ಬೆಂಗಳೂರಿನ ಎಸ್ಎಸ್ಎಂಆರ್ವಿ ಕಾಲೇಜಿನಲ್ಲಿ ಪ್ರಿನ್ಸಿಪಾಲರ ಕಿರುಕುಳಕ್ಕೆ ಬೇಸತ್ತು ಮಹಿಳಾ ಸಹಾಯಕ ಪ್ರಾಧ್ಯಾಪಕಿ ಶಬಾನಾ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸಹೋದ್ಯೋಗಿಗಳು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬೆಂಗಳೂರು (ಅ.14): ಸಿಲಿಕಾನ್ ಸಿಟಿ ಬೆಂಗಳೂರಿನ ಪ್ರತಿಷ್ಠಿತ ಕಾಲೇಜೊಂದರಲ್ಲಿ ಪ್ರಿನ್ಸಿಪಲ್ ನೀಡುತ್ತಿದ್ದ ಕಿರುಕುಳಕ್ಕೆ ಬೇಸತ್ತು ಮಹಿಳಾ ಸಹಾಯಕ ಪ್ರಾಧ್ಯಾಪಕಿಯೊಬ್ಬರು ಕಾಲೇಜಿನಲ್ಲಿಯೇ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ಕಾಲೇಜಿನಲ್ಲಿ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಲೇಡಿ ಪ್ರೊಫೆಸರ್ ಶಬಾನಾ ಆಗಿದ್ದಾರೆ. ಈ ಘಟನೆ ಬೆಂಗಳೂರಿನ ಎಸ್ಎಸ್ಎಂ ಆರ್ ವಿ ಪದವಿ ಕಾಲೇಜಿನಲ್ಲಿ ನಡೆದಿದೆ. ಇನ್ನು ಇವರ ಆತ್ಮಹತ್ಯೆಗೆ ಕಾರಣವೇನೆಂದು ವಿಚಾರಿಸಿದರೆ, ಪ್ರಾಂಶುಪಾಲರ ಕಿರುಕುಳದಿಂದ ಬೇಸತ್ತು ಹೀಗೆ ಮಾಡಿಕೊಳ್ಳುತ್ತಿರುವುದಾಗಿ ಆರೋಪ ಮಾಡಿದ್ದಾರೆ. ಇನ್ನು ಆತ್ಮಹತ್ಯೆಗೆ ಯತ್ನಿಸುವ ಮುನ್ನವೂ ಪ್ರೊಫೆಸರ್ ಶಬಾನಾ ಅವರು ಪ್ರಿನ್ಸಿಪಲ್ ಚೇಂಬರ್‌ಗೆ ತೆರಳಿ ಮಾತನಾಡಿ ಹೊರಗೆ ಬಂದಿದ್ದರು. ಇದಾದ ನಂತರ ಸ್ಟಾಫ್ ರೂಮಿಗೆ ತೆರಳಿ ಅಲ್ಲಿ ಮಾತ್ರೆಗಳನ್ನು ನುಂಗಿದ್ದಾರೆ.
undefined
ಇದನ್ನೂ ಓದಿ: ಬೆಂಗಳೂರು ಕ್ಯಾಬ್ ಡ್ರೈವರ್ ಕುಟುಂಬ ದುರಂತ ಸಾವು: ಪತ್ನಿ, ಮಕ್ಕಳಿಗೆ ವಿಷವುಣಿಸಿ, ತಾನೂ ಆತ್ಮಹತ್ಯೆಗೆ ಶರಣು!
ಇನ್ನು ಸ್ಟಾಫ್ ರೂಮಿನಲ್ಲಿ ಮಾತ್ರೆಗಳನ್ನು ನುಂಗಿ ಅಸ್ತವ್ಯಸ್ತವಾಗಿ ಬಿದ್ದಿದ್ದ ಶಬಾನಾ ಅವರನ್ನು ಇತರ ಸಹ ಸಿಬ್ಬಂದಿ ನೋಡಿ, ಕೂಡಲೇ ಸ್ಥಳೀಯ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ಇನ್ನು ಈ ಘಟನೆಯ ಬಗ್ಗೆ ಆಸ್ಪತ್ರೆ ಸಿಬ್ಬಂದಿ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಹಾಗೂ ಆಸ್ಪತ್ರೆಯಲ್ಲಿ ಶಬಾನಾ ಅವರು ಚಿಕಿತ್ಸೆ ಪಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿದ ತಿಲಕ್ ನಗರ ಪೊಲೀಸರು ಪ್ರಾಥಮಿಕ ಮಾಹಿತಿ ಕಲೆ ಹಾಕಿದ್ದಾರೆ. ಇನ್ನು ಘಟನೆ ಬಗ್ಗೆ ಪರಿಶೀಲನೆ ಮಾಡುತ್ತಿದ್ದಾರೆ. ಮುಂದುವರೆದು ಕಾಲೇಜಿನಲ್ಲಿರುವ ಸಿಸಿ ಕ್ಯಾಮೆರಾಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.
ಕಾಲೇಜಿನಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಪ್ರೊಫೆಸರ್ ಶಬಾನಾ ಅವರು ಇಂಗ್ಲಿಷ್ ಪ್ರೊಫೆಸರ್ ಹಾಗೂ ಹೆಚ್ಓಡಿ ಆಗಿದ್ದರು. ತಮಗೆ ಪ್ರಿನ್ಸಿಪಲ್ ಹಾಗೂ ಇತರರು ಕಿರುಕುಳ ನೀಡುತ್ತಿದ್ದರು ಎಂದು ಆರೋಪ ಮಾಡಿದ್ದಾರೆ. ಇನ್ನು ಖಾಸಗಿ ಆಸ್ಪತ್ರೆಯಿಂದ ಪೊಲೀಸರಿಗೆ ಎಂಎಲ್ ಸಿ ರಿಪೋರ್ಟ್ ಆಗಿದೆ. ರಿಪೋರ್ಟ್ ಪಡೆದು ಆಸ್ಪತ್ರೆಗೆ ದೌಡಾಯಿಸಿದ ತಿಲಕ್ ನಗರ ಪೊಲೀಸರು, ಘಟನೆ ಬಗ್ಗೆ ಮಹಿಳಾ ಪ್ರೊಫೆಸರ್ ಅವರಿಂದ ಹೇಳಿಕೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ: ತಾನೇ ಜನ್ಮ ನೀಡಿದ ಮಕ್ಕಳ ಜೀವ ತೆಗೆದು ತಾಯಿ : ಪ್ರಿಯಕರನಿಗಾಗಿ ಮಕ್ಕಳ ಬಲಿ
ಫ್ರೋಫೆಸರ್ ಶಾಬಾನ ಹೇಳಿಕೆ: ನಾನು ಬ್ಲಾಕ್ ಮ್ಯಾಜಿಕ್ ಮಾಡ್ತಾಳೆ ಅಂತಾ ಮಾತಾಡುತ್ತಾರೆ. ಕಾಲೇಜಿನಲ್ಲಿ ಅವಿನಾಶ್, ಶಾಂತಿ ಕೃಷ್ಣ, ಸ್ಮಿತಾ, ನರೇಶ್ , ತುಂಬಾ ಕಿರುಕುಳ ಕೊಡ್ತಿದ್ದಾರೆ. ಕೆಲಸಕ್ಕೆ ರಾಜೀನಾಮೆ ನೀಡುವಂತೆ ಒತ್ತಾಯ ಮಾಡ್ತಾರೆ. ಕಳೆದ 3 ತಿಂಗಳಿನಿಂದ ಕಿರುಕುಳ ಕೊಡ್ತಿದ್ದಾರೆ. ಇದರಿಂದ ನನ್ನ ಪರ್ಸನಲ್ ಲೈಪ್ ಗೂ ಸಮಸ್ಯೆ ಆಗ್ತಿದೆ. ಅದಕ್ಕೆ ತುಂಬಾ ಬೇಜಾರ್ ಆಗಿ ಸಾಯೋ ನಿರ್ಧಾರಕ್ಕೆ ಬಂದೆ ಎಂದು ಹೇಳಿದ್ದಾರೆ.