ನಟ ದರ್ಶನ್ , ಪವಿತ್ರಾ ಗೌಡ ಜಾಮೀನು ಅರ್ಜಿ ವಜಾ: ರವಿಶಂಕರ್ ದೀಪಕ್‌ಗೆ ರಿಲೀಫ್!

By Sathish Kumar KH  |  First Published Oct 14, 2024, 5:24 PM IST

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 115 ದಿನಗಳ ಕಾಲ ಜೈಲಿನಲ್ಲಿರುವ ನಟ ದರ್ಶನ್ ತೂಗುದೀಪ ಅಂಡ್ ಗ್ಯಾಂಗ್‌ನ ಮೂವರ ಜಾಮೀನು ಅರ್ಜಿಯನ್ನು ನ್ಯಾಯಾಲಯದಿಂದ ವಜಾಗೊಳಿಸಲಾಗಿದೆ. ಆದರೆ, ಎ13 ದೀಪಕ್‌, ಎ8 ರವಿಶಂಕರ್‌ಗೆ ಮಾತ್ರ ಜಾಮೀನು ಮಂಜೂರು ಮಾಡಲಾಗಿದೆ.


ಬೆಂಗಳೂರು (ಅ.14): ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 115 ದಿನಗಳ ಕಾಲ ಜೈಲಿನಲ್ಲಿರುವ ನಟ ದರ್ಶನ್ ತೂಗುದೀಪ ಅಂಡ್ ಗ್ಯಾಂಗ್‌ನ ದರ್ಶನ್, ಪವಿತ್ರಾಗೌಡ ಹಾಗೂ ಲಕ್ಷ್ಮಣ ಒಳಗೊಂಡಂತೆ ಮೂವರ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾಗೊಳಿದೆ. ಆದರೆ, ಎ13 ದೀಪಕ್‌, ಎ8 ರವಿಶಂಕರ್‌ಗೆ ಮಾತ್ರ ಜಾಮೀನು ಮಂಜೂರು ಮಾಡಲಾಗಿದೆ. ಇನ್ನು ಮೂವರ ಜಾಮೀನು ಅರ್ಜಿ ಆದೇಶವನ್ನು ಅ.16ಕ್ಕೆ ಕಾಯ್ದಿರಿಸಲಾಗಿದೆ.

ದರ್ಶನ್ ಅಂಡ್ ಗ್ಯಾಂಗ್ ನಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 57ನೇ ಸೆಷನ್ಸ್ ಕೋರ್ಟ್ ಸುಧೀರ್ಘ ವಿಚಾರಣೆ ನಡೆಸಲಾಗಿತ್ತು. ವಾದ ವಿವಾದದ ಆಧಾರದಲ್ಲಿ 6 ಮಂದಿ ಆರೋಪಿಗಳಿಗೆ ಜಾಮೀನು ಮಂಜೂರು ಮಾಡುವ ಆದೇಶವನ್ನು ಇಂದು ಕಾಯ್ದಿರಿಸಿತ್ತು. ಇನ್ನು ಸರ್ಕಾರದ ಪರವಾಗಿ (ರೇಣುಕಾಸ್ವಾಮಿ ಕೊಲೆ ಕೇಸಿನ ತನಿಖೆ ಕುರಿತು) ವಿಶೇಷ ಸರ್ಕಾರಿ ಅಭಿಯೋಜಕ ಪ್ರಸನ್ನ ಕುಮಾರ್ ವಾದ ಮಂಡಿಸಿದ್ದರು. ಇನ್ನು ನಟ ದರ್ಶನ್ ಪರವಾಗಿ ಹಿರಿಯ ವಕೀಲ ನಾಗೇಶ್ ಅವರು ವಾದ ಮಂಡಿಸಿದ್ದರು. ಕಳೆದ ನಾಲ್ಕು ದಿನಗಳಿಂದ ವಾದ ವಿವಾದ ಆಲಿಸಿ ಇದೀಗ ಆದೇಶ ಹೊರಡಿಸಲಾಗಿದೆ.

Latest Videos

undefined

ಇದನ್ನೂ ಓದಿ: ನಟ ಪ್ರಥಮ್ 'ಡಿ ಬಾಸ್'ಗೆ ಹೆದರಿಕೊಂಡು ಬಕೆಟ್ ಹಿಡತವ್ನೆ ಎಂದ ಫ್ಯಾನ್ಸ್!

ನಟ ಪ್ರದೂಷ್ ಹಲ್ಲೆಯನ್ನೇ ಮಾಡಿಲ್ಲ ಎಂದ ವಕೀಲರು, ಆದೇಶ 16ಕ್ಕೆ ಕಾಯ್ದಿರಿಸಿದ ಕೋರ್ಟ್: 
ರೇಣುಕಾಸ್ವಾಮಿ ಪೋಸ್ಟ್ ಮಾಟರ್ಮ್ ರಿಪೋರ್ಟ್ ಆಧರಿಸಿ ವಾದಿಸುತ್ತಿರುವ ನಟ ಪ್ರದೂಷ್ ಪರ ವಕೀಲ ದಿವಾಕರ್ ಅವರು, ರೇಣುಕಾಸ್ವಾಮಿ ಮೇಲೆ ನಟ ಪ್ರದೂಷ್ ಹಲ್ಲೆ ಮಾಡಿರುವ ಬಗ್ಗೆ ಯಾವುದೇ ಸಾಕ್ಷಿಗಳ ಉಲ್ಲೇಖ ಇಲ್ಲ. ಅವರ ಸಾವಿಗೆ ಕಾರಣ ಅನೇಕ ರಕ್ತಸಿಕ್ತ ಗಾಯಗಳು ಕಾರಣವೆಂದು ಹೇಳಲಾಗುತ್ತಿದೆ. ಆದರೆ ಯಾವ ಗಾಯದಿಂದ ಸಾವನ್ನಪ್ಪಿದ್ದಾರೆ ಎಂದು ಉಲ್ಲೇಖ ಮಾಡಿಲ್ಲ. ಯಾರ ಹೊಡೆತದಿಂದ ಸಾವನ್ನಪ್ಪಿದ ಅಂತಿಲ್ಲ. ಜನರ ದೃಷ್ಟಿಯಲ್ಲಿ 3,900 ಪುಟಗಳ ಚಾರ್ಜ್ ಶೀಟ್ ಅಂತಾ ಇದೆ. ಆದರೆ, ಯಾವ ಗಾಯದಿಂದ ಸಾವು ಸಂಭವಿಸಿದೆ? ಇದನ್ನ ಎಲ್ಲೂ ಉಲ್ಲೇಖಿಸಿಲ್ಲ. ಹಲ್ಲೆ ‌ಎಂದರೆ ಸಾಮಾನ್ಯ ಹಲ್ಲೆ, ಗಂಭೀರ ಹಲ್ಲೆ, ಕೊಲೆ ಯತ್ನ ಸೆಕ್ಷನ್ ಗಳ ಅಡಿ ಕ್ರಮಕ್ಕೆ ಅವಕಾಶ ಇದೆ. ಆದರೆ, ಕೊಲೆ ಎಂದು ಆರೋಪಿಸುವಾಗ ಯಾವ ಗಾಯ ಸಾವಿಗೆ ಕಾರಣವಾಗಿದೆ. ಆ ಗಾಯಪಡಿಸಿದವರು ಯಾರು ಎಂದು ಸ್ಪಷ್ಟತೆ ಇಲ್ಲ ಎಂದು ವಾದ ಮಂಡಿಸಿದ್ದಾರೆ. ಇನ್ನು ದರ್ಶನ್ ಗ್ಯಾಂಗ್‌ ಆರೋಪಿಗಳಾದ ವಿನಯ್, ಪ್ರದೂಷ್ ಹಾಗೂ ಜಗದೀಶ್ ಜಾಮೀನು ಅರ್ಜಿ ಆದೇಶವನ್ನು ಅ.16ಕ್ಕೆ ಕಾಯ್ದಿರಿಸಿದೆ.

click me!