Transgender Murder: ಮಗ ತೃತೀಯಲಿಂಗಿಯಾದ, ಬಡಿದು ಕೊಂದ ಹೆತ್ತ ತಾಯಿ, ಸಂಬಂಧಿಕರು!

By Suvarna NewsFirst Published Dec 21, 2021, 5:37 PM IST
Highlights

* ಮಗ ತೃತೀಯ ಲಿಂಗಿಯಾದ ಎಂಬ ಕಾರಣಕ್ಕೆ ತಾಯಿಯಿಂದಲೇ ಹತ್ಯೆ
* ಸಂಬಂಧಿಕರ ಒತ್ತಡಕ್ಕೆ ಮಣಿದು ಹಾರ್ಮೋನ್ ಇಂಜಕ್ಟ್
* ವಿರೋಧಿಸಿದ ಮಗನ ಮೇಲೆ ಹಲ್ಲೆ
* ಗಂಭೀರ ಗಾಯಗೊಂಡು ಅಸುನೀಗಿದ ನವೀನ್ ಕುಮಾರ್

ಸೇಲಂ(ಡಿ. 21)  ಮಗ ತೃತೀಯಲಿಂಗಿ (Transgender) ಎಂಬ ಕಾರಣಕ್ಕೆ ಹೆತ್ತ ತಾಯಿಯೇ(Mother) ಹತ್ಯೆ (Murder) ಮಾಡಿದ್ದಾಳೆ. ತೃತೀಯಲಿಂಗಿಯನ್ನು ಕೊಲೆ ಮಾಡಿದ ಆರೋಪದ ಮೇಲೆ ಸೇಲಂನಲ್ಲಿ 45 ವರ್ಷದ ಮಹಿಳೆಯನ್ನು(Woman) ಮಂಗಳವಾರ ಬಂಧಿಸಲಾಗಿದೆ. 

ಮಹಿಳೆಯ ಜತೆ ಇನ್ನುಳಿದ ಐವರನ್ನು ಬಂಧಿಸಲಾಗಿದೆ.  ಇಲ್ಲಿನ ಸೂರಮಂಗಲಂ ಸಮೀಪದ ಜಾಗೀರಮ್ಮಪಾಳ್ಯದ ನಿವಾಸಿ ಉಮಾದೇವಿ  ಎಂಬುವರೇ ಹೆತ್ತ ಮಗನ ಕೊಂದ ಆರೋಪಿ.  ಈ ವರ್ಷ ಜುಲೈನಲ್ಲಿ ನವೀನ್ ಕುಮಾರ್ (20) ಬೆಂಗಳೂರಿಗೆ ಹೋಗಿ ಬರುತ್ತೇನೆ ಎಂದು  ಹೇಳಿದವ ವಾಪಸ್ ಆಗಿಲ್ಲ ಎಂದು ತಾಯಿಯೇ ದೂರು ಕೊಟ್ಟಿದ್ದರು. ತೃತೀಯಲಿಂಗಿಯಾಗುತ್ತಿದ್ದೀಯಾ ಎಂಬ ವಿಚಾರದಲ್ಲಿ ತಾಯಿ-ಮತ್ತು ಮಗನ  ನಡುವೆ ವಾಗ್ವಾದ ನಡೆದಿತ್ತು. 

ಪೊಲೀಸರು ನವೀನ್ ಕುಮಾರ್ ಎನ್ನು ಹುಡುಕಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು.  ನವೀನ್ ಆಯ್ಕೆಯಂತೆ ಆತ ಪ್ರತ್ಯೇಕವಾಗಿ ವಾಸಿಸಬಹುದು ಎಂದು ನ್ಯಾಯಾಲಯ ಆದೇಶ ನೀಡಿತ್ತು.

ಆದರೆ ಮಮೆಗೆ ಹಿಂದಿರುಗಿದ ಮಗನನ್ನು ತಾಯಿ ಹಾಗೂ  ಉಳಿದ ಮಹಿಳೆಯರು ಹೀಯಾಳಿಸಿದ್ದರು. ಸಂಬಂಧಿಕರ ಒತ್ತಾಯಕ್ಕೆ ಮಣಿದ ತಾಯಿ  ಉಮಾದೇವಿಯೇ ಕೆಲವು ಹಾರ್ಮೋನ್ ಗಳನ್ನು ಮಗನಿಗೆ ನೀಡಿದ್ದಾಳೆ ಆತ ತೃತೀಯಲಿಂಗಿಯಾಗಿಯಾಗಲ್ಲ ಎಂದು ಭಾವಿಸಿದ್ದಾರೆ.  ಇದಕ್ಕೆಲ್ಲ ಆಕೆಯೇ ಪರಿಹಾರ ಹುಡುಕಬೇಕು ಎಂಬುದು ಮಹಿಳೆಯರ ವಾದವಾಗಿತ್ತು. ಆದರೆ ಹಾರ್ಮೋನ್ ಇಂಜೆಕ್ಟ್ ಮಾಡಿದ ನಂತರ ನವೀನ್ ಅಸ್ವಸ್ಥಗೊಂಡಿದ್ದಾರೆ.  ಈ ವೇಳೆ ನವೀನ್ ಮೇಲೆ ಹಲ್ಲೆ ಸಹ ಮಾಡಲಾಗಿದೆ.

Crime News: ಮಹಿಳೆ ಜತೆ ಜೆಡಿಎಸ್ ಮುಖಂಡ ಸರಸ ಸಲ್ಲಾಪ, ಒಂದೇ ಕೋಣೆಯಲ್ಲಿ ಎರಡೂ ಹೆಣ

ಗಾಯಗೊಂಡಿದ್ದ  ನವೀನ್‌ನನ್ನು ಮೊದಲು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಅಲ್ಲಿ ಅಸಾಧ್ಯ ಎಂಬ ಕಾರಣಕ್ಕೆ  ಮತ್ತು ನಂತರ ಸೇಲಂ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಯುವಕ ಡಿಸೆಂಬರ್ 14 ರಂದು ಸಾವನ್ನಪ್ಪಿದ್ದರು.

ಪೊಲೀಸರು ಮೊದಲು ಸಿಆರ್‌ಪಿಸಿ ಸೆಕ್ಷನ್ 174 ರ ಅಡಿಯಲ್ಲಿ ಅನುಮಾನಾಸ್ಪದ ಸಾವಿನ ಪ್ರಕರಣವನ್ನು ದಾಖಲಿಸಿದ್ದರು. ಅವರು ಈಗ ಆರೋಪವನ್ನು ಐಪಿಸಿ ಸೆಕ್ಷನ್ 302 (ಕೊಲೆ) ಗೆ ಬದಲಾಯಿಸಿದ್ದಾರೆ. ಕೆಲವು ವರ್ಷಗಳ ಹಿಂದೆ ಪತಿ ತೊರೆದು ಹೋಗಿದ್ದ ದಿನಗೂಲಿ ಕಾರ್ಮಿಕ ಉಮಾದೇವಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಅಂಗವಿಕಲ ಮಗನ ಹತ್ಯೆ:  ಜೀವನದಲ್ಲಿ ಜಿಗುಪ್ಸೆಗೊಂಡು ತನ್ನ ಹತ್ತು ವರ್ಷದ ಅಂಗವಿಕಲ ಮಗನನ್ನು ಕೊಂದು (Kill) ಬಳಿಕ ತಂದೆ ಆತ್ಮಹತ್ಯೆಗೆ (Suicide) ಶರಣಾಗಿದ್ದ. ಬೆಂಗಳೂರು ಸಂಪಂಗಿ ರಾಮ ನಗರದ 3ನೇ ಅಡ್ಡರಸ್ತೆ ನಿವಾಸಿ ಸುರೇಶ್‌ (40) ಹಾಗೂ ಅವರ ಪುತ್ರ ಉದಯ್‌ ಸಾಯಿರಾಮ್‌ (10) ಮೃತರು. ಮನೆಯ ನೀರಿನ ಸಂಪ್‌ಗೆ (water Sump) ಎಸೆದು ಬೆಳಗ್ಗೆ ಮಗನನ್ನು ಕೊಂದ ಬಳಿಕ ಸುರೇಶ್‌, ಶೇಷಾದ್ರಿಪುರ ಸಮೀಪದ ರೈಲ್ವೆ (Railway) ಹಳಿಯ ಪಕ್ಕದ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ

ಮೊದಲ ಸಲಿಂಗಿ ಜೋಡಿ ವಿವಾಹಕ್ಕೆ ಸಾಕ್ಷಿಯಾದ ಹೈದರಾಬಾದ್‌

ಸುರೇಶ್‌ ಹಾಗೂ ಲಕ್ಷ್ಮಿ ವಿವಾಹವಾಗಿದ್ದು ದಂಪತಿಗೆ ಓರ್ವ ಪುತ್ರನಿದ್ದ. ಆದರೆ ಸಾಯಿರಾಂಗೆ ಹುಟ್ಟಿನಿಂದಲೂ ಮಾತು ಬರುತ್ತಿರಲಿಲ್ಲ, ಕಣ್ಣು ಕಾಣುತ್ತಿರಲಿಲ್ಲ. ಇದರಿಂದ ದಂಪತಿ ಬೇಸರಗೊಂಡಿದ್ದರು. ಇತ್ತೀಚೆಗೆ ಬೆನ್ನು ಹುರಿ ಸಮಸ್ಯೆಗೆ ತುತ್ತಾದ ಸುರೇಶ್‌, ತಮ್ಮ ವೈದ್ಯಕೀಯ ಚಿಕಿತ್ಸೆ (Treatment) ಭರಿಸಲಾಗದೆ ಸಂಕಷ್ಟಕ್ಕೆ ತುತ್ತಾಗಿದ್ದರು. ಈ ಹತಾಶೆಯಲ್ಲಿ ಸತಿ-ಪತಿ ಮಧ್ಯೆ ಮನೆಯಲ್ಲಿ ಜಗಳಗಳು ನಡೆದಿದ್ದವು ಎಂದು ಪೊಲೀಸರು ಹೇಳಿದ್ದಾರೆ.

ಬೆಂಗಳೂರಲ್ಲಿ ಮಂಗಳಮುಖಿಯರಿಂದ ಬ್ಯೂಟಿಪಾರ್ಲರ್‌ :   ನಿರ್ಲಕ್ಷಿತ ಸಮಾಜದಲ್ಲಿ ಉತ್ತಮ ಬದುಕು ಕಟ್ಟಿಕೊಳ್ಳುವ ಮಹತ್ವಾಕಾಂಕ್ಷೆಯಿಂದ ಸಮಾನ ಮನಸ್ಕರಾದ ತೃತೀಯ ಲಿಂಗಿಗಳೇ ಸೇರಿ ‘ಟ್ರಾನ್ಸ್‌ ಟ್ರೆಂಡ್ಜ್‌’ ಹೆಸರಿನ ಬ್ಯೂಟಿಪಾರ್ಲರ್‌ ಆರಂಭಿಸುವ ಸುದ್ದಿ ಬಂದಿತ್ತು. 

ತೃತೀಯ ಲಿಂಗಿಗಳಾದ ನಕ್ಷತ್ರ, ಮಿಲನ, ಮಾನಸ, ಅಂಜಲಿ ಈ ನಾಲ್ವರು ಸೇರಿಕೊಂಡು ಬ್ಯೂಟಿಪಾರ್ಲರ್‌ ತೆರೆಯುತ್ತಿದ್ದಾರೆ. ತಮ್ಮ ದುಡಿಮೆ ಹಾಗೂ ಕೆಲ ದಾನಿಗಳ ಸಹಾಯದಿಂದ ಪ್ರಾಥಮಿಕ ಹಂತದಲ್ಲಿ 1.50 ಲಕ್ಷ ರು. ಬಂಡವಾಳದೊಂದಿಗೆ ಟಿ.ದಾಸರಹಳ್ಳಿಯ ಕೆಂಪೇಗೌಡ ನಗರದ 3ನೇ ಕ್ರಾಸ್‌, 1ನೇ ಮುಖ್ಯರಸ್ತೆಯ ಬಳಿ ಈ ಬ್ಯೂಟಿಪಾರ್ಲರ್‌ ತಲೆಯೆತ್ತಿದೆ. 

 

 

click me!