ಬೆಂಗಳೂರಿನಲ್ಲಿ ಕ್ಯಾಬ್ ಚಾಲಕನೊಬ್ಬ ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳಿಗೆ ವಿಷ ಹಾಕಿ ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಲಬುರಗಿ ಮೂಲದ ಅವಿನಾಶ್ ಎಂಬಾತ ತನ್ನ ಕುಟುಂಬದೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ಬೆಂಗಳೂರು (ಅ.14): ಕಲಬುರಗಿಯಿಂದ ಬಮದು ಬೆಂಗಳೂರಿನಲ್ಲಿ ವಾಸವಿದ್ದು, ಕ್ಯಾಬ್ ಡ್ರೈವಿಂಗ್ ಮಾಡುತ್ತಾ ಕುಟುಂಬ ನಿರ್ವಹಣೆ ಮಾಡುತ್ತಿದ್ದ ವ್ಯಕ್ತಿಯೊಬ್ಬ ಇದೀಗ ತನ್ನ ಕುಟುಂಬದಲ್ಲಿ ಹೆಂಡತಿ ಹಾಗೂ ಇಬ್ಬರು ಮಕ್ಕಳಿಗೆ ವಿಷ ಹಾಕಿ ಕೊಂದು ತಾನೂ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ.
ಮೃತರನ್ನು ಕ್ಯಾಬ್ ಚಾಲಕ ಅವಿನಾಶ್ (38), ಪತ್ನಿ ಮಮತಾ (30) ಹಾಗೂ ಮಗಳಾದ ಅಧೀರ್ (5) ಮತ್ತು ಅಣ್ಣಯ್ಯ (2.5) ಎಂದು ಗುರುತಿಸಲಾಗಿದೆ. ಮೊದಲಿಗೆ ಮಕ್ಕಳನ್ನ ಕೊಂದು ಆ ಬಳಿಕ ಪತಿ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ಅವಿನಾಶ್ ಕಲಬುರಗಿ ಮೂಲದವರಾಗಿದ್ದು, ಕೆಲವು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದು, ಇಲ್ಲಿ ಕ್ಯಾಬ್ ಚಾಲಕ ನಾಗಿ ಕೆಲಸ ಮಾಡುತ್ತಿದ್ದನು. ರಾಜಾನುಕುಂಟೆ ಬಳಿಯ ಸಿಂಗನಾಯಕನಹಳ್ಳಿಯ ನರಸಪ್ಪ ಎನ್ನುವವರ ಮನೆಯಲ್ಲಿ ಬಾಡಿಗೆಗೆ ವಾಸವಾಗಿದ್ದರು. ಆದರೆ, ಇಂದು ಬೆಳಗ್ಗೆ ಎಷ್ಟೇ ಹೊತ್ತಾದರೂ ಬಾಗಿಲು ತೆರೆಯದ ಹಿನ್ನೆಲೆಯಲ್ಲಿ ಮನೆ ಮಾಲೀಕರು ಕಿಟಕಿಯಿಂದ ನೋಡಿದಾಗ ಪತಿ ಪತ್ನಿ ನೇಣಿಗೆ ಶರಣಾಗಿರುವ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ಕೂಡಲೇ ಚಾಲಕನ ಸಹೋದರಿನಿಗೆ ಮಾಹಿತಿ ನೀಡಲಾಗಿದೆ.
undefined
ಇದನ್ನೂ ಓದಿ: ತಾನೇ ಜನ್ಮ ನೀಡಿದ ಮಕ್ಕಳ ಜೀವ ತೆಗೆದು ತಾಯಿ : ಪ್ರಿಯಕರನಿಗಾಗಿ ಮಕ್ಕಳ ಬಲಿ
ಸ್ಥಳಕ್ಕೆ ಬಂದ ಅವಿನಾಶ್‌ನ ಸಹೋದರ ಉದಯ್ ಮನೆಯಲ್ಲಿ ಎಲ್ಲರೂ ಮೃತಪಟ್ಟಿರುವುದನ್ನು ನೋಡಿ ಶಾಕ್ ಆಗಿದ್ದಾರೆ. ಕುಟುಂಬದವರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಕಳೆದ ರಾತ್ರಿ ಆತ್ಮಹತ್ಯೆಗೆ ಶರಣಾಗಿರುವುದು ತಿಳಿದುಬಂದಿದೆ. ಕೂಡಲೇ ರಾಜಾನುಕುಂಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ರಾಜಾನುಕುಂಟೆ ಪೊಲೀಸರ ಭೇಟಿ ಪರಿಶೀಲನೆ ಮಾಡಿದ್ದಾರೆ. ಬೆಂಗಳೂರು ನಗರ ಜಿಲ್ಲೆ ಯಲಹಂಕ ತಾಲೂಕಿನ ಸಿಂಗನಾಯಕನಹಳ್ಳಿಯ ಯಡಿಯೂರಪ್ಪ ನಗರದಲ್ಲಿ ಈ ದುರ್ಘಟನೆ ಸಂಭವಿಸಿದೆ.
ಈ ಬಗ್ಗೆ ಮಾಹಿತಿ ನೀಡಿದ ಬೆಂಗಳೂರು ಗ್ರಾಮಾಂತರ ಎಸ್ಪಿ ಸಿಕೆ ಬಾಬಾ ಅವರು ಕಲಬುರಗಿ ಮೂಲದ ವ್ಯಕ್ತಿ ಕಳೆದ 5 ರಿಂದ 6 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ವಾಸವಾಗಿದ್ದರು. ವೃತ್ತಿಯಲ್ಲಿ ಓಲಾ, ಉಬರ್ ಕ್ಯಾಬ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದರು. ಅವರ ಸಹೋದರ ಬಂದು ಅಣ್ಣ ಫೋನ್ ತೆಗೆಯುತ್ತಿಲ್ಲ ಎಂದು ಬಾಗಿಲು ತೆರೆದಾಗ ಅಣ್ಣ ನೇಣಿಗೆ ಶರಣಾಗಿದ್ದು, ಇನ್ನು ಅತ್ತಿಗೆ ಮತ್ತು ಮಕ್ಕಳನ್ನು ಎಬ್ಬಿಸಲು ಮುಂದಾದಾಗ ಅವರೂ ಕೂಡ ಮೃತಪಟ್ಟಿರುವುದು ಗೊತ್ತಾಗಿದೆ. ಕೂಡಲೇ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ನಾವು ಬಂದು ಸ್ಥಳ ಪರಿಶೀಲನೆ ಮಾಡಿದ್ದು, ಯಾವ ಕಾರಣಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ. ಇನ್ನು ಆತ್ಮಹತ್ಯೆ ಮತ್ತು ಹೆಂಡತಿ, ಮಕ್ಕಳ ಕೊಲೆ ಬಗ್ಗೆ ಎರಡು ಕೇಸು ದಾಖಲಿಸಿ ತನಿಖೆ ಮಾಡಲಾಗುತ್ತದೆ. ಅವರ ಸಂಬಂಧಿಕರಿಂದ ಈ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದೇವೆ ಎಂದು ಹೇಳಿದರು.