‌ಲೋಡ್‌ ಮಾಡದೇ ಆ ಸಂಖ್ಯೆಯನ್ನು ಬ್ಲಾಕ್‌ ಮಾಡಿಬಿಡಿ. 
 ಯಾವುದೇ ಕಾರಣಕ್ಕೂ ನಿಮ್ಮ ಬ್ಯಾಂಕ್ ಖಾತೆಗೆ ನಿಮ್ಮ WhatsApp ಸಂಖ್ಯೆಯನ್ನು ಲಿಂಕ್ ಮಾಡಬೇಡಿ.
ಅಂತಹ ಯಾವುದೇ ಘಟನೆ ಕಂಡುಬಂದರೆ ಸೈಬರ್ ಅಪರಾಧ ಪೋರ್ಟಲ್‌ಗೆ ವರದಿ ಮಾಡಿ ಅಥವಾ 1930 ರಲ್ಲಿ ಸೈಬರ್ ಅಪರಾಧ ಸಹಾಯವಾಣಿಗೆ ಕರೆ ಮಾಡಿ.

ಅಮೆಜಾನ್​ನಿಂದ ಏನೇನೋ ಆರ್ಡರ್​ ಮಾಡಿದ ಕಿತಾಪತಿ ಆಫ್ರಿಕನ್​ ಗಿಳಿ! ಮಹಿಳೆ ಸುಸ್ತೋ ಸುಸ್ತು- ಏನಾಯ್ತು ನೋಡಿ 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!
ಕೆಲಸ ಇಲ್ಲದ ಗಂಡನಿಗೆ ಪತ್ನಿ ಶೀಲದ ಮೇಲೆ ಶಂಕೆ: ನಿದ್ರೆಯಲ್ಲಿದ್ದ ಮಗಳ ಕತ್ತು ಸೀಳಿದ ಪತಿ