ಗರ್ಭಿಣಿ ಮಹಿಳೆಗೆ ಆಟೋ ರಿಕ್ಷಾ ಢಿಕ್ಕಿಯಾಗಿ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಭಾವಿಕೇರಿ ಗ್ರಾಮದಲ್ಲಿ ನಡೆದಿದೆ.
ಕಾರವಾರ (ಏ.13): ಗರ್ಭಿಣಿ ಮಹಿಳೆಗೆ ಆಟೋ ರಿಕ್ಷಾ ಢಿಕ್ಕಿಯಾಗಿ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಭಾವಿಕೇರಿ ಗ್ರಾಮದಲ್ಲಿ ನಡೆದಿದೆ. ಗರ್ಭಿಣಿ ರಸ್ತೆ ಬದಿ ತೆರಳುತ್ತಿದ್ದ ವೇಳೆ ರಿಕ್ಷಾ ಢಿಕ್ಕಿಯಾಗಿ ಮೃತಪಟ್ಟಿದ್ದಾರೆ. ಶೋಭಾ ಗೋಪಾಲ ನಾಯಕ(28) ಮೃತ ದುರ್ದೈವಿಯಾಗಿದ್ದು, ಈಕೆ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದರು. ಗಂಡನೊಂದಿಗೆ ಮನೆಯ ಎದುರಿನ ರಸ್ತೆಯಲ್ಲಿ ತೆರಳುತ್ತಿದ್ದ ವೇಳೆ ಅಪಘಾತವಾಗಿ ಈ ದುರಂತ ನಡೆದಿದೆ. ಅತಿವೇಗವಾಗಿ ಅಜಾಕರೂಕತೆಯಿಂದ ಬಂದ ರಿಕ್ಷಾ ಚಾಲಕನ ನಿಯಂತ್ರಣ ತಪ್ಪಿ ಈ ದುರಂತ ನಡೆದಿದೆ. ರಿಕ್ಷಾ ಢಿಕ್ಕಿಯಾದ ರಭಸಕ್ಕೆ ಗಂಭೀರ ಗಾಯಗೊಂಡು ಗರ್ಭಿಣಿ ಉಸಿರು ಚೆಲ್ಲಿದ್ದಾರೆ. ಅಪಘಾತದ ಬಳಿಕ ರಿಕ್ಷಾ ಸಮೇತ ಚಾಲಕ ಪರಾರಿಯಾಗಿದ್ದಾನೆ. ಅಂಕೋಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಬಿಯರ್ ಬಾಟಲ್‌ನಲ್ಲಿ ಹೊಡೆದು ಕೊಂದಿದ್ದವರ ಸೆರೆ
ಬೆಂಗಳೂರು: ಮೂರು ದಿನಗಳ ಹಿಂದೆ ಇಟ್ಟಮಡು ಮುಖ್ಯರಸ್ತೆಯ ಬಾರ್‌ನಲ್ಲಿ ನಡೆದಿದ್ದ ರೌಡಿ ಶಿವರಾಜ್ ಕೊಲೆ ಪ್ರಕರಣ ಸಂಬಂಧ ಐವರು ದುಷ್ಕರ್ಮಿಗಳನ್ನು ಸುಬ್ರಹ್ಮಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
undefined
ಹೊಸಕೆರೆಹಳ್ಳಿಯ ಮಂಜುನಾಥ್ ಅಲಿಯಾಸ್ ಪೋಲಾರ್ಡ್, ಇಟ್ಟುಮಡುವಿನ ಪ್ರಜ್ವಲ್, ಪ್ರಶಾಂತ್, ರಾಮಕೃಷ್ಣ ಹಾಗೂ ಸುಮಂತ್ ಬಂಧಿತರಾಗಿದ್ದು, ವೈಯಕ್ತಿಕ ಕಾರಣಕ್ಕೆ ಇಟ್ಟಮಡು ಮುಖ್ಯರಸ್ತೆಯಲ್ಲಿರುವ ‘ಸ್ಪೈಸ್ ಬಾರ್’ನಲ್ಲಿ ಶಿವರಾಜ್ ಮೇಲೆ ಹಲ್ಲೆ ನಡೆಸಿ ಆರೋಪಿಗಳು ಕೊಂದು ಪರಾರಿಯಾಗಿದ್ದರು. ಮೊಬೈಲ್ ಕರೆಗಳು ಸೇರಿದಂತೆ ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.
ಕೆಟ್ಟುನಿಂತ ಪ್ಯಾಸೆಂಜರ್ ಆಟೋದಲ್ಲಿ 1 ಕೋಟಿ ರೂ. ಹಣ ಪತ್ತೆ: ಹಣಕ್ಕೆ ದಾಖಲೆ ಇಲ್ವಂತೆ!
ಕಾಲು ತಾಕಿದಕ್ಕೆ ಗಲಾಟೆ:
ಆಂಧ್ರಪ್ರದೇಶ ರಾಜ್ಯದ ಚಿತ್ತೂರು ಮೂಲದ ಶಿವರಾಜ್, ಹಲವು ವರ್ಷಗಳಿಂದ ನಗರದಲ್ಲಿ ನೆಲೆಸಿದ್ದು, ಪೆಂಟರ್ ಆಗಿ ಕೆಲಸ ಮಾಡಿಕೊಂಡಿದ್ದ. ಕಾನೂನುಬಾಹಿರ ಚಟುವಟಿಕೆಗಳಲ್ಲಿ ಕೂಡಾ ತೊಡಗಿದ್ದ. ಈ ಹಿನ್ನೆಲೆಯಲ್ಲಿ 2016ರಲ್ಲಿ ಆತನ ಮೇಲೆ ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಯಲ್ಲಿ ರೌಡಿಪಟ್ಟಿತೆರೆಯಲಾಗಿತ್ತು. ಇಟ್ಟಮಡು ಮುಖ್ಯರಸ್ತೆಯ ಸ್ಪೈಸ್ ಬಾರ್‌ಗೆ ತನ್ನ ಮೂವರು ಸ್ನೇಹಿತರ ಜತೆ ಭಾನುವಾರ ರಾತ್ರಿ ಶಿವರಾಜ್ ಮದ್ಯ ಸೇವನೆಗೆ ತೆರಳಿದ್ದ.
ಗೌರಿ ಲಂಕೇಶ್ ಪ್ರಕರಣ ನಡೆಸುತ್ತಿರುವ ವಕೀಲ ಕೃಷ್ಣಮೂರ್ತಿ ಮೇಲೆ ಗುಂಡಿನ
ಅದೇ ವೇಳೆ ಆ ಬಾರ್‌ನಲ್ಲಿ ಮಂಜುನಾಥ್ ಹಾಗೂ ಆತನ ಗೆಳೆಯರು ಇದ್ದರು. ಆಗ ಕಾಲು ತಾಕಿದ್ದಕ್ಕೆ ಮಂಜುನಾಥ್‌ಗೆ ‘ನಮ್ಮ ಏರಿಯಾಗೆ ಬಂದು ಧಿಮಾಕು ತೋರಿಸುತ್ತೀಯಾ’ ಎಂದು ಶಿವರಾಜ್ ನಿಂದಿಸಿದ್ದಾನೆ. ಬಳಿಕ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ವೇಳೆ ಎರಡು ಗುಂಪುಗಳು ಕೈ-ಕೈ ಮಿಲಾಯಿಸಿವೆ. ಜಗಳಕ್ಕೆ ಮಧ್ಯಪ್ರವೇಶಿಸಿದ ಬಾರ್ ಸಿಬ್ಬಂದಿ ಸಮಾಧಾನಪಡಿಸಿ ಹೊರ ಕಳುಹಿಸಿದ್ದರು. ಬಾರ್‌ನಿಂದ ಹೊರ ಬಂದ ಶಿವರಾಜ್‌ಗೆ ಬಿಯರ್ ಬಾಟಲ್‌ನಿಂದ ಆರೋಪಿಗಳು ಹೊಡೆದಿದ್ದರು. ಈ ಹಂತದಲ್ಲಿ ಕೆಳಗೆ ಬಿದ್ದ ಆತನ ಮೇಲೆ ಕಲ್ಲು ಎತ್ತಿ ಹಾಕಿ ಆರೋಪಿಗಳು ಪರಾರಿಯಾಗಿದ್ದರು.ಹಲ್ಲೆಗೊಳಗಾಗಿದ್ದ ಶಿವರಾಜ್ ತೀವ್ರ ರಕ್ತಸ್ರಾವದಿಂದ ಕೊನೆಯುಸಿರೆಳೆದಿದ್ದ ಎಂದು ಪೊಲೀಸರು ಹೇಳಿದ್ದಾರೆ.