Crime News: ಪ್ರತ್ಯೇಕ ಘಟನೆ; ನೇಣು ಬಿಗಿದು ಇಬ್ಬರು ಸಾವು

By Kannadaprabha News  |  First Published Apr 14, 2023, 9:20 AM IST

ಮನೆಯಲ್ಲಿ ಯಾರು ಇಲ್ಲದ ವೇಳೆ ಮಹಿಳೆಯೋರ್ವಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುಂಜಾಲಕಟ್ಟೆಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಎ.13 ರಂದು ಬುಧವಾರ ಸಂಜೆ ವೇಳೆ ನಡೆದಿದೆ.


ಬಂಟ್ವಾಳ (ಏ.14) : ಮನೆಯಲ್ಲಿ ಯಾರು ಇಲ್ಲದ ವೇಳೆ ಮಹಿಳೆಯೋರ್ವಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುಂಜಾಲಕಟ್ಟೆಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಎ.13 ರಂದು ಬುಧವಾರ ಸಂಜೆ ವೇಳೆ ನಡೆದಿದೆ.

ಪಿಲಾತಬೆಟ್ಟು ಗ್ರಾಮದ ನಯನಾಡು ನಿವಾಸಿ ಹರಿಪ್ರಸಾದ್‌ ಅವರ ಪತ್ನಿ ಜಯಲಕ್ಮೀ ಆತ್ಮಹತ್ಯೆ ಮಾಡಿಕೊಂಡ ಮಹಿಳೆ.

Tap to resize

Latest Videos

ಬುಧವಾರ ಸಂಜೆ ಮನೆಯೊಳಗೆ ನೇಣು ಬಿಗಿದು ಅವರು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಅವರ ಪತಿ ಪುಂಜಾಲಕಟ್ಟೆಪೊಲೀಸ್‌ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.

ಕೊಡಗು: ನೇಣುಬಿಗಿದ ಸ್ಥಿತಿಯಲ್ಲಿ ಕಾರ್ಮಿಕ ಮಹಿಳೆ ಶವ ಪತ್ತೆ

ದುಷ್ಪ್ರೇರಣೆಯಿಂದ ಆತ್ಮಹತ್ಯೆ ಪತಿ ಸಂಶಯ

ನನ್ನ ಪತ್ನಿ ಆತ್ಮಹತ್ಯೆ ಮಾಡಿಕೊಂಡು ಸಾಯಲು ವ್ಯಕ್ತಿಯೋರ್ವನ ದುಷ್ಪೇರಣೆ ಕಾರಣವಾಗಿದೆ ಎಂದು ಪುಂಜಾಲಕಟ್ಟೆಪೊಲೀಸ್‌ ಠಾಣೆ(Punjalakatte police station)ಗೆ ಮೌಖಿಕವಾಗಿ ದೂರು ನೀಡಿದ ಈ ಬಗ್ಗೆ ತನಿಖೆ ನಡೆಸುವಂತೆ ತಿಳಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪತ್ನಿ ಜೊತೆ ಈತ ಸಲುಗೆಯಿಂದ ಇದ್ದು ಇಬ್ಬರಿಗೂ ಬುದ್ದಿವಾದ ಹೇಳಿದ್ದೆ. ಆದರೆ ಇತ್ತೀಚಿಗೆ ಪತ್ನಿ ಈತನ ಕಾಟ ತಾಳಲಾರದೆ ಮಾನಸಿಕವಾಗಿ ನೊಂದಿದ್ದಳು. ಹಾಗಾಗಿ ಪತ್ನಿಯನ್ನು ಏಕಾಂಗಿ ಯಾಗಿ ಬಿಟ್ಟು ಹೋಗುತ್ತಿರಲಿಲ್ಲ. ಆದರೆ ನಿನ್ನೆ ಅಗತ್ಯವಾಗಿ ಹೊರಗೆ ಹೋಗಲು ಇದ್ದ ಕಾರಣ ಹೋಗಿ ವಾಪಾಸು ಬರುವ ವೇಳೆ ಈಕೆ ಆತ್ಮಹತ್ಯೆ ಮಾಡಿಕೊಂಡಿದ್ದಳು ಎಂದು ತಿಳಿಸಿದ್ದಾರೆ.

ಸಾಲಬಾಧೆ: ರೈತ ಆತ್ಮಹತ್ಯೆ

ನವಲಗುಂದ: ಸಾಲಬಾಧೆಯಿಂದ ಮನನೊಂದ ರೈತ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಅಮರಗೋಳದಲ್ಲಿ ನಡೆದಿದೆ.

Bengaluru: ಕೌಟುಂಬಿಕ ಸಮಸ್ಯೆಗೆ ನೊಂದು ದಂಪತಿ ನೇಣು ಬಿಗಿದು ಆತ್ಮಹತ್ಯೆ

ಅಮರಗೋಳದ ನಿವಾಸಿ ನಾಗಪ್ಪ ಕೃಷ್ಣಪ್ಪ ಜಾಧವ(47) ಆತ್ಮಹತ್ಯೆ ಮಾಡಿಕೊಂಡವರು. ಗ್ರಾಮದ ಸಿದ್ದನಗೌಡ ಕಲ್ಲನಗೌಡ ಪಾಟೀಲ ಎಂಬವರ ತಮ್ಮ ಶೆಡ್‌ನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆವಿಜಿ ಬ್ಯಾಂಕ್‌ನಲ್ಲಿ .2 ಲಕ್ಷ ಬೆಳೆ ಸಾಲ ಮಾಡಿದ್ದರು. ಸರಿಯಾಗಿ ಬೆಳೆ ಬಾರದೇ ಇರುವುದರಿಂದ ಮನನೊಂದಿದ್ದರು ಎನ್ನಲಾಗಿದೆ. ಜೀವನದ ಮೇಲೆ ಬೇಸರಗೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

click me!